14 ಮಿಲಿಯನ್ FB ಅಕೌಂಟ್ಸ್ ಪ್ರೈವೆಸಿ ಸೆಟ್ಟಿಂಗ್ಸ್ ಬದಲು...ನಿಮ್ಮ ಅಕೌಂಟ್ ಇದ್ದರೂ ಇರಬಹುದು..!

By Avinash
|

ಒಂದೊಂದೆ ಹಗರಣಗಳಿಂದ ತನ್ನ ಬಳಕೆದಾರರಲ್ಲಿನ ನಂಬಿಕೆ ಕಳೆದುಕೊಳ್ಳುತ್ತಿರುವ ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್ ಈ ಸಲ ಭಾರೀ ಸಂಖ್ಯೆಯ ಬಳಕೆದಾರರ ಪ್ರೈವೆಸಿ ಸೆಟ್ಟಿಂಗ್ ಬದಲಾಗಿ ಮತ್ತೊಂದು ಸಂಕಷ್ಟಕ್ಕೀಡಾಗಿದ್ದು, ಈಗಾಗಲೇ ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಜಗತ್ತಿನ ಅತಿದೊಡ್ಡ ಸೋಷಿಯಲ್ ಮೀಡಿಯಾ ಕಂಪನಿ ಫೇಸ್ ಬುಕ್ ಹೇಳಿಕೊಂಡಿದೆ. ಆದ್ರೂ ಒಂದು ಬಾರಿ ಫೇಸ್ ಬುಕ್ ಪ್ರೈವೆಸಿ ಸೆಟ್ಟಿಂಗ್ ಕಡೆ ಕಣ್ಣಾಯಿಸಿ, ನಿಮ್ಮದು ಬದಲಾಗಿದ್ರು ಬದಲಾಗಿರಬಹುದು.

ಫೇಸ್ ಬುಕ್ ಹೇಳುವಂತೆ ತನ್ನ ಬಳಕೆದಾರರ ಹೊಸ ಪೋಸ್ಟ್ ಗಳಿಗೆ ಬಗ್ ಆಟೋಮೆಟಿಕ್ ಆಗಿ ಪಬ್ಲಿಕ್ ನಲ್ಲಿ ಪೋಸ್ಟ್ ಮಾಡುವಂತೆ ಸಲಹೆ ನೀಡುತ್ತಿತ್ತು. ಆದರೆ, ಬಳಕೆದಾರರು ಫ್ರೇಂಡ್ಸ್ ಒನ್ಲಿ ಎಂದು ಸೆಟ್ಟಿಂಗ್ ಚೆಂಜ್ ಮಾಡಿದ್ದರೆ, ಅವರ ಪೋಸ್ಟ್ ಯಾವುದೇ ಸಂದೇಹವಿಲ್ಲದೆ ಪಬ್ಲಿಕ್ ನಲ್ಲಿ ಪೋಸ್ಟ್ ಆಗಿದೆಯಂತೆ.

14 ಮಿಲಿಯನ್ FB ಅಕೌಂಟ್ಸ್ ಪ್ರೈವೆಸಿ ಸೆಟ್ಟಿಂಗ್ಸ್ ಬದಲು..!

ಫೇಸ್ ಬುಕ್ ಬಳಕೆದಾರರ ಹಳೆಯ ಪೋಸ್ಟ್ ಗಳಿಗೆ ಯಾವುದೇ ರೀತಿಯ ಪ್ರಭಾವ ಬೀರಿರುವುದಿಲ್ಲ. ಯಾರ ಪೋಸ್ಟ್ ಗಳು ಬಗ್ ನಿಂದ ಪಬ್ಲಿಕ್ ಗೆ ಹೋಗಿವೆ, ಅವರಿಗೆ ಫೇಸ್ ಬುಕ್ ಎಚ್ಚರಿಸಿದ್ದು, ಅವರ ಪೋಸ್ಟ್ ಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಸಲಹೆ ನೀಡಿದೆ ಎಂದು ಫೇಸ್ ಬುಕ್ ನ ಮುಖ್ಯ ಗೌಪ್ಯತಾ ಅಧಿಕಾರಿ ಎರಿನ್ ಈಗನ್ ಹೇಳಿದ್ದಾರೆ.

ಆಂಡ್ರಾಯ್ಡ್ ಪಿ ಬೇಟಾ 2 ರಿಲೀಸ್...ಹೊಸ ಒಎಸ್ ನಲ್ಲಿ ಏನೆಲ್ಲಾ ಇದೆ?!ಆಂಡ್ರಾಯ್ಡ್ ಪಿ ಬೇಟಾ 2 ರಿಲೀಸ್...ಹೊಸ ಒಎಸ್ ನಲ್ಲಿ ಏನೆಲ್ಲಾ ಇದೆ?!

ಹೀಗಾಗಲೇ ಚೀನಾದ ಹವಾಯಿ ಸೇರಿದಂತೆ ಸ್ಮಾರ್ಟ್ ಪೋನ್ ತಯಾರಿಕೆ ಕಂಪನಿಗಳಿಗೆ ತನ್ನ ಬಳಕೆದಾರರ ಮಾಹಿತಿ ಹಂಚಿಕೊಂಡಿರುವುದು, ಕೇಂಬ್ರಿಡ್ಜ್ ಅನಾಲಿಟಿಕಾಗೆ 87 ಮಿಲಿಯನ್ ಬಳಕೆದಾರರ ಮಾಹಿತಿ ಹಂಚಿಕೊಂಡಿದ್ದ ಫೇಸ್ ಬುಕ್ ಮತ್ತೊಂದು ಭದ್ರತಾಲೋಪ ಹಗರಣದಲ್ಲಿ ಬಳಕೆದಾರರ ನಂಬಿಕೆ ಕಳೆದುಕೊಂಡಿದೆ.

How to view all photos, pages, comments and posts you liked on Facebook (KANNADA)

2.2 ಬಿಲಿಯನ್ ಬಳಕೆದಾರರಿರುವ ಫೇಸ್ ಬುಕ್ ನಲ್ಲಿ ಮೇ 18 ರಿಂದ ಮೇ 27ರವರೆಗೂ ಬಗ್ ಕಾರ್ಯಾಚರಣೆಯಲ್ಲಿತ್ತು. ಆದರೆ, ಕಂಪನಿ ಮೇ 22ಕ್ಕೆ ಸಮಸ್ಯೆ ಬಗೆ ಹರಿದಿದೆ ಎಂದು ಹೇಳಿದೆ. ಆದರೆ, ಫೇಸ್ ಬುಕ್ ಎಲ್ಲಾ ಪೋಸ್ಟ್ ಗಳ ನಿಜವಾದ ಪ್ರೈವೆಸಿ ಸೆಟ್ಟಿಂಗ್ ಗೆ ಬದಲಾಯಿಸುವುದಕ್ಕೆ ಆಗುವುದಿಲ್ಲ ಎಂದಿದೆ.

14 ಮಿಲಿಯನ್ FB ಅಕೌಂಟ್ಸ್ ಪ್ರೈವೆಸಿ ಸೆಟ್ಟಿಂಗ್ಸ್ ಬದಲು..!

ತಮ್ಮ ಪ್ರೊಪೈಲ್ ನಲ್ಲಿರುವ featured items ಹಂಚಿಕೊಳ್ಳುವ ಹೊಸ ದಾರಿ ಸೃಷ್ಟಿಸಲು ಹೋದಾಗ ಈ ಅವಘಡ ಸಂಭವಿಸಿದೆ. ಇದರಲ್ಲಿ ಆಟೋಮೆಟಿಕ್ ಆಗಿ ಪಬ್ಲಿಕ್ ಪೋಸ್ಟ್ ಗಳಾದ ಪೋಸ್ಟ್, ಪೋಟೋ ಆಲ್ಬಮ್ ಗಳು ಸೇರಿದ್ದವು. ಈ ಫೀಚರ್ ಸೃಷ್ಟಿಸುವಾಗ ಫೇಸ್ ಬುಕ್ ಆಕಸ್ಮಿಕವಾಗಿ ಬಳಕೆದಾರರಿಗೆ ಎಲ್ಲಾ ಹೊಸ ಪೋಸ್ಟ್ ಗಳು ಪಬ್ಲಿಕ್ ನಲ್ಲಿ ಪೋಸ್ಟ್ ಮಾಡುವಂತೆ ಸಲಹೆ ನೀಡಿದೆ ಎಂದು ಫೇಸ್ ಬುಕ್ ಹೇಳಿದೆ. ಫೇಸ್ ಬುಕ್ ನಲ್ಲಿ ಹೊಸ ಪೋಸ್ಟ್ ಮಾಡಬೇಕಾದರೆ ಹಿಂದಿನ ಪೋಸ್ಟ್ ಗಿದ್ದ ಪ್ರೈವೆಸಿ ಸೆಟ್ಟಿಂಗ್ ನಲ್ಲಿ ಡಿಫಾಲ್ಟ್ ಆಗಿ ಪೋಸ್ಟ್ ಆಗುತ್ತಿತ್ತು. ಫೇಸ್ ಬುಕ್ ಬಳಕೆದಾರರೇ ಪ್ರೈವೆಸಿ ಸೆಟ್ಟಿಂಗ್ ಅನ್ನು ಮ್ಯಾನ್ಯುವಲ್ ಆಗಿ ಚೆಂಜ್ ಮಾಡಿದ್ರೆ ನಿಮ್ಮ ಗೌಪ್ಯತೆ ಉಳಿಯಬಹುದು.

Best Mobiles in India

English summary
Facebook bug switched 14 million users’ privacy settings to public. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X