ಸಿಂಪಲ್ ಟಾಸ್ಕ್ ಕೊಟ್ಟ ಗೂಗಲ್: ಗೆದ್ದರೆ 5 ಲಕ್ಷ ಬಂಪರ್ ಬಹುಮಾನ..!

|

ಟೆಕ್ ದೈತ್ಯ ಗೂಗಲ್ ಜಾಗತಿಕವಾಗಿ ತನ್ನ ಬಾಹುಗಳನ್ನು ವಿಸ್ತರಿಸಿಕೊಂಡಿದೆ. ಏನೇ ಬೇಕ್ಕಿದ್ದರೂ ಗೂಗಲ್ ಮಾಡಿ ಎನ್ನುವ ಮಟ್ಟಕ್ಕೆ ಬೆಳೆದು ನಿಂತಿದೆ. ಈ ಹಿನ್ನಲೆಯಲ್ಲಿ ವಿಶ್ವದಲ್ಲಿಯೇ ಅತೀ ಹೆಚ್ಚು ಮಂದಿ ಬಳಕೆದಾರರನ್ನು ಗೂಗಲ್ ಹೊಂದಿದೆ. ಸರ್ಚ್ ಇಂಜಿನ್ ವಿಭಾಗದಲ್ಲಿ ಗೂಗಲ್ ಏಕಸ್ವಾಮ್ಯತೆಯನ್ನು ಸಾಧಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇದರಿಂದಾಗಿ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಲುವಾಗಿ ವಿಶೇಷ ದಿನಗಳಲ್ಲಿ ವಿಶೇಷವಾಗಿ ತನ್ನ ಡೂಗಲ್‌ಗಳನ್ನು ರಚನೆ ಮಾಡುವ ಪರಿಪಾಠವನ್ನು ಬೆಳಸಿಕೊಂಡಿದೆ.

ಸಿಂಪಲ್ ಟಾಸ್ಕ್ ಕೊಟ್ಟ ಗೂಗಲ್: ಗೆದ್ದರೆ 5 ಲಕ್ಷ ಬಂಪರ್ ಬಹುಮಾನ..!

ಇದೇ ಮಾದರಿಯಲ್ಲಿ ತನ್ನ ಬಳಕೆದಾರರಿಗೆ ಹೊಸದೊಂದು ಟಾಸ್ಕ್ ಅನ್ನು ನೀಡಲು ಮುಂದಾಗಿದೆ. 2018 ಡೂಗಲ್ 4 ಗೂಗಲ್ ಸ್ಪರ್ಧೆಯನ್ನು ಆಯೋಜಿಸಿದೆ. ಇದರಂತೆ ಯಾರು ಬೇಕಾದರೂ ಹೊಸ ಮಾದರಿಯಲ್ಲಿ ಗೂಗಲ್ ಡೂಗಲ್ ಅನ್ನು ರಚಿಸಿ ಕಳುಹಿಸಬಹುದಾಗಿದೆ. ಗೂಗಲ್ ಸೆಲೆಕ್ಟ್ ಮಾಡಿಕೊಳ್ಳುವ ಡೂಗಲ್‌ ರಚಿಸಿದವರಿಗೆ ರೂ.5 ಲಕ್ಷ ಬಹುಮಾನವನ್ನು ನೀಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನೀವು ಹೇಗೆ 5 ಲಕ್ಷ ಗೆಲ್ಲುವುದು ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಈ ವರ್ಷದ ಥೀಮ್:

ಈ ವರ್ಷದ ಥೀಮ್:

ಗೂಗಲ್ ಈ ಬಾರಿ 2018 ಡೂಗಲ್ 4 ಗೂಗಲ್ ಸ್ಪರ್ಧೆಯಲ್ಲಿ 'ವಾಟ್ ಇನ್‌ಸ್ಪೇರ್ ಯೂ ಥೀಮ್' ನೀಡಿದ್ದು, ಇದರ ಮೇಲೆ ನೀವು ಡೂಗಲ್ ಅನ್ನು ರಚನೆ ಮಾಡಬೇಕಾಗಿದೆ. ಹೀಗೆ ನೀವು G o o g l e ಅಕ್ಷರಗಳನ್ನು ಬಳಕೆ ಮಾಡಿಕೊಂಡು ನಿಮ್ಮದೇ ಒಂದು ಲೋಗೋವನ್ನು ನಿರ್ಮಾಣ ಮಾಡಬೇಕಾಗಿದೆ. ಹೀಗೆ ಮಾಡಿದ್ದು, ಗೂಗಲ್‌ಗೆ ಇಷ್ಟವಾದರೆ ನಿಮ್ಮ ಲಕ್ ಬದಲಾಗಲಿದೆ.

ರೂ. 5 ಲಕ್ಷ ಬಹುಮಾನ:

ರೂ. 5 ಲಕ್ಷ ಬಹುಮಾನ:

ಈ ರೀತಿಯಲ್ಲಿ ನೀವು ರಚಿಸಿದ ಗೂಗಲ್ ಡೂಗಲ್‌ ಸೆಲೆಕ್ಟ್ ಆದರೆ ಗೂಗಲ್‌ನಿಂದ ನಿಮಗೆ ರೂ.5 ಲಕ್ಷದ ಕಾಲೇಜ್ ಸ್ಕಾಲರ್ ಶಿಪ್ ದೊರೆಯಲಿದೆ. ಇದರಿಂದಾಗಿ ನಿಮ್ಮ ಉನ್ನತ ಶಿಕ್ಷಣದ ಕನಸನ್ನು ನನಸು ಆಗಿಸಿಕೊಳ್ಳಬಹುದಾಗಿದೆ. ಅಲ್ಲದೇ ಬೇಕಿದ್ದನ್ನು ಓದಬಹುದಾಗಿದೆ.

ಯಾವುದರಲ್ಲಿ:

ಯಾವುದರಲ್ಲಿ:

ನೀವು ಕ್ರಯಾನ್ಸ್, ವಾಟರ್ ಕಲರ್, ಗ್ರಾಫಿಕ್ಸ್ ಡಿಸೈನ್ ಸೇರಿದಂತೆ ವಿವಿಧ ಮಾದರಿಯಲ್ಲಿ ಡೂಗಲ್ ಅನ್ನು ರಚನೆ ಮಾಡಬಹುದಾಗಿದೆ. ಒಟ್ಟಿನಲ್ಲಿ ಗೂಗಲ್ ಹೆಸರನ್ನು ವಿವಿಧ ಮಾದಿಯಲ್ಲಿ ಹೇಗೆ ಬಳಕೆ ಮಾಡಿಕೊಂಡು ಕಥೆ ಹೇಳುವ ಮಾದರಿಯಲ್ಲಿ ಡೂಗಲ್ ರಚನೆ ಮಾಡುತ್ತೀರಾ ಎಂಬುದರ ಮೇಲೆ ಆಯ್ಕೆಯೂ ನಿಂತಿದೆ.

ಆಯ್ಕೆ ಹೇಗೆ..?

ಆಯ್ಕೆ ಹೇಗೆ..?

ನೀವು ರಚನೆ ಮಾಡಿ ಕಳುಹಿಸುವ ಡೂಗಲ್ ಗಳಲ್ಲಿ ಜೆಡ್ಜ್‌ಗಳು ಒಟ್ಟು 20 ಡೂಗಲ್‌ಗಳನ್ನು ಆಯ್ಕೆ ಮಾಡುತ್ತಾರೆ. ಹೀಗೆ ಆಯ್ಕೆ ಮಾಡಿದ ಡೂಗಲ್‌ಗಳಲ್ಲಿ ಬೆಸ್ಟ್ ಎನ್ನುವುದನ್ನು ಆಯ್ಕೆ ಮಾಡಲು ಜನಾಭಿಪ್ರಾಯವನ್ನು ಪಡೆಯಲು ಪಬ್ಲಿಕ್ ಒಟಿಂಗ್ ಅವಕಾಶವನ್ನು ಮಾಡಿಕೊಡಲಾಗುತ್ತಾದೆ. ಜಾಸ್ತಿ ಓಟ್ ಪಡೆದವರಿಗೆ ಬಹುಮಾನ ದೊರೆಯಲಿದೆ.

Best Mobiles in India

English summary
‘Doodle 4 Google’ can get you Rs 5 lakh scholarship; here’s how. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X