ಡೆಸ್ಕ್‌ಟಾಪ್‌ನಲ್ಲಿಯೂ ಫೇಸ್‌ಬುಕ್‌ ಮೆಸೆಂಜರ್‌ ವಿಡಿಯೊ ಕಾಲಿಂಗ್ ಸೇವೆ ಶುರು!

|

ಸಾಮಾಜಿಕ ಜಾಲತಾಣಗಳ ದೊಡ್ಡಣ್ಣ ಎಂದೇ ಬಿಂಬಿತವಾಗಿರುವ ಫೇಸ್‌ಬುಕ್, ವಾಟ್ಸಪ್, ಮೆಸೆಂಜರ್, ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಅಂಗ ಸಂಸ್ಥೆಗಳನ್ನು ಒಳಗೊಂಡಿದೆ. ಎಲ್ಲವು ಟ್ರೆಂಡಿಂಗ್‌ನಲ್ಲಿದ್ದು, ಅಧಿಕ ಬಳಕೆದಾರರನ್ನು ಹೊಂದಿವೆ. ಅವುಗಳಲ್ಲಿ ಮೆಸೆಂಜರ್ ಆಪ್ ಇತ್ತೀಚಿಗೆ ಸಾಕಷ್ಟು ಅಪ್‌ಡೇಟ್ ಕಂಡಿದ್ದು, ನೂತನ ಫೀಚರ್ಸ್‌ಗಳು ಸೇರಿಕೊಂಡಿವೆ. ಆ ಸಾಲಿಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಇದೀಗ ಮತ್ತೊಂದು ವಿಶೇಷ ಸೇವೆ ಪರಿಚಯಿಸಿದೆ.

ಫೇಸ್‌ಬುಕ್‌ ಮೆಸೆಂಜರ್

ಹೌದು, ಫೇಸ್‌ಬುಕ್‌ ಮೆಸೆಂಜರ್ ಆಪ್ ಸ್ಮಾರ್ಟ್‌ಫೋನ್‌ ಬಳಕೆಗೆ ಈಗಾಗಲೇ ವಿಡಿಯೊ ಕಾಲಿಂಗ್ ಮತ್ತು ವಾಯಿಸ್‌ ಕಾಲಿಂಗ್ ಸೌಲಭ್ಯಗಳನ್ನು ಪರಿಚಯಿಸಿದೆ. ಆದ್ರೆ ಇದೀಗ ವಿಡಿಯೊ ಚಾಟಿಂಗ್ ಸೌಲಭ್ಯವನ್ನು ಡೆಸ್ಕ್‌ಟಾಪ್‌ ಆವೃತ್ತಿಗೂ ರೋಲ್‌ಔಟ್‌ ಮಾಡಿದೆ. ಹೀಗಾಗಿ ಇನ್ನೂ ಬಳಕೆದಾರರು ಸ್ಮಾರ್ಟ್‌ಫೋನಿನಲ್ಲಿ ಅಷ್ಟೇ ಅಲ್ಲದೇ ಡೆಸ್ಕ್‌ಟಾಪ್ ಸ್ಕ್ರೀನ್ ಹಾಗೂ ಲ್ಯಾಪ್‌ಟಾಪ್‌ನಲ್ಲಿಯೂ ಸಹ ಮೆಸೆಂಜರ್ ವಿಡಿಯೊ ಕಾಲಿಂಗ್ ಬಳಕೆ ಮಾಡಬಹುದಾಗಿದೆ.

ಕೊರೊನಾ ಎಫೆಕ್ಟ್‌

ಸದ್ಯ ಕೊರೊನಾ ಎಫೆಕ್ಟ್‌ನಿಂದಾಗಿ ದೇಶದಲ್ಲಿ ಲಾಕ್‌ಡೌನ್‌ ಜಾರಿಯಿದೆ. ಹೀಗಾಗಿ ಎಲ್ಲರೂ ಮನೆಯಲ್ಲಿಯೇ ಇರುವುದರಿಂದ ಹಾಗೂ ಅನೇಕ ಸಂಸ್ಥೆಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ವಿಡಿಯೊ ಕಾನ್ಫರೆನ್ಸ್‌ಗಾಗಿ ವಿಡಿಯೊ ಕಾಲಿಂಗ್ ಆಪ್‌ಗಳ ಬಳಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಫೇಸ್‌ಬುಕ್‌ ಮೆಸೆಂಜರ್‌ ಡೆಸ್ಕ್‌ಟಾಪ್‌ನಲ್ಲಿಯೂ ವಿಡಿಯೊ ಕಾಲಿಂಗ್ ಸೌಲಭ್ಯವನ್ನು ಪರಿಚಯಿಸಿದೆ ಎನ್ನಲಾಗಿದೆ.

ವಿಡಿಯೊ ಕಾಲಿಂಗ್

ಅಂದಹಾಗೆ ಫೇಸ್‌ಬುಕ್‌ ಮೆಸೆಂಜರ್‌ ಡೆಸ್ಕ್‌ಟಾಪ್‌ ವಿಡಿಯೊ ಕಾಲಿಂಗ್ ಫೀಚರ್ ಮೈಕ್ರೋಸಾಫ್ಟ್‌ ವಿಂಡೊಸ್‌ ಹಾಗೂ ಆಪಲ್‌ನ ಮ್ಯಾಕ್‌ ಓಎಸ್‌ ಡೆಸ್ಕ್‌ಟಾಪ್‌ಗಳಲ್ಲಿಯೂ ಲಭ್ಯವಾಗಲಿದೆ ಎಂದು ಸಂಸ್ಥೆಯು ಹೇಳಿದೆ.

TechCrunch- ಟೆಕ್‌ಕ್ರಂಚ್

ಈಗಾಗಲೇ ಜನಪ್ರಿಯ ಸ್ಟೇಜ್‌ನಲ್ಲಿರುವ ಫೇಸ್‌ಬುಕ್ ಮೆಸೆಂಜರ್ ಸದ್ಯದಲ್ಲಿಯೇ ತನ್ನ ಡಿಸೈನ್‌ನಲ್ಲಿ ದೊಡ್ಡ ಬದಲಾವಣೆ ಮಾಡಲಿದ್ದು, ಸಂಪೂರ್ಣ ನೂತನ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಎಂದು TechCrunch- ಟೆಕ್‌ಕ್ರಂಚ್ ವರದಿ ಮಾಡಿದೆ. ಫೇಸ್‌ಬುಕ್ ಮೆಸೆಂಜರ್ ರೀಡಿಸೈನ್‌ನಲ್ಲಿ ಮುಖ್ಯವಾಗಿ ಸ್ಪೀಡ್ ಮತ್ತು ಸಿಂಪ್ಲಿಸಿಟಿ ಧ್ಯೇಯದ (speed ಮತ್ತು simplicity) ಆಧಾರದ ಮೇಲೆ ಬದಲಾವಣೆ ನಡೆಸಲಿದೆ ಎಂದು ಹೇಳಲಾಗಿದೆ.

ಪೀಪಲ್ ಟ್ಯಾಬ್

ಫೇಸ್‌ಬುಕ್ ಮೆಸೆಂಜರ್ ಪೀಪಲ್ ಟ್ಯಾಬ್ ನಲ್ಲಿ ಬದಲಾವಣೆ ಆಗಲಿದ್ದು, ಪೀಪಲ್ ಸ್ಟೋರಿಸ್ ಆಯ್ಕೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಹೊಸ ಬದಲಾವಣೆಯು ಸ್ನ್ಯಾಪ್‌ಚಾಟ್‌ನಲ್ಲಿನ ರಚನೆಯನ್ನು ಹೋಲುವಂತಿರಲಿದೆ ಎಂದು ಹೇಳಲಾಗಿದೆ. ಫೇಸ್‌ಬುಕ್‌ನಲ್ಲಿನ ಸ್ನೇಹಿತರು ಅಪ್‌ಲೋಡ್ ಮಾಡುವ ಸ್ಟೋರೀಸ್ ಗಳು ಮೆಸೆಂಜರ್ ನಲ್ಲಿ ಪೀಪಲ್ ವಿಭಾಗದಲ್ಲಿ ಸ್ವೇರ್ ರಚನೆಯಲ್ಲಿ ಕಾಣಿಸಿಕೊಳ್ಳಲಿವೆ ಎಂದು ನಿರೀಕ್ಷಿಸಲಾಗಿದೆ.

ಮೆಸೆಂಜರ್ ಕಿಡ್ಸ್‌

ಹಾಗೆಯೇ ಫೇಸ್‌ಬುಕ್ ತನ್ನ ಫೇಸ್‌ಬುಕ್ ಮೆಸೆಂಜರ್ ಕಿಡ್ಸ್‌ ಅಪ್ಲಿಕೇಶನ್‌ನಲ್ಲಿಯೂ ಇತ್ತೀಚಿಗೆ ಹೊಸ ಬದಲಾವಣೆ ತಂದಿದೆ. ಆಪ್‌ನಲ್ಲಿ ಹೊಸದಾಗಿ ಪೇರೆಂಟ್ಸ್‌ ಡ್ಯಾಶ್‌ಬೋರ್ಡ್ ಎಂಬ ಪ್ರೈವೆಸಿ ಫೀಚರ್ಸ್‌ ಅನ್ನು ಸೇರಿಸಿದೆ. ಈ ಆಯ್ಕೆ ಮೂಲಕ ಪಾಲಕರು ಮಕ್ಕಳ ಪೇಸ್‌ಬುಕ್ ಮೆಸೆಂಜರ್ ಆಕ್ಟಿವಿಟಿ ಮೇಲೆ ನಿಗಾ ಇಡಬಹುದಾಗಿದೆ. ಅಂದಹಾಗೆ 2017ರಲ್ಲಿ ಫೇಸ್‌ಬುಕ್ ಈ ಫೇಸ್‌ಬುಕ್ ಮೆಸೆಂಜರ್ ಕಿಡ್ಸ್‌ ಆಪ್‌ ಅನ್ನು ಬಿಡುಗಡೆ ಮಾಡಿತ್ತು.

Best Mobiles in India

English summary
Facebook rolled out the desktop version of its Messenger app for Apple’s Mac and Microsoft’s Windows to make video chats available on computer screens.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X