ಸದ್ಯದಲ್ಲಿಯೇ 'ಫೇಸ್‌ಬುಕ್‌ ಮೆಸೆಂಜರ್‌'ನಲ್ಲಿ ಭಾರಿ ಬದಲಾವಣೆ.!

|

ಸಾಮಾಜಿಕ ಜಾಲತಾಣಗಳ ದೊಡ್ಡಣ್ಣ ಎಂದೇ ಬಿಂಬಿತವಾಗಿರುವ ಫೇಸ್‌ಬುಕ್ ಇವತ್ತೀಗೂ ಟ್ರೆಂಡಿಂಗ್‌ನಲ್ಲಿದೆ. ಹಾಗೆಯೇ ಫೇಸ್‌ಬುಕ್‌ನ ಅಂಗ ಸಂಸ್ಥೆಗಳಾದ ಫೇಸ್‌ಬುಕ್ ಮೆಸೆಂಜರ್‌ ಇನ್‌ಸ್ಟಾಗ್ರಾಂ, ವಾಟ್ಸಪ್ ಗ್ರಾಹಕರನ್ನು ಮೋಡಿ ಮಾಡಿವೆ. ಆದರೆ ಫೇಸ್‌ಬುಕ್ ಇದೀಗ ಮಹತ್ತರ ಹೆಜ್ಜೆ ಇಡುತ್ತಿದ್ದು, ತನ್ನ ಜನಪ್ರಿಯ ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ ಭಾರಿ ಬದಲಾವಣೆ ಮಾಡಲು ಮುಂದಾಗಿದೆ.

ಫೇಸ್‌ಬುಕ್ ಮೆಸೆಂಜರ್

ಹೌದು, ಫೇಸ್‌ಬುಕ್ ಮೆಸೆಂಜರ್ ಮುಂದಿನ ಈ ತಿಂಗಳ ಅಂತ್ಯದೊಳಗೆ ಡಿಸೈನ್‌ನಲ್ಲಿ ದೊಡ್ಡ ಬದಲಾವಣೆ ಮಾಡಲಿದ್ದು, ಸಂಪೂರ್ಣ ನೂತನ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಎಂದು TechCrunch- ಟೆಕ್‌ಕ್ರಂಚ್ ವರದಿ ಮಾಡಿದೆ. ಫೇಸ್‌ಬುಕ್ ಮೆಸೆಂಜರ್ ರೀಡಿಸೈನ್‌ನಲ್ಲಿ ಮುಖ್ಯವಾಗಿ ಸ್ಪೀಡ್ ಮತ್ತು ಸಿಂಪ್ಲಿಸಿಟಿ ಧ್ಯೇಯದ (speed ಮತ್ತು simplicity) ಆಧಾರದ ಮೇಲೆ ಬದಲಾವಣೆ ನಡೆಸಲಿದೆ ಎಂದು ಹೇಳಲಾಗಿದೆ.

ಪೀಪಲ್ ಟ್ಯಾಬ್

ಫೇಸ್‌ಬುಕ್ ಮೆಸೆಂಜರ್ ಪೀಪಲ್ ಟ್ಯಾಬ್ ನಲ್ಲಿ ಬದಲಾವಣೆ ಆಗಲಿದ್ದು, ಪೀಪಲ್ ಸ್ಟೋರಿಸ್ ಆಯ್ಕೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಹೊಸ ಬದಲಾವಣೆಯು ಸ್ನ್ಯಾಪ್‌ಚಾಟ್‌ನಲ್ಲಿನ ರಚನೆಯನ್ನು ಹೋಲುವಂತಿರಲಿದೆ ಎಂದು ಹೇಳಲಾಗಿದೆ. ಫೇಸ್‌ಬುಕ್‌ನಲ್ಲಿನ ಸ್ನೇಹಿತರು ಅಪ್‌ಲೋಡ್ ಮಾಡುವ ಸ್ಟೋರೀಸ್ ಗಳು ಮೆಸೆಂಜರ್ ನಲ್ಲಿ ಪೀಪಲ್ ವಿಭಾಗದಲ್ಲಿ ಸ್ವೇರ್ ರಚನೆಯಲ್ಲಿ ಕಾಣಿಸಿಕೊಳ್ಳಲಿವೆ ಎಂದು ನಿರೀಕ್ಷಿಸಲಾಗಿದೆ.

ಸ್ಟೋರೀಸ್‌ಗಳು

ಪೀಪಲ್ ವಿಭಾಗದಲ್ಲಿ ದೊಡ್ಡ ಚೌಕಾಕಾರದ ಡಿಸೈನ್ ಕಾಣಿಸಲಿದ್ದು, ಸ್ನೇಹಿತರು ಫೇಸ್‌ಬುಕ್‌ಗೆ ಹೊಸದಾಗಿ ಹಾಕುವ ಸ್ಟೋರೀಸ್‌ಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ ಎನ್ನಲಾಗಿದೆ. ಫೇಸ್‌ಬುಕ್‌ನಲ್ಲಿ ಆಕ್ಟಿವ್ ಇರುವ ಮತ್ತು ಹೆಚ್ಚಾಗಿ ಚಾಟ್ ಮಾಡುವ ಸ್ನೇಹಿತರ ಸ್ಟೋರಿಸ್ ಮೊದಲು ಕಾಣಿಸುವಂತೆ ವ್ಯವಸ್ಥಿತವಾಗಿ ರಚನೆ ಮಾಡಲಾಗಿರುತ್ತದೆ. ಫೇಸ್‌ಬುಕ್ ಚಾಟ್‌ನಲ್ಲಿ ಇನ್‌ಸ್ಟಂಟ್ ಗೇಮ್ಸ್‌ ಮತ್ತು ಟ್ರಾನ್ಸಪೋರ್ಟೆಶನ್ ಆಯ್ಕೆ ತೆಗೆಯಲಿದೆ.

 ಪ್ರೈವೆಸಿ ಫೀಚರ್ಸ್‌

ಹಾಗೆಯೇ ಫೇಸ್‌ಬುಕ್ ತನ್ನ ಫೇಸ್‌ಬುಕ್ ಮೆಸೆಂಜರ್ ಕಿಡ್ಸ್‌ ಅಪ್ಲಿಕೇಶನ್‌ನಲ್ಲಿಯೂ ಇತ್ತೀಚಿಗೆ ಹೊಸ ಬದಲಾವಣೆ ತಂದಿದೆ. ಆಪ್‌ನಲ್ಲಿ ಹೊಸದಾಗಿ ಪೇರೆಂಟ್ಸ್‌ ಡ್ಯಾಶ್‌ಬೋರ್ಡ್ ಎಂಬ ಪ್ರೈವೆಸಿ ಫೀಚರ್ಸ್‌ ಅನ್ನು ಸೇರಿಸಿದೆ. ಈ ಆಯ್ಕೆ ಮೂಲಕ ಪಾಲಕರು ಮಕ್ಕಳ ಪೇಸ್‌ಬುಕ್ ಮೆಸೆಂಜರ್ ಆಕ್ಟಿವಿಟಿ ಮೇಲೆ ನಿಗಾ ಇಡಬಹುದಾಗಿದೆ. ಅಂದಹಾಗೆ 2017ರಲ್ಲಿ ಫೇಸ್‌ಬುಕ್ ಈ ಫೇಸ್‌ಬುಕ್ ಮೆಸೆಂಜರ್ ಕಿಡ್ಸ್‌ ಆಪ್‌ ಅನ್ನು ಬಿಡುಗಡೆ ಮಾಡಿತ್ತು.

Most Read Articles
Best Mobiles in India

English summary
Facebook Messenger’s new changes will start appearing next week and will focus on speed and simplicity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X