ಫೇಸ್‌ಬುಕ್ ಇಂಡಿಯಾದ ಸಂವಹನ ಮುಖ್ಯಸ್ಥರಾಗಿ ಬಿಪಾಶಾ ಚರ್ಕವರ್ತಿ ನೇಮಕ!

|

ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್‌ಬುಕ್ ಸಂಸ್ಥೆಯು ಭಾರತೀಯ ಮೂಲದ ಬಿಪಾಶಾ ಚರ್ಕವರ್ತಿ ಅವರನ್ನು ಭಾರತ ವಲಯದ ಫೇಸ್‌ಬುಕ್ ಸಂವಹನದ ಮುಖ್ಯಸ್ಥರಾಗಿ ಬುಧವಾರ (ಮಾ.4) ನೇಮಕ ಮಾಡಿದೆ. ಬಿಪಾಶಾ ಚರ್ಕವರ್ತಿ ಭಾರತದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಎರಡು ತಾಣಗಳ ಸಂವಹನದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಫೇಸ್‌ಬುಕ್ ಇಂಡಿಯಾದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಹೇಳಿದ್ದಾರೆ.

ಫೇಸ್‌ಬುಕ್ ಇಂಡಿಯಾದ ಸಂವಹನ ಮುಖ್ಯಸ್ಥರಾಗಿ ಬಿಪಾಶಾ ಚರ್ಕವರ್ತಿ ನೇಮಕ!

ಪ್ರಮುಖ ಟೆಕ್‌ ಸಂಸ್ಥೆಗಳು ಮತ್ತು ಮುಖ್ಯ ಪಿಆರ್ ಏಜೆನ್ಸಿಗಳಲ್ಲಿ ಒಟ್ಟು 18 ವರ್ಷ ಕೆಲಸ ಮಾಡಿರುವ ಅನುಭವ ಬಿಪಾಶಾ ಚರ್ಕವರ್ತಿ ಅವರು ಹೊಂದಿದ್ದಾರೆ. ಫೇಸ್‌ಬುಕ್ ಸಂವಹನ ಮುಖ್ಯಸ್ಥೆಯ ಹುದ್ದು ಸ್ವೀಕರಿಸುವ ಮೊದಲು ಅಮೆರಿಕಾದ ಸಿಸ್ಕೋ ಸಿಸ್ಟಂ ಸಂಸ್ಥೆಯ ಭಾರತ ವಲಯದ ಸಂವಹನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ ಹಾಗೂ SAARC ಕೆಲಸದ ಅನುಭವ ಸಹ ಅವರಿಗಿದೆ. ಬಿಪಾಶಾ ಚರ್ಕವರ್ತಿ ಸಂವಹನದ ಕ್ಷೇತ್ರದ ಜೊತೆಗೆ ಅನಾಲಿಸ್ಟ್ ಟೆಕ್ನಾಲಜಿ ಮತ್ತು ಕಾರ್ಪೋರೇಟ್ ಕಮ್ಯೂನಿಕೇಶನ್ ವಲಯದ ಕೆಲಸಗಳನ್ನು ನಿರ್ವಹಿಸುವ ಕೌಶಲ ಅವರಿಗೆ ಇದೆ.

ಫೇಸ್‌ಬುಕ್ ಇಂಡಿಯಾದ ಸಂವಹನ ಮುಖ್ಯಸ್ಥರಾಗಿ ಬಿಪಾಶಾ ಚರ್ಕವರ್ತಿ ನೇಮಕ!

ಫೇಸ್‌ಬುಕ್ ಸ್ಟೋರೀಸ್ ಅನ್ನು ಭಾರತದ ವಲಯದಲ್ಲಿ ಇನ್ನಷ್ಟು ಹೆಚ್ಚಿಸಲಿದ್ದೆವೆ. ಭಾರತದಲ್ಲಿನ ಫೇಸ್‌ಬುಕ್ ಬಳಕೆದಾರರು, ಜಾಹಿರಾತುದಾರರು, ಪಾರ್ಟ್ನರ್‌ಗಳು ಹಾಗೂ ಸರ್ಕಾರ ನಮ್ಮ ಮೇಲೆ ವಿಶ್ವಾಸ ಹೊಂದಿದೆ. ಈ ನಿಟ್ಟಿನಲ್ಲಿ ನಾವು ಪಾರದರ್ಶಕವಾಗಿ ಮತ್ತು ಮುಕ್ತವಾಗಿ ಸಂವಹನ ನಡೆಸಲಿದ್ದೆವೆ ಎಂದು ಫೇಸ್‌ಬುಕ್ ಇಂಡಿಯಾದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ತಿಳಿಸಿದ್ದಾರೆ.

Most Read Articles
Best Mobiles in India

English summary
Bipasha Chakrabarti will lead the communications charter for both Facebook and Instagram in the country.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X