ಫೇಸ್‌ಬುಕ್‌ ಸೇರಿದ ಹೊಸ ಗ್ರೂಪ್‌ ಎಪೆಕ್ಟ್‌ ಫೀಚರ್ಸ್‌! ವಿಶೇಷತೆ ಏನು?

|

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಒಮದಿಲ್ಲೊಂದು ವಿಶೇಷ ಫೀಚರ್ಸ್‌ಗಳನ್ನು ಪರಿಚಿಸುತ್ತಲೇ ಬಂದಿದೆ. ತನ್ನ ಮೆಸೆಂಜರ್‌ ಅಪ್ಲಿಕೇಶನ್‌ನಲ್ಲಿಯೂ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ಅನುಕೂಲ ಮಾಡಿಕೊಟ್ಟಿದೆ. ಸದ್ಯ ಇದೀಗ ತನ್ನ ಮೆಸೆಂಜರ್‌ ಅಪ್ಲಿಕೇಶನ್‌ನಲ್ಲಿ ವೀಡಿಯೊ ಕಾಲ್‌ ಮತ್ತು ರೂಮ್ಸ್‌ಗಳಲ್ಲಿ ಗ್ರೂಪ್‌ ಎಫೆಕ್ಟ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಗ್ರೂಪ್‌ ಎಫೆಕ್ಟ್‌ ಫೀಚರ್ಸ್‌ ಹೊಸ AR ಫಿಲ್ಟರ್‌ಗಳನ್ನು ಮತ್ತು ಎಫೆಕ್ಟ್‌ ಅನ್ನು ನೀಡಲಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಗ್ರೂಪ್‌ ಎಫೆಕ್ಟ್‌ ಫೀಚರ್ಸ್‌ ಪರಿಚಯಿಸಿದೆ. ಇದರಿಂದ ನೀವು ಮೆಸೆಂಜರ್‌ ರೂಮ್‌ ಮತ್ತು ವೀಡಿಯೋ ಕಾಲ್‌ನಲ್ಲಿ ಸಾಕಷ್ಟು ಎಫೆಕ್ಟ್‌ಗಳನ್ನು ಬಳಸಬಹುದಾಗಿದೆ. ಜೊತೆಗೆ ಈ ಗ್ರೂಪ್‌ ಎಫೆಕ್ಟ್‌ ಫೀಚರ್ಸ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಕೂಡ ಪರಿಚಯಿಸುವುದಕ್ಕೆ ಫೇಸ್‌ಬುಕ್‌ ಚಿಂತನೆ ನಡೆಸಿದೆ ಎನ್ನಲಾಗಿದೆ. ಹಾಗಾದ್ರೆ ಫೇಸ್‌ಬುಕ್‌ ಹೊಸದಾಗಿ ಪರಿಚಯಿಸಿರುವ ಗ್ರೂಪ್‌ ಎಫೆಕ್ಟ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೆಸೆಂಜರ್‌

ಫೇಸ್‌ಬುಕ್‌ ಮೆಸೆಂಜರ್‌ ಸೇರಿರುವ ಹೊಸ ಗ್ರೂಪ್‌ ಎಫೆಕ್ಟ್‌ ಫೀಚರ್ಸ್‌ ಅನ್ನು ವೀಡಿಯೊ ಕಾಲ್‌ನಲ್ಲಿ ಎಲ್ಲರಿಗೂ ಅನ್ವಯಿಸಬಹುದಾಗಿದೆ. ಗ್ರೂಪ್ ಎಫೆಕ್ಟ್‌ಗಳು ಎಲ್ಲರಿಗೂ ವೀಡಿಯೊ ಕಾಲ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.ಈ ಎಫೆಕ್ಟ್‌ ಫೀಚರ್ಸ್‌ನಲ್ಲಿ ಮಲ್ಟಿಪ್ಲೇಯರ್ ಗೇಮಿಂಗ್ ಅನುಭವಗಳನ್ನು ಸಹ ನೀಡಲಾಗಿದೆ. ಇದಕ್ಕಾಗಿ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ 70 ಕ್ಕೂ ಹೆಚ್ಚು ಗ್ರೂಪ್‌ ಎಫೆಕ್ಟ್‌ಗಳನ್ನು ಸೇರಿಸಲಾಗುತ್ತಿದೆ. ಸದ್ಯ ಈ ಹೊಸ ಫೀಚರ್ಸ್‌ ಫೇಸ್‌ಬುಕ್ ಮೆಸೆಂಜರ್ ವಿಡಿಯೋ ಕಾಲ್‌ ಮತ್ತು ಮೆಸೆಂಜರ್ ರೂಮ್‌ಗಳಲ್ಲಿ ಬಳಸುವುದಕ್ಕೆ ವಿಶ್ವದಾದ್ಯಂತ ಲಭ್ಯವಾಗಲಿದೆ.

ಮೆಸೆಂಜರ್

ಇನ್ನು ಈ ಹೊಸ ಗ್ರೂಪ್ ಎಫೆಕ್ಟ್ ಫೀಚರ್ ಅನ್ನು ಎಲ್ಲಾ ಬಳಕೆದಾರರು ಸ್ವೀಕರಿಸಲು ಸ್ವಲ್ಪ ಸಮಯ ಬೇಕಾಗಬಹುದು. ಈ ಫೀಚರ್ಸ್ ಅನ್ನು ನೀವು ಕೂಡ ಬಳಸುವುದಕ್ಕೆ ಲಭ್ಯವಿದೆಯೆ ಎಂದು ಈಗಲೇ ಪರೀಕ್ಷಿಸಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಫೇಸ್‌ಬುಕ್ ಮೆಸೆಂಜರ್ ಆಪ್‌ಗೆ ಹೋಗಿ ಮತ್ತು ವೀಡಿಯೊ ಕಾಲ್‌ ಪ್ರಾರಂಭಿಸಿ ಅಥವಾ ರೂಮ್ಸ್‌ ಕ್ರಿಯೆಟ್‌ ಮಾಡಿ, ರೂಮ್ಸ್‌ ಅನ್ನು ಶುರುಮಾಡಿದ ನಂತರ ನಗು ಮುಖದ ಮೇಲೆ ಕ್ಲಿಕ್ ಮಾಡಿ ಮತ್ತು ಎಫೆಕ್ಟ್‌ಗಳ ಟ್ರೇ ತೆರೆಯಬೇಕಾಗುತ್ತದೆ. ಇದರಲ್ಲಿ ಗ್ರೂಪ್ ಎಫೆಕ್ಟ್ಸ್ ಆಯ್ಕೆಯನ್ನು ಪರಿಶೀಲಿಸಿದರೆ ಹೊಸ ಫೀಚರ್ಸ್‌ನಲ್ಲಿ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ನೋಡಬಹುದಾಗಿದೆ.

ಫೇಸ್‌ಬುಕ್

ಫೇಸ್‌ಬುಕ್ ಮೆಸೆಂಜರ್ ನಲ್ಲಿ ಹೊಸ ಗ್ರೂಪ್‌ ಎಫೆಕ್ಟ್‌ ಮೂಲಕ ಬಳಕೆದಾರರಿಗೆ 70 ಕ್ಕೂ ಹೆಚ್ಚು ಗ್ರೂಪ್ ಎಫೆಕ್ಟ್‌ಗಳನ್ನು ಪರಿಚಯಿಸಿದೆ. ಈ ಎಫೆಕ್ಟ್‌ಗಳನ್ನು ಲೈಬ್ರರಿಯಿಂದ ನೀವು ನಿಮ್ಮ ಆಯ್ಕೆಗೆ ಬೇಕಾದಂತೆ ಆರಿಸಿಕೊಳ್ಳಬಹುದಾಗಿದೆ. ಫೇಸ್‌ಬುಕ್‌ ಸ್ಟೋರಿಗಳು ಮತ್ತು ರೀಲ್‌ಗಳನ್ನು ರಚಿಸಲು ಫೇಸ್‌ಬುಕ್ ಈಗಾಗಲೇ AR ಎಫೆಕ್ಟ್‌ಗಳನ್ನು ನೀಡುತ್ತಿದೆ. ಈಗ ವೀಡಿಯೊ ಕಾಲ್‌ ಮತ್ತು ರೂಮ್ಸ್‌ಗಳಲ್ಲಿ ಈ ಸಾಮರ್ಥ್ಯಗಳನ್ನು ಸೇರಿಸಿದೆ. ಇನ್ನು ಈ ಹೊಸ ಗ್ರೂಪ್ ಎಫೆಕ್ಟ್‌ಗಳು ಹೊಸ ಬ್ಲೋ ದಿ ಡಾಂಡೆಲಿಯನ್ ಎಫೆಕ್ಟ್ ಅನ್ನು ಒಳಗೊಂಡಿದ್ದು ರಾಸ್ ವೇಕ್‌ಫೀಲ್ಡ್ ವಿನ್ಯಾಸಗೊಳಿಸಿದ್ದಾರೆ ಎನ್ನಲಾಗಿದೆ.

ಫೇಸ್‌ಬುಕ್

ಇತ್ತೀಚೆಗೆ, ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್ ಕ್ರಾಸ್-ಆಪ್ ಗ್ರೂಪ್ ಕಮ್ಯುನಿಕೇಶನ್ ಅನ್ನು ಪರಿಚಯಿಸಿದೆ. ಜೊತೆಗೆ ಹೊಸ ಗ್ರೂಪ್ ಟೈಪಿಂಗ್ ಇಂಡಿಕೇಟರ್‌ಗಳು ಮತ್ತು ಇನ್‌ಸ್ಟಾಗ್ರಾಮ್ ಡಿಎಮ್‌ಗಳಲ್ಲಿ ಹೊಸ ಫೀಚರ್‌ಗಳನ್ನು ಪಡೆದುಕೊಂಡಿದೆ. ಕ್ರಾಸ್-ಆಪ್ ಗ್ರೂಪ್ ಚಾಟ್ ಫೀಚರ್ಸ್‌ ಮೂಲಕ ಜನರು ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್ ಸಂಪರ್ಕಗಳ ನಡುವೆ ಗ್ರೂಪ್‌ ಚಾಟ್‌ಗಳನ್ನು ಶುರುಮಾಡಲು ಅವಕಾಶ ನೀಡಲಿದೆ.

ಫೇಸ್‌ಬುಕ್

ಇನ್ನು ಕಳೆದ ಎರಡು ದಿನಗಳಿಂದ ಫೇಸ್‌ಬುಕ್​ ತನ್ನ ಹೆಸರನ್ನು ಬದಲಾಯಿಸಲಿದೆ ಎಂದು ಹೇಳಲಾಗ್ತಿದೆ. ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಗರ್ ಬರ್ಗ್ ಇದೇ ಅಕ್ಟೋಬರ್ 28 ರಂದು ಕಂಪನಿಯ ವಾರ್ಷಿಕ ಕನೆಕ್ಟ್ ಕಾನ್ಫರೆನ್ಸ್‌ನಲ್ಲಿ ಹೆಸರು ಬದಲಾವಣೆಯ ಬಗ್ಗೆ ಮಾತನಾಡಲು ಯೋಜಿಸಿದ್ದಾರೆ. ಅದಾಗ್ಯೂ ಫೇಸ್‌ಬುಕ್ ಹೆಸರು ಬದಲಿಸುವ ಕಾರ್ಯ ಬಹುಬೇಗನೆ ಅನಾವರಣ ಆಗಬಹುದು ಎಂದು ವರ್ಜ್ ತನ್ನ ವರದಿಯಲ್ಲಿ ತಿಳಿಸಿದೆ.ಹೆಸರು ಬದಲಾದರೂ ಕೂಡ ಫೇಸ್‌ಬುಕ್ ಆಪ್ ಮತ್ತು ಸೇವೆಯು ತಮ್ಮ ಬ್ರ್ಯಾಂಡಿಂಗ್‌ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನಲಾಗಿದೆ. ರೀ ಬ್ರ್ಯಾಂಡ್ ಫೇಸ್‌ಬುಕ್‌ನ ಸಾಮಾಜಿಕ ಮಾಧ್ಯಮ ಅಪ್ಲಿಕೇಷನ್ ಅನ್ನು ಪೋಷಕ ಕಂಪೆನಿಯ ಅಡಿಯಲ್ಲಿರುವ ಅನೇಕ ಉತ್ಪನ್ನಗಳಲ್ಲಿ ಒಂದಾಗಿ ಇರಿಸುತ್ತದೆ. ಇದು ಇನ್‌ಸ್ಟಾಗ್ರಾಂ, ಓಕ್ಯುಲಸ್, ವಾಟ್ಸಾಪ್ ಸೇರಿದಂತೆ ಸಂಸ್ಥೆಯ ಇತರೆ ಸೇವೆಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

Best Mobiles in India

English summary
Facebook Messenger Gets AR Group Effect For Rooms And Video Calls.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X