ಮೆಟಾ ಕಂಪೆನಿಯಿಂದ ಮೆಸೆಂಜರ್‌ನಲ್ಲಿ ಹೊಸ ಫೀಚರ್ಸ್‌ ಬಿಡುಗಡೆ! ಉಪಯೋಗಗಳೇನು?

|

ಮೆಟಾ ಕಂಪೆನಿ ತನ್ನ ಒಡೆತನದ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಅಪ್ಡೇಟ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ತನ್ನ ಮೆಸೆಂಜರ್‌ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಮೆಸೆಂಜರ್‌ ಮತ್ತು ಫೇಸ್‌ಬುಕ್‌ ಬಳಕೆದಾರರೊಂದಿಗೆ ಜನರು ಸಂಪರ್ಕ ಸಾಧಿಸಲು ಸಹಾಯ ಮಾಡಲಿದೆ. ಇದಕ್ಕಾಗಿ ಮೆಟಾ ಮೆಸೆಂಜರ್‌ನಲ್ಲಿ ಹೊಸ ಕಮ್ಯೂನಿಟಿ ಚಾಟ್ಸ್‌ ಫೀಚರ್ಸ್‌ ಅನ್ನು ಪ್ರಾರಂಭಿಸಿದೆ. ಇದರಿಂದ ಸಮಾನ ಮನಸ್ಕರು ಒಂದೇ ವೇದಿಕೆಯಲ್ಲಿ ಚಾಟ್‌ ಮಾಡುವುದಕ್ಕೆ ಸಹಾಯವಾಗಲಿದೆ.

ಮೆಟಾ

ಹೌದು, ಮೆಟಾ ಕಂಪೆನಿ ಮೆಸೆಂಜರ್‌ನಲ್ಲಿ ಹೊಸ ಫೀಚರ್ಸ್‌ ಅನ್ನು ಸೇರ್ಪಡೆ ಮಾಡಿದೆ. ಇದರಿಂದ ಮೆಸೆಂಜರ್‌ನಲ್ಲಿ ಕಮ್ಯೂನಿಟಿ ಗ್ರೂಪ್‌ ಅನ್ನು ಕ್ರಿಯೆಟ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಅಂದರೆ ಫೇಸ್‌ಬುಕ್ ಚಾಟ್ಸ್‌ ಮಾದರಿಯಲ್ಲಿ ಮೆಸೆಂಜರ್‌ನಲ್ಲಿ ಕೂಡ ಕಮ್ಯೂನಿಟಿ ಚಾಟ್ಸ್‌ ಗ್ರೂಪ್‌ ಮಾಡಬಹುದಾಗಿದೆ. ಹಾಗಾದ್ರೆ ಮೆಸೆಂಜರ್‌ ಸೇರಿರುವ ಹೊಸ ಫೀಚರ್ಸ್‌ನ ವಿಶೇಷತೆ ಏನು? ಇದರಿಂದಾಗುವ ಪ್ರಯೋಜನಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೆಟಾ

ಮೆಟಾ ಒಡೆತನದ ಮೆಸೆಂಜರ್‌ನಲ್ಲಿ ಇನ್ಮುಂದೆ ಕಮ್ಯೂನಿಟಿ ಚಾಟ್ಸ್‌ಗಳನ್ನು ನಡೆಸುವುದಕ್ಕೆ ಸಾದ್ಯವಾಗಲಿದೆ. ಇದಕ್ಕಾಗಿ ಮೆಟಾ ಕಂಪೆನಿ ಮೆಸೆಂಜರ್‌ನಲ್ಲಿ ಕಮ್ಯೂನಿಟಿ ಚಾಟ್ಸ್‌ ಫೀಚರ್‌ ಸೇರ್ಫಡೆ ಮಾಡಿದೆ. ಇದರ ಮೂಲಕ ನೀವು ಫೇಸ್‌ಬುಕ್‌ ಗ್ರೂಪ್‌ಗಳ ಜೊತೆಗೆ ಚಾಟ್‌ ಮಾಡಲು ಸಾಧ್ಯವಾಗಲಿದೆ. ಒಂದೇ ರೀತಿಯ ಮನಸ್ಥಿತಿಯನ್ನು ಹೊಂದಿರುವ ಜನರು ತಮ್ಮ ಚಾಟ್ಸ್‌ಗಳನ್ನು ಹಂಚಿಕೊಳ್ಳುವುದಕ್ಕೆ ಈ ಗ್ರೂಪ್‌ಗಳಲ್ಲಿ ಅವಕಾಶ ಸಿಗಲಿದೆ.

ಮೆಟಾ

ಇನ್ನು ಈ ಹೊಸ ಫೀಚರ್ಸ್‌ ಬಗ್ಗೆ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಬಗ್ಗೆ ಪ್ರಕಟಿಸಿದ್ದಾರೆ. "ನಿಮ್ಮ ಆಸಕ್ತಿಗಳನ್ನು ಹಂಚಿಕೊಳ್ಳುವ ಜನರೊಂದಿಗೆ ಸಂಪರ್ಕ ಸಾಧಿಸಲು ನಾವು ಕಮ್ಯೂನಿಟಿ ಚಾಟ್ಸ್‌ಗಳನ್ನು ಹೊಸ ರೀತಿಯಲ್ಲಿ ಬಿಲ್ಡ್‌ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ಶೀಘ್ರದಲ್ಲೇ ನೀವು ಮೆಸೆಂಜರ್ ಮತ್ತು ಫೇಸ್‌ಬುಕ್ ಗ್ರೂಪ್‌ಗಳಿಂದ ಕಮ್ಯೂನಿಟಿ ಚಾಟ್ಸ್‌ಗಳನ್ನು ಪ್ರಾರಂಬಿಸಲು ಸಾಧ್ಯವಾಗಲಿದೆ ಎಂದು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಚಾಟ್ಸ್‌

ಕಮ್ಯೂನಿಟಿ ಚಾಟ್ಸ್‌ ಮೂಲಕ ಅಡ್ಮಿನ್‌ ಒಂದು ವಿಷಯದ ಕುರಿತು ಸಂವಾದವನ್ನು ಪ್ರಾರಂಭಿಸಬಹುದು. ಅಲ್ಲದೆ ತಮ್ಮ ಪೋಸ್ಟ್‌ಗೆ ಜನರು ಕಾಮೆಂಟ್ ಮಾಡಲು ಕಾಯುವ ಬದಲು ಕ್ಷಣದಲ್ಲಿ ಪ್ರತಿಕ್ರಿಯೆಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. ಅಲ್ಲದೆ ಕಮ್ಯೂನಿಟಿ ಚಾಟ್ಸ್‌ ಅನ್ನು ಕ್ರಿಯೆಟ್‌ ಮಾಡುವ ವ್ಯಕ್ತಿಯು ಚಾಟ್‌ಗಳನ್ನು ವಿವಿಧ ವರ್ಗಗಳಾಗಿ ಆಯೋಜಿಸಬಹುದು. ಆದ್ದರಿಂದ ಗುಂಪಿನ ಸದಸ್ಯರು ತಮಗೆ ಹೆಚ್ಚು ಆಸಕ್ತಿಕರವಾದುದ ವರ್ಗವನ್ನು ಸುಲಭವಾಗಿ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದು ಮೆಟಾ ಕಂಪನಿ ಹೇಳಿದೆ.

ಅಡ್ಮಿನ್‌

ಇನ್ನು ಅಡ್ಮಿನ್‌ ಆಡಿಯೊ ಚಾನಲ್‌ಗಳನ್ನು ಸಹ ಕ್ರಿಯೆಟ್‌ ಮಾಡಬಹುದು. ಆದ್ದರಿಂದ ಗ್ರೂಪ್‌ನ ಸದಸ್ಯರು ಲೈವ್ ಕಾಮೆಂಟರಿಯನ್ನು ಶೇರ್‌ ಮಾಡಿಕೊಳ್ಳಬಹುದು. ಇನ್ನು ಈ ಚಾಟ್ಸ್‌ನಲ್ಲಿ ಭಾಗವಹಿಸುವವರು ಆಡಿಯೊ ಚಾನಲ್‌ನಲ್ಲಿ ಒಮ್ಮೆ ವೀಡಿಯೊವನ್ನು ಸಕ್ರಿಯಗೊಳಿಸುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ ಎಂದು ಹೇಳಲಾಗಿದೆ. ಸದ್ಯ ಈ ಫೀಚರ್ಸ್‌ ಅತಿ ಶೀಘ್ರದಲ್ಲಿ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೆ ಪರಿಚಯಿಸಲಾಗುತ್ತದೆ ಎಂದು ಹೇಳಲಾಗಿದೆ.

ಮೆಟಾ

ಇದಲ್ಲದೆ ಮೆಟಾ ಕಂಪೆನಿ ಮೆಟಾವರ್ಸ್‌ಗಾಗಿಯೇ ಮೆಟಾ ಪೇ ಡಿಜಿಟಲ್‌ ವ್ಯಾಲೆಟ್‌ ಅನ್ನು ಲಾಂಚ್‌ ಮಾಡಿದೆ. ವರ್ಚುವಲ್‌ ಜಗತ್ತಿನಲ್ಲಿ ಈಗಾಗಲೇ ಡಿಜಿಟಲ್ ಕ್ಲಾತ್‌, ಆರ್ಟ್ಸ್‌ ಮತ್ತು ವೀಡಿಯೊಗಳಲ್ಲಿ ತಲ್ಲೀನಗೊಳಿಸುವ ಅನುಭವಕ್ಕೆ ತಕ್ಕಂತೆ ಕೆಲಸ ಮಾಡಲು ಮುಂದಾಗಿದ್ದೆವೆ. ಇದರಿಂದ ಮುಂದಿನ ದಿನಗಳಲ್ಲಿ ಮಾಲೀಕತ್ವದ ಪುರಾವೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ, ಮೆಟಾವರ್ಸ್‌ನ ಒಂದು ಭಾಗದಲ್ಲಿ ನೀವು ಖರೀದಿಸಿದ ಎಲ್ಲವೂ ಅದೇ ಕಾರ್ಯಗಳು ಮತ್ತು ಗುಣಲಕ್ಷಣಗಳೊಂದಿಗೆ ಮತ್ತೊಂದು ವೇದಿಕೆಯಲ್ಲಿ ಕೂಡ ಲಭ್ಯವಾಗಲಿದೆ.

ಮೆಟಾವರ್ಸ್‌

ಮೆಟಾವರ್ಸ್‌ ಜಗತ್ತಿನಲ್ಲಿ ಎಲ್ಲರೂ ಕೂಡ ತೊಡಗಿಸಿಕೊಳ್ಳುವ ದಿನ ಬಹಳ ದೂರವಿದೆ. ಆದರೆ ಈ ರೀತಿಯ ಪರಸ್ಪರ ಕಾರ್ಯಸಾಧ್ಯತೆಯು ಜನರಿಗೆ ಉತ್ತಮ ಅನುಭವಗಳನ್ನು ನೀಡಲಿದೆ. ಅಂದರೆ ವರ್ಚುವಲ್‌ ಜಗತ್ತಿನ್ಲಿ ನೀವು ಖರೀದಿಸುವ ಸ್ಥಳ, ಪ್ರಾಡಕ್ಟ್‌ಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ಮೌಲ್ಯವನ್ನು ಪಡೆದುಕೊಳ್ಳಲಿದೆ. ನಿಮ್ಮ ಡಿಜಿಟಲ್‌ ಸರಕುಗಳನ್ನು ಬಳಸುವ ಸ್ಥಳ ಕೂಡ ಹೆಚ್ಚಿನ ಮೌಲ್ಯ ಪಡೆದುಕೊಳ್ಳುತ್ತದೆ. ಇದರಿಂದ ವರ್ಚುವಲ್‌ ಜಗತ್ತಿನಲ್ಲಿ ಸರಕು ಖರೀದಿಸಿದವರಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಲಿದೆ ಎನ್ನಲಾಗಿದೆ.

Best Mobiles in India

English summary
Facebook Messenger will soon support large groups

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X