ಫೇಸ್‌ಬುಕ್‌ನಿಂದ ಹೊಸ ನಿಯಮ; ಪ್ರೊಫೈಲ್‌ನಲ್ಲಿ ಈ ವಿಷಯಕ್ಕೆ ಅನುಮತಿ ಇಲ್ಲ

|

ಸಮಾಜದಲ್ಲಿ ಇಂದು ಏನೇ ಸುದ್ದಿಯಾದರೂ ಅದು ಸಾಮಾನ್ಯವಾಗಿ ಫೇಸ್‌ಬುಕ್‌ನಲ್ಲಿ ಸದ್ದು ಮಾಡುತ್ತದೆ. ಕೆಲವು ಘಟನೆಗಳು ಸಮಾಜದಲ್ಲಿ ಅಲ್ಲೋಲ ಕಲ್ಲೋಲವನ್ನೇ ಉಂಟು ಮಾಡುತ್ತವೆ. ಈ ಎಲ್ಲಾ ವಿಷಯವನ್ನು ಕೂಲಂಕಷವಾಗಿ ಪರಿಶೀಲಿರುವ ಪೇಸ್‌ಬುಕ್‌ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದ ಪ್ರಕಾರ ಕೋಟ್ಯಂತರ ಜನರ ಖಾತೆಯ ಪ್ರೊಫೈಲ್ ನಿಂದ ಕೆಲವು ನಿರ್ಣಾಯಕ ಮಾಹಿತಿಯನ್ನು ತೆಗೆದುಹಾಕಲಾಗುತ್ತದೆ.

ಫೇಸ್‌ಬುಕ್‌

ಹೌದು, ಇನ್ಮುಂದೆ ಫೇಸ್‌ಬುಕ್‌ ಖಾತೆಯಲ್ಲಿ ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಎಚ್ಚರಿಕೆ ವಹಿಸಬೇಕಿದೆ. ಅದರಂತೆ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ಇರುವ ಧಾರ್ಮಿಕ ಮಾಹಿತಿ, ರಾಜಕೀಯ ವಿಷಯ, ಲೈಂಗಿಕ ಆಸಕ್ತಿಯನ್ನು ಸೂಚಿಸುವ ವಿಷಯಗಳನ್ನು ತೆಗೆದುಹಾಕಲು ಮುಂದಾಗಿದೆ. ಇನ್ನು ಪ್ರೊಫೈಲ್ ಮಾಹಿತಿಯನ್ನು ಯಾರ್ಯಾರು ನೋಡುತ್ತಾರೆ ಎಂಬುದನ್ನು ನಿರ್ಧರಿಸುವ ಬಳಕೆದಾರರ ಹಕ್ಕಿನ ಮೇಲೆ ಈ ಹೊಸ ಫೀಚರ್ಸ್‌ ಬದಲಾವಣೆ ಬೀರುವುದಿಲ್ಲ ಎಂದು ಫೇಸ್‌ಬುಕ್‌ ತಿಳಿಸಿದೆ.

ಡಿಸೆಂಬರ್ 1 ರಿಂದ ಜಾರಿ

ಡಿಸೆಂಬರ್ 1 ರಿಂದ ಜಾರಿ

ಡಿಸೆಂಬರ್ 1 ರಿಂದ ಈ ಬದಲಾವಣೆ ಜಾರಿಗೆ ಬರಲಿದೆ ಎಂದು ಫೇಸ್‌ಬುಕ್ ತಿಳಿಸಿದ್ದು, ಪ್ರೊಫೈಲ್‌ನಿಂದ ಈ ಮಾಹಿತಿಯನ್ನು ತೆಗೆಯುವುದರಿಂದ ಖಾತೆಯ ಕಾರ್ಯನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜೊತೆಗೆ ಈ ಬದಲಾವಣೆಯಿಂದ ಪ್ರೊಫೈಲ್ ಸ್ಕ್ರೋಲಿಂಗ್‌ನ ಉದ್ದವನ್ನು ಕಡಿಮೆ ಮಾಡಿದಂತಾಗುತ್ತದೆ. ಹೀಗಾಗಿ ಈಗ ತೆಗೆಯಲು ಉದ್ದೇಶಿಸಿರುವ ಮಾಹಿತಿಯನ್ನು ಡಿಸೆಂಬರ್ 1ರ ಮೊದಲು ಸೇವ್‌ ಮಾಡಿ ಇಟ್ಟುಕೊಳ್ಳಿ ಎಂದು ಫೇಸ್‌ಬುಕ್‌ ತಿಳಿಸಿದೆ.

ಫೇಸ್‌ಬುಕ್‌

ಡಿಸೆಂಬರ್ 1ರಿಂದ ಈ ಬದಲಾವಣೆಗಳು ಜಾರಿಯಾದರೆ ಅದೊಂದು ಐತಿಹಾಸಿಕ ತೀರ್ಮಾನ ಆಗಲಿದೆ ಎಂದು ಅಂದಾಜಿಸಲಾಗಿದೆ. ಫೇಸ್‌ಬುಕ್‌ನ ಈ ಐತಿಹಾಸಿಕ ನಡೆಯನ್ನು ಸಾಮಾಜಿಕ ಮಾಧ್ಯಮ ಸಲಹೆಗಾರ ಮ್ಯಾಟ್ ನವರ್ರ್‌ ಬಹಿರಂಗಪಡಿಸಿದ್ದಾರೆ. ಈ ವಿಷಯಗಳನ್ನು ಏಕೆ ತೆಗೆದುಹಾಕಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲು ಫೇಸ್‌ಬುಕ್ ಸಿದ್ಧವಾಗಿಲ್ಲ.

ರಾಜಕೀಯ

ಇದುವರೆಗೆ ಅನುಸರಿಸುತ್ತಿದ್ದ ವಿಧಾನಗಳಲ್ಲಿ ಫೇಸ್‌ಬುಕ್ ಬದಲಾವಣೆಗೆ ತಯಾರಿ ನಡೆಸುತ್ತಿದ್ದು, ಸಾಮಾಜಿಕ ಬದಲಾವಣೆಗಳೊಂದಿಗೆ ಫೇಸ್‌ಬುಕ್ ತನ್ನನ್ನು ತಾನು ಬದಲಾಯಿಸಿಕೊಳ್ಳಲು ಮತ್ತು ಬಳಕೆದಾರರನ್ನು ಬದಲಾವಣೆಯ ಭಾಗವಾಗಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಇಂದು ಧರ್ಮ, ರಾಜಕೀಯ, ಲೈಂಗಿಕತೆ ಇವೆಲ್ಲವೂ ಕೆಟ್ಟ ರೀತಿಯಲ್ಲಿ ಬಳಕೆ ಆಗುತ್ತಿರುವುದನ್ನು ಕಾಣಬಹುದು. ಇವೆಲ್ಲವೂ ಜನರಿಗೆ ಬೇಕಾಗಿರುವ ಒಳ್ಳೆಯ ಸಂಗತಿಗಳೇ ಆದರೂ ಕೆಲವರು ಈ ವಿಷಯವನ್ನು ಬೇರೆಯದೇ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ.

ನಕಲಿ ಖಾತೆ ಸೃಷ್ಟಿ

ನಕಲಿ ಖಾತೆ ಸೃಷ್ಟಿ

ಇನ್ನು ಫೇಸ್‌ಬುಕ್‌ ತೆಗದುಹಾಕಲು ಉದ್ದೇಶಿಸಿರುವ ವಿಷಯಗಳ ಕುರಿತು ಜನರಿಗೆ ಸಾಮಾನ್ಯ ಮಾಹಿತಿ ತಿಳಿದೇ ಇದೆ. ಅದರಲ್ಲೂ ಈ ರೀತಿಯ ವಿಷಯಗಳ ಮೇಲೆ ಕೇಂದ್ರೀಕರಿಸುವವರು ಹೆಚ್ಚಾಗಿ ನಕಲಿ ಪ್ರೊಫೈಲ್‌ ಅನ್ನೇ ಬಳಕೆ ಮಾಡುತ್ತಾರೆ. ಜೊತೆಗೆ ಹಲವಾರು ವಿಧದಲ್ಲಿ ತಪ್ಪು ಮಾಹಿತಿಯನ್ನು ಹರಡುತ್ತಾರೆ. ಹೀಗಾಗಿಯೇ ಫೇಸ್‌ಬುಕ್‌ ಈ ವ್ಯವಸ್ಥೆಯನ್ನು ತೊಡೆದುಹಾಕಲು ಸಾಮಾಜಿಕ ಪರಿವರ್ತನೆಯ ಹಾದಿ ಹಿಡಿದಿದೆ ಎಂದು ಕೆಲವರು ವ್ಯಾಖ್ಯಾನಿಸಿದ್ದಾರೆ.

ಪ್ರಮುಖ ವಿಷಯ

ಫೇಸ್‌ಬುಕ್‌ ಯಾಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂಬ ಬಗ್ಗೆ ನಿಖರ ಮಾಹಿತಿ ನೀಡದ ಕಾರಣ ಹಲವರು ವಿವಿಧ ರೀತಿಯಲ್ಲಿ ಈ ವಿಷಯವನ್ನು ವ್ಯಾಖ್ಯಾನಿಸಿಕೊಂಡು ಬರುತ್ತಿದ್ದಾರೆ. ಪ್ರಮುಖ ವಿಷಯ ಎಂದರೆ ಬಳಕೆದಾರರ ಪ್ರೊಫೈಲ್‌ನಿಂದ ಮಾತ್ರ ಈ ವಿಷಯವನ್ನು ತೆಗೆದುಹಾಕಲಾಗುತ್ತಿದ್ದು, ಉಳಿದಂತೆ ಈ ವಿಷಯದ ಬಗ್ಗೆ ಆರೋಗ್ಯಕರ ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಬಹುದು ಎಂದು ತಿಳಿಸಿದೆ ಎನ್ನಲಾಗಿದೆ.

ಫೇಸ್‌ಬುಕ್‌ನಲ್ಲಿ ಮಾತ್ರ ಈ ಫೀಚರ್ಸ್‌ ಇತ್ತು

ಫೇಸ್‌ಬುಕ್‌ನಲ್ಲಿ ಮಾತ್ರ ಈ ಫೀಚರ್ಸ್‌ ಇತ್ತು

ನೀವು ಗಮನಿಸಿರಬಹುದು, ಈ ವರೆಗೂ ಇತರೆ ಸಾಮಾಜಿಕ ಪ್ಲಾಟ್‌ಫಾರ್ಮ್‌ನಲ್ಲಿ ಈ ರೀತಿಯ ವಿಷಯಗಳಿಗೆ ಆಸ್ಪದವಿಲ್ಲ. ಫೇಸ್‌ಬುಕ್‌ ಒಂದರಲ್ಲೇ ಈ ರೀತಿಯ ವಿಷಯಕ್ಕೆ ಅನುಮತಿಸಿತ್ತು. ಈ ಅಪವಾದದಿಂದ ಮುಕ್ತವಾಗಲು ಈಗ ಫೇಸ್‌ಬುಕ್‌ ಈ ಹೆಜ್ಜೆ ಇರಿಸಿದೆ. ಅದರಲ್ಲೂ ಫೇಸ್‌ಬುಕ್‌ನಲ್ಲಿ ಕೆಲವು ಮಾಹಿತಿಯನ್ನು ಬೇಕಾದ ಹಾಗೆ ಬರೆದುಕೊಳ್ಳುತ್ತಿದ್ದರು. ಇದಕ್ಕೆ ಈಗ ಫುಲ್‌ಸ್ಟಾಪ್‌ ಇಟ್ಟಂತಾಗಿದೆ.

ಪ್ಲಾಟ್‌ಫಾರ್ಮ್‌

ಪ್ರಮುಖ ವಿಷಯ ಎಂದರೆ ಫೇಸ್‌ಬುಕ್‌ ಹೊರತು ಪಡಿಸಿ ಇತರೆ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಪ್ರೊಫೈಲ್‌ಗೆ ಎಷ್ಟು ಬೇಕೋ ಅಷ್ಟು ಮಾಹಿತಿಯನ್ನು ಮಾತ್ರ ಕೇಳುತ್ತವೆ. ಆದರೆ, ಈ ಫೇಸ್‌ಬುಕ್‌ನಲ್ಲಿ ಕಾದಂಬರಿಯನ್ನೇ ಬರೆಯಬಹುದಾದಷ್ಟು ಆಯ್ಕೆಯನ್ನು ನೀಡಿದ್ದು, ಈ ಹೊಸ ಬೆಳವಣಿಗೆಗೆ ಮೂಲ ಕಾರಣವಾಗಿದೆಯಂತೆ.

Best Mobiles in India

English summary
Whatever is the news in society today, it usually makes noise on Facebook. Meanwhile, Facebook has taken an important decision.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X