ಫೇಸ್‌ಬುಕ್‌ನಲ್ಲಿ ಮೆಸೆಂಜರ್‌ನಲ್ಲೂ ಇನ್ನು ವೀಡಿಯೋ ಮೆಸೇಜಿಂಗ್

Written By:

ಹೆಚ್ಚು ಜನಪ್ರಿಯವಾದ ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್ ಆದ ಫೇಸ್‌ಬುಕ್ ಹೆಚ್ಚಿನ ಹೊಸ ವೈಶಿಷ್ಟ್ಯಗಳನ್ನು ತನ್ನ ಪ್ಲಾಟ್‌ಫಾರ್ಮ್‌ಗೆ ತರುತ್ತಿದ್ದು ತನ್ನ ಮೆಸೇಜಿಂಗ್ ಅಪ್ಲಿಕೇಶನ್‌ಗೂ ಇದು ಮಾರ್ಪಡುಗಳನ್ನು ಮಾಡುತ್ತಿದೆ. ತನ್ನ ಸ್ವತಂತ್ರ ಮೆಸೇಜಿಂಗ್ ಅಪ್ಲಿಕೇಶನ್ ಆದ ಫೇಸ್‌ಬುಕ್ ಮೆಸೆಂಜರ್‌ಗೆ ತ್ವರಿತ ವೀಡಿಯೋ ಮೆಸೇಜಿಂಗ್ ಆಯ್ಕೆಯನ್ನು ಇದು ಸೇರಿಸಿದ್ದು ಅಪ್ಲಿಕೇಶನ್‌ನಲ್ಲಿ 15 ಸೆಕೆಂಡಿನ ವೀಡಿಯೋಗಳನ್ನು ಬಳಕೆದಾರರು ಕಳುಹಿಸಬಹುದು.

ಆದರೆ ಒಂದು ಬೇಸರದ ಸಂಗತಿ ಎಂದರೆ ಈ ಅಪ್ಲಿಕೇಶನ್ ಕೇವಲ ಐಓಎಸ್ ಡಿವೈಸ್‌ಗಳಿಗೆ ಮಾತ್ರ ಲಭ್ಯವಿದ್ದು ಆಂಡ್ರಾಯ್ಡ್ ಫೋನ್‌ಗಳಲ್ಲೂ ಇದು ಕೂಡಲೇ ಲಭ್ಯವಾಗಲಿದೆ.

ಇನ್ನು ಮೆಸೆಂಜರ್‌ನಲ್ಲೂ ವೀಡಿಯೋ ಮೆಸೇಜಿಂಗ್ ಮಾಡಿ

ಬಳಕೆದಾರರು ವೀಡಿಯೋಗಳನ್ನು ಕಳುಹಿಸಲು ಟ್ಯಾಪ್ ಮಾಡಿ ಹೋಲ್ಡ್ ಮಾಡಬೇಕಾಗಿದ್ದು ಸ್ನ್ಯಾಪ್‌ಚಾಟ್ ಹಾಗೂ ವೈನ್‌ನಲ್ಲಿ ಇರುವಂತೆಯೇ ಇದರಲ್ಲಿ ವೈಶಿಷ್ಟ್ಯಗಳನ್ನು ನೀವು ಪಡೆದುಕೊಳ್ಳಬಹುದು. ಐಓಎಸ್ ಕ್ಯಾಮೆರಾ ರೋಲ್‌ನಲ್ಲಿ ಸಂಗ್ರಹಿಸಲಾದ ಪೂರ್ವ ರೆಕಾರ್ಡ್ ಮಾಡಿದ ವೀಡಿಯೋಗಳು ಮತ್ತು ಅಪ್ಲಿಕೇಶನ್ ಚಿತ್ರಗಳನ್ನು ಕಳುಹಿಸುವ ಆಯ್ಕೆಯನ್ನು ಫೇಸ್‌ಬುಕ್ ಮೆಸೆಂಜರ್ ಹೊಂದಿದೆ.

ಐಓಎಸ್ ಮತ್ತು ಆಂಡ್ರಾಯ್ಡ್‌ಗಾಗಿ ಫೇಸ್‌ಬುಕ್ ಮೆಸೆಂಜರ್ ಆಪ್‌ನೊಂದಿಗೇನೇ ಉತ್ತಮವಾದ ಫೋಟೋ ಶೇರಿಂಗ್ ಅನ್ನು ಹೊಂದಿದೆ. ಈ ಎರಡೂ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತವಾದ ಧ್ವನಿ ಕರೆಯನ್ನು ಇದು ಹೊಂದಲಿದೆ.

ಫೇಸ್‌ಬುಕ್ ತನ್ನ ಜನಪ್ರಿಯ ಮೆಸೆಂಜರ್ ಅಪ್ಲಿಕೇಶನ್ ಅನ್ನು ನವೀಕರಿಸಿದ್ದು 15 - ಸೆಕೆಂಡಿನ ವೀಡಿಯೋಗಳು "ಬಿಗ್ ಲೈಕ್ಸ್", ಅನ್ನು ಸೇರಿಸಿರುವುದು ಬಳಕೆದಾರರಿಗೆ ತಮ್ಮ ಸ್ನೇಹಿತರೊಂದಿಗೆ ಇಂಟರಾಕ್ಟ್ ಮಾಡಲು ಹೆಚ್ಚು ಸಹಾಯಕವಾಗಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot