ಫೇಸ್‌ಬುಕ್ ಕರ್ಮಕಾಂಡಗಳು ದಿನ ಕಳೆದಂತೆ ಒಂದೊಂದಾಗಿ ಹೊರ ಬರುತ್ತಿದೆ. ಮೊನ್ನೇ ತಾನೇ ಲೀಕ್ ಆಗಿದ್ದ ಮಾಹಿತಿಗಳು ಕೇವಲ 5 ಕೋಟಿ ಬಳಕೆದಾರರದಲ್ಲ ಇನ್ನು ಹೆಚ್ಚಿನದು ಎನ್ನುವ ಮಾಹಿತಿ ಹೊರ ಬಿದ್ದಿತ್ತು. ಅಲ್ಲದೇ ಬಳಕೆದಾರರ ಕರೆಗಳ ಮಾಹಿತಿ, ಮೇಸೆಜ್‌ಗಳು ಮತ್ತು ಕಾಂಟೆಕ್ಟ್‌ಗಳನ್ನು ಫೇಸ್‌ಬುಕ್ ಸಂಗ್ರಹಿಸುತ್ತಿರುವ ಮಾಹಿತಿಯೂ ಜಗತ್ತಿನ ಮುಂದೆ ತೆರೆದುಕೊಂಡಿತ್ತು. ಇದಾದ ನಂತರದಲ್ಲಿ ಫೇಸ್‌ಬುಕ್ ಬಳಕೆದಾರರ ಇನ್ ಬಾಕ್ಸ್ ಅನ್ನು ನೋಡುವುದಲ್ಲದೇ ಮೇಸೆಜ್‌ಗಳನ್ನು ಡಿಲೀಟ್ ಕೂಡ ಮಾಡುತ್ತಿದೆ ಆತಂಕಕಾರಿ ಮಾಹಿತಿಯೊಂದು ಲಭ್ಯವಾಗಿದೆ.

ಬಳಕೆದಾರರ ಇನ್‌ಬಾಕ್ಸ್ ಅವರ ಪ್ರೈವಸಿಯಾಗಿದ್ದು ಬೇರೆ ಯಾರು ಅದನ್ನು ಇಣುಕಿ ನೋಡುವಂತೆ ಇಲ್ಲ. ಆದರೆ ಫೇಸ್‌ಬುಕ್ ಈ ಕಾರ್ಯವನ್ನು ಮಾಡುತ್ತಿದೆ. ಇದಕ್ಕೆ ಸಾಕ್ಷಿ ಸಹ ದೊರೆತಿದೆ ಎನ್ನಲಾಗಿದೆ. ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಕೇಲವರಿಗೆ ಕಳುಹಿಸಿದ್ದ ಸಂದೇಶವನ್ನು ಡಿಲೀಟ್ ಮಾಡುವ ಮೂಲಕ ಮತ್ತೊಂದು ಸುತ್ತಿನ ಟೀಕೆಗೆ ಗುರಿಯಾಗಿದೆ. ಬಳಕೆದಾರರ ಖಾಸಗಿ ತನವನ್ನು ಉಲ್ಲಂಘಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಇದಲ್ಲದೇ ಈ ರೀತಿಯಾಗಿ ಬೇರೆಯವರ ಇನ್‌ಬಾಕ್ಸ್ ಇಣುಕಿರುವುದು ಅಲ್ಲದೇ ಆ ಕಾರ್ಯವನ್ನು ಸಮರ್ಥಿಸಿಕೊಂಡಿರುವ ಫೇಸ್‌ಬುಕ್, ಇದನ್ನು ಕಾರ್ಪೋರೆಟ್ ಸೆಕ್ಯೂರಿಟಿ ಎಂದು ಹೇಳಿದೆ. ಈ ಕಾರ್ಯವೂ ಫೇಸ್‌ಬುಕ್ ನೀಡಿರುವ ಡೌನ್‌ಲೋಡ್ ಯುವರ್ ಇನ್‌ಫರ್ಮೇಸನ್' ಆಯ್ಕೆಯಲ್ಲಿ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡ ಸಂದರ್ಭದಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.

ಇದಲ್ಲದೇ ಬಳಕೆದಾರರು ಒಪ್ಪಿಗೆ ಸೂಚಿಸಿರುವ ಟರ್ಮ್ಸ್ ಅಂಡ್ ಕಂಡಿಷನ್ ನಲ್ಲಿ ಈಗಾಗಲೇ ಈ ಮಾಹಿತಿಯನ್ನು ತಿಳಿಸಲಾಗಿದೆ ಎಂದಿರುವ ಫೇಸ್‌ಬುಕ್, ಬಳಕೆದಾರರ ಯಾವುದೇ ಕಂಟೆಂಟ್ ಗಳನ್ನು ನಾವು ನೋಡುವ ಅಧಿಕಾರ ಮತ್ತು ತೆಗೆದು ಹಾಕುವ ಅಧಿಕಾರವನ್ನು ಹೊಂದಿದ್ದೇವೆ ಎಂದು ತಿಳಿಸಿದೆ.

ಒಟ್ಟಿನಲ್ಲಿ ಇಡೀ ವಿಶ್ವದಲ್ಲಿಯೇ ಅತೀ ದೊಡ್ಡ ಸಾಮಾಜಿಕ ಜಾಲತಾಣ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದ ಫೇಸ್‌ಬುಕ್, ಕಳೆದ ಕೆಲವು ದಿನಗಳಿಂದ ತನ್ನ ಕರಾಳ ಮುಖವನ್ನು ಹೊರ ಜಗತ್ತಿಗೆ ಪ್ರದರ್ಶಿಸುತ್ತಿದೆ. ಬಳಕೆದಾರು ಮುಕ್ತ ಮನಸ್ಸಿನಿಂದ ಫೇಸ್‌ಬುಕ್ ಬಳಸಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎನ್ನಲಾಗಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.