ನಿಮ್ಮ ಡಿಟಿಹೆಚ್‌ ಪ್ಲಾನ್‌ ಆಯ್ದುಕೊಳ್ಳಲು ಇನ್ನು ಸುಲಭ ಮಾರ್ಗ..!

By Gizbot Bureau
|

ಡಿಟಿಎಚ್‌ ಚಾನೆಲ್‌ಗಳ ಆಯ್ಕೆಯಲ್ಲಿ ಭಾರೀ ಬದಲಾವಣೆಯಾಗಿರುವುದು ನಿಮಗೆ ಗೊತ್ತೆ ಇದೆ. ಟ್ರಾಯ್‌ನ ಹೊಸ ನಿಯಮದಂತೆ ಬಳಕೆದಾರರು ತಮಗೆ ಬೇಕಾದ ಚಾನೆಲ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಅದಕ್ಕಾಗಿಯೇ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಡಿಟಿಎಚ್ ಚಾನೆಲ್ ಆಯ್ಕೆಯ ಎಮ್ಯುಲೇಟರ್ ಅನ್ನು ಬಿಡುಗಡೆ ಮಾಡಿದೆ. ಚಾನಲ್‌ಗಳನ್ನು ಆಯ್ಕೆ ಮಾಡಲು ಬಳಕೆದಾರರು ತಮ್ಮ ಡಿಟಿಎಚ್ ಆಪರೇಟರ್‌ನ ವೆಬ್‌ಸೈಟ್ ಅಥವಾ ಆಪ್‌ಗೆ ಹೋಗುವ ಮೊದಲು, ಬಳಕೆದಾರರು ಆಯ್ಕೆ ಮಾಡಿದ ಚಾನಲ್‌ಗಳಿಗೆ ಎಷ್ಟು ವೆಚ್ಚವಾಗಲಿದೆ ಎಂಬುದನ್ನು ಎಮ್ಯುಲೇಟರ್ ಬಳಸಿ ಪರಿಶೀಲಿಸಬಹುದು.

ಹಂತ 1: TRAI ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ

ಹಂತ 1: TRAI ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ

https://channel.trai.gov.in ವೆಬ್‌ಸೈಟ್‌ನಲ್ಲಿ ಮೊದಲು ಹೆಸರು ಮತ್ತು ನಿಮ್ಮ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವನ್ನು ಭರ್ತಿ ಮಾಡಲು ಕೇಳುತ್ತದೆ. ಮುಂದಿನ ಪರದೆಯಲ್ಲಿ ನಿಮಗೆ ಅಗತ್ಯವಿರುವ ಭಾಷೆಗಳನ್ನು ಮತ್ತು ಚಾನಲ್‌ಗಳ ಪ್ರಕಾರವನ್ನು ನೀವು ಒದಗಿಸಬೇಕು. ನಂತರ ಭಾಷೆಗಳನ್ನು ಮತ್ತು ಚಾನಲ್‌ಗಳ ಪ್ರಕಾರವನ್ನು ಮಾರ್ಪಡಿಸುವ ಆಯ್ಕೆಯನ್ನು ನೀವು ಹೊಂದಿದ್ದೀರಿ.

ಹಂತ 2: ಆದ್ಯತೆಯ ಡಿಟಿಎಚ್ ಯೋಜನೆ ಆಯ್ಕೆಮಾಡಿ

ಹಂತ 2: ಆದ್ಯತೆಯ ಡಿಟಿಎಚ್ ಯೋಜನೆ ಆಯ್ಕೆಮಾಡಿ

ಬಳಿಕ, ವೆಬ್‌ಸೈಟ್‌ನಲ್ಲಿ ನಿಮಗೆ ಹೆಚ್‌ಡಿ, ಎಸ್‌ಡಿ ಚಾನೆಲ್‌ ಬೇಕೊ ಅಥವಾ ಎರಡು ಬೇಕೋ ಎಂಬ ಮಾಹಿತಿಯನ್ನು ನೀಡಬೇಕು. ಮುಂದಿನ ಪರದೆಯಿಂದ ನೀವು ಚಾನಲ್‌ಗಳನ್ನು ಆಯ್ಕೆ ಮಾಡಲು ಪ್ರಾರಂಭಿಸಬಹುದು. ಮತ್ತು ಬ್ರಾಡ್‌ಕಾಸ್ಟರ್ ಬಕೆಟ್‌ಗಳನ್ನು ಸಹ ನೀವು ಆಯ್ಕೆ ಮಾಡಬಹುದು. ಚಾನಲ್‌ಗಳನ್ನು ಆಯ್ಕೆಮಾಡುವಾಗ, ಟಾಪ್‌ ಬಾರ್‌ನಲ್ಲಿ MRP ದರ ಅಪ್‌ಡೇಟ್‌ ಆಗುತ್ತಿರುತ್ತದೆ. ನೀವು ಉಚಿತ ಚಾನಲ್ ಆರಿಸಿದರೆ ನಿಮ್ಮ ದರದ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆದಾಗ್ಯೂ, ನೀವು ಎನ್‌ಸಿಎಫ್ ಸ್ಲ್ಯಾಬ್ ಬದಲಾಯಿಸದೆ ಪೇ ಚಾನೆಲ್ ಸೇರಿಸಿದರೆ, ನೀವು ಆಯ್ಕೆ ಮಾಡಿದ ಹೆಚ್ಚುವರಿ ಚಾನಲ್‌ನ ಬೆಲೆಯ ಮೌಲ್ಯವು ಹೆಚ್ಚಾಗುತ್ತದೆ.

ಇಚ್ಛೆಯಂತೆ ಚಾನಲ್‌ ಆಯ್ಕೆ

ಇಚ್ಛೆಯಂತೆ ಚಾನಲ್‌ ಆಯ್ಕೆ

ನಿಮ್ಮ ಇಚ್ಛೆಯಂತೆ ಚಾನಲ್‌ಗಳನ್ನು ಆಯ್ಕೆ ಮಾಡಬಹುದು ಅಥವಾ ರದ್ದುಮಾಡಬಹುದು. ಈ ಪ್ರಕ್ರಿಯೆ ನಿಮ್ಮ ಆನ್‌ಲೈನ್ ಶಾಪಿಂಗ್ ಅನುಭವದಲ್ಲಿನ ಶಾಪಿಂಗ್ ಕಾರ್ಟ್‌ಗೆ ಹೋಲಿಕೆಯಾಗುತ್ತದೆ. ಎಲ್ಲಾ ಚಾನಲ್‌ಗಳನ್ನು ಆಯ್ಕೆ ಮಾಡಿದ ನಂತರ, "ನಿಮ್ಮ ಆಯ್ಕೆಯನ್ನು ವೀಕ್ಷಿಸಿ" ಎಂಬ ಟ್ಯಾಬ್ ಒತ್ತುವ ಮೂಲಕ ನೀವು ಆಯ್ದುಕೊಂಡಿರುವ ಚಾನಲ್‌ಗಳನ್ನು ವೀಕ್ಷಿಸಿ.

ಹಂತ 3: ಆಪ್ಟಿಮೈಜ್‌ ಆಯ್ಕೆ

ಹಂತ 3: ಆಪ್ಟಿಮೈಜ್‌ ಆಯ್ಕೆ

ಇಲ್ಲಿ ನೀವು ಆಯ್ದುಕೊಂಡಿರುವ ಚಾನಲ್‌ಗಳ ವಿವರಗಳು ಪ್ರದರ್ಶನಗೊಳ್ಳುತ್ತವೆ. ಇಲ್ಲಿ ನೀಡಿರುವ ಆಪ್ಟಿಮೈಜ್ ಬಟನ್‌ನಿಂದ ನಿಮ್ಮ ಆಯ್ಕೆಯನ್ನು ಮತ್ತಷ್ಟು ಅತ್ಯುತ್ತಮ ಮಾಡಬಹುದು. ನಿಮ್ಮ ಆಯ್ಕೆಯ ಚಾನಲ್‌ಗಳನ್ನು ಕಡಿಮೆ ಮಾಡದೆ ನಿಮ್ಮ ಮಾಸಿಕ ಬಿಲ್ ಕಡಿಮೆ ಮಾಡುವಂತಹ ಬಕೆಟ್‌ಗಳು ಇವೆಯೇ ಎಂಬುದನ್ನು ಇಲ್ಲಿ ಪರಿಶೀಲಿಸಬಹುದು.

ಹಂತ 4: ಪಟ್ಟಿ ಪ್ರಿಂಟ್‌

ಹಂತ 4: ಪಟ್ಟಿ ಪ್ರಿಂಟ್‌

ಈ ಹಂತದಲ್ಲಿ ನೀವು ಆಯ್ದುಕೊಂಡಿರುವ ಚಾನಲ್‌ಗಳ ಪಟ್ಟಿಯನ್ನು ಡೌನ್‌ಲೋಡ್‌ ಮಾಡಬಹುದು ಅಥವಾ ಮುದ್ರಿಸಿಕೊಳ್ಳಬಹುದು.

Best Mobiles in India

Read more about:
English summary
DTH New Plans: How Much You Have To Pay

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X