ಡೆಲ್‌ ಕಂಪೆನಿಯಿಂದ ಹೊಸ ಲ್ಯಾಪ್‌ಟಾಪ್‌ ಪರಿಚಯ! ಪ್ರೊಸೆಸರ್‌ ಯಾವುದು?

|

ಡೆಲ್‌ ಕಂಪೆನಿಯ ಲ್ಯಾಪ್‌ಟಾಪ್‌ಗಳಿಗೆ ಮಾರುಕಟ್ಟೆಯಲ್ಲಿ ಮೊದಲಿನಿಂದಲೂ ಬೇಡಿಕೆ ಇದೆ. ಅದರಂತೆ ಡೆಲ್‌ ಕಂಪೆನಿ ಕೂಡ ತನ್ನ ಗುಣಮಟ್ಟದ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ಡೆಲ್‌ XPS 13 9315 ಲ್ಯಾಪ್‌ಟಾಪ್ ಅನ್ನು ಪರಿಚಯಿಸಿದೆ. ಇದು 12 ನೇ Gen ಇಂಟೆಲ್ Evo ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್‌ 51Whr ಲಾಂಗ್‌ಲೈಫ್‌ ಬ್ಯಾಟರಿಯನ್ನು ಹೊಂದಿದ್ದು, ಎಕ್ಸ್‌ಪ್ರೆಸ್ ಚಾರ್ಜ್ ಬೆಂಬಲವನ್ನು ಹೊಂದಿದೆ.

ಡೆಲ್‌

ಹೌದು, ಡೆಲ್‌ ಕಂಪೆನಿ ಭಾರತದಲ್ಲಿ ಹೊಸ ಡೆಲ್‌ XPS 13 9315 ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ 500 ನಿಟ್ಸ್ ಬ್ರೈಟ್‌ನೆಸ್‌ನೊಂದಿಗೆ ನಾಲ್ಕು-ಬದಿಯ ಫುಲ್‌-ಎಚ್‌ಡಿ + ಇನ್ಫಿನಿಟಿ ಎಡ್ಜ್ ಆಂಟಿ-ಗ್ಲೇರ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಬ್ಲೂಟೂತ್ v5.2 ವಾಯರ್‌ಲೆಸ್ ಸಂಪರ್ಕವನ್ನು ಬೆಂಬಲಿಸುತ್ತದೆ. ಇದು ಡ್ಯುಯಲ್-ಅರೇ ಮೈಕ್ರೊಫೋನ್‌ಗಳು ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಸಹ ಒಳಗೊಂಡಿದೆ. ಇನ್ನುಳಿದಂತೆ ಇ ಲ್ಯಾಪ್‌ಟಾಪ್‌ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲ್ಯಾಪ್‌ಟಾಪ್

ಡೆಲ್‌ XPS 13 9315 ಲ್ಯಾಪ್‌ಟಾಪ್ 13.4-ಇಂಚಿನ ಫುಲ್‌ HD+ ಇನ್ಫಿನಿಟಿ ಎಡ್ಜ್ ಆಂಟಿ-ಗ್ಲೇರ್ ಡಿಸ್ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,920x1,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 500 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ 12 ನೇ ತಲೆಮಾರಿನ ಇಂಟೆಲ್ ಕೋರ್ i7 1250U ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ವಿಂಡೋಸ್‌ 11 Pro ಬೆಂಬಲವನ್ನು ಒಳಗೊಂಡಿದೆ. ಅಲ್ಲದೆ ಇಂಟಿಗ್ರೇಟೆಡ್ ಇಂಟೆಲ್ ಐರಿಸ್ Xe ಗ್ರಾಫಿಕ್ಸ್‌ ಕಾರ್ಡ್‌ ಅನ್ನು ಒಳಗೊಂಡಿದೆ. ಜೊತೆಗೆ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಅನ್ನು ಪಡದಿದೆ.

ಲ್ಯಾಪ್‌ಟಾಪ್‌

ಇನ್ನು ಡೆಲ್‌ XPS 13 9315 ಲ್ಯಾಪ್‌ಟಾಪ್‌ ಫಿಂಗರ್‌ಪ್ರಿಂಟ್ ರೀಡರ್‌ನೊಂದಿಗೆ ಬ್ಯಾಕ್‌ಲಿಟ್ ಕೀಬೋರ್ಡ್ ಅನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ನಲ್ಲಿ HD RGB ಕ್ಯಾಮೆರಾ ಮತ್ತು IR ಕ್ಯಾಮೆರಾ ಸೇರಿದಂತೆ ಡ್ಯುಯಲ್-ಸೆನ್ಸರ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಇದು ಡ್ಯುಯಲ್-ಅರೇ ಮೈಕ್ರೊಫೋನ್‌ಗಳು ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಸಹ ಒಳಗೊಂಡಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ 51WHr ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 45W USB ಟೈಪ್-C ಚಾರ್ಜಿಂಗ್ ಅಡಾಪ್ಟರ್ ಅನ್ನು ಬೆಂಬಲಿಸಲಿದೆ.

ಲ್ಯಾಪ್‌ಟಾಪ್‌

ಈ ಲ್ಯಾಪ್‌ಟಾಪ್‌ ಎಕ್ಸ್‌ಪ್ರೆಸ್ ಚಾರ್ಜ್ ಫೀಚರ್ಸ್‌ ಅನ್ನು ಹೊಂದಿದೆ. 80 ನಿಮಿಷಗಳ ಚಾರ್ಜ್‌ನಲ್ಲಿ ಬ್ಯಾಟರಿಯನ್ನು 80% ಸಾಮರ್ಥ್ಯದವರೆಗೆ ಚಾರ್ಜ್ ಮಾಡಲಿದೆ. ಇನ್ನು ಈ ಲ್ಯಾಪ್‌ಟಾಪ್ ವೈ-ಫೈ 6 ಮತ್ತು ಬ್ಲೂಟೂತ್ v5.2 ವಾಯರ್‌ಲೆಸ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇದು ಡಿಸ್ಪ್ಲೇ ಪೋರ್ಟ್ ಮತ್ತು ಪವರ್ ಡೆಲಿವರಿ ಫೀಚರ್ಸ್‌ಗಳೊಂದಿಗೆ ಎರಡು ಥಂಡರ್‌ಬೋಲ್ಟ್‌ 4 ಪೋರ್ಟ್‌ಗಳನ್ನು ಕೂಡ ಒಳಗೊಂಡಿದೆ. ಕಂಪನಿಯ ಪ್ರಕಾರ ಈ ಲ್ಯಾಪ್‌ಟಾಪ್‌ 12-ತಿಂಗಳ McAfee LiveSafe ಚಂದಾದಾರಿಕೆಯೊಂದಿಗೆ ಬರುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಡೆಲ್‌ XPS 13 9315 ಲ್ಯಾಪ್‌ಟಾಪ್‌ 12ನೇ ತಲೆಮಾರಿನ ಇಂಟೆಲ್‌ಕೋರ್‌ i5 1230U ಪ್ರೊಸೆಸರ್ ಜೊತೆಗೆ 8GB RAM ಮತ್ತು 256GB ಸ್ಟೋರೇಜ್‌ ಆಯ್ಕೆಗೆ 1,12,480ರೂ. ಬೆಲೆ ಹೊಂದಿದೆ. ಹಾಗೆಯೇ 16GB +512GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 1,32,480ರೂ. ಬೆಲೆ ಪಡೆದಿದೆ. ಇದಲ್ಲದೆ 12 ನೇ ತಲೆಮಾರಿನ ಇಂಟೆಲ್‌ ಕೋರ್‌ i7 1250U ಪ್ರೊಸೆಸರ್ ಜೊತೆಗೆ 16GB RAM ಮತ್ತು 512GB ಸ್ಟೋರೇಜ್ ಹೊಂದಿರುವ ಮಾದರಿಯು 1,42,480ರೂ. ಬೆಲೆ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ ಅನ್ನು ಡೆಲ್‌ನ ವೆಬ್‌ಸೈಟ್ ಮೂಲಕ ಒಂದೇ ಸ್ಕೈ ಕಲರ್ ಆಯ್ಕೆಯಲ್ಲಿ ಖರೀದಿಸಲು ಲಭ್ಯವಿದೆ. ಇದು ಆಗಸ್ಟ್ 25 ರಿಂದ, ಇದು ಆಯ್ದ ಡೆಲ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ (DES) ಲಭ್ಯವಿರುತ್ತದೆ.

Best Mobiles in India

English summary
Dell XPS 13 9315 price in India is set at Rs. 1,12,480 for the model with a 12th Gen Intel Core i5 1230U processor paired with 8GB of RAM and 256GB of storage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X