ದೀಪಾವಳಿ ಹಬ್ಬದ ಪ್ರಯುಕ್ತ ಈ ಪಾರ್ಟಿ ಸ್ಪೀಕರ್‌ಗಳಿಗೆ ಬಿಗ್‌ ಡಿಸ್ಕೌಂಟ್‌!

|

ದೀಪಾವಳಿ ಹಬ್ಬದ ಸಮಯದಲ್ಲಿ ಇ-ಕಾಮರ್ಸ್‌ ಸೈಟ್‌ಗಳು ವಿಶೇಷ ಡಿಸ್ಕೌಂಟ್‌ ನೀಡುವುದು ಸಾಮಾನ್ಯ. ಇದೇ ಕಾರಣಕ್ಕೆ ಹೆಚ್ಚಿನ ಜನರು ಹಬ್ಬದ ಸೀಸನ್‌ನಲ್ಲಿ ತಮ್ಮ ನೆಚ್ಚಿನ ಪ್ರಾಡಕ್ಟ್‌ಗಳನ್ನು ಖರೀದಿಸಲು ಬಯಸುತ್ತಾರೆ. ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿ ಮಾತ್ರವಲ್ಲದೆ ಸ್ಮಾರ್ಟ್‌ ಸ್ಪೀಕರ್‌ಗಳು ಕೂಡ ಡಿಸ್ಕೌಂಟ್‌ ಪಡೆದುಕೊಂಡಿವೆ. ದೀಪಾವಳಿ ಪ್ರಯುಕ್ತ ಪಾರ್ಟಿ ಮಾಡಲು ಬಯಸುವ ಮಂದಿಗೆ ಪಾರ್ಟಿ ಸ್ಪೀಕರ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸುವುದಕ್ಕೆ ಉತ್ತಮ ಸಮಯವಾಗಿದೆ.

ದೀಪಾವಳಿ

ಹೌದು, ದೀಪಾವಳಿ ಸಂಭ್ರಮದಲ್ಲಿ ಪಾರ್ಟಿ ಸ್ಪೀಕರ್‌ಗಳಿಗೆ ಬಿಗ್‌ ಆಫರ್‌ ನೀಡಲಾಗ್ತಿದೆ. ಪಾರ್ಟಿನ ಸ್ಪೀಕರ್‌ಗಳನ್ನು ಖರೀದಿಸಲು ಬಯಸುವವರಿಗೆ ಇದಕ್ಕಿಂತ ಉತ್ತಮ ಸಮಯವಿಲ್ಲವೆಂದೆ ಹೇಳಬಹುದಾಗಿದೆ. ಇದರಲ್ಲಿ ಜೆಬಿಎಲ್‌, ಸೋನಿ,ಎಲ್‌ಜಿ ಯಂತಹ ಜನಪ್ರಿಯ ಬ್ರ್ಯಾಂಡ್‌ಗಳ ಸ್ಪೀಕರ್‌ಗಳು ಕೂಡ ಸೇರಿವೆ. ಹಾಗಾದ್ರೆ ದೀಪಾವಳಿ ಹಬ್ಬದ ಸಮಯದಲ್ಲಿ ನೀವು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾದ ಪಾರ್ಟಿ ಸ್ಪೀಕರ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ SRS XP500

ಸೋನಿ SRS XP500

ಸೋನಿ SRS XP500 ಬ್ಲೂಟೂತ್ ಸ್ಪೀಕರ್‌ ರಿಯಾಯಿತಿ ದರದಲ್ಲಿ 39,990ರೂ. ಬೆಲೆಯಲ್ಲಿ ಬರಲಿದೆ. ಇನ್ನು ಈ ಸ್ಪೀಕರ್‌ 30 ಗಂಟೆಗಳ ಬ್ಯಾಟರಿ ಅವಧಿಯನ್ನು ಪಡೆದುಕೊಂಡಿದೆ. ಈ ಸ್ಪೀಕರ್‌ IP66 ರೇಟಿಂಗ್‌ ಪಡೆದುಕೊಂಡಿದ್ದು, ವಾಟರ್‌ ಪ್ರೂಫ್‌ ಆಗಿದೆ. ಆದರಿಂದ ಹೊರಾಂಗಣ ಪಾರ್ಟಿಗಳನ್ನು ಬಳಸುವುದಕ್ಕೆ ಸೂಕ್ತವಾಗಿದೆ. ಇನ್ನು ಈ ಸ್ಪೀಕರ್‌ ಪವರ್‌ಫುಲ್‌ ಬಾಸ್‌ ಮತ್ತು ಹೈಯರ್‌ ಸೌಂಡ್‌ ಲೆವೆಲ್ಸ್‌ ಅನ್ನು ನೀಡಲಿದೆ. ವಾಯ್ಸ್‌ ಕ್ವಾಲಿಟಿ ಸಾಕಷ್ಟು ಕ್ಲಾರಿಟಿಯಿಂದ ಕೂಡಿರಲಿದೆ ಎಂದು ಹೇಳಲಾಗಿದೆ.

ಸೋನೋಸ್ ರೋಮ್

ಸೋನೋಸ್ ರೋಮ್

ಸೋನೋಸ್ ರೋಮ್ ಸ್ಪೀಕರ್‌ ಪ್ರಸ್ತುತ ಭಾರತದಲ್ಲಿ 17,599 ರೂ. ಬೆಲೆಗೆ ಲಭ್ಯವಿದೆ. ಇದು ಬ್ಲೂಟೂತ್ ಮತ್ತು ಏರ್‌ಪ್ಲೇ ಬೆಂಬಲವನ್ನು ಕೂಡ ನೀಡಲಿದೆ. ಇನ್ನು ಈ ಸ್ಪೀಕರ್‌ 10 ಗಂಟೆಗಳ ಪ್ಲೇ ಟೈಂ ಅನ್ನು ನೀಡಲಿದೆ. ಈ ಸ್ಪೀಕರ್‌ ನೀರಿನ ಪ್ರತಿರೋಧಕ್ಕಾಗಿ IP67 ರೇಟಿಂಗ್‌ನೊಂದಿಗೆ ಬರುತ್ತದೆ. ಇದು ಸಿರಿ, ಗೂಗಲ್ ಅಸಿಸ್ಟೆಂಟ್ ಮತ್ತು ಅಲೆಕ್ಸಾವನ್ನು ಬೆಂಬಲಿಸುತ್ತದೆ.

JBL ಪಾರ್ಟಿಬಾಕ್ಸ್ 100 ಸ್ಪೀಕರ್

JBL ಪಾರ್ಟಿಬಾಕ್ಸ್ 100 ಸ್ಪೀಕರ್

ದೀಪಾವಳಿ ಹಬ್ಬದ ಪ್ರಯುಕ್ತ JBL ಪಾರ್ಟಿಬಾಕ್ಸ್ 100 ಸ್ಪೀಕರ್ ಅಮೆಜಾನ್‌ನಲ್ಲಿ 17% ರಿಯಾಯಿತಿ ಪಡೆದಿದೆ. ಇದರಿಂದ ಈ ಸ್ಪೀಕರ್‌ ಕೇವಲ 29,999ರೂ.ಗಳಿಗೆ ಲಭ್ಯವಾಗ್ತಿದೆ. ಇದು IPX4 ಸ್ಪ್ಲಾಶ್‌ಪ್ರೂಫ್ ಆಗಿರುವುದರಿಂದ ಮಳೆಯಲ್ಲಿಯೂ ಕೂಡ ಇದನ್ನು ಬಳಸಬಹುದಾಗಿದೆ. ಇನ್ನು ಈ ಸ್ಪೀಕರ್‌ 12 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಲಿದೆ. ಇದು ಡೈನಾಮಿಕ್‌ ಲೈಟ್‌ ಶೋ ಹೊಂದಿರುವುದರಿಂದ ಬೀಟ್‌ಗೆ ತಕ್ಕ ಕಲರ್‌ ಲೈಟ್‌ಗಳನ್ನು ಕಾಣಬಹುದಾಗಿದೆ.

LG PL7 XBOOM Go

LG PL7 XBOOM Go

LG PL7 XBOOM Go ಸ್ಪೀಕರ್‌ ದೀಪಾವಳಿ ಪ್ರಯುಕ್ತ ಭಾರತದಲ್ಲಿ 13,990 ರೂ. ಬೆಲೆಯಲ್ಲಿ ಲಭ್ಯವಿದೆ. ಈ ಪಾರ್ಟಿ ಸ್ಪೀಕರ್‌ಗಳು ವಾಲ್ಯೂಮ್ ಮತ್ತು ಟ್ರ್ಯಾಕ್ ಬದಲಾಯಿಸಲು ಎರಡು ಮೈಕ್‌ಗಳು ಮತ್ತು ಭೌತಿಕ ಬಟನ್‌ಗಳೊಂದಿಗೆ ಬರುತ್ತವೆ. ಇದು 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ.

ಬೋಸ್‌ S1 ಪ್ರೊ ವಾಯರ್‌ಲೆಸ್ ಬ್ಲೂಟೂತ್ ಸ್ಪೀಕರ್

ಬೋಸ್‌ S1 ಪ್ರೊ ವಾಯರ್‌ಲೆಸ್ ಬ್ಲೂಟೂತ್ ಸ್ಪೀಕರ್

ಬೋಸ್‌ S1 ಪ್ರೊ ವಾಯರ್‌ಲೆಸ್ ಬ್ಲೂಟೂತ್ ಸ್ಪೀಕರ್ 68,633ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಬ್ಲೂಟೂತ್ ಸ್ಪೀಕರ್ 11 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಜೊತೆಗೆ ಈ ಬ್ಲೂಟೂತ್‌ ಸ್ಪೀಕರ್ ಬೋಸ್ ಕನೆಕ್ಟ್ ಅಪ್ಲಿಕೇಶನ್ ಅನ್ನು ಬೆಂಬಲಿಸಲಿದೆ. ಇದರಲ್ಲಿ ನೀವು ಪಾರ್ಟಿ ಮೋಡ್ ಸೇರಿದಂತೆ ವಿವಿಧ ಮೋಡ್‌ಗಳ ನಡುವೆ ಬದಲಾಯಿಸಲು ಬಳಕೆದಾರರನ್ನು ಅನುಮತಿಸಲಿದೆ.

Best Mobiles in India

English summary
Diwali Sale 2022 : Best party speakers you can buy now

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X