Subscribe to Gizbot

ಫ್ಲಿಪ್‌ಕಾರ್ಟ್ ತೆಕ್ಕೆಗೆ ಬಿದ್ದ ಚೀನಾದ ಇ-ಬೇ ಕಂಪೆನಿ!!

Written By:

ಆನ್‌ಲೈನ್ ಶಾಪಿಂಗ್ ದೈತ್ಯ ಅಮೇಜಾನ್‌ಗೆ ಸೆಡ್ಡು ಹೊಡೆಯಲು ಫ್ಲಿಪ್‌ಕಾರ್ಟ್ ಚೀನಾದ ಮೂಲದ ಆನ್‌ಲೈನ್‌ ಶಾಪಿಂಗ್ ಇ-ಬೇಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಚೀನಾದ ದೈತ್ಯ ಆನ್‌ಲೈನ್ ಕಂಪನಿ ಇ-ಬೇ ಇನ್ನು ಫ್ಲಿಪ್‌ಕಾರ್ಟ್ ಜೊತೆ ಸೇರಿ ಕಾರ್ಯನಿರ್ವಹಣೆ ನೀಡಲಿದ್ದು, ಇದು ಆನ್‌ಲೈನ್ ಶಾಪಿಂಗ್ ಜಾಲತಾಣದ ಮಹತ್ವದ ಹೆಜ್ಜೆಯಾಗಿದೆ.!!

ಮಿಂತ್ರಾ ಎಂಬ ಆನ್‌ಲೈನ್ ಮಾರಾಟ ಸಂಸ್ಥೆಯನ್ನು ಈ ಹಿಂದೆಯಷ್ಟೇ ತನ್ನ ತೆಕ್ಕೆಗೆ ಹಾಕಿಕೊಂಡಿದ್ದ ಫ್ಲಿಪ್‌ಕಾರ್ಟ್ ಇದೀಗ ಇ-ಬೇ ಅನ್ನು ಸಹ ತನ್ನಲ್ಲಿ ಸೇರಿಸಿಕೊಂಡಿದೆ. ಆದರೆ, ಫ್ಲಿಪ್‌ಕಾರ್ಟ್ ಜೊತೆ ವಿಲೀನಕ್ಕೆ ಸಂಬಂಧಿಸಿದಂತೆ ಸ್ನಾಪ್‌ಡೀಲ್ ಜೊತೆ ಮಾತುಕತೆ ನಡೆಸಲಾಗಿತ್ತಾದರೂ, ವಿಲೀನಕ್ಕೆ ಸ್ನಾಪ್‌ಡೀಲ್ ಒಪ್ಪಿಕೊಂಡಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ.!!

ಹಾಗಾದರೆ, ಫ್ಲಿಪ್‌ಕಾರ್ಟ್ ಇತರ ಶಾಪಿಂಗ್ ಜಾಲತಾಣಗಳನ್ನು ತನ್ನಲ್ಲಿ ವಿಲೀನ ಮಾಡಿಕೊಳ್ಳುತ್ತಿರುವುದೇಕೆ? ಇ-ಬೇ ಮತ್ತು ಫ್ಲಿಪ್‌ಕಾರ್ಟ್ ವಿಲೀನದಿಂದ ಆಗಿರುವ ಬದಲಾವಣೆಗಳೇನು? ಇದಿಂರಿಂದ ಅಮೆಜಾನ್‌ಗೆ ಸೆಡ್ಡುಹೊಡೆಯಲು ಸಾಧ್ಯವೇ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1.4 ಬಿಲಿಯನ್ ಡಾಲರ್ ಹೂಡಿಕೆ!!

1.4 ಬಿಲಿಯನ್ ಡಾಲರ್ ಹೂಡಿಕೆ!!

ಫ್ಲಿಪ್ ಕಾರ್ಟ್ ಸಮೂಹದ ಅಡಿಯಲ್ಲಿ ಮಿಂತ್ರಾ ಮತ್ತು ಇ-ಬೇ ಸೇರಿ ಮೂರು ಸಂಸ್ಥೆಗಳು ಇನ್ನು ಮುಂದೆ ಕಾರ್ಯ ನಿರ್ವಹಿಸಲಿವೆ. ಅದರಂತೆ ಈ ದೈತ್ಯ ವಿಲೀನದದಿಂದ ಫ್ಲಿಪ್ ಕಾರ್ಟ್ ಸಮೂಹದ ಹೂಡಿಕೆ ಪ್ರಮಾಣ ಬರೊಬ್ಬರಿ 1.4 ಬಿಲಿಯನ್ ಡಾಲರ್‌ಗೇರಲಿದೆ. ಫ್ಲಿಪ್‌ಕಾರ್ಟ್ ಮತ್ತು ಇ-ಬೇ 500 ಮಿಲಿಯನ್ ಡಾಲರ್ ಮೊತ್ತದ ಬಂಡವಾಳ ಹೂಡುತ್ತಿವೆ.!!

ವಿಸ್ತಾರವಾದ ಮಾರುಕಟ್ಟೆ!!

ವಿಸ್ತಾರವಾದ ಮಾರುಕಟ್ಟೆ!!

ಭಾರತ ಮತ್ತು ವಿದೇಶ ವಾಣಿಜ್ಯ ವಹಿವಾಟಿನಲ್ಲೂ ಈ ಮೂರು ಸಂಸ್ಥೆಗಳು ಪಾಲುದಾರ ಸಂಸ್ಥೆಗಳಾಗಿವೆ. ಭಾರತೀಯ ಗ್ರಾಹಕರ ಆನ್‌ಲೈನ್ ಮಾರುಕಟ್ಟೆ ಇನ್ನು ಮುಂದೆ ಮತ್ತಷ್ಟು ವಿಸ್ತಾರವಾಗಲಿದೆ. ಇದರಿಂದ ಫ್ಲಿಪ್‌ಕಾರ್ಟ್ ಗ್ರಾಹಕರು ಇನ್ನು ಮುಂದೆ ವಿಸ್ತಾರವಾದ ಮಾರುಕಟ್ಟೆಯಲ್ಲಿ ಸೇವೆಯನ್ನು ಪಡೆಯಬಹುದು ಎಂದು ಫ್ಲಿಪ್‌ಕಾರ್ಟ್ ಹೇಳಿಕೊಂಡಿದೆ.

ಇ-ಬೇ ಕಂಪನಿಯ ಮೇಲೆ ಪ್ರಭುತ್ವ!!

ಇ-ಬೇ ಕಂಪನಿಯ ಮೇಲೆ ಪ್ರಭುತ್ವ!!

ಫ್ಲಿಪ್‌ಕಾರ್ಟ್ ಇ-ಬೇ ಸಂಸ್ಥೆಯ 1,290 ಕೋಟಿ ಮೌಲ್ಯದ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಇ-ಬೇ ಕಂಪನಿಯ ಮೇಲೆ ಪ್ರಭುತ್ವ ಸಾಧಿಸಿದೆ.ಹಾಗಾಘಿ, ಇ-ಬೇ ಇನ್ನು ಫ್ಲಿಪ್‌ಕಾರ್ಟ್‌ನ ನಿರ್ದೇಶನದಂತೆ ನಡೆಯಬೇಕಿದೆ.!!

ಅಮೆಜಾನ್‌ಗೆ ಸೆಡ್ಡು!!

ಅಮೆಜಾನ್‌ಗೆ ಸೆಡ್ಡು!!

ವಿಶ್ವದ ದಿಗ್ಗಜ ಆನ್‌ಲೈನ್ ಶಾಪಿಂಗ್ ಜಾಲತಾಣವಾಗಿರುವ ಅಮೆಜಾನ್ ಬಹುದೊಡ್ಡ ಮಾರುಕಟ್ಟೆ ವಿಸ್ತಾರವನ್ನು ಹೊಂದಿದೆ. ಹಾಗಾಗಿ, ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್ ಕೂಡ ಮಾರುಕಟ್ಟೆ ವಿಸ್ತಾರ ಮಾಡಿಕೊಂಡು ಅಮೆಜಾನ್‌ಗೆ ಸೆಡ್ಡು ಹೊಡೆಯುವ ಗುರಿ ಇಟ್ಟುಕೊಂಡಿದೆ.! ಮತ್ತು ಅದರಲ್ಲಿ ಯಶಸ್ವಿಯಾಗುವ ಉದ್ದೇಶ ಸಹ ಇದೆ.!!

ಅತ್ಯುತ್ತಮ ಮಾರುಕಟ್ಟೆ ಸೇವೆ!!

ಅತ್ಯುತ್ತಮ ಮಾರುಕಟ್ಟೆ ಸೇವೆ!!

ಭಾರತೀಯ ಗ್ರಾಹಕರನ್ನು ಕೇಂದ್ರವಾಗಿರಿಸಿಕೊಂಡೇ ಈ ಬೃಹತ್ ವಿಲೀನ ಪ್ರಕ್ರಿಯೆಗೆ ಫ್ಲಿಪ್‌ಕಾರ್ಟ್ ಮುಂದಾಗಿದ್ದು, ಗ್ರಾಹಕರಿಗೆ ಅತ್ಯುತ್ತಮ ಮಾರುಕಟ್ಟೆ ಸೇವೆ ಒದಗಿಸುವುದೇ ಸಂಸ್ಥೆಗ ಗುರಿ ಎಂದು ಫ್ಲಿಪ್ ಕಾರ್ಟ್ ಭಾರತ ಘಟಕದ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಹೇಳಿದ್ದಾರೆ.

ಓದಿರಿ:ಜಿಯೋ ದೇವರು ಅಂಬಾನಿ ಈಗ ಏಷ್ಯಾದ ಎರಡನೇ ಶ್ರೀಮಂತ!!..ಒಟ್ಟು ಆಸ್ತಿ ಎಷ್ಟು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
E-commerce major Flipkart on Tuesday said it has completed the merger with eBay India’s operations.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot