ಕೈಬೆರಳು ತೋರಿಸುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕಲೇಬೇಡಿ!

|

ಸಾಮಾನ್ಯವಾಗಿ ಸೆಲ್ಪೀ ಅಥವಾ ಪೋಟೋ ತೆಗೆಯುವಾಗ ವಿಕ್ಟರಿ ಚಿಹ್ನೆ ರೀತಿಯಲ್ಲಿ ಕೈಬೆರಳುಗಳನ್ನು ತೋರಿಸುವುದು ರೂಢಿ, ಆದರೆ, ಇದು ಎಷ್ಟು ಅಪಾಯಕಾರಿ ಎಂಬುದನ್ನು ಇತ್ತೀಚಿನ ವರದಿಯೊಂದು ತಿಳಿಸಿದೆ. ಕೈಬೆರಳುಗಳನ್ನು ತೋರಿಸುವ ಚಿತ್ರಗಳು ಸೈಬರ್ ಖದೀಮರ ಕೈಗೆ ಸಿಕ್ಕರೆ, ನಿಮ್ಮ ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆ ನೀಡಿದೆ.

ಹೌದು, ಸೆಲ್ಫೀ ಫೋಟೋ ತೆಗೆಯುವಾಗ ವಿಕ್ಟರಿ ಮಾರ್ಕ್‌ಗಾಗಿ ಎರಡು ತೋರು ಬೆರಳುಗಳನ್ನು ಇಂಗ್ಲಿಷ್‌ನ ಅಕ್ಷರ 'ವಿ' ಆಕಾರದಲ್ಲಿ ತೋರಿಸುವುದು, ಡನ್ ಎಂದು ಹೇಳಲು ಹೆಬ್ಬೆಟ್ಟುಗಳನ್ನು ತೋರಿಸಿರುವ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಇದರಿಂದ ಆನ್‌ಲೈನ್ ಪ್ರಪಂಚದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವರದಿ ತಿಳಿಸಿದೆ.

ಸದ್ಯ ಲಭ್ಯವಿರುವ ಆಧುನಿಕ ತಂತ್ರಜ್ಞಾನದ ಮೂಲಕ ಫೋಟೋದಲ್ಲಿರುವ ಬೆರಳುಗಳ ಮೂಲಕ ಬೆರಳಿನ ಗುರುತುಗಳನ್ನು (ಬೆರಳಚ್ಚು) ಸುಲಭವಾಗಿ ಪತ್ತೆಹಚ್ಚಬಹುದು. ಸಾಮಾಜಿಕ ತಾಣಗಳಲ್ಲಿ ನಾವು ಅಪ್‌ಲೋಡ್‌ ಮಾಡಿದ ಚಿತ್ರಗಳನ್ನು ತೆಗೆದುಕೊಂಡು ಅದೇ ರೀತಿಯಲ್ಲಿ ಬೆರಳಚ್ಚನ್ನು ಮರು ಸೃಷ್ಟಿಸಿ ಖಾತೆಗಳಿಗೆ ಕನ್ನ ಹಾಕುವುದು ಸುಲಭವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೈಬೆರಳು ತೋರಿಸುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕಲೇಬೇಡಿ!

ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಅಪ್‌ಡೇಟ್ ಮಾಡಿದ್ದನ್ನು ನೋಡಿ ಮನೆ ಕಳ್ಳತನ ಮಾಡಿರುವ ಹಲವು ಘಟನೆಗಳು ನಡೆದಿವೆ. ಅದೇ ರೀತಿಯಲ್ಲಿ ಜಾಲತಾಣಗಲ್ಲಿ ಪೋಟೋಗಳಿಂದ ಬೆರಳಚ್ಚನ್ನು ಸುಲಭವಾಗಿ ಕದ್ದು ನಿಮ್ಮ ಖಾತೆಗಳಿಗೆ ಕನ್ನಹಾಕುವುದು ಕಷ್ಟವೇನಲ್ಲ.ಹಾಗಾಗಿ, ಯಾವುದೇ ಕಾರಣಕ್ಕೂ ನಿಮ್ಮ ಬೆರಳಚ್ಚು ಕಾಣುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬೇಡಿ.

PDF converter ಆಪ್ ನಿಮ್ಮ ಮೊಬೈಲ್‌ನಲ್ಲಿ ಇದೆಯಾ?..ಹಾಗಾದ್ರೆ ಎಚ್ಚರ!PDF converter ಆಪ್ ನಿಮ್ಮ ಮೊಬೈಲ್‌ನಲ್ಲಿ ಇದೆಯಾ?..ಹಾಗಾದ್ರೆ ಎಚ್ಚರ!

ಕೆಲದಿನಗಳ ಹಿಂದೆಯಷ್ಟೇ, ಸೈಬರ್ ಖದೀಮರಿಂದ ಮೋಸಕ್ಕೊಳಗಾಗದಂತೆ ಜಾಗೃತಿ ಮೂಡಿಸುವ ಮತ್ತು ಎಚ್ಚರಿಸುವ ವೀಡಿಯೋವನ್ನು ಐಪಿಎಸ್ ಅಧಿಕಾರಿ ಐಜಿಪಿ ರೂಪಾ ಅವರು ಟ್ವಿಟ್ಟರ್‌ ಜಾಲತಾಣದಲ್ಲಿ ಶೇರ್‌ ಮಾಡಿದ್ದರು. ಆ ವಿಡಿಯೋದಲ್ಲೂ ಸಹ ಬೆರಳಚ್ಚನ್ನು ಕದ್ದು ಮೋಸ ಮಾಡಬಹುದಾದ ಬಗ್ಗೆ ಎಚ್ಚರಿಸುವಂತಹ ವಿಷಯ ಇದ್ದಿದ್ದನ್ನು ನಾವು ನೋಡಬಹುದು.

Best Mobiles in India

English summary
Can Hackers Use Peace Sign Selfies to Steal Fingerprints and Identities?. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X