ಸ್ಮಾರ್ಟ್‌ಫೋನ್‌ ಅನ್ನು ಕಣ್ಣಿನಿಂದಲೇ ಆಪರೇಟ್‌ ಮಾಡಿ; ಐಟ್ರ್ಯಾಕರ್!

Written By:

ಮೊಬೈಲ್‌ ಆವಿಷ್ಕಾರವಾದ ಹೊಸತರಲ್ಲಿ ಕೀಪ್ಯಾಡ್ ಇತ್ತು. ನಂಬರ್‌ ಮತ್ತು ಮೆಸೇಜ್‌ ಟೈಪ್‌ ಮಾಡಲು ಕೀಪ್ಯಾಡ್‌ ಬಟನ್‌ ಅನ್ನು ಉಪಯೋಗಿಸಲಾಗುತ್ತಿತ್ತು. ಇದು ಮೊಬೈಲ್‌ ಬಳಕೆಯ ಮೊದಲನೇ ಹಂತ.

ಇನ್ನು ಎರಡನೇ ಹಂತಕ್ಕೆ ಬಂದರೆ ಮೊಬೈಲ್‌ ಬಳಕೆಯಲ್ಲಿ ನಂಬರ್‌ ಮತ್ತು ಮೆಸೇಜ್‌ ಟೈಪ್‌ ಮಾಡಲು ಟಚ್ ಸ್ಕ್ರೀನ್‌ ಕೀ ಬೋರ್ಡ್‌ ಇದೆ. ಇವುಗಳನ್ನ ಮೊಬೈಲ್‌ ಅನ್ನುವುದಕ್ಕಿಂತ ಹೆಚ್ಚಾಗಿ ಸ್ಮಾರ್ಟ್‌ಫೋನ್ ಎಂದು ಕರೆಯಲಾಯಿತು.

ಇಷ್ಟುದಿನ ಮೊಬೈಲ್‌ ಬಳಕೆಯಲ್ಲಿ ನಂಬರ್‌, ಮೆಸೇಜ್‌ ಟೈಪಿಸಲು ಮತ್ತು ಮೊಬೈಲ್ ನಿಯಂತ್ರಿಸಲು ಬಟನ್‌ಗಳಿರುವ ಕೀ ಪ್ಯಾಡ್‌ ಮತ್ತು ಟಚ್‌ ಸ್ಕ್ರೀನ್‌ ಇರುವ ಮೊಬೈಲ್‌ಗಳನ್ನು ಬಳಸಿದ್ದೀರಿ. ಆದ್ರೆ ಇನ್ನುಮುಂದೆ ಸ್ಮಾರ್ಟ್‌ಫೋನ್‌ ಅನ್ನು ಕೇವಲ ಕಣ್ಣುಗಳಿಂದ ನಿಯಂತ್ರಿಸಬಹುದು. ಹೌದು, ಅಂತರರಾಷ್ಟ್ರೀಯ ಸಂಶೋಧಕರ ತಂಡವೊಂದು ಸಾಫ್ಟ್‌ವೇರ್‌ ಒಂದನ್ನು ಅಭಿವೃದ್ದಿಪಡಿಸುತ್ತಿದ್ದು, ಅದರ ಸಹಾಯದಿಂದ ಸ್ಮಾರ್ಟ್‌ಫೋನ್‌ ಅನ್ನು ಕೇವಲ ಕಣ್ಣುಗಳಿಂದ ಆಪರೇಟ್‌ ಮಾಡಬಹುದು. ಅದು ಹೇಗೆ ಸಾಧ್ಯ? ಸಾಫ್ಟ್‌ವೇರ್‌ ಫೀಚರ್ ಏನು? ಯಾವ ಸಾಫ್ಟ್‌ವೇರ್‌? ಎಂಬಿತ್ಯಾದಿ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಟರ್ಕಿಯ ಸಂಶೋಧಕನಿಂದ 'ಘೋಸ್ಟ್‌ ಫೋನ್‌' ಆವಿಷ್ಕಾರ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಂತರರಾಷ್ಟ್ರೀಯ ಸಂಶೋಧಕರ ತಂಡದಿಂದ ಸಾಫ್ಟ್‌ವೇರ್‌

ಅಂತರರಾಷ್ಟ್ರೀಯ ಸಂಶೋಧಕರ ತಂಡದಿಂದ ಸಾಫ್ಟ್‌ವೇರ್‌

ಭಾರತೀಯ ಮೂಲದ ಪದವಿ ವಿದ್ಯಾರ್ಥಿಯು ಸೇರಿದಂತೆ ಅಂತರರಾಷ್ಟ್ರೀಯ ಸಂಶೋಧಕರ ತಂಡವು ಸಾಫ್ಟ್‌ವೇರ್‌ ಒಂದನ್ನು ಅಭಿವೃದ್ದಿ ಪಡಿಸುತ್ತಿದ್ದು, ಸಾಫ್ಟ್‌ವೇರ್‌, ಸ್ಮಾರ್ಟ್‌ಫೋನ್‌ ಬಳಕೆದಾರರು ಕೇವಲ ತಮ್ಮ ಕಣ್ಣುಗಳ ಚಲನೆಯಿಂದ ಗೇಮ್‌ ಆಡಲು, ಆಪ್‌ಗಳನ್ನು ಓಪನ್‌ ಮಾಡಲು, ಸಂಪೂರ್ಣ ಮೊಬೈಲ್‌ನ ನಿಯಂತ್ರಣ ಹೊಂದಲು ಸಹಾಯಕವಾಗುತ್ತದಂತೆ.

ಸಂಶೋಧಕರ ತಂಡ

ಸಂಶೋಧಕರ ತಂಡ

ಮೆಸ್ಸಾಚೂಸೆಟ್ಸ್ನ ತಂತ್ರಜ್ಞಾನ ಸಂಸ್ಥೆ (ಎಂಐಟಿ), ಜಾರ್ಜಿಯಾದ ವಿಶ್ವವಿದ್ಯಾಲಯ ಮತ್ತು ಜರ್ಮನಿಯ ಮ್ಯಾಕ್ಸ್‌ ಪ್ಲಾಂಕ್‌ ಇನ್ಸ್ಟಿಟ್ಯೂಟ್‌ ಫಾರ್‌ ಇನ್ಫಾರ್ಮೇಟಿಕ್ಸ್'ನ ಸಂಶೋಧಕರು ಒಟ್ಟಿಗೆ ಸಾಫ್ಟ್‌ವೇರ್‌ ಅಭಿವೃದ್ದಿ ಪಡಿಸುತ್ತಿದ್ದು, ವ್ಯಕ್ತಿಯು ಮೊಬೈಲ್‌ ಅನ್ನು ಒಂದು ಮೀಟರ್‌ ಅಂತರದಿಂದ ಮತ್ತು ಟ್ಯಾಬ್ಲೆಟ್‌ ಅನ್ನು 1.7 ಮೀಟರ್‌ನಿಂದ ನಿಖರವಾಗಿ ನೋಡಿ ನಿಯಂತ್ರಿಸಲು ಅನುಕೂಲವಾಗುವಂತೆ ತರಬೇತಿ ನೀಡುತ್ತಿದ್ದಾರೆ ಎಂದು ಎಂಐಟಿ ಟೆಕ್ನಾಲಜಿ ವರದಿ ಮಾಡಿದೆ.

ಆದಿತ್ಯ ಖೊಸ್ಲಾ

ಆದಿತ್ಯ ಖೊಸ್ಲಾ

ಸಾಫ್ಟ್‌ವೇರ್‌ ಅಭಿವೃದ್ದಿಯ ಸಹ ಲೇಖಕರಾದ 'ಆದಿತ್ಯ ಖೊಸ್ಲಾ'ರವರು ಹೆಚ್ಚಿನ ಡಾಟಾದಿಂದ ನಿಖರತೆ ಮಟ್ಟವನ್ನು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

ಸಾಫ್ಟ್‌ವೇರ್‌

ಸಾಫ್ಟ್‌ವೇರ್‌

ಸಂಶೋಧಕರು ಸಾಫ್ಟ್‌ವೇರ್‌ ಯಶಸ್ಸಿಗಾಗಿ 'ಗೇಜ್‌ಕ್ಯಾಪ್ಚರ್‌' ಎಂಬ ಆಪ್‌ ರಚಿಸಿದ್ದು, ಈ ಆಪ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ವಿವಿಧ ವಾತಾವರಣದಲ್ಲಿ ಹೇಗೆ ಫೋನ್‌ ನೋಡುತ್ತಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ಲ್ಯಾಬ್‌ಗೆ ನೀಡುತ್ತದಂತೆ.

ಕಣ್ಣುಗಳಿಂದ ನಿಯಂತ್ರಣ ಹೇಗೆ?

ಕಣ್ಣುಗಳಿಂದ ನಿಯಂತ್ರಣ ಹೇಗೆ?

ಬಳಕೆದಾರರು ಸ್ಮಾರ್ಟ್‌ಫೋನ್‌ ನೋಡುವುದು ಫೋನ್‌ನ ಮುಂಭಾಗದ ಕ್ಯಾಮೆರಾದಿಂದ ರೆಕಾರ್ಡ್‌ ಆಗಲಿದ್ದು, ಸ್ಮಾರ್ಟ್‌ಫೋನ್‌ ಮೇಲಿನ ತೀಕ್ಷ್ಣ ನೋಟವು ಚುಕ್ಕೆಗಳ ಆಧಾರದಲ್ಲಿ ಎಡಭಾಗದಲ್ಲಿ ಅಥವಾ ಬಲಭಾಗದಲ್ಲಿ ನೋಡುತ್ತಿರುವುದರಿಂದ ಸ್ಕ್ರೀನ್‌ ಮೇಲೆ ಟ್ಯಾಪ್‌ ಆಗಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.

ಐಟ್ರ್ಯಾಕರ್‌ (iTracker)

ಐಟ್ರ್ಯಾಕರ್‌ (iTracker)

ಪ್ರಾಥಮಿಕವಾಗಿ ಗೇಜ್‌ಕ್ಯಾಪ್ಚರ್‌ನಿಂದ ಸಂಗ್ರಹಿಸಲಾದ ಡಾಟಾ ಮೂಲಕ 'ಐಟ್ರ್ಯಾಕರ್‌ (iTracker)' ಸಾಫ್ಟ್‌ವೇರ್‌ಗೆ ತರಬೇತಿ ನೀಡಲಾಗುವುದು. ಕಣ್ಣಿನಿಂದ ನಿಯಂತ್ರಿಸಬಹುದಾದ ಈ ಸಾಫ್ಟ್‌ವೇರ್‌ ಐಫೋನ್‌'ನಲ್ಲೂ ಸಹ ರನ್‌ ಆಗುತ್ತದಂತೆ.

 ಐಟ್ರ್ಯಾಕರ್‌ (iTracker) ಕಾರ್ಯನಿರ್ವಹಣೆ ಹೇಗೆ?

ಐಟ್ರ್ಯಾಕರ್‌ (iTracker) ಕಾರ್ಯನಿರ್ವಹಣೆ ಹೇಗೆ?

ಹ್ಯಾಂಡ್‌ಸೆಟ್‌ ಕ್ಯಾಮೆರಾ ಬಳಕೆದಾರರ ಮುಖವನ್ನು ಕ್ಯಾಪ್ಚರ್‌ ಮಾಡುತ್ತದೆ, ಸಾಫ್ಟ್‌ವೇರ್‌ ಬಳಕೆದಾರರ ತಲೆಯ ದಿಕ್ಕು-ಸ್ಥಾನ ಮತ್ತು ಕಣ್ಣುಗಳ ನೋಟವನ್ನು ನಿರ್ಧರಿಸಿ ಕಾರ್ಯನಿರ್ವಹಿಸುತ್ತದೆ.

ಖೊಸ್ಲಾ ಹೇಳಿದ್ದೇನು?

ಖೊಸ್ಲಾ ಹೇಳಿದ್ದೇನು?

ಈಗಾಗಲೇ 1,500 ಜನರು ಗೇಜ್‌ಕ್ಯಾಪ್ಚರ್‌ ಆಪ್‌ ಬಳಸಿದ್ದು, 10,000 ಜನರಿಂದ ಡಾಟಾವನ್ನು ಬಳಸಿಕೊಂಡು ಐಟ್ರ್ಯಾಕರ್ ತಪ್ಪನ್ನು ಸರಿಪಡಿಸಿ ಆಪ್‌ ಅನ್ನು ಉತ್ತಮವಾಗಿ ರಚಿಸಬಹುದು ಎಂದು ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಟರ್ಕಿಯ ಸಂಶೋಧಕನಿಂದ 'ಘೋಸ್ಟ್‌ ಫೋನ್‌' ಆವಿಷ್ಕಾರ!

ಪ್ರಖ್ಯಾತ ಟೆಕ್‌ ಕಂಪನಿಗಳ ಸಂದರ್ಶನದಲ್ಲಿ ಕೇಳಲಾದ 13 ಕಠಿಣ ಪ್ರಶ್ನೆಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
A software will soon let you control smartphone with eyes. To know more about technology visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot