ವಾಟ್ಸಾಪ್‌, ಟೆಲಿಗ್ರಾಮ್‌ನಂತಹ ಆಪ್‌ಗಳ ನಿಯಂತ್ರಣಕ್ಕೆ ಸರ್ಕಾರದಿಂದ ಹೊಸ ಪ್ಲಾನ್‌!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಿಗೆ ಭಾರತ ಸರ್ಕಾರ ಬಿಗ್‌ ಶಾಕ್‌ ನೀಡಲು ಮುಂದಾಗಿದೆ. ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಸಾಧಿಸಿರುವ ವಾಟ್ಸಾಪ್‌, ಟೆಲಿಗ್ರಾಮ್‌ ಮತ್ತು ಸಿಗ್ನಲ್‌ ಅಪ್ಲಿಕೇಶನ್‌ಗಳನ್ನು ಭದ್ರತೆಯ ದೃಷ್ಟಿಯಿಂದ ನಿಯಂತ್ರಣ ಮಾಡುವುದು ಅವಶ್ಯಕವಾಗಿದೆ. ಆದರಿಂದ ವಾಟ್ಸಾಪ್‌,ಟೆಲಿಗ್ರಾಮ್‌ ಸೇರಿದಂತೆ ಮೆಸೇಜಿಂಗ್‌ ಅಪ್ಲಿಕೇಶನ್‌ಗಳನ್ನು ದೂರಸಂಪರ್ಕ ಇಲಾಖೆಯ ನಿಯಂತ್ರಣಕ್ಕೆ ನೀಡಲು ಮುಂದಾಗಿದೆ. ಇದರಿಂದ ದುರುಪಯೋಗ ಮತ್ತು ಭದ್ರತಾ ಸಮಸ್ಯೆಗಳನ್ನು ಬಗೆ ಹರಿಸಲು ಸಾಧ್ಯವಾಗಲಿದೆ.

ಇಲಾಖೆ

ಹೌದು, ಮೆಸೇಜಿಂಗ್‌ ಅಪ್ಲಿಕೇಶನ್‌ಗಳ ನಿಯಂತ್ರಣವನ್ನು ದೂರಸಂಪರ್ಕ ಇಲಾಖೆ ನೀಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ದೂರಸಂಪರ್ಕ ಇಲಾಖೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ (MeitY) ಮತ್ತು ಜ್ಞಾನ ಮತ್ತು ಪ್ರಸಾರ ಸಚಿವಾಲಯದೊಂದಿಗೆ ಸಮಲೋಚನೆ ನಡೆಸುವ ಸಾಧ್ಯತೆ ಇದೆ. ಇದಲ್ಲದೆ ಟೆಲಿಕಾಂ ನಿಯಂತ್ರಕರ ಜೊತೆಗೆ ಕೂಡ ಚರ್ಚೆ ನಡೆಸಲಿದೆ. ಇನ್ನು ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಹೆಚ್ಚುತ್ತಿರುವ ಸುಳ್ಳು ಸುದ್ದಿಗಳ ಹರಡುವಿಕೆ ಹಾಗೂ ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಈ ನಿರ್ಧಾರ ಸೂಕ್ತ ಎಂದು ಹೇಳಲಾಗಿದೆ.

ಹೊಸ

ಭಾರತದಲ್ಲಿ ಈಗಾಗಲೇ ಹೊಸ ಐಟಿ ನಿಯಮವನ್ನು ಜಾರಿಗೆ ತರಲಾಗಿದೆ. ಈ ನಿಯಮವನ್ನು ಪಾಲಿಸುವಲ್ಲಿ ವಾಟ್ಸಾಪ್‌ ಸೇರಿದಂತೆ ಹಲವು ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳು ಅಸಹಕಾರ ನೀಡುತ್ತಾ ಬಂದಿವೆ. ಅಲ್ಲದೆ ಕಾನೂನು ಸಮರ ಕೂಡ ಸಾರಿವೆ. ಇದೇ ಸಂದರ್ಭದಲ್ಲಿ ವಾಟ್ಸಾಪ್‌ನಂತಹ ಮೆಸೇಜಿಂಗ್‌ ಅಪ್ಲಿಕೇಶನ್‌ಗಳನ್ನು ನಿಯಂತ್ರಣ ಮಾಡುವುದಕ್ಕೆ ಸರ್ಕಾರ ಹೊಸ ಪ್ಲಾನ್‌ ಮಾಡಿದೆ. ಈ ಮೂಲಕ ವಾಟ್ಸಾಪ್‌, ಟೆಲಿಗ್ರಾಮ್‌ ಅಪ್ಲಿಕೇಶನ್‌ಗಳಿಗೆ ಬಿಗ್‌ ಶಾಕ್‌ ಎದುರಾಗಿದೆ. ಹಾಗಾದ್ರೆ ಮೆಸೇಜಿಂಗ್‌ ಅಪ್ಲಿಕೇಶನ್‌ಗಳನ್ನು ಸರ್ಕಾರ ನಿಯಂತ್ರಣ ಮಾಡುವುದರಿಂದ ಉಂಟಾಗುವ ಪರಿಣಾಮ ಏನು? ಇದರ ಅವಶ್ಯಕತೆ ಇದೆಯಾ? ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನೆಲ್ಲಾ ಪರಿಣಾಮ ಉಂಟಾಗಲಿದೆ?

ಏನೆಲ್ಲಾ ಪರಿಣಾಮ ಉಂಟಾಗಲಿದೆ?

ವಾಟ್ಸಾಪ್‌, ಟೆಲಿಗ್ರಾಮ್‌, ಸಿಗ್ನಲ್‌ ಸೇರಿದಂತೆ ತ್ವರಿತ ಮೆಸೇಜಿಂಗ್‌ ಅಪ್ಲಿಕೇಶನ್‌ಗಳನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳಲು ದೂರಸಂಪರ್ಕ ಇಲಾಖೆ ಪ್ಲಾನ್‌ ಮಾಡಿದೆ. ಈ ನಿಟ್ಟಿನಲ್ಲಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ಅಭಿಪ್ರಾಯವನ್ನು ಕೂಡ ಕೇಳಲು ಮುಂದಾಗಿದೆ. ಆದರೆ ಸಮಸ್ಯೆಯನ್ನು ಡಿಜಿಟಲ್ ಕಮ್ಯುನಿಕೇಷನ್ಸ್ ಕಮಿಷನ್‌ಗೆ ಕೊಂಡೊಯ್ಯಲು ಸಾಧ್ಯವಿದೆಯಾ ಎಂಬುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಇದು ಟ್ವಟರ್‌ ಮತ್ತು ಫೇಸ್‌ಬುಕ್‌ ನಂತಹ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳ ಉಸ್ತುವಾರಿಯನ್ನು ಕೂಡ ವಹಿಸಲಿದೆ.

ಕಮ್ಯೂನಿಕೇಶನ್‌

ಇನ್ನು ಟೆಲಿಕಾಂ ವಿಭಾಗವು ಟೆಲಿಕಾಂಗಳಿಗೆ ಸಮಾನವಾದ ಸೇವೆಗಳನ್ನು ಒದಗಿಸುವ ಕಮ್ಯೂನಿಕೇಶನ್‌ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಆದರೆ ಈ ಅಪ್ಲಿಕೇಶನ್‌ಗಳನ್ನು ಯಾರು ನಿಯಂತ್ರಿಸುತ್ತಾರೆ ಎಂಬುದರ ಎಫೆಕ್ಟ್‌ ಹೇಗಿರಲಿದೆ ಎಂಬಉದು ತಿಳಿದ ನಂತರ ಮಧ್ಯಸ್ಥಗಾರರ ಸಮಾಲೋಚನೆಗಳನ್ನು ನಡೆಸುವ ನಡೆಸಬೇಕೆ ಅಥವಾ ಬೇಡವೇ ಎಂಬುದನ್ನು ದೂರಸಂಪರ್ಕ ಇಲಾಖೆ ನಿರ್ಧಾರ ಮಾಡಲು ಸಾಧ್ಯವಿದೆ. ಏಕೆಂದರೆ ಟ್ರಾಯ್‌ ಮೊದಲ ಸಮಸ್ಯೆಯನ್ನು ತಂದಾಗ, ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (IAMAI), ನಾಸ್ಕಾಮ್ ಮತ್ತು US-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್‌ನಂತಹ ಹೆಚ್ಚಿನ ಟ್ರೇಡ್‌ ಟೀಂಗಳು ರೆಗ್ಯುಲೇಟರಿ ಫ್ರೇಮ್ವರ್ಕ್‌ಗೆ ವಿರುದ್ದವಾಗಿದ್ದವು ಅನ್ನೊದನ್ನ ಗಮನಿಸಬಹುದು.

ಅಪ್ಲಿಕೇಶನ್‌

ಇನ್ನು ಅಪ್ಲಿಕೇಶನ್‌ಗಳನ್ನು ತನ್ನ ಕಂಟ್ರೋಲ್‌ಗೆ ತೆಗೆದುಕೊಳ್ಳಬೇಕು ಎಂದು ಸರ್ಕಾರ ಯೋಚಿಸುತ್ತಿರುವುದು ಇದೇ ಮೊದಲೇಣಲ್ಲ. ಈ ಹಿಂದೆ ನವೆಂಬರ್ 2018 ರಲ್ಲಿ, ಟ್ರಾಯ್‌ ರೆಗ್ಯುಲೇಟರಿ ಫ್ರೇಮ್ವರ್ಕ್ ಫಾರ್ ಓಟ್ ಕಮ್ಯುನಿಕೇಷನ್ ಪ್ರೊವೈಡೆರ್ಸ್ ಎಂಬ ಸೆಷನ್ ಪೇಪರ್ ಅನ್ನು ಬಿಡುಗಡೆ ಮಾಡಿತು. ಆದರೆ ಸೆಪ್ಟೆಂಬರ್ 2020 ರಲ್ಲಿ ಈ ಅಪ್ಲಿಕೇಶನ್‌ಗಳನ್ನು ನಿಯಂತ್ರಿಸುವ ಅಗತ್ಯವನ್ನು ಎಲ್ಲರೂ ವಿರೋದ ಮಾಡಿದ್ದರಿಂದ ಈ ಕಾಯ್ದೆ ಜಾರಿಗೆ ಬರಲಿಲ್ಲ.

ಸೊಶೀಯಲ್‌

ಆದರೆ ಇದೀಗ ಕಾಲ ಬದಲಾಗಿದೆ. ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳು ಸಾಕಷ್ಟು ಪರಿಣಾಮ ಬೀರುತ್ತಿವೆ. ಸತ್ಯಾಸತ್ಯತೆ ತಿಳಿಯದೆ ಎಷ್ಟೋ ಜನರಿಗೆ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹರಡುವ ಪ್ರಯತ್ನಗಳು ನಡೆಯುತ್ತಲಿವೆ. ಇದರಿಂದ ದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಆಗುತ್ತಿದೆ. ಇದೇ ಕಾರಣಕ್ಕೆ ಸರ್ಕಾರ ಮೆಸೇಜಿಂಗ್‌ ಅಪ್ಲಿಕೇಶನ್‌ಗಳನ್ನು ದೂರಸಂರ್ಪಕ ಇಲಾಖೆಯ ನಿಯಂತ್ರಣದಲ್ಲಿಡಲು ಪ್ಲಾನ್‌ ರೂಪಿಸಿದೆ. ಒದು ವೇಳೆ ಇದು ಸಾಕಾರವಾದರೆ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳ ಆರ್ಭಟಕ್ಕೆ ಕಡಿವಾಣ ಬೀಳೋದು ಪಕ್ಕಾ ಎನ್ನಬಹುದು.

ಸರ್ಕಾರದ ಈ ನಿರ್ಧಾರ ಏಕೆ ಅವಶ್ಯಕವಾಗಿದೆ?

ಸರ್ಕಾರದ ಈ ನಿರ್ಧಾರ ಏಕೆ ಅವಶ್ಯಕವಾಗಿದೆ?

ವಾಟ್ಸಾಪ್‌ನಂತಹ ಮೆಸೇಜಿಂಗ್‌ ಅಪ್ಲಿಕೇಶನ್‌ಗಳು ಎಂಡ್‌-ಟು-ಎಂಡ್ ಎನ್‌ಕ್ರಿಪ್ಶನ್ ಹೊಂದಿರುವುದರಿಂದ ಸರ್ಕಾರಕ್ಕೆ ಅಗತ್ಯ ಸಂದರ್ಭಗಳಲ್ಲಿ ಸೂಕ್ತ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೇಳುವ ಕೆಲ ವ್ಯಕ್ತಿಗಳ ಚಾಟ್‌ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ಈ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಅಡ್ಡ ಬರುತ್ತಿದೆ. ಅಲ್ಲದೆ ಅಪ್ಲಿಕೇಶನ್‌ಗಳು ಕಾನೂನು ಜಾರಿ ಸಂಸ್ಥೆಗಳಿಗೆ ಅವರು ಹುಡುಕುತ್ತಿರುವ ಮಾಹಿತಿಯನ್ನು ನೀಡಬೇಕು ಎಂದು ಮಧ್ಯವರ್ತಿ ನಿಯಮಗಳು ಹೇಳುತ್ತವೆ. ಆದರೆ ಈ ಅಪ್ಲಿಕೇಶನ್‌ಗಳು ಸಾಮಾನ್ಯವಾಗಿ ಎನ್‌ಕ್ರಿಪ್ಶನ್‌ನಿಂದ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತವೆ. ಇದೇ ಕಾರಣಕ್ಕೆ ಈ ಅಪ್ಲಿಕೇಶನ್‌ಗಳ ಮೇಲೆ ಸರ್ಕಾರ ನಿಯಂತ್ರಣವನ್ನು ಹೊಂದುವುದು ಅತಿ ಅವಶ್ಯಕವಾಗಿದೆ.

ಸೊಶೀಯಲ್‌

ಇಂದಿನ ದಿನಗಳಲ್ಲಿ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಆರ್ಭಟ ಜೋರಾಗಿದೆ. ಆದರೆ ಸರ್ಕಾರದ ಜೊತೆಗೆ ಇವುಗಳ ನಡೆ ಸಮಾಧಾನಕಾರವಾಗಿಲ್ಲ ಅನ್ನೊದು ಕೂಡ ಮುಖ್ಯವಾಗಿದೆ. ಏಕೆಂದರೆ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಬಳಕೆ ಸಹಜವಾಗಿಯೇ ಹೆಚ್ಚು ಜನಪ್ರಿಯತೆ ಪಡೆದಿದೆ. ಆದರೆ ಸರ್ಕಾರ ಬಯಸುವ ಮಾಹಿತಿಯನ್ನು ನೀಡುವಲ್ಲಿ ಈ ಅಪ್ಲಿಕೇಶನ್‌ಗಳು ವಿಳಂಬ ದೋರಣೆ ಮತ್ತು ಅನಗತ್ಯ ವಿಚಾರಗಳ ನೆಪವೊಡ್ಡಿ ಮಾಹಿತಿ ನೀಡುತ್ತಿಲ್ಲ ಎಂದು ಹೇಳಲಾಗಿದೆ.

ಸರ್ಕಾರ

ಇದೆಲ್ಲವನ್ನು ಗಂಬೀರವಾಗಿ ಪರಿಗಣಿಸಿರುವ ಸರ್ಕಾರ ಈಗಾಗಲೇ ಹೊಸ ಐಟಿ ನಿಯಮವನ್ನು ಜಾರಿಗೆ ತಂದು ಪ್ರತಿ ಮಾಸಿಕ ವರದಿಯನ್ನು ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳು ನೀಡುವಂತೆ ಹೇಳಿದೆ. ಇದನ್ನು ಪ್ರಶ್ನೆ ಮಾಡಿ ಕೆಲವು ಅಪ್ಲಿಕೇಶನ್‌ಗಳು ಕೋರ್ಟ್‌ ಮೆಟ್ಟಿಲು ಕೂಡ ಹತ್ತಿವೆ. ಇದರ ನಡುವೆ ಸರ್ಕಾರ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದಕ್ಕೆ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿರುವುಸು ಸ್ಪಷ್ಟವಾಗಿದೆ. ಇದೇಲ್ಲದರ ಪರಿಣಾಮ ಮುಂದಿನ ದಿನಗಳಲ್ಲಿ ತ್ವರಿತ ಮೆಸೇಜಿಂಗ್‌ ಅಪ್ಲಿಕೇಶನ್‌ಗಳು ದೂರಸಂಪರ್ಕ ಇಲಾಖೆಯ ನಿಯಂತ್ರಣಕ್ಕೆ ಬಂದರೆ ಅಚ್ಚರಿಯಿಲ್ಲ.

Best Mobiles in India

Read more about:
English summary
DoT thinks that instant messaging platforms should be regulated for security

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X