ಜಿಯೋ ಮತ್ತು ಫೇಸ್‌ಬುಕ್‌ ದೋಸ್ತಿಯಿಂದ ಯಾರಿಗೆ ಸವಲತ್ತು?..ಯಾರಿಗೆ ಆಪತ್ತು?

|

ಸೋಷಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಹಾಗೂ ದೇಶದ ಟೆಲಿಕಾಂ ಕಿಂಗ್ ಜಿಯೋ ಇದೀಗ ದೋಸ್ತಿ ಆಗಿದ್ದು, ಇಂಟರ್ನೆಟ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಜಿಯೋ ಸಂಸ್ಥೆಯಲ್ಲಿ ಫೇಸ್‌ಬುಕ್ 43,574ಕೋಟಿ ಹೂಡಿಕೆ ಮಾಡಿದ್ದು, ಶೇ 9.9ರಷ್ಟು ಪಾಲುದಾರಿಕೆಯನ್ನು ತನ್ನದಾಗಿಸಿಕೊಂಡಿದೆ. ಫೇಸ್‌ಬುಕ್‌ನ ಈ ಹೂಡಿಕೆಯು ದೇಶದಲ್ಲಿಯೇ ಅತೀ ದೊಡ್ಡ ವಿದೇಶಿ ನೇರ ಬಂಡವಾಳ ಹೂಡಿಕೆ ಎನ್ನಲಾಗಿದೆ. ಹಾಗಾದ್ರೆ ಜಿಯೋ ಮತ್ತು ಫೇಸ್‌ಬುಕ್‌ ದೋಸ್ತಿಯಿಂದ ಏನೆಲ್ಲಯ ಅಚ್ಚರಿ ಬೆಳವಣಿಗೆಗಳು ನಡೆಯಲಿವೆ ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ.

ಫೇಸ್‌ಬುಕ್ ಜಿಯೋ

ಹೌದು, ಫೇಸ್‌ಬುಕ್ ಜಿಯೋ ಸಂಸ್ಥೆಯ ಜೊತೆಗೆ ಕೈಜೋಡಿಸಿದರ ಪರಿಣಾಮ ಜಿಯೋ ಸಂಸ್ಥೆಯು ಸಹ ಆರ್ಥಿಕವಾಗಿ ಮತ್ತಷ್ಟು ಗಟ್ಟಿಗೊಳ್ಳಲಿದೆ. ತನ್ನ ಜಿಯೋ ಮಾರ್ಟ್‌ ಪ್ಲಾಟ್‌ಫಾರ್ಮ್‌ ಅನ್ನು ಬಲಪಡಿಸಿಕೊಳ್ಳಲಿದೆ. ಹಾಗೆಯೇ ಈ ಎರಡು ಸಂಸ್ಥೆಗಳು ಜತೆಗೂಡಿ ದೇಶದ ಟೆಲಿಕಾಂ, ಇಂಟರ್ನೆಟ್ ವಲಯದಲ್ಲಿ ಹೊಸ ಕ್ರಾಂತಿ ಸೃಷ್ಠಿ ಮಾಡುವ ನಿರೀಕ್ಷೆಗಳು ಹೆಚ್ಚಾಗಿವೆ. ಹಾಗಾದರೆ ಜಿಯೋ ಮತ್ತು ಫೇಸ್‌ಬುಕ್ ಮೈತ್ರಿಯಿಂದ ಯಾರಿಗೆ ಸವಲತ್ತು, ಯಾರಿಗೆ ಆಪತ್ತು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಮೊಬೈಲ್ ಗೇಮಿಂಗ್

ಮೊಬೈಲ್ ಗೇಮಿಂಗ್

ಜಿಯೋದ ಅಗ್ಗದ ಡೇಟಾದಿಂದಾಗಿ ದೇಶದಲ್ಲಿ ಮೊಬೈಲ್ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಾಗೆಯೇ ಗೇಮ್‌ ಡೆವಲಪರ್‌ಗಳಿಗೆ ಅಧಿಕ ಅವಕಾಶ ಮಾಡಿಕೊಟ್ಟಿದೆ. ಇದೀಗ ಫೇಸ್‌ಬುಕ್‌ ಸಹ ಜಿಯೋ ಜೊತೆಯಾಗಿರುವುದರಿಂದ ಮೊಬೈಲ್ ಗೇಮಿಂಗ್ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಸಾಧ್ಯತೆಗಳಿವೆ ಎನ್ನಲಾಗಿದೆ. ಜಿಯೋ ಫೈಬರ್‌ನಲ್ಲಿ low-latency ಗೇಮ್‌ಗಳನ್ನು ಪರಿಚಯಿಸಲಿದೆ ಎನ್ನಲಾಗಿದೆ.

ವರ್ಚುವಲ್ ರಿಯಾಲಿಟಿ

ವರ್ಚುವಲ್ ರಿಯಾಲಿಟಿ

ವರ್ಚುವಲ್ ರಿಯಾಲಿಟಿ ಕ್ಷೇತ್ರದಲ್ಲಿಯೂ ಸಹ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ. ಈಗಾಗಲೆ ಜಿಯೋ ತನ್ನ ಮಿಶ್ರ-ರಿಯಾಲಿಟಿ ಪ್ಲಾಟ್‌ಫಾರ್ಮ್, ವರ್ಚುವಲ್ ಮತ್ತು ಆಗ್ಮೆಂಟೆಡ್ ರಿಯಾಲಿಟಿ (ಎಆರ್) ಅನುಭವಗಳನ್ನು ತನ್ನ ಬ್ರಾಡ್‌ಬ್ಯಾಂಡ್ ಸೇವೆಯೊಂದಿಗೆ ಒಟ್ಟುಗೂಡಿಸುತ್ತದೆ. ಈ ಪಾಲುದಾರಿಕೆಯನ್ನು ಪೋಸ್ಟ್ ಮಾಡಿ, ಮೌಲ್ಯದ ಪ್ರತಿಪಾದನೆಯನ್ನು ಸುಧಾರಿಸಲು ಇದು ಆಕ್ಯುಲಸ್ ಅನ್ನು ಒಟ್ಟುಗೂಡಿಸಬಹುದು.

ಆನ್‌ಲೈನ್‌ ಪೇಮೆಂಟ್‌

ಆನ್‌ಲೈನ್‌ ಪೇಮೆಂಟ್‌

ದೇಶದ ಆನ್‌ಲೈನ್‌ ಪೇಮೆಂಟ್‌ ವಲಯದಲ್ಲಿಯೂ ಜಿಯೋ-ಫೇಸ್‌ಬುಕ್ (ವಾಟ್ಸಪ್‌) ಮುಂಚೂಣಿ ಸಾಧಿಸುವ ಗುರಿಯಲ್ಲಿವೆ. ಈಗಾಗಲೆ ಜಿಯೋ, ಜಿಯೋ-ಮನಿ ಹೊಂದಿದ್ದರೆ, ಯುಎಸ್ನಲ್ಲಿ ಮೆಸೆಂಜರ್ ಮೂಲಕ ಪಾವತಿ ಮಾಡಲು ಫೇಸ್ಬುಕ್ ಜನರಿಗೆ ಅವಕಾಶ ನೀಡುತ್ತದೆ ಮತ್ತು ವಾಟ್ಸಾಪ್ ಈಗ ಭಾರತದಲ್ಲಿ ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್ ಆಗಿದೆ. ಜಿಯೋ ಜೊತೆ ಸೇರಿಕೊಂಡು ವಾಟ್ಸಪ್‌ ಪೇಮೆಂಟ್‌ ವ್ಯವಸ್ಥೆಯನ್ನು ಜನಪ್ರಿಯ ಮಾಡುವ ಸಧ್ಯತೆಗಳಿವೆ.

ವಿಡಿಯೊ ಸ್ಟ್ರೀಮಿಂಗ್

ವಿಡಿಯೊ ಸ್ಟ್ರೀಮಿಂಗ್

ರಿಲಯನ್ಸ್ ಜಿಯೋ ಮತ್ತು ಫೇಸ್‌ಬುಕ್ ತಮ್ಮದೇ ಆದ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿವೆ. ಫೆಡರೇಶನ್ ಆಫ್ ಇಂಟರ್ನ್ಯಾಷನಲ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ಮತ್ತು ಇವೈ ವರದಿಯ ಪ್ರಕಾರ, ಭಾರತದ ವಿಡಿಯೋ ಸ್ಟ್ರೀಮಿಂಗ್ ಮಾರುಕಟ್ಟೆ 2019 ರಲ್ಲಿ 378 ಮಿಲಿಯನ್‌ನಿಂದ 2022 ರ ವೇಳೆಗೆ 488 ಮಿಲಿಯನ್ ವೀಕ್ಷಕರಿಗೆ ಬೆಳೆಯುವ ನಿರೀಕ್ಷೆಯಿದೆ. ಈ ದೋಸ್ತಿಯಿಂದ ಫೇಸ್‌ಬುಕ್ ಮತ್ತು ಜಿಯೋ ತಮ್ಮ ಪಾಲುದಾರಿಕೆಯನ್ನು ಲಾಭದಾಯಕವಾಗಿ ಬಳಸಿಕೊಳ್ಳಬಹುದು.

ಜಿಯೋ-ಫೇಸ್‌ಬುಕ್‌ ದೋಸ್ತಿಯಿಂದ ಆಪತ್ತು ಯಾರಿಗೆ?

ಜಿಯೋ-ಫೇಸ್‌ಬುಕ್‌ ದೋಸ್ತಿಯಿಂದ ಆಪತ್ತು ಯಾರಿಗೆ?

ಜಿಯೋ-ಫೇಸ್‌ಬುಕ್‌ ದೋಸ್ತಿಯು ದೇಶದ ಟೆಲಿಕಾಂ, ಇಂಟರ್ನೆಟ್, ಆನ್‌ಲೈನ್‌ ಪೇಮೆಂಟ್, ಗೇಮಿಂಗ್ ಸೇರಿದಂತೆ ಅನೇಕ ಮಹತ್ತರ ಬೆಳವಣಿಗೆಗೆ ಸಾಕ್ಷಿಯಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಇ-ಕಾಮರ್ಸ್‌ ವಲಯದಲ್ಲಿಯೂ ಬದಲಾವಣೆ ಸಾಧ್ಯತೆಗಳಿವೆ. ಜಿಯೋ ಮಾರ್ಟ್‌ ಇ-ಕಾಮರ್ಸ್‌ ಸೇವೆಯಲ್ಲಿ ಮತ್ತಷ್ಟು ಹಿಡಿತ ಸಾಧಿಸಲಿದೆ. ಹೀಗಾಗಿ ದೈತ್ಯ ಇ-ಕಾಮರ್ಸ್ ತಾಣಗಳಾದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ಗಳಿಗೆ ಭಾರಿ ಹಿನ್ನಡೆ ಆಗಬಹುದು ಎನ್ನಲಾಗಿದೆ. ಹಾಗೆಯೇ ಜಿಯೋ-ಫೇಸ್‌ಬುಕ್‌ಗಳು ಡಿಜಿಟಲ್‌ ಪೇಮೆಂಟ್ ವಲಯಕ್ಕೂ ಕಾಲಿಡಲಿದ್ದು, ಗೂಗಲ್‌ ಪೇ, ಪೇಟಿಎಮ್, ಫೋನ್‌ಪೇಗಳಿಗೂ ಪೈಪೋಟಿ ನೀಡುವ ಸಾಧ್ಯತೆಗಳಿವೆ.

Best Mobiles in India

English summary
Jio's efforts to bring low-latency gaming on its fiber network.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X