ವಿದ್ಯಾರ್ಥಿಗಳಿಗಾಗಿಯೇ ಹೊಸ ಫೀಚರ್ಸ್‌ ಪರಿಚಯಿಸಿದ ಫೇಸ್‌ಬುಕ್‌!

|

ಫೇಸ್‌ಬುಕ್‌ ವಿಶ್ವದ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಗಳಲ್ಲಿ ಒಂದಾಗಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಇನ್ನು ಯುವಜನತೆಯ ಆಶಯಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಸ್‌ಗಳ ಮೂಲಕ ಗಮನ ಸೆಳೆಯುವ ಫೇಸ್‌ಬುಕ್‌ ಇದೀಗ ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಹೊಸದೊಂದು ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ಈ ಫೀಚರ್ಸ್‌ ಮೂಲಕ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಾಲಾ ವಿಧ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ತಮ್ಮ ಮಾತುಕತೆ ಮುಂದುವರೆಸಲು ಅನುಕೂಲವಾಗಲಿದೆ.

ಸೊಶೀಯಲ್‌ ಮೀಡಿಯಾ

ಹೌದು, ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಫೇಸ್‌ಬುಕ್‌ ತನ್ನ ಹೊಸ ಫೇಸ್‌ಬುಕ್ ಕ್ಯಾಂಪಸ್ ಎಂಬ ಹೊಸ ಫೀಚರ್ಸ್‌ ಅನ್ನು ಪ್ರಾರಂಭಿಸಿದೆ. ಇದು ಕಾಲೇಜು ವಿದ್ಯಾರ್ಥಿಗಳಿಗೆ ಇತರ ಕಾಲೇಜು ವಿದ್ಯಾರ್ಥಿಗಳು ಮತ್ತು ಶಾಲೆಯ ಬಗ್ಗೆ ಒಂದೇ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡಲಿದೆ. ಇನ್ನು ಈ ಕ್ಯಾಂಪಸ್ ಎನ್ನುವುದು ಫೇಸ್‌ಬುಕ್‌ನಲ್ಲಿ ಅಕೌಂಟ್‌ ಕ್ರಿಯೆಟ್‌ ಮಾಡಿಕೊಂಡಿರುವ ಕಾಲೇಜು ವಿದ್ಯಾರ್ಥಿಗಳು ತಮ್ಮದೇ ಆದ ಕಾಲೇಜು ಮತ್ತು ಶಾಲಾ ಗೆಳೆಯರೊಂದಿಗೆ ಚಾಟ್‌ ಮಾಡುವುದಕ್ಕೆ, ಕ್ಯಾಂಪಸ್-ಒನ್ಲಿ ನ್ಯೂಸ್ ಫೀಡ್ ಅನ್ನು ಪ್ರವೇಶಿಸಲು, ಗ್ರೂಪ್‌ಗಳಿಗೆ ಸೇರಲು, ಮತ್ತು ಈವೆಂಟ್‌ಗಳಿಗೆ ಅವಕಾಶ ನೀಡುವ ಸ್ಥಳವಾಗಿದೆ. ಇನ್ನು ಈ ಫೀಚರ್ಸ್‌ ಇನ್ನಷ್ಟು ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೇಸ್‌ಬುಕ್‌

ಸದ್ಯ ಫೇಸ್‌ಬುಕ್‌ ಪರಿಚಯಿಸಿರುವ ಫೇಸ್‌ಬುಕ್‌ ಕ್ಯಾಂಪಸ್‌ ಫೀಚರ್ಸ್‌ ಮೂಲಕ ಕಾಲೇಜು ವಿಧ್ಯಾರ್ಥಿಗಳೆಲ್ಲಾ ಒಂದೇ ವೇದಿಕೆಯಲ್ಲಿ ಮಾತುಕತೆ ಮುಂದುವರೆಸಬಹುದು. ಅಲ್ಲದೆ ಆನ್-ಕ್ಯಾಂಪಸ್ ಲೈಪ್‌ ಅನ್ನು ಆನ್‌ಲೈನ್‌ನಲ್ಲಿ ನಡೆಸುವುದಕ್ಕೆ ಇದು ಅವಕಾಶ ನೀಡಲಿದೆ. ಅಲ್ಲದೆ ಇದು "ಕ್ಯಾಂಪಸ್ ಡೈರೆಕ್ಟರಿ" ಅನ್ನು ಸಹ ಹೊಂದಿದೆ, ಇಲ್ಲಿ ನೀವು ಅದೇ ಸಂಸ್ಥೆಯ ಇತರ ವಿದ್ಯಾರ್ಥಿಗಳನ್ನು ಸರ್ಚ್‌ ಮಾಡಬಹುದು ಮತ್ತು ಅವರನ್ನ ಸ್ನೇಹಿತರಾಗಿಯೂ ಕೂಡ ಮಾಡಿಕೊಳ್ಳಬಹುದಾಗಿದೆ. ಇನ್ನು ಈ ಫೇಸ್‌ಬುಕ್‌ ಕ್ಯಾಂಪಸ್‌ ಸೆಕ್ಷನ್‌ಗೆ ಎಂಟ್ರಿ ನೀಡಲು ವಿದ್ಯಾರ್ಥಿಗಳು ತಮ್ಮ education ಮೇಲ್ ವಿಳಾಸಗಳನ್ನು ಮತ್ತು ಅವರು ಪದವಿ ಶಿಕ್ಷಣ ಪಡೆದ ವರ್ಷಗಳನ್ನು ಒದಗಿಸಬೇಕಾಗುತ್ತದೆ.

ಕ್ಯಾಂಪಸ್‌

ಇನ್ನು ಈ ಮಾಹಿತಿಗಳೆಲ್ಲಾವನ್ನು ಪೋಸ್ಟ್ ಮಾಡಿದ ನಂತರ, ಅವರು ಕ್ಯಾಂಪಸ್‌ ವಿಭಾಗಕ್ಕಾಗಿ ವಿಶೇಷವಾಗಿ ಹೊಸ ಪ್ರೊಫೈಲ್ ಅನ್ನು ಕ್ರಿಯೆಟ್‌ ಮಾಡಿಕೊಳ್ಳಬಹುದು. ಆದರೆ ನಿಮ್ಮ ಮೇಲ್ ಪ್ರೊಫೈಲ್ ಫೋಟೋ ಮತ್ತು ಕವರ್ ಇಮೇಜ್ ಅನ್ನು ಈ ವಿಭಾಗದಲ್ಲಿಯೂ ಬಳಸಲಾಗುತ್ತದೆ. ಇದಲ್ಲದೆ ಕ್ಲಾಸ್‌, ಮೇಜರ್‌ಗಳು, ಅಪ್ರಾಪ್ತ ವಯಸ್ಕರು, ಮತ್ತು ಡಾರ್ಮ್ ಮಾಹಿತಿಯನ್ನು ಸೇರಿಸಲು ಅಥವಾ ತೆಗೆದುಹಾಕಲು ಇದರಲ್ಲಿ ವಿದ್ಯಾರ್ಥಿಗಳಿಗೆ ಅವಕಾಶವನ್ನ ನೀಡಲಾಗಿದೆ. ಅಲ್ಲದೆ ನೀವು ಸೇರಿಸುವ ಹೆಚ್ಚಿನ ಮಾಹಿತಿಯು ವಿದ್ಯಾರ್ಥಿಗಳಿಗೆ ತಮ್ಮ ಸಮಾನ ಸ್ನೇಹಿತರನ್ನು ಸರ್ಚ್‌ ಮಾಡಲು ಸುಲಭವಾಗಲಿದೆ.

ವಿದ್ಯಾರ್ಥಿಗಳು

ಇದು ಕಾಲೇಜು ವಿದ್ಯಾರ್ಥಿಗಳು ನಿಖರವಾಗಿ ಏನು ಅಧ್ಯಯನ ಮಾಡುತ್ತಿದ್ದಾರೆ ಮತ್ತು ಅವರು ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದರ ಕುರಿತು ಹೆಚ್ಚಿನ ಡೇಟಾವನ್ನು ಫೇಸ್‌ಬುಕ್‌ಗೆ ನೀಡುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಪ್ಲಾಟ್‌ಫಾರ್ಮ್ ಜಾಹೀರಾತುಗಳನ್ನು ಸರ್ಚ್‌ ಮಾಡಲು ಉಪಯುಕ್ತವಾಗಲಿದೆ. ಇನ್ನು ಫೇಸ್‌ಬುಕ್‌ನಲ್ಲಿ ಲಭ್ಯವಾಗಲಿರುವ ಕ್ಯಾಂಪಸ್ ಪ್ರೊಫೈಲ್ ಅನ್ನು ಮುಖ್ಯ ಫೇಸ್‌ಬುಕ್‌ ವಾಲ್‌ನಿಂದ ಆಫ್ ಮಾಡಲಾಗಿದೆ. ಆದರೆ, ನೀವು ಫೇಸ್‌ಬುಕ್‌ನಲ್ಲಿ ಒಬ್ಬ ವ್ಯಕ್ತಿಯನ್ನು ಬ್ಲಾಕ್‌ ಮಾಡಿದರೆ, ಆ ವ್ಯಕ್ತಿಯು ಕ್ಯಾಂಪಸ್‌ನಲ್ಲಿಯೂ ಬ್ಲಾಕ್‌ಲಿಸ್ಟ್‌ಗೆ ಸೇರುತ್ತಾನೆ.

ಕ್ಯಾಂಪಸ್

ಸದ್ಯ ಕ್ಯಾಂಪಸ್ ವಿಭಾಗದ ಮೂಲಕ ಕಾಲೇಜಿನ ಹಿರಿಯ, ಕಿರಿಯ ವಿಧ್ಯಾರ್ಥಿಗಳು ಮುಕ್ತವಾಗಿ ಚಾಟ್‌‌ ಮಾಡಲು ಅವಕಾಶ ನೀಡಲಿದೆ. ಬಳಕೆದಾರರು ಮತ್ತು ವಿದ್ಯಾರ್ಥಿಗಳು ತಮ್ಮ ಶಾಲೆಗಳ ನಿರ್ದಿಷ್ಟವಾದ ಗುಂಪುಗಳನ್ನು ಕ್ರಿಯೆಟ್‌ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಆದರೆ ಇದು ಜಾಗತಿಕವಾಗಿ ಇನ್ನು ಲಭ್ಯವಾಗಿಲ್ಲ. ಕೇವಲ ಯುಎಸ್‌ನಲ್ಲಿ ಮಾತ್ರ ಲಭ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಫೇಸ್‌ಬುಕ್ ಇದನ್ನು ಎಲ್ಲಾ ಕಡೆ ಪರಿಚಯಿಸುವ ಸಾಧ್ಯತೆ ಇದೆ.

Best Mobiles in India

English summary
Facebook goes back to its roots to create a section for the first people it was actually made for - college students.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X