Subscribe to Gizbot

ಕ್ಷಮೆ ಕೋರಿ ಪತ್ರಿಕೆಗಳಲ್ಲಿ ಫೇಸ್‌ಬುಕ್ ಜಾಹಿರಾತು!!..ಮಾರ್ಕ್‌ ಕ್ಷಮೆ ಕೋರಿದ್ದು ಹೀಗೆ!?

Written By:

ಬಳಕೆದಾರರ ಮಾಹಿತಿ ಸೋರಿಕೆ ಹಗರಣದ ಬೆನ್ನಲ್ಲೇ ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್ ಅವರು ಅಮೆರಿಕ ಮತ್ತು ಇಂಗ್ಲೆಂಡ್‌ ದೇಶಗಳ ಪ್ರಮುಖ ಪತ್ರಿಕೆಗಳಲ್ಲಿ ಕ್ಷಮೆ ಕೋರುವ ಜಾಹೀರಾತು ನೀಡಿದ್ದಾರೆ. ಅಮೆರಿಕ ಮತ್ತು ಇಂಗ್ಲೆಂಡ್‌ನ ಒಟ್ಟು ಒಂಬತ್ತು ಪತ್ರಿಕೆಗಳಲ್ಲಿ ಭಾನುವಾರ ಪೂರ್ಣಪುಟದ ಫೇಸ್‌ಬುಕ್ ಜಾಹಿರಾತು ಕಾಣಿಸಿಕೊಂಡಿದೆ.!!

ಇಂಗ್ಲೆಂಡ್‌ನ ಮೇಲ್ ಆನ್ ಸಂಡೇ, ಸಂಡೇ ಮಿರರ್, ದ ಸಂಡೇ ಟೈಮ್ಸ್‌, ದ ಅಬ್ಸರ್ವರ್, ಸಂಡೇ ಎಕ್ಸ್‌ಪ್ರೆಸ್‌ ಮತ್ತು ಸಂಡೇ ಟೆಲಿಗ್ರಾಫ್ ದಿನಪತ್ರಿಕೆಗಳು ಹಾಗೂ ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌, ವಾಷಿಂಗ್ಟನ್‌ ಪೋಸ್ಟ್‌ ಮತ್ತು ವಾಲ್‌ ಸ್ಟ್ರೀಟ್‌ ಜರ್ನಲ್‌ ದಿನಪತ್ರಿಕೆಗಳಲ್ಲಿ ಫೇಸ್‌ಬುಕ್‌ನ ಪೂರ್ಣ ಪುಟದ ಜಾಹೀರಾತಿನಲ್ಲಿ ಮಾರ್ಕ್‌ ಜುಕರ್‌ಬರ್ಗ್ ಕ್ಷಮೆ ಕೋರಿದ್ದಾರೆ.

ಕ್ಷಮೆ ಕೋರಿ ಪತ್ರಿಕೆಗಳಲ್ಲಿ ಫೇಸ್‌ಬುಕ್ ಜಾಹಿರಾತು!!

50 ಮಿಲಿಯನ್‌ಗೂ ಹೆಚ್ಚು ಬಳಕೆದಾರರ ಮಾಹಿತಿ ಸೋರಿಕೆ ಕುರಿತು ಅಮೆರಿಕ ಮತ್ತು ಯುರೋಪ್‌ನ ದೇಶಗಳು ತನಿಖೆಗೆ ಆದೇಶಿಸಿದ ನಂತರ ಜುಕರ್‌ಬರ್ಗ್ ಅವರ ಸಾರ್ವಜನಿಕ ಹೇಳಿಕೆಗಳನ್ನು ಜಾಹೀರಾತಿನಲ್ಲಿ ನೀಡಲಾಗಿದೆ. ಫೇಸ್‌ಬುಕ್ ಮಾಡಿಕೊಂಡಿರುವ ಪ್ರಮಾದಕ್ಕೆ ಬಳಕೆದಾರರ ಕ್ಷಮೆ ಕೋರುವ ಮೂಲಕ ಮಾರ್ಕ್‌ ಜುಕರ್‌ಬರ್ಗ್ ಸಂತೈಸುತ್ತಿದ್ದಾರೆ.!!

ಕ್ಷಮೆ ಕೋರಿ ಪತ್ರಿಕೆಗಳಲ್ಲಿ ಫೇಸ್‌ಬುಕ್ ಜಾಹಿರಾತು!!

ಒಂಬತ್ತು ಪತ್ರಿಕೆಗಳಲ್ಲಿ ಭಾನುವಾರ ಪೂರ್ಣಪುಟದ ಫೇಸ್‌ಬುಕ್ ಜಾಹಿರಾತುವಿನಲ್ಲಿ, "ನಿಮ್ಮ ಮಾಹಿತಿಯ ರಕ್ಷಣೆ ನಮ್ಮ ಜವಾಬ್ದಾರಿ. ಆ ಜವಾಬ್ದಾರಿ ನಿಭಾಯಿಸಲು ಆಗದಿದ್ದರೆ ನಾವು ಅದಕ್ಕೆ ಅರ್ಹರಲ್ಲ" ಎಂದು ಮಾರ್ಕ್‌ ಜುಕರ್‌ಬರ್ಗ್ ಹೇಳಿರುವ ಹೇಳಿಕೆಯನ್ನು ನೀಡಲಾಗಿದೆ. ಆ ಸಮಯದಲ್ಲಿ ನಾವು ಏನೂ ಮಾಡಲಾಗಲಿಲ್ಲ ಎಂದು ಸಹ ಫೇಸ್‌ಬುಕ್ ಹೇಳಿಕೊಂಡಿದೆ.!!

ಕ್ಷಮೆ ಕೋರಿ ಪತ್ರಿಕೆಗಳಲ್ಲಿ ಫೇಸ್‌ಬುಕ್ ಜಾಹಿರಾತು!!

ಈಗ ಆಗಿರುವ ಮಾಹಿತಿ ಸೋರಿಕೆ ಪ್ರಮಾದ ಮತ್ತೊಮ್ಮೆ ಆಗದಂತೆ ಆಪ್‌ಗಳ ನಿಯಮಗಳನ್ನು ಬದಲಿಸಲಾಗಿದೆ ಬಳಕೆದಾರರ ಮಾಹಿತಿ ಪಡೆಯಲು ಪ್ರಯತ್ನಿಸುವ ಪ್ರತಿ ಹಜ್ಜೆಯ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ಇದು ಪುನರಾವರ್ತನೆ ಆಗದಂತೆ ಈಗ ಕ್ರಮ ಕೈಗೊಂಡಿದ್ದೇವೆ' ಎಂದು ಅವರು ಜಾಹಿರಾತುವಿನಲ್ಲಿ ಜುಕರ್‌ಬರ್ಗ್ ವಿವರಿಸಿದ್ದಾರೆ.

How to view all photos, pages, comments and posts you liked on Facebook (KANNADA)

ಓದಿರಿ: ಆಂಡ್ರಾಯ್ಡ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್!..ಆಪ್ ಬಳಸುವ ಮುನ್ನ ಎಚ್ಚರ!!

English summary
UK and US Sunday newspapers to apologise for the firm's recent data privacy scandal. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot