ಕೊನೆಗೂ ಆನೆಗೂ ಬಂತು ಸೆಲ್ಫಿ ಜ್ವರ

By Shwetha
|

ಪ್ರಾಣಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ದೊಡ್ಡ ಸುದ್ದಿಯಲ್ಲ ಬಿಡಿ ಆದರೆ ದೈತ್ಯ ಆನೆಯೇ ಸೆಲ್ಫಿ ಕ್ಲಿಕ್ಕಿಸದರೆ ಹೇಗಾದೀತು ಹೇಳಿ?
ಫಿನೋಮಿನನ್ ಎಂಬ ವ್ಯಕ್ತಿ ಆನೆ ಕ್ಲಿಕ್ಕಿಸಿದ ಸೆಲ್ಫಿಯ ಕುರಿತು ರೋಚಕವಾಗಿ ವಿವರಿಸಿದ್ದಾನೆ.

ಓದಿರಿ: ಸೆಲ್ಫೀಗಳ ಮೈನಡುಗಿಸುವ ಸೆಲ್ಫೀ ಕಲರವ

ಕೊನೆಗೂ ಆನೆಗೂ ಬಂತು ಸೆಲ್ಫಿ ಜ್ವರ

ಇದಕ್ಕೆ ಎಲ್ಫಿ ಎಂಬ ಹೆಸರನ್ನು ಈತ ನೀಡಿದ್ದಾನೆ. ಆನೆಗಳೊಂದಿಗೆ ನಿಂತು ತೆಗೆಸಿಕೊಂಡ ಫೋಟೋವೇ ಎಲ್ಫಿ ಎಂಬುದು ಈತ ನೀಡಿದ ವಿವರಣೆ. 22 ವರ್ಷದ ಕ್ರಿಶ್ಚಿಯನ್ ಥೈಲ್ಯಾಂಡ್‌ನಲ್ಲಿ ಆನೆಗೆ ಬಾಳೆ ಹಣ್ಣು ತಿನ್ನಿಸುತ್ತಿದ್ದ ಸಂದರ್ಭದಲ್ಲಿ ಆತನ ಗೊಪ್ರೊ ಕ್ಯಾಮೆರಾವನ್ನು ಕಸಿದುಕೊಂಡ ಆನೆ ಸೆಲ್ಫಿ ಕ್ಲಿಕ್ಕಿಸಿದೆಯಂತೆ!

ಕೊನೆಗೂ ಆನೆಗೂ ಬಂತು ಸೆಲ್ಫಿ ಜ್ವರ

ಓದಿರಿ: ಒಬಾಮಾ ಸೆಲ್ಫಿ ನೋಡಬನ್ನಿ ಇಲ್ಲಿ!!!

ಕೆನಡಾದ ಈ ವ್ಯಕ್ತಿ ಸೆಲ್ಫಿ ಪ್ರಿಯ ಈತನ ಪ್ರಕಾರ ಇದೊಂದು ಬೆಸ್ಟ್ ಸೆಲ್ಫಿಯಾಗಿದ್ದು ಮರೆಯಲಾದ ಅನುಭವವಾಗಿದೆ ಎಂದು ಹೇಳುತ್ತಾನೆ. ಆನೆಗೆ ಬಾಳೆಹಣ್ಣು ನೀಡಿ ಸೆಲ್ಫಿ ತೆಗೆಯುವ ಉದ್ದೇಶ ಕ್ರಿಶ್ಚಿಯನದ್ದಾಗಿತ್ತು. ಆದರೆ ಕೊನೆಯ ಬಾಳೆಹಣ್ಣನ್ನು ತಿಂದು ಮುಗಿಸಿದ ಆನೆ ತನ್ನ ಸೊಂಡಿಲಿನಿಂದ ಗೊಪ್ರೊವನ್ನು ಕಸಿದು ಸೆಲ್ಫಿ ಕ್ಲಿಕ್ಕಿಸಿದೆ. ನಾನು ಆನೆಗೆ ಬಾಳೆಹಣ್ಣು ತಿನ್ನಿಸುತ್ತಿದ್ದ ಸಂದರ್ಭದಲ್ಲಿ ಈ ಅದ್ಭುತ ಸಂಭವಿಸಿದೆ ಎಂದು ಕ್ರಿಶ್ಚಿಯನ್ ತಿಳಿಸಿದ್ದಾನೆ.

ಕೊನೆಗೂ ಆನೆಗೂ ಬಂತು ಸೆಲ್ಫಿ ಜ್ವರ

ಓದಿರಿ: ಮೈಕ್ರೋಸಾಫ್ಟ್ ಪ್ರಥಮ ಸೆಲ್ಫೀ ಫೋನ್ ಕಮಾಲ್

ಇನ್ನು ಪ್ರಪಂಚದ ದೊಡ್ಡ ಮೀನಾದ ಫಿಲಿಫೈನ್ಸ್‌ನ ವೇಲ್ ಶಾರ್ಕ್‌ನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಮಹದಾಸೆ ಕ್ರಿಶ್ಚಿಯನ್ನದ್ದಾಗಿದೆ. ಅಂತೂ ಕಾಕತಾಳಿಯ ಎಂಬಂತೆ ಆನೆಗೂ ಸೆಲ್ಫಿ ಜ್ವರ ಬಂದಿದೆ ಎಂದು ಹೇಳಬಹುದು.

Best Mobiles in India

English summary
Christian, 22, has told how he was feeding an elephant in Koh Phangan, Thailand, when he ran out of bananas. He claims the plucky beast nabbed his GoPro camera while it was on the time-lapse setting and ended up taking the incredible snaps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X