Subscribe to Gizbot

ಫೇಸ್‌ಬುಕ್‌ನಿಂದಾಗಿ ಜಿಯೋ, ಏರ್‌ಟೆಲ್ ಎಲ್ಲಾ ಶೀಘ್ರದಲ್ಲಿಯೇ ನೆಲಕಚ್ಚಲಿವೆ.!! ಏಕೆ ಗೊತ್ತಾ?

Written By:

ಇನ್ನೇನು ಕೆಲವೇ ವರ್ಷಗಳಲ್ಲಿ ಪ್ರಪಂಚಕ್ಕೆ ಸೆಡ್ಡು ಹೊಡೆದು ನಿಲ್ಲುತ್ತದೆಯೇ ಫೇಸ್‌ಬುಕ್? ಹೀಗೊಂದು ಪ್ರಶ್ನೆ ಮೂಡಲು ಕಾರಣ ಫೇಸ್‌ಬುಕ್ ಜಗತ್ತಿನಾಧ್ಯಂತ ವೈ-ಫೈ ನೀಡಲು ಮುಂದಾಗಿರುವುದು.!! ಹೌದು, ಡ್ರೋಣ್‌ಗಳ ಮೂಲಕ ರಿಮೋಟ್ ಏರಿಯಾದಲ್ಲಿಯೂ ಇಂಟರ್‌ನೆಟ್ ನೀಡಲು ಫೇಸ್‌ಬುಕ್ ಕಾರ್ಯಾರಂಭಿಸಿದೆ.!!

ಈ ಬಗ್ಗೆ ಫೆಸ್‌ಬುಕ್ ಎಂಜಿನಿಯರಿಂಗ್ ನಿರ್ದೇಶಕ ಅಲೆಕ್ಸ್ ಹಿಮೆಲ್ ಅವರು ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದು, ವೈ-ಫೈ ಮೂಲಕ ಡೇಟಾ ವಿರಳವಾಗಿರುವ ಪ್ರದೇಶಗಳಲ್ಲಿ, ಪ್ರಯಾಣ ಮಾಡುವಾಗಲೂ ಇಂಟೆರ್‌ನೆಟ್ ಸಂಪರ್ಕ ನೀಡಲು ಸಹಾಯಕವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ನೀವು ಎಲ್ಲಿದ್ದರೂ, ನಿಮ್ಮ ಡೇಟಾ ಸಂಪರ್ಕವು ಎಷ್ಟೆ ದುರ್ಬಲವಾಗಿದ್ದಾಗಲೂ ನೀವು ಹತ್ತಿರದ ಸಂಪರ್ಕಗಳನ್ನು ಸುಲಭವಾಗಿ ನಕ್ಷೆ ಮಾಡಬಹುದು ಎಂದು ಹಿಮೆಲ್ ತಿಳಿಸಿದ್ದು, ಹಾಗಾದರೆ, ಫೆಸ್‌ಬುಕ್ ಹೊರತರುತ್ತಿರುವ ನೂತನ ಯೋಜನೆ ಬಗ್ಗೆ ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿ ಪಡೆಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೇಸಿಕ್ ಇಂಟರ್‌ನೆಟ್‌ನಿಂದ ವೈ-ಪೈವರೆಗೂ!!

ಬೇಸಿಕ್ ಇಂಟರ್‌ನೆಟ್‌ನಿಂದ ವೈ-ಪೈವರೆಗೂ!!

ಬೇಸಿಕ್ ಇಂಟರ್‌ನೆಟ್ ಕಲ್ಪನೆಯಿಂದ ಮುಂದುವರೆದಿರುವ ಫೆಸ್‌ಬುಕ್, ಯಾವಾಗ ಬೇಸಿಕ್ ಇಂಟರ್‌ನೆಟ್ ಸಕಾರವಾಗಲು ಕಷ್ಟವಿದೆ ಎಂದು ಅರಿಯಿತೋ ಆಗಿನಿಂದ ವೈ-ಫೈ ಮೂಲಕ ಜನರನ್ನು ತಲುಪಲು ಮುಂದಾಗಿದೆ.! ಜಾಗತಿಕ ಮಟ್ಟದಲ್ಲಿ ಹಾಟ್‌ಸ್ಪಾಟ್‌ಗಳನ್ನು ನಿರ್ಮಿಸಿ Wi-Fi ಅನ್ನು ಹುಡುಕಲು ಸಹಾಯಕವಾಗುವಂತೆ ಮಾಡಲು ಮುಂದಾಗಿದೆ.

ಎಲ್ಲೇ ಇದ್ದರೂ

ಎಲ್ಲೇ ಇದ್ದರೂ "Wi-Fi ಹುಡುಕಿ" !!

ಫೇಸ್ಬುಕ್ ಅಪ್ ತೆರೆದು "ಮೋರ್" ಟ್ಯಾಬ್ ಕ್ಲಿಕ್ ಮಾಡಿದ ನಂತರ "Wi-Fi ಹುಡುಕಿ" ಎಂಬ ಆಯ್ಕೆ ಕಾಣುತ್ತದೆ. ನೀವು ಅದನ್ನು ಆನ್ ಮಾಡಿದರೆ, ಮ್ಯಾಪ್‌ನಲ್ಲಿ ನಿಮ್ಮ ಹತ್ತಿರದಲ್ಲಿ ಲಭ್ಯವಿರುವ ಎಲ್ಲಾ Wi-Fi ಸ್ಪಾಟ್‌ಗಳ ವಿವರ ನಿಮಗೆ ದೊರೆಯಲಿದೆ.! ಇದರಿಂದ ನೀವು ಬ್ರೌಸ್ ಮಾಡಲು ಸಾಧ್ಯವಾಗುತ್ತದೆ.!!

ಇದು ಫೇಸ್‌ಬುಕ್ ಫ್ಯೂಚರ್ ಪ್ಲಾನ್!!

ಇದು ಫೇಸ್‌ಬುಕ್ ಫ್ಯೂಚರ್ ಪ್ಲಾನ್!!

ವೈ-ಫೈ ಮೂಲಕ ಇಂಟರ್‌ನೆಟ್ ಸಂಪರ್ಕ ನೀಡಲು ಫೆಸ್‌ಬುಕ್ ಮುಂದಾಗಿದ್ದು, ಈ ಯೋಜನೆ ಯಶಸ್ವಿಯಾದರೆ, ಫೆಸ್‌ಬುಕ್ ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರಪಂಚದಾಧ್ಯಂತ ಇಂಟರ್‌ನೆಟ್ ನಿಡುವ ಪ್ಲಾನ್ ಹಾಕಿಕೊಂಡಿದೆ. ಈ ಮೂಲಕ ಪ್ರಪಂಚವನ್ನೆ ಆಳಲು ಫೆಸ್‌ಬುಕ್ ಮುಮದಾಗಿದೆ.!!

ಯೋಜನೆ ಯಶಸ್ವಿಯಾದರೆ ಟೆಲಿಕಾಂಗೆ ಕಥೆ?

ಯೋಜನೆ ಯಶಸ್ವಿಯಾದರೆ ಟೆಲಿಕಾಂಗೆ ಕಥೆ?

ಈಗಾಗಲೆ ದರಸಮರದಂತಹ ತಾಪತ್ರಯದಲ್ಲಿ ಸಿಲುಕಿರುವ ಟೆಲಿಕಾಂಗಳು ಫೆಸ್‌ಬುಕ್ ತರುತ್ತಿರುವ ಈ ಯೋಜನೆ ಯಶಸ್ವಿಯಾದರೆ ನೆಲಕಚ್ಚಿ ಬಿಡುತ್ತವೆ. ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಎಲ್ಲಾ ಟೆಲಿಕಾಂಗಳು ಇಂತಹದೇ ಪರಿಸ್ಥಿತಿಗೆ ಸಿಲುಕುತ್ತವೆ.!!

2018ರಲ್ಲಿ ಬಳಕೆಗೆ?

2018ರಲ್ಲಿ ಬಳಕೆಗೆ?

ಮೂಲಕ ಎಲ್ಲೆಡೇ ವೈ-ಫೈ ನೀಡಲು ಈಗಾಗಲೇ ಡ್ರೋನ್ ಟೆಸ್ಟ್‌ಗಳನ್ನು ಮುಗಿಸಿರುವ ಫೇಸ್‌ಬುಕ್, ತಾನೂ ಮಾಡಿರುವ ಎರಡು ಪರೀಕ್ಷೆಗಳಲ್ಲಿ ಯಶಸ್ವಿಯಾಗಲಿದೆ.!! ಹಾಗಾಗಿ, ಫೆಸ್‌ಬುಕ್ 2018 ರ ವೇಳೆಗೆ ಈ ಯೋಜನೆ ಜಾರಿಗೆ ತರಲು ಗುರಿಯನ್ನು ಹಾಕಿಕೊಂಡಿದೆ.

ಓದಿರಿ:ಫೋನ್‌ನಲ್ಲಿ ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡೋಕೆ 2 ನಿಮಿಷ ಸಾಕು!! ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Facebook is rolling out a feature that should help you stay connected when you're on the go.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot