ದೇಶದಾದ್ಯಂತ ಉಚಿತ ವೈ-ಫೈ ನೀಡುವ ಫೇಸ್‌ಬುಕ್ ಆಸೆ ಜೀವಂತ!!

Written By:

ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಫೇಸ್‌ಬುಕ್ ಬಳಕೆದಾರರಿಗೆ ಎಕ್ಸ್‌ಪ್ರೆಸ್ ವೈ-ಫೈ ನೀಡಲು ನಿರ್ಧರಿಸಿದ್ದ ಫೇಸ್‌ಬುಕ್‌ ಆಸೆ ಮತ್ತೆ ಚಿಗುರುವ ಕನಸು ಕಾಣುತ್ತಿದೆ.! ದೈತ್ಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಉಚಿತ ಇಂಟರ್‌ನೆಟ್ ಸೇವೆ ನೀಡುವುದಾಗಿ ಈ ಹಿಂದೆ ಹೇಳಿತ್ತು. ಆದರೆ ಹಲವಾರು ಕಾರಣಗಳಿಂದ ಫೇಸ್‌ಬುಕ್‌ನ ಈ ಯೋಜನೆ ವಿಫಲವಾಗಿತ್ತು.

ಆದರೆ, ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಫೇಸ್‌ಬುಕ್ ಕಂಪನಿ ಭಾರತದಲ್ಲಿ ಉಚಿತ ಇಂಟರ್‌ನೆಟ್‌ ಕೊಡಬಹುದು ಎನ್ನುವ ರೂಮರ್ಸ್ ಹರಿದಾಡಿದೆ. ಜನರಿಗೆ ಉಚಿತವಾಗಿ ಲಭ್ಯವಾಗುವುವಂತೆ ಅಥವಾ ಅತಿ ಕಡಿಮೆ ದರದಲ್ಲಿ ಇಂಟರ್‌ನೆಟ್‌ ಸೇವೆ ಪಡೆದುಕೊಳ್ಳಬಹುದಾದ ಈ ಯೋಜನೆಯನ್ನು ಮತ್ತೆ ತರಲು ಫೇಸ್‌ಬುಕ್ ನಿರ್ಧರಿಸಿದೆ.!

ದೇಶದಾದ್ಯಂತ ಉಚಿತ ವೈ-ಫೈ ನೀಡುವ ಫೇಸ್‌ಬುಕ್ ಆಸೆ ಜೀವಂತ!!

5 ವರ್ಷದಲ್ಲಿ ಎರಡನೇ ಚೀನಾ ಆಗಲಿದೆ ಬೆಂಗಳೂರು!!

ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಗ್ರಾಮೀಣ ಜನರಿಗೆ ಅತಿ ಕಡಿಮೆ ದರದಲ್ಲಿ ಲಭ್ಯವಾಗುವಂತೆ ಎಕ್ಸ್‌ಪ್ರೆಸ್ ವೈ-ಫೈ ನೀಡುವುದಾಗಿ ಫೇಸ್‌ಬುಕ್ ಹೇಳಿಕೊಂಡಾಗ ಅದಕ್ಕೆ ಹಲವೆಡೆ ಆಕ್ಷೇಪಣೆಗಳು ಕೇಳಿಬಂದಿತ್ತು. ಏಕಸ್ವಾಮ್ಯ ಮಾರುಕಟ್ಟೆಯನ್ನು ನಿರ್ಮಿಸಿಕೊಳ್ಳಲು ಫೆಸ್‌ಬುಕ್‌ ಈ ತಂತ್ರವನ್ನು ಉಪಯೋಗಿಸುತ್ತಿದೆ ಎಂದು ಇತರ ಕಂಪೆನಿಗಳು ಆರೋಪ ಮಾಡಿದ್ದವು.

ದೇಶದಾದ್ಯಂತ ಉಚಿತ ವೈ-ಫೈ ನೀಡುವ ಫೇಸ್‌ಬುಕ್ ಆಸೆ ಜೀವಂತ!!

ಇನ್ನು ಇತ್ತೀಚಿಗೆ ಹಲವು ಕಂಪೆನಿಗಳು ಉಚಿತವಾಗಿ ವೈ-ಫೈ ನೀಡುತ್ತಿರುವುದನ್ನು ಗಮನಿಸಿದ ಫೇಸ್‌ಬುಕ್‌ ಕೂಡ ದೇಶದಾಧ್ಯಂತ ಉಚಿತ ವೈ-ಫೈ ನೀಡಲು, ಮತ್ತೆ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎನ್ನುವ ಮಾತು ಟೆಕ್‌ ಲೋಕದಲ್ಲಿ ಹರಿದಾಡಿವೆ.!!

English summary
Facebook Express Wi-Fi service was being tested in rural India since the past one year and provides internet in remote areas.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot