ವಾಟ್ಸಪ್‌ನಲ್ಲಿ ಜಾಹೀರಾತುಗಳ ಪ್ರವೇಶಕ್ಕೆ 'ನೋ' ಎಂದ ಫೇಸ್‌ಬುಕ್!

|

ವಿಶ್ವದಲ್ಲಿಯೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್‌ ತನ್ನ ಬಳಕೆದಾರರಿಗೆ ಸಾಕಷ್ಟು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಬಳಕೆದಾರರ ಖಾಸಗಿ ತನದ ಸುರಕ್ಷೆಗೆ ಹೆಚ್ಚಿನ ಗಮನ ನೀಡುತ್ತಿರುವ ಸಂಸ್ಥೆಯು ಇದೀಗ ಮಹತ್ತರ ನಿರ್ಧಾರವೊಂದನ್ನು ಕೈಗೊಂಡಿದೆ. ಅದೆನೆಂದರೇ ವಾಟ್ಸಪ್‌ನಲ್ಲಿ ಜಾಹೀರಾತುಗಳಿಗೆ ಅವಕಾಶ ನೀಡಬೇಕು ಎಂದು ಉದ್ದೇಶಿಸಿದ್ದ ಕಾರ್ಯಕ್ಕೆ ಫೇಸ್‌ಬುಕ್‌ ಫುಲ್‌ಸ್ಟಾಪ್‌ ಹಾಕಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಒಡೆತನದ ಸೇವೆಗಳಲ್ಲಿ ವಾಟ್ಸಪ್‌ ಸಹ ಒಂದಾಗಿದೆ. ಫೇಸ್‌ಬುಕ್‌ನ ಇನ್‌ಸ್ಟಾಗ್ರಾಂನಲ್ಲಿ ಜಾಹಿರಾತುಗಳು ಕಾಣಿಸಿಕೊಳ್ಳುವ ಹಾಗೆಯೇ ವಾಟ್ಸಪ್‌ ಪ್ಲಾಟ್‌ಫಾರ್ಮ್‌ನಲ್ಲಿಯೂ ಜಾಹೀರಾತುಗಳ ಪ್ರದರ್ಶನಕ್ಕೆ ಅವಕಾಶ ನೀಡಬೇಕೆಂದು ಯೋಜಿಸಿತ್ತು. ಆದರೆ ಈಗ ಫೇಸ್‌ಬುಕ್ ತನ್ನ ಈ ನಿರ್ಧಾರವನ್ನು ಕೈಬಿಟ್ಟಿದೆ. ಹೀಗಾಗಿ ವಾಟ್ಸಪ್‌ ಜಾಹೀರಾತು ಮುಕ್ತವಾಗಿ ಮುಂದುವರೆಯಲಿದೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ವಾಟ್ಸಪ್‌ ಸ್ಠೇಟಸ್‌

2020ರಲ್ಲಿ ವಾಟ್ಸಪ್‌ ಸ್ಠೇಟಸ್‌ ವಿಭಾಗದಲ್ಲಿ ಜಾಹಿರಾತುಗಳು ಕಾಣಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಕಳೆದ ವರ್ಷ ಫೇಸ್‌ಬುಕ್ ಹೇಳಿತ್ತು. ಇನ್‌ಸ್ಟಾಗ್ರಾಂ ಸ್ಟೋರಿಸ್‌ ವಿಭಾಗದಲ್ಲಿ ವೈವಿಧ್ಯಮಯ ಜಾಹೀರಾತುಗಳು ಕಾಣಿಸುವ ಹಾಗೆಯೇ, ವಾಟ್ಸಪ್‌ನ ಸ್ಟೇಟಸ್‌ ವಿಭಾಗದಲ್ಲಿಯೂ ಜಾಹೀರಾತುಗಳಿಗೆ ಪ್ರವೇಶ ನೀಡುವ ಯೋಜನೆ ಇದೆ ಎನ್ನುವುದನ್ನು ಫೇಸ್‌ಬುಕ್ ಸ್ಪಷ್ಟಪಡಿಸಿತ್ತು.

ಜಾಹೀರಾತಿಗಾಗಿ ಸಂಸ್ಥೆಯ

ಜನಪ್ರಿಯ ವಾಟ್ಸಪ್‌ ಮೆಸೆಜಿಂಗ್ ಆಪ್‌ ಸಹ ಫೇಸ್‌ಬುಕ್‌ಗೆ ಸೇರಿದ್ದು, ವಾಟ್ಸಪ್‌ನಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿ ಹಣಗಳಿಸುವ (monetization) ಉದ್ದೇಶವನ್ನು ಸಂಸ್ಥೆಯು ಹೊಂದಿತ್ತು. ಅದಾಗಲೇ ಜಾಹೀರಾತಿಗಾಗಿ ಸಂಸ್ಥೆಯ ಪ್ರತ್ಯೇಕ ತಂಡವೊಂದು ಸಿದ್ಧವಾಗಿತ್ತು. ಆದರೆ ವಾಟ್ಸಪ್‌ನಲ್ಲಿ ಜಾಹೀರಾತುಗಳಿಗೆ ಅವಕಾಶ ನೀಡುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ಉದ್ದೇಶಿತ ಯೋಜನೆಯನ್ನು ಫೇಸ್‌ಬುಕ್ ಕೈಬಿಡಲಾಗಿದೆ ಎನ್ನುವ ಮಾಹಿತಿ

ಸಕ್ರಿಯ ಬಳಕೆದಾರರ

ಪ್ರಮುಖ ಖಾಸಗಿ ಮೆಸೆಜಿಂಗ್ ತಾಣ ಅನಿಸಿಕೊಂಡಿರುವ ವಾಟ್ಸಪ್‌ ಪ್ರಸ್ತುತ ವಿಶ್ವದಲ್ಲಿ 1.5 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಒಳಗೊಂಡಿದೆ. ಇನ್ನು ಪ್ರತಿದಿನ ವಾಟ್ಸಪ್‌ ಸ್ಟೇಟಸ್‌ನ ಸಕ್ರಿಯ ಬಳಕೆದಾರರ ಸಂಖ್ಯೆ 500 ಮಿಲಿಯನ್ ಆಗಿದೆ. ಬಳಕೆದಾರರ ಸುರಕ್ಷತೆಗಾಗಿ ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಶನ್ ಸೌಲಭ್ಯವನ್ನು ನೀಡಿದೆ.

Most Read Articles
Best Mobiles in India

English summary
WhatsApp reportedly recently disbanded a team that had been formed to find the best ways to integrate ads into the service. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X