ಡೈಸನ್‌ ಕಂಪೆನಿಯ ಈ ಹೊಸ ಗ್ಯಾಜೆಟ್ಸ್‌ ಪ್ರಾಣಿ ಪ್ರಿಯರಿಗೆ ತುಂಬಾನೇ ಉಪಕಾರಿ!

|

ಡೈಸನ್‌ ಕಂಪೆನಿ ಪ್ರಾಣಿ ಪ್ರಿಯರನ್ನು ಸೆಳೆಯುವ ಹೊಸ ಟೂಲ್‌ ಒಂದನ್ನು ಲಾಂಚ್‌ ಮಾಡಿದೆ. ಇದು ಮನೆಯಲ್ಲಿ ಸಾಕುಪ್ರಾಣಿಗಳನ್ನು ಹೊಂದಿರುವವರಿಗೆ ಸಾಕಷ್ಟು ಉಪಯುಕ್ತವಾಗಿದೆ. ಇದನ್ನು ಡೈಸನ್‌ ಪೆಟ್‌ ಗ್ರೂಮ್‌ ಟೂಲ್‌ ಎಂದು ಹೆಸರಿಸಲಾಗಿದೆ. ಇದರ ಮೂಲಕ ನೀವು ಸಾಕು ಪ್ರಾಣಿಗಳ ಕೂದಲನ್ನು ಟ್ರಿಮ್‌ ಮಾಡಲು ಸಾಧ್ಯವಾಗಲಿದೆ. ಈ ಮೂಲಕ ಸಾಕುಪ್ರಾಣಿಗಳು ಸುಂದರವಾಗಿ ಕಾಣುವಂತೆ ಅವುಗಳ ಕೂದಲನ್ನು ಟ್ರಿಮ್‌ ಮಾಡಬಹುದು. ಇದಲ್ಲದೆ ಡೈಸನ್‌ನ ಕಾರ್ಡ್‌ ಫ್ರೀ ವ್ಯಾಕ್ಯೂಮ್‌ ಕ್ಲೀನರ್ ಅನ್ನು ಲಗತ್ತಿಸಬಹುದಾಗಿದೆ.

ಡೈಸನ್‌

ಹೌದು, ಡೈಸನ್‌ ಕಂಪೆನಿ ಭಾರತದಲ್ಲಿ ಹೊಸ ಪೆಟ್ ಗ್ರೂಮ್ ಟೂಲ್ ಅನ್ನು ಪರಿಚಯಿಸಿದೆ. ಸಾಕು ಪ್ರಾಣಿಗಳ ಕೂದಲು ಮತ್ತು ತಲೆಹೊಟ್ಟು ತೆಗೆದುಹಾಕುವುದಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 364 ನುಣುಪಾದ ಸ್ಲೀಕರ್‌ ಬ್ರಿಸ್ಟ್‌ಲೆಸ್ (ಬಿರುಗೂದಲು)ಗಳನ್ನು ಹೊಂದಿದೆ. ಇದು 35-ಡಿಗ್ರಿ ಫ್ಲೆಕ್ಸ್‌ನಲ್ಲಿ ಕೋನೀಯವಾಗಿರುತ್ತದೆ. ಇದಲ್ಲದೆ ಈ ಟೂಲ್‌ ಮೈಕ್ರೋಸ್ಕೋಪಿಕ್ ಸ್ಕಿನ್ ಫ್ಲೇಕ್‌ಗಳನ್ನು ಸಹ ತೆಗೆದುಹಾಕಲಿದೆ. ಹಾಗಾದ್ರೆ ಡೈಸನ್‌ ಪೆಟ್‌ ಗ್ರೂಮ್‌ ಟೂಲ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೈಸನ್‌ ಪೆಟ್‌ ಗ್ರೂಮ್‌ ಟೂಲ್‌

ಡೈಸನ್‌ ಪೆಟ್‌ ಗ್ರೂಮ್‌ ಟೂಲ್‌ ಸಾಕು ಪ್ರಾಣಿಯರ ಗಮನಸೆಳೆಯುವುದು ಖಂಡಿತ. ಏಕೆಂದರೆ ಈ ಟೂಲ್‌ ಮೂಲಕ ನೀವು ಸಾಕು ಪ್ರಾಣಿಗಳ ಕೂದಲನ್ನು ಟ್ರಿಮ್‌ ಮಾಡಬಹುದು. ಅಲ್ಲದೆ ಸಾಕು ಪ್ರಾಣಿಗಳ ತಲೆಹೊಟ್ಟು ಹಾಗೂ ಮೈಕ್ರೋಸ್ಕೋಪಿಕ್ ಸ್ಕಿನ್ ಫ್ಲೇಕ್‌ಗಳನ್ನು ಸಹ ತೆಗೆದುಹಾಕಬಹುದು. ಈ ಟೂಲ್‌ ಅನ್ನು ಬಳಸುವಾಗ ನೀವು ತುಪ್ಪಳದ(ಫರ್‌) ದಿಕ್ಕಿನಲ್ಲಿ ಸಾಮಾನ್ಯ ಅಂದಗೊಳಿಸುವ ಬಾಚಣಿಗೆಯಂತೆ ಬಳಸಬೇಕಾಗುತ್ತದೆ. ಬಾಚಣಿಗೆಯ ಮಾದರಿಯಲ್ಲಿ ಬಳಸುವುದರಿಂದ ಪ್ರಾಣಿಯ ಕೂದಲಿಗೆ ಬೇಕಾದ ವಿನ್ಯಾಸವನ್ನು ನೀವು ನೀಡಬಹುದು.

ಟೂಲ್‌

ಇನ್ನು ನಿವು ಈ ಟೂಲ್‌ ಮೂಲಕ ಒಮ್ಮೆ ಟ್ರಿಮ್‌ ಮಾಡಿದ ನಂತರ ಬಟನ್ ಅನ್ನು ಹೊರತೆಗೆದು ಇದರಿಂದ ಕೂದಲು ಮತ್ತು ಡ್ಯಾಂಡರ್ ಬಿನ್‌ಗೆ ಹಾಕಬಹುದು. ಬಿನ್ ತುಂಬಿದ ನಂತರ, ಅದನ್ನು ಡಸ್ಟ್‌ಬಿನ್‌ಗೆ ಖಾಲಿ ಮಾಡಬಹುದು. ಸಾಮಾನ್ಯವಾಗಿ ಸಾಕುಪ್ರಾಣಿಗಳು ಒಣಗಿದ ಲಾಲಾರಸದೊಂದಿಗೆ ಪಿಇಟಿ ಡ್ಯಾಂಡರ್‌ಗೆ ಗುರಿಯಾಗುವ ಸಾಧ್ಯತೆಯಿದೆ. ಈ ಸೂಕ್ಷ್ಮ ಕಣಗಳು ಮನೆಯ ಸುತ್ತಲೂ ಅಲರ್ಜಿಯನ್ನು ಉಂಟುಮಾಡುವ ಪ್ರೋಟೀನ್‌ಗಳನ್ನು ಉಂಟುಮಾಡಲಿವೆ ಎನ್ನಲಾಗಿದೆ.

ಡೈಸನ್‌

ಆದ್ದರಿಂದ, ಆಗಾಗ ಸಾಕುಪ್ರಾಣಿಗಳ ಕೂದಲನ್ನು ಟ್ರಿಮ್‌ ಮಾಡುವುದು, ತಲೆ ಹೊಟ್ಟು ನಿವಾರಣೆ ಮಾಡುವುದಕ್ಕೆ ಡೈಸನ್‌ ಟೂಲ್‌ ಸೂಕ್ತವಾಗಿದೆ. ಡೈಸನ್‌ ಟೂಲ್‌ನಲ್ಲಿರುವ ಫೀಚರ್ಸ್‌ ಸ್ವಚ್ಛವಾದ ಸಂಪೂರ್ಣ ಮನೆ ಪರಿಸರವನ್ನು ನಿರ್ವಹಿಸಲು ಅತ್ಯಗತ್ಯವಾಗಿದೆ. ಇನ್ನು ಈ ಡಿವೈಸ್‌ ಡೈಸನ್‌ V8, V11, V12 ಡಿಟೆಕ್ಟ್ ಸ್ಲಿಮ್ ಮತ್ತು V15 ಡಿಟೆಕ್ಟ್‌ನಂತಹ ಕಾರ್ಡ್‌ಲೆಸ್ ವ್ಯಾಕ್ಯೂಮ್ ಕ್ಲೀನರ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಇದರಿಂದ ಪ್ರಾಣಿಗಳ ಕೂದಲು ಟ್ರಿಮ್‌ ಮಾಡುವುದು ಸುಲಭವಾಗಲಿದೆ.

ಟ್ರಿಮ್‌

ಸಾಕು ಪ್ರಾಣಿಗಳ ಕೂದಲನ್ನು ಟ್ರಿಮ್‌ ಮಾಡುವುದು, ಅವುಗಳಿಗೆ ಭಿನ್ನ ವಿಭಿನ್ನ ರೀತಿಯ ಕೇಶ ವಿನ್ಯಾಸ ಮಾಡುವುದು ಇತ್ತೀದಿನಗಳಲ್ಲಿ ಸಾಕಷ್ಟು ಟ್ರೆಂಡಿಯಾಗಿದೆ. ಇದಕ್ಕೆ ತಕ್ಕಂತೆ ಟೆಕ್‌ ಮಾರುಕಟ್ಟೆಯಲ್ಲಿ ಸಾಕುಪ್ರಾಣಿಯರನ್ನು ಆಕರ್ಷಿಸುವ ಅನೇಕ ಟೆಕ್‌ ಗ್ಯಾಜೆಟ್ಸ್‌ಗಳು ಕೂಡ ಲಭ್ಯವಿವೆ. ಇದೇ ಸಾಲಿಗೆ ಇದೀಗ ಡೈಸನ್‌ ಪೆಟ್‌ ಗ್ರೂಮ್‌ ಟೂಲ್‌ ಕೂಡ ಲೇಟೆಸ್ಟ್‌ ಸೇರ್ಪಡೆಯಾಗಿದೆ. ಅದರಲ್ಲೂ ಸಾಕು ಪ್ರಾಣಿಗಳ ಕೂದಲನ್ನು ಟ್ರಿಮ್‌ ಮಾಡಿ ಅವುಗಳ ವಿನ್ಯಾಶವನ್ನು ಬದಲಾಯಿಸುವ ಪ್ರಕ್ರಿಯೆ ಸಾಕಷ್ಟು ವಿಶೇಷವಾಗಿದೆ. ಈ ಒಂದು ಪ್ರಕ್ರಿಯೆಯನ್ನು ಅನುಕೂಲಕರವಾಗಿಸಲು ಇದು 'ಅಕೌಸ್ಟಿಕ್ ಇಂಜಿನಿಯರಿಂಗ್' ಆಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಡೈಸನ್ ಪೆಟ್ ಗ್ರೂಮ್ ಟೂಲ್ ಭಾರತದಲ್ಲಿ 9,900ರೂ. ಬೆಲೆಯಲ್ಲಿ ಲಭ್ಯವಿದೆ. ಇದು ಡೈಸನ್‌ನ ಅಧಿಕೃತ ವೆಬ್‌ಸೈಟ್ ಮತ್ತು ಡೈಸನ್ ಡೆಮೊ ಸ್ಟೋರ್‌ಗಳ ಮೂಲಕವೂ ಖರೀದಿಗೆ ಸಿಗಲಿದೆ.

Best Mobiles in India

Read more about:
English summary
Dyson has introduced A new Pet Groom Tool in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X