ಡೆಸ್ಕ್‌ಟಾಪ್‌ ಆವೃತ್ತಿಯಲ್ಲೂ ಡಾರ್ಕ್‌ಮೋಡ್‌ ಫೀಚರ್ಸ್‌ ಪರಿಚಯಿಸಿದ ಫೇಸ್‌ಬುಕ್‌!

|

ಇತ್ತೀಚಿನ ಕೆಲ ದಿನಗಳಿಂದ ಜನಪ್ರಿಯ ಸೊಶೀಯಲ್‌ ಮಿಡಿಯಾ ಆಪ್ಲಿಕೇಶನ್‌ಗಳಲ್ಲಿ ಡಾರ್ಕ್‌ ಮೋಡ್‌ ಅನ್ನು ಪರಿಚಯಿಸಲಾಗ್ತಿದೆ. ಕೆಲವೇ ತಿಂಗಳುಗಳ ಹಿಂದೆ ಜನಪ್ರಿಯ ಇನ್ಸ್‌ಟ್ಯಾಂಟ್‌ ಮೇಸೆಜಿಂಗ್‌ ಆಪ್‌ ವಾಟ್ಸಾಪ್‌ ಡಾರ್ಕ್‌ ಮೋಡ್‌ ಅನ್ನು ಪರಿಚಯಿಸಿತ್ತು. ಇದಾದ ನಂತರ ಫೇಸ್‌ಬುಕ್‌ ಕೂಡ ಡಾರ್ಕ್‌ ಮೋಡ್‌ ಅನ್ನು ಪರಿಚಯಿಸಿ ಬಳಕೆದಾರರ ಮನಗೆದ್ದಿತ್ತು. ಆದರೆ ಇದು ಸ್ಮಾರ್ಟ್‌ಫೋನ್‌ ಫೇಸ್‌ಬುಕ್‌ ವರ್ಷನ್‌ಗೆ ಮಾತ್ರ ಸೀಮಿತವಾಗಿತ್ತು. ಇದೀಗ ಫೇಸ್‌ಬುಕ್‌ ತನ್ನ ಡೆಸ್ಕ್‌ಟಾಪ್‌ ಆವೃತ್ತಿಯಲ್ಲೂ ಡಾರ್ಕ್‌ ಮೋಡ್‌ ಅನ್ನ ಪರಿಚಯಿಸಿದೆ. ಈ ಮೂಲಕ ಡೆಸ್ಕ್‌ಟಾಪ್‌ ನಲ್ಲಿ ಪೇಸ್‌ಬುಕ್‌ ಬಳಸುವ ಬಳಕೆದಾರರಿಗೆ ಖುಷಿ ಸಮಾಚಾರವನ್ನ ನೀಡಿದೆ.

ಹೌದು

ಹೌದು, ಜನಪ್ರಿಯ ಸೋಶಿಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ಒಂದಾದ ಫೇಸ್‌ಬುಕ್‌ ತನ್ನ ಡೆಸ್ಕ್‌ಟಾಪ್‌ ಆವೃತ್ತಿಗೆ ಡಾರ್ಕ್‌ಮೋಡ್‌ ಅನ್ನು ಪರಿಚಯಿಸಿದೆ. ಈ ಮೂಲಕ ಫೇಸ್‌ಬುಕ್ ವಿನ್ಯಾಸವನ್ನು ಹೊಸ ಮಾದರಿಯಲ್ಲಿ ಪರಿಚಯಿಸಿದೆ. ಈ ಮೂಲಕ ಬಳಕೆದಾರರಿಗೆ ಇನ್ಮುಂದೆ ಫೇಸ್‌ಬುಕ್‌ನಲ್ಲಿ ಹೊಸ ಅನುಭವ ನೀಡಲಿದೆ ಎಂದು ಫೇಸ್‌ಬುಕ್‌ ಹೇಳಿಕೊಂಡಿದೆ. ಇನ್ನು ಡಾರ್ಕ್‌ಮೋಡ್‌ ಅನ್ನು ಡೆಸ್ಕ್‌ಟಾಪ್‌ ಬಳಕೆಡದಾರರು ಫೇಸ್‌ಬುಕ್‌ನಲ್ಲಿ ಬ್ಯಾನರ್‌ ಅನ್ನು ಟ್ಯಾಪ್‌ ಮಾಡುವ ಮೂಲಕ ಇದನ್ನು ಸಕ್ರಿಯಗೊಳಿಸಬಹುದಾಗಿದೆ. ಇನ್ನು ಈ ಡಾರ್ಕ್‌ಮೋಡ್‌ ಅನ್ನು ಸಕ್ರಿಯಗೊಳಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಪೇಸ್‌ಬುಕ್‌

ಸದ್ಯ ಪೇಸ್‌ಬುಕ್‌ ತನ್ನ ಡೆಸ್ಕಾಟಾಪ್‌ ಆವೃತ್ತಿಯ ಬಳಕೆದಾರರಿಗೆ ಡಾರ್ಕ್‌ ಮೋಡ್‌ ಪರಿಚಯಿಸಿದೆ. ಇದರಿಂದಾಗಿ ಇನ್ಮುಂದೆ ಡೆಸ್ಕಾಟಾಪ್‌ನಲ್ಲಿ ಫೆಸ್‌ಬುಕ್‌ ಬಳಸುವಾಗ ಡೆಸಕ್‌ಟಾಪ್‌ ನ ಬೆಳಕಿನ ಪ್ರಖರತೆ ಬಳಕೆದಾರರ ಕಣ್ಣಿನ ಗುಡ್ಡೆಗಳ ಮೇಲೆ ಪರಿಣಾಮ ಬಿರುವುದಿಲ್ಲ. ದೃಷ್ಟಿಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಜೊತೆಗೆ ವೇಗವಾಗಿ ಕಾರ್ಯಮಾಡುವ ಕ್ಲಾಸಿಕ್‌ ಫೇಸ್‌ಬುಕ್‌ ಫೀಚಸ್‌ ಅನ್ನು ಸಹ ಪರಿಚಯಿಸಿದೆ. ಇದರಿಂದ ಇನ್ಮುಂದೆ ಡೆಸ್ಕ್‌ಟಾಪ್‌ನಲ್ಲಿ ವೇಗವಾಗಿ ಕಾರ್ಯನಿರ್ವಹಿಸಬಹುದಾಗಿದೆ. ಇದಕ್ಕಾಗಿ ಫೇಸ್‌ಬುಕ್‌ನ ಮುಖಪುಟದ ಮೇಲ್ಭಾಗದಲ್ಲಿ ಬ್ಯಾನರ್ ಕಾಣುತ್ತದೆ. ಅದರಲ್ಲಿ ನ್ಯೂ ಫೇಸ್‌ಬುಕ್‌ ಅನ್ನೊ ಲಿಂಕ್‌ ಕಾಣಿಸುತ್ತದೆ. ಇದನ್ನ ಕ್ಲಿಕ್‌ ಮಾಡಿದರೆ ಹೊಸ ಮಾದರಿಯಲ್ಲಿ ಫೇಸ್‌ಬುಕ್‌ ಕಾಣುತ್ತದೆ. ಹೊಸ ಇಂಟರ್ಫೇಸ್ ಅನ್ನು ಆರಿಸಿಕೊಳ್ಳುವವರು "ಕ್ಲಾಸಿಕ್ ಫೇಸ್‌ಬುಕ್" ಗೆ ಹೋಗಬೇಕು ಅಲ್ಲಿ ಮರುವಿನ್ಯಾಸಗೊಳಿಸಲಾದ ಇಂಟರ್ಫೇಸ್ ಡೀಫಾಲ್ಟ್ ಸೆಟ್ಟಿಂಗ್ ಆಗುತ್ತದೆ.

ಗ್ರೂಪ್ಸ್

ಇನ್ನು ಡಾರ್ಕ್ ಮೋಡ್ ಜೊತೆಗೆ, ಇತರ ದೃಶ್ಯ ಟ್ವೀಕ್‌ಗಳಲ್ಲಿ ಮಾರ್ಕೆಟ್‌ಪ್ಲೇಸ್, ಗ್ರೂಪ್ಸ್, ಫೇಸ್‌ಬುಕ್ ವಾಚ್ ಮತ್ತು ಗೇಮಿಂಗ್‌ಗಾಗಿ ಕೇಂದ್ರೀಕೃತ ಟ್ಯಾಬ್ ಸೇರಿವೆ. ಫೇಸ್‌ಬುಕ್‌ನ ಡಾರ್ಕ್ ಮೋಡ್ ಡೆಸ್ಕ್‌ಟಾಪ್‌ಗಳಲ್ಲಿ ಬಳಕೆದಾರರು ತಮ್ಮ ಕೊಡುಗೆಗಳನ್ನು ಪ್ರವೇಶಿಸಲು ಟ್ವಿಟರ್‌ನಂತಹ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಹಿಂಭಾಗದಲ್ಲಿ ಬರುತ್ತದೆ. ಇನ್ನು ಈಗಾಗ್ಲೆ ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಮ್, ಮೆಸೆಂಜರ್ ಮತ್ತು ವಾಟ್ಸಾಪ್ ಸಹಈಗಾಗ್ಲೆ ಡಾರ್ಕ್-ಮೋಡ್ ನವೀಕರಣವನ್ನು ಪಡೆದುಕೊಂಡಿವೆ.

ಈಗ

ಈಗ, ಫೇಸ್‌ಬುಕ್ ಡಾರ್ಕ್‌ಮೋಡ್‌ ಗೆ ಎಂಟ್ರಿ ಕೊಟ್ಟಿದೆ. ಇದಕ್ಕಾಗಿ ನೀವು ಫೇಸ್‌ಬುಕ್‌ನ ಬ್ಯಾನರ್ ಅನ್ನು ಟ್ಯಾಪ್ > ನಂತರ ಸೆಟ್ಟಿಂಗ್ಸ್ ಮೆನು >> 'ನ್ಯೂ ಫೇಸ್‌ಬುಕ್ >' ಸೆಟ್ಟಿಂಗ್‌ಗಳ ಮೆನು >> 'ಕ್ಲಾಸಿಕ್ ಫೇಸ್‌ಬುಕ್‌ಗೆ ಬದಲಿಸಿ' ಈ ಮೂಲಕ ಉತ್ತಮ ಫೇಸ್‌ಬುಕ್‌ ಅನುಭವ ಬಳಕೆದಾರರಿಗೆ ಸಿಗಲಿದೆ. ಇನ್ನು ಫೇಸ್‌ಬುಕ್‌ ಸದ್ಯ ಮಾಡಿರುವ ಪ್ರಮುಖ ಬದಲಾವಣೆಗಳಲ್ಲಿ ಕ್ರೌಡ್ ಫೇವರಿಟ್ ಡಾರ್ಕ್ ಮೋಡ್ ಸಹ ಸೇರಿದೆ, ಇದರಿಂದ ಡಿಪಿಗಳು ಇಂಟರ್ಫೇಸ್ ಅನ್ನು ದೃಷ್ಟಿಗೆ ಆಕರ್ಷಿಸುವಂತೆ ಮಾಡುತ್ತದೆ ಮತ್ತು ಪಿಸಿಗಳು ಕಡಿಮೆ ಶಕ್ತಿಯನ್ನು ಬಳಸುವಂತೆ ಮಾಡುತ್ತದೆ.

ಡೆಸ್ಕ್‌ಟಾಪ್‌

ಇದಲ್ಲದೆ ಫೇಸ್‌ಬುಕ್‌ ಡೆಸ್ಕ್‌ಟಾಪ್‌ ಅವೃತ್ತಿಯಲ್ಲಿ ಚಿತ್ರಗಳನ್ನು ವೇಗವಾಗಿ ಲೋಡ್ ಮಾಡಲು ಅಪ್ಲಿಕೇಶನ್ ಹೊಸ ದಕ್ಷ ಅಲ್ಗಾರಿದಮ್‌ ಅನ್ನು ಸೇರಿಸಿದೆ. ಇದರಿಂದ ಫೇಸ್‌ಬುಕ್ ಇಂಟರ್ಫೇಸ್ ಈಗ ಪಠ್ಯದ ಫಾಂಟ್‌ಗಳನ್ನು ದೊಡ್ಡದಾಗಿ ತೊರಿಸುತ್ತದೆ. ಸದ್ಯ ಫೇಸ್‌ಬುಕ್ ಸೂಚಿಸುವ ಹೊಸ ವಿನ್ಯಾಸವು ಡಾರ್ಕ್ ಮೋಡ್ ಅನ್ನು ಒಳಗೊಂಡಿದ್ದು, ಇದನ್ನು ಸೆಟ್ಟಿಂಗ್‌ಗಳ ಟ್ಯಾಬ್‌ನಲ್ಲಿ ಡ್ರಾಪ್ ಡೌನ್ ಮೆನು ಬಳಸಿ ಸಕ್ರಿಯಗೊಳಿಸಬಹುದು. ಡೆಸ್ಕ್‌ಟಾಪ್‌ಗಳಿಗಾಗಿ ಹೊಸ ಇಂಟರ್ಫೇಸ್ ಇದೀಗ ಸ್ವಲ್ಪ ಸಮಯದವರೆಗೆ ಕಾರ್ಯನಿರ್ವಹಿಸುತ್ತಿದೆ.

Best Mobiles in India

English summary
Facebook finally brings dark mode to desktop version.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X