ಶಾಕಿಂಗ್ ವರದಿ!..ಕೂಡಲೇ ವಾಟ್ಸ್ಆಪ್ ಡಿಲೀಟ್ ಮಾಡಲು ಹೇಳುತ್ತಿದ್ದಾರೆ ತಜ್ಞರು!!

ಹಕರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ದುರುಪಯೋಗಪಡಿಸಿಕೊಳ್ಳಲು ಅವಕಾಶಮಾಡಿಕೊಟ್ಟ ಅಪರಾಧದ ಬೆನ್ನಲ್ಲೇ ಫೇಸ್‌ಬುಕ್‌ ಒಡೆತನದ ಮತ್ತೊಂದು ಸಂಸ್ಥೆ ವಾಟ್ಸ್‌ಆಪ್ ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಎಷ್ಟು ಸುರಕ್ಷಿತವಾಗಿ ನೋಡಿಕೊಳ್ಳುತ್ತ

|

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ತನ್ನ ಕೋಟ್ಯಾಂತರ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ದುರುಪಯೋಗಪಡಿಸಿಕೊಳ್ಳಲು ಅವಕಾಶಮಾಡಿಕೊಟ್ಟ ಅಪರಾಧದ ಬೆನ್ನಲ್ಲೇ ಫೇಸ್‌ಬುಕ್‌ ಒಡೆತನದ ಮತ್ತೊಂದು ಸಂಸ್ಥೆ ವಾಟ್ಸ್‌ಆಪ್ ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಎಷ್ಟು ಸುರಕ್ಷಿತವಾಗಿ ನೋಡಿಕೊಳ್ಳುತ್ತಿದೆ ಎಂಬ ಪ್ರಶ್ನೆ ಹುಟ್ಟಿದೆ.

ವಿಶ್ವದ ಶೇ 25ಕ್ಕಿಂತ ಹೆಚ್ಚು ಮಂದಿ ಬಳಸುವ ಇನ್‌ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸ್‌ಆಪ್‌ ತಾನು ಹೇಳಿಕೊಂಡಷ್ಟು ಸುರಕ್ಷಿತವಾಗಿಲ್ಲ. ಒಂದು ವೇಳೆ ಅದು ವೈಯಕ್ತಿಕ ಮಾಹಿತಿಗೆ ಕನ್ನ ಹಾಕಿದರೂ ಅದರ ವಿರುದ್ಧ ಯಾವ ಕಾನೂನು ಕ್ರಮಗಳನ್ನೂ ತೆಗೆದುಕೊಳ್ಳದ ನಿಯಮಗಳು ಅದರಲ್ಲಿ ಅಡಕವಾಗಿವೆ ಎಂದು ಮಾಹಿತಿ ತಂತ್ರಜ್ಞಾನದ ಪರಿಣತರು ಹೇಳುತ್ತಿದ್ದಾರೆ.!

ಶಾಕಿಂಗ್ ವರದಿ!..ಕೂಡಲೇ ವಾಟ್ಸ್ಆಪ್ ಡಿಲೀಟ್ ಮಾಡಲು ಹೇಳುತ್ತಿದ್ದಾರೆ ತಜ್ಞರು!!

ವಾಟ್ಸ್ಆಪ್ ಬಳಸುವ ಎಲ್ಲಾ ಬಳಕೆದಾರರ ಬಳಿ ವಾಟ್ಸ್‌ಆಪ್ ಅವರ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಕಾನೂನಿನ ಪ್ರಕಾರವಾಗಿ ತೊಂದರೆಗೆ ಸಿಲುಕದಂತೆ ಬಳಕೆದಾರರ ಒಪ್ಪಂದದಲ್ಲಿ ನಮೂದಿಸಲಾಗಿದೆ. ಇದರಿಂದ ವಾಟ್ಸ್‌ಆಪ್ ಬಳಕೆದಾರರು ತೊಂದರೆಗೆ ಸಿಲುಕುತ್ತಿದ್ದಾರೆ ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗಾದರೆ, ಏನಿದು ಶಾಕಿಂಗ್ ವರದಿ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಗೂಢಲಿಪಿ ಇದ್ದರೂ ವಾಟ್ಸ್ಆಪ್ ಸೇಫ್ ಅಲ್ಲ!!

ಗೂಢಲಿಪಿ ಇದ್ದರೂ ವಾಟ್ಸ್ಆಪ್ ಸೇಫ್ ಅಲ್ಲ!!

ವಾಟ್ಸ್ಆಪ್ ಮೂಲಕ ನಡೆಯುವ ಬಳಕೆದಾರರ ಪರಸ್ಪರ ಸಂವಹನವನ್ನು ಗೂಢಲಿಪಿಗೆ ಪರಿವರ್ತಿಸಲಾಗುತ್ತದೆ ಎಂದು ಹೇಳಿಕೊಳ್ಳುವ ಸಂಸ್ಥೆ, ಇದು ಅತ್ಯಂತ ಸುರಕ್ಷಿತ ಎಂದು ಹೇಳಿಕೊಂಡರೂ, ಕರೆಗಳ ವಿವರ, ಮೆಟಾಡೇಟಾ ಮುಂತಾದಗಳನ್ನು ಸಂಗ್ರಹಿಸುವ ಎಲ್ಲ ಸಾಧ್ಯತೆಗಳೂ ಇವೆ'ಎಂದು ಅಮೆರಿಕದ ತಂತ್ರಜ್ಞಾನ ಉದ್ಯಮಿಯೋರ್ವರು ಎಚ್ಚರಿಸಿದ್ದಾರೆ.

ವಾಟ್ಸ್‌ಆಪ್‌ ಹಣ ಗಳಿಸುತ್ತಿದೆ!!

ವಾಟ್ಸ್‌ಆಪ್‌ ಹಣ ಗಳಿಸುತ್ತಿದೆ!!

ಉದ್ಯೋಗಿಗಳಿಗೆ ಸಂಬಳ, ಆಪ್‌ ನಿರ್ವಹಣೆ, ಬೌದ್ಧಿಕ ನೀತಿಗಳ ಹಕ್ಕುಗಳ ತಯಾರಿಕೆ ಮುಂತಾದವಕ್ಕೆ ವಾಟ್ಸ್‌ಆಪ್‌ಗೆ ಸಾಕಷ್ಟು ಖರ್ಚಾಗುತ್ತದೆ. ಹಾಗಾಗಿ, ಉಚಿತವಾಗಿ ಸೇವೆ ನೀಡುವ ವಾಟ್ಸ್‌ಆಪ್‌. ಬಳಕೆದಾರರ ಮಾಹಿತಿ ಸಂಗ್ರಹಿಸಿ, ಫೇಸ್‌ಬುಕ್‌ ಸೇರಿದಂತೆ ಇತರರ ಜತೆ ಹಂಚಿಕೊಳ್ಳುವ ಮೂಲಕ ವಾಟ್ಸ್‌ಆಪ್‌ ಹಣ ಗಳಿಸುತ್ತಿದೆ ಎನ್ನಲಾಗುತ್ತಿದೆ.

ಇಲ್ಲಿ ಕೋರ್ಟ್‌ಗೆ ಹೋಗಲು ಸಾಧ್ಯವಿಲ್ಲ!!

ಇಲ್ಲಿ ಕೋರ್ಟ್‌ಗೆ ಹೋಗಲು ಸಾಧ್ಯವಿಲ್ಲ!!

ವಾಟ್ಸ್ಆಪ್ ಸೇವೆಗೆ, ಷರತ್ತುಗಳಿಗೆ ಸಂಬಂಧಿಸಿದ ಕಾನೂನಿನ ವ್ಯಾಜ್ಯಗಳಿದ್ದರೆ ನೀವು ಇಲ್ಲಿ ಕೋರ್ಟ್‌ಗೆ ಹೋಗಲು ಸಾಧ್ಯವಿಲ್ಲ. ನೀವು ಯಾವುದೇ ದೇಶದವರಾಗಿದ್ದರೂ ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದ ಜಿಲ್ಲಾ ನ್ಯಾಯಾಲಯ ಅಥವಾ ಸ್ಯಾನ್‌ ಮಾಟಿಯೊದ ರಾಜ್ಯ ನ್ಯಾಯಾಲಯದಲ್ಲಿಯೇ ಇತ್ಯರ್ಥಪಡಿಸಿಕೊಳ್ಳಬೇಕಿದೆ.

ಬಳಕೆದಾರರ ಒಪ್ಪಂದದಲ್ಲಿ ಏನಿದೆ?

ಬಳಕೆದಾರರ ಒಪ್ಪಂದದಲ್ಲಿ ಏನಿದೆ?

ವಾಟ್ಸ್‌ಆಪ್‌ ಬಳಸುವಾಗ, ವಾಟ್ಸ್ಆಪ್ ಬಳಸಿಕೊಂಡು ಅಪ್‌ಲೋಡ್‌ ಮಾಡುವ, ಸಲ್ಲಿಸುವ, ಸಂಗ್ರಹಿಸುವ, ಕಳುಹಿಸುವ ಅಥವಾ ಸ್ವೀಕರಿಸುವ ಸಂದೇಶ, ಮಾಹಿತಿಯನ್ನು ವಿಶ್ವದಾದ್ಯಂತ, , ಇನ್ನೊಬ್ಬರಿಗೆ ವರ್ಗಾಯಿಸಲು, ಪುನರ್‌ ಮುದ್ರಣ ಮಾಡಲು, ಹಂಚಿಕೊಳ್ಳಲು ಅನುಮತಿ ನೀಡಬೇಕು ಮತ್ತು ಈ ಒಪ್ಪಂದಕ್ಕೆ ಬದ್ಧನಾಗಿರಬೇಕು ಎಂದು ಹೇಳಿದೆ ಎಂದು ತಜ್ಞರು ಹೇಳಿದ್ದಾರೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ಮಾಹಿತಿಯ ಕಳ್ಳತನವೇ ಮೂಲ?!

ಮಾಹಿತಿಯ ಕಳ್ಳತನವೇ ಮೂಲ?!

ಆಧುನಿಕ ಡಿಜಿಟಲ್‌ ಲೋಕದಲ್ಲಿ ಉಚಿತವಾಗಿ ಸೇವೆಗಳು ಲಭ್ಯವಾಗಲು ಪ್ರತಿ ಬಳಕೆದಾರನ ಮಾಹಿತಿಯ ಕಳ್ಳತನವೇ ಮೂಲ. ಬಳಕೆದಾರರ ವೈಯಕ್ತಿಕ ಮಾಹಿತಿ ಸಂಗ್ರಹದಿಂದ ಹೆಚ್ಚಿನ ಲಾಭವಿದೆ. ನಿಮಗೆ ಯಾವಾಗ ಏನು ಬೇಕು ಎಂಬುದನ್ನು ನಿಮಗಿಂತ ಮೊದಲೇ ಸಂಬಂಧಿಸಿದ ಕಂಪೆನಿಗಳು ತಿಳಿದುಕೊಳ್ಳುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Best Mobiles in India

English summary
the Supreme Court asked Facebook and WhatsApp to reveal what information is being shared with third-parties.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X