'ಇಂಟರ್‌ನೆಟ್‌' ಬಳಕೆ ಎಷ್ಟು ಅಪಾಯಕಾರಿ ಸಮಸ್ಯೆ ಗೊತ್ತಾ?

|

ಹಸಿವು, ಬಾಯಾರಿಕೆಯಂತೆ ಇಂಟರ್‌ನೆಟ್‌ ಕೂಡ ಈಗ ನಿತ್ಯ ಬದುಕಿನ ಸಹಜ ಅಂಗವಾಗಿದೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಈಗ ಅಂತರ್‌ಜಾಲ ದಾಸರೇ. ಇಂಟರ್ನೆಟ್ ಇಂದು ಪ್ರತಿಯೊಬ್ಬರ ಬದುಕನ್ನೂ ಅಗಾಧವಾಗಿ ಆವರಿಸಿಕೊಂಡಿದ್ದರೂ ಇದರ ಬಳಕೆಯಲ್ಲಿ ಯುವ ಜನತೆಯ ಪಾಲು ದೊಡ್ಡದು ಎನ್ನಬಹದು. ಏಕೆಂದರೆ, ಈ ಇಂಟರ್‌ನೆಟ್ ಯುವಜನತೆಯ ಬೇಕು ಬೇಡಗಳನ್ನು ಅಥವಾ ಕನಿಷ್ಠ ಪಕ್ಷ ಹಸಿವಿನ ಪರಿಜ್ಞಾನವೂ ಇಲ್ಲವಾಗಿಸಿರುವ ಸಮಸ್ಯೆಯನ್ನು ತಂದಿಟ್ಟಿದೆ ಎಂದು ಅಧ್ಯಯನ ವರದಿಗಳು ಹೇಳಿವೆ.

ಹೌದು, ಇತ್ತಿಚಿನ ಯುವಕ,ಯುವತಿಯರು ಅಂತರ್ಜಾಲದಲ್ಲೇ ವಿಹರಿಸುವುದರಿಂದ ಅವರ ಸಮಯವೆಲ್ಲಾ ಜಾಲತಾಣದಲ್ಲಿ ಅನ್ಯಾಯವಾಗಿ ವ್ಯಯವಾಗುತ್ತಿದೆ ಎಂದು ಆತಂಕ ವ್ಯಕ್ತವಾಗುತ್ತಿದೆ. ಗೆಳೆಯರು, ಸಹೋದ್ಯೋಗಿಗಳು ಸೇರಿದಂತೆ ಹೆತ್ತವರಿಂದಲೂ ದೂರವಾಗಿದ್ದಾರೆ ಎಂದರೆ ಇಂಟರ್‌ನೆಟ್‌ ಬಳಕೆ ಈಸ ಸಾಮಾನ್ಯ ಸಮಸ್ಯೆಯಾಗಿ ಉಳಿದಿಲ್ಲ ಎನ್ನಬಹದು. ಇದನ್ನು ನೀವೇ ಕಂಡುಕೊಳ್ಳಬೇಕು ಎಂದರೆ, ಕೇವಲ ಐದೇ ಐದು ನಿಮಿಷ ಇಂಟರ್‌ನೆಟ್‌ ಸಂಪರ್ಕ ತಪ್ಪಿ ಹೋದರೆ ಆಗುವ ಚಡಪಡಿಕೆಯ ಮೂಲಕ ಎಲ್ಲವೂ ಅರ್ಥವಾಗುತ್ತದೆ.

'ಇಂಟರ್‌ನೆಟ್‌' ಬಳಕೆ ಎಷ್ಟು ಅಪಾಯಕಾರಿ ಸಮಸ್ಯೆ ಗೊತ್ತಾ?

ಇಂಟರ್‌ನೆಟ್‌ ಸಂಪರ್ಕ ತಪ್ಪಿ ಹೋದರೆ ನೀವು ಚಡಪಡಿಸುತ್ತಿದ್ದೀರಾ ಎಂದರೆ ನೀವೂ ಕೂಡ ಈ ಸಮಸ್ಯೆಯಲ್ಲಿ ಸಿಲುಕಿದ್ದೀರಾ ಎಂದರ್ಥ. ಹಾಗಾಗಿ, ಇಂದಿನ ಲೇಖನದಲ್ಲಿ ಇಂಟರ್‌ನೆಟ್‌ ನಿಂದಾಗುವ ಕೆಲವು ನಕರಾತ್ಮಕ ಪರಿಣಾಮಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳು, ಚಾಟಿಂಗ್ ಆಪ್‌ಗಳು ಮತ್ತು ಅಶ್ಲೀಲ ವೆಬ್‌ಸೈಟ್‌ ವೀಕ್ಷಣೆಗೆಂದೇ ನೀವು ಕೂಡ ಅಂತರ್ಜಾಲ ದಾಸರಾಗಿದ್ದರೆ ಈ ಲೇಖನದಲ್ಲಿ ಇಂಟರ್‌ನೆಟ್‌ ಬಳಕೆಯ ನಕರಾತ್ಮಕ ಪರಿಣಾಮಗಳು ಯಾವುವು ಎಂಬುದನ್ನು ಓದಿ ತಿಳಿಯಿರಿ.

ಇಂಟರ್‌ನೆಟ್‌ ಎಂಬುದು ಚಟ!

ಇಂಟರ್‌ನೆಟ್‌ ಎಂಬುದು ಚಟ!

ಇಂಟರ್‌ನೆಟ್‌ ಎಂಬುದು ಚಟ ಎಂದು ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂದು ಹೇಳಬಹುದು. ಏಕೆಂದರೆ, ಇಂದು ಸಮಯ ಕಳೆಯಲು ಇಂಟರ್‌ನೆಟ್ ಎಂಬುದು ಮುಖ್ಯ ಅಂಶವಾಗಿದೆ.ಯುವಕರು ತಮ್ಮ ಅಮೂಲ್ಯ ಸಮಯವನ್ನೆಲ್ಲ ಇಂಟರ್‌ನೆಟ್‌ನಲ್ಲಿ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು, ಚಾಟಿಂಗ್ ಆಪ್‌ಗಳು ಮತ್ತು ಅಶ್ಲೀಲ ವೆಬ್‌ಸೈಟ್‌ ವೀಕ್ಷಣೆಗೆಂದೇ ಹೆಚ್ಚು ಜನರು ತಮ್ಮ ಸಮಯ ವ್ಯಯಿಸುತ್ತಿದ್ದಾರೆ. ಈ ಇಂಟರ್‌ನೆಟ್‌ನಿಂದಾಗಿ ಹೆಚ್ಚುನವರು ತಮ್ಮ ದೈನಂದಿನ ಕೆಲಸಕ್ಕೇ ಸಮಯ ಹೊಂದಿಸಲು ತಡವರಿಸುತ್ತಿದ್ದಾರೆ.

ಖಾಸಾಗಿತನ ಎಂಬುದಕ್ಕೆ ಅರ್ಥವಿಲ್ಲ!

ಖಾಸಾಗಿತನ ಎಂಬುದಕ್ಕೆ ಅರ್ಥವಿಲ್ಲ!

ಈ ಇಂಟರ್‌ನೆಟ್‌ ಪ್ರಪಂಚದಲ್ಲಿ ಖಾಸಾಗಿತನ ಎಂಬುದಕ್ಕೆ ಅರ್ಥವಿಲ್ಲ. ಇಲ್ಲಿ ಎಲ್ಲವೂ ಬಟಾಬಯಲಾಗುತ್ತದೆ. ಇಂಟರ್‌ನೆಟ್‌ ಬಳಕೆದಾರರ ಗೌಪ್ಯತೆಯು ಗೌಪ್ಯವಾಗಿ ಉಳಿಯುವ ಯಾವುದೇ ಸಾದ್ಯತೆಗಳು ಇಲ್ಲವಾಗಿವೆ. ಆಪಲ್‌, ಗೂಗಲ್‌, ಫೇಸ್‌ಬುಕ್‌, ಟ್ವಿಟ್ಟರ್, ಅಮೆಜಾನ್‌, ವಾಟ್ಸಾಆಪ್ ಸೇರಿದಂತೆ ಎಲ್ಲಾ ಕಂಪೆನಿಗಳ ಬಳಿ ನಿಮ್ಮ ಖಾಸಾಗಿ ಮಾಹಿತಿಗಳು ಸೇರಿಕೊಂಡಿವೆ. ನೀವು ಇಡೀ ದಿನ ಅಂತರ್ಜಾಲದಲ್ಲೇ ವಿಹರಿಸುವುದರಿಂದ ನಿಮ್ಮ ಬಗ್ಗೆ ನಿಮಗಿಂತ ಈ ಕಂಪೆನಿಗಳಿಗೆ ಹೆಚ್ಚು ಗೊತ್ತಿರುತ್ತದೆ ಎಂಬುದು ವಾಸ್ತವ ಸತ್ಯ.

ವಿವೇಚನೆ ಇಲ್ಲದ ಬಳಕೆ ಭ್ರಮೆಗೆ ದಾರಿ!

ವಿವೇಚನೆ ಇಲ್ಲದ ಬಳಕೆ ಭ್ರಮೆಗೆ ದಾರಿ!

ಇಂಟರ್‌ನೆಟ್‌ ಮೂಲಕ ನಮ್ಮ ಯುವ ಜನತೆ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಬದಲು ಯೋಗ್ಯವಲ್ಲದ ಕೀಳು ಅಭಿರುಚಿಯ ಮಾಹಿತಿಗಳ ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ಅಂತರ್ಜಾಲದಲ್ಲಿ ಸಿಗುವ ಪರಿಷ್ಕರಿಸದ ಯಥೇಚ್ಛ ಮಾಹಿತಿ ಮುಖಾಮುಖೀ ಸಂವಹನಕ್ಕೆ ಅವಕಾಶವನ್ನು ಕ್ಷೀಣಿಸಿದೆ. ಜೀವನ ಶೈಲಿಯನ್ನೇ ಇಂಟರ್‌ನೆಟ್‌ ನಿರ್ದೇಶಿಸುವಷ್ಟು ಅದಕ್ಕೆ ಜೋತು ಬೀಳಲಾಗುತ್ತಿದೆ. ಸ್ವನಿಯಂತ್ರಣ ಇಲ್ಲದ ಇಂಟರ್‌ನೆಟ್‌ ಬಳಕೆಯಿಂದ ಅಂತರ್ಜಾಲದ ಮಾಹಿತಿಯೇ ಪರಮ ಸತ್ಯ ಮತ್ತು ಗುಣಮಟ್ಟದ್ದು ಎಂಬ ಭ್ರಮೆ ಉಂಟಾಗುತ್ತಿದೆ.

ಬೌದ್ಧಿಕ ಮಟ್ಟವೇ ಕುಂಠಿತವಾಗುತ್ತಿದೆ!

ಬೌದ್ಧಿಕ ಮಟ್ಟವೇ ಕುಂಠಿತವಾಗುತ್ತಿದೆ!

ಅಂತರ್ಜಾಲದ ಮಾಹಿತಿಯೇ ಪರಮ ಸತ್ಯ ಮತ್ತು ಗುಣಮಟ್ಟದ್ದು ಎಂಬ ಭ್ರಮೆವು ನಮ್ಮ ಬೌದ್ಧಿಕ ಮಟ್ಟವನ್ನು ಕಡಿಮೆ ಮಾಡುತ್ತಿದೆ. ಅಂತರ್ಜಾಲದಲ್ಲಿ ನಕಲಿ ಸುದ್ದಿಗಳು, ಮಾಹಿತಿಗಳು ಅಂತರ್ಜಾಲಗಳಲ್ಲಿ ಪ್ರಸರಣಗೊಳ್ಳುತ್ತವೆ. ನಾವು ಪಡೆಯುವ ಮಾಹಿತಿಗಳ ಕುರಿತು ವಿಶ್ವಾಸಾರ್ಹತೆ ಮೂಡಿಸುವುದರ ಜತೆಗೆ ಮತ್ತಷ್ಟು ರೋಚಕತೆಗೆ ನಮ್ಮನ್ನು ದೂಡುತ್ತವೆ. ಅಂತರ್ಜಾಲಕ್ಕೆ ನಾವು ನಮ್ಮನ್ನು ಒಪ್ಪಿಸಿಕೊಂಡಿರುರುವುದರಿಂದ ಯೋಗ್ಯ ಮಾಹಿತಿಗಳು, ನ್ಯಾಯ ಸಮ್ಮತವಾದ ವಿಚಾರಗಳಿದ್ದರೂ ಒಪ್ಪಿಕೊಳ್ಳುವ ಮನಸ್ಥಿತಿ ಇರುವುದಿಲ್ಲ ಎನ್ನುತ್ತವೆ ಅಧ್ಯಯನಗಳು.

ಸಮಸ್ಯೆಗಳ ಸರಮಾಲೆಯೇ ಇವೆ!

ಸಮಸ್ಯೆಗಳ ಸರಮಾಲೆಯೇ ಇವೆ!

ನಾವು ಈ ಮೇಲೆ ಚರ್ಚಿಸಿದ ಸಮಸ್ಯೆಗಳು ಇಂಟರ್‌ನೆಟ್‌ ಬಳಕೆಯ ನಕರಾತ್ಮಕ ಪರಿಣಾಮಗಳಲ್ಲಿ ಮುಖ್ಯವಾದವು. ಆದರೆ, ಇಂಟರ್‌ನೆಟ್‌ ಬಳಕೆ ಎಂಬುದು ಸಮಸ್ಯೆಗಳ ಸರಮಾಲೆ ಎನ್ನಬಹುದು. ವಿವೇಚನೆ ಇಲ್ಲದ ಅಂತರ್ಜಾಲ ಬಳಕೆ ಸೃಷ್ಟಿಸುತ್ತಿರುವ ಅವಾಂತರವಿದು. ನಮ್ಮೊಳಗೇ ಸ್ವಾರ್ಥ ಮನೋಭಾವ ಹೆಚ್ಚಾಗಲು, ಇನ್ನೊಬ್ಬರ ಕುರಿತಾಗಿ ಹೀನ ಹೇಳಿಕೆ, ವ್ಯಕ್ತಿಯ ಮಾನ ಹಾನಿಗೆ, ನೀಚ ಭಾಷಾ ಪ್ರಯೋಗಗಳಿಗೆ ವೇದಿಕೆಯಾಗಿ, ಕೊನೆಗೆ ತನ್ನ ಬಾಳ ಪಯಣವನ್ನು ಅರ್ಧದಲ್ಲೇ ಮೊಟಕುಗೊಳಿಸುವಂಥ ಸಂದರ್ಭಗಳೂ ಸಹ ಇದರಿಂದ ಉದ್ಭವಿಸುತ್ತಿವೆ.

Most Read Articles
Best Mobiles in India

English summary
Researchers are calling for recognition of mental health problems caused... problemscaused by these activities, especially in young people. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more