ಫೇಸ್‌ಬುಕ್‌ಗೆ ಶುರುವಾಯ್ತು ಆತಂಕ!..ಕುಸಿದು ಬೀಳುತ್ತಾ ಫೇಸ್‌ಬುಕ್‌ ಸಾಮ್ರಾಜ್ಯ!

|

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಈ ಭಾರಿ ಜುಕರ್‌ಬರ್ಗ್‌ ಕಟ್ಟಿದ ಸಾಮ್ರಾಜ್ಯ ಕಾನೂನಿ ಅಂಕುಶದಲ್ಲಿ ಸಿಲುಕಿ ಪ್ರಾಬಲ್ಯ ಕಳೆದುಕೊಳ್ಳುವ ಅಪಾಯದಲ್ಲಿದೆ. ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಲು ತನ್ನ ಪ್ರತಿಸ್ಫರ್ಧಿಗಳನ್ನೇ ಇಲ್ಲದಂತೆ ಫೇಸ್‌ಬುಕ್‌ ಮಾಡುತ್ತಿದೆ ಎಂದು ಅಮೆರಿಕದಲ್ಲಿ ಫೇಸ್‌ಬುಕ್‌ ವಿರುದ್ದ ಕಾನೂನು ಸಮರ ಶುರುವಾಗಿದೆ. ಅಷ್ಟೇ ಯಾಕೆ ಈ ಮೊಕದ್ದಮೆಯಲ್ಲಿ ಫೇಸ್‌ಬುಕ್‌ ತನ್ನ ಒಡೆತನ ವಾಟ್ಸಾಪ್‌ ಮತ್ತು ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್‌ಗಳನ್ನ ಮಾರಾಬೇಕಾದ ಸನ್ನಿವೇಶ ಬಂದರೂ ಬರಬಹುದು ಎಂದು ಹೇಳಲಾಗುತ್ತಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ವಿರುದ್ದ ಅಮೆರಿಕದಲ್ಲಿ ಮೊಕದ್ದಮೆ ದಾಖಲಾಗಿದೆ. ಯುಎಸ್‌ನ‌ ಎಫ್ಟಿಎ ಮೆನ್ಲೊ ಪಾರ್ಕ್ ವಿರುದ್ಧ ಆಂಟಿಟ್ರಸ್ಟ್ ಮೊಕದ್ದಮೆ ಹೂಡಿದೆ. ಅಲ್ಲದೆ ಯುಎಸ್‌ನ 46 ರಾಜ್ಯಗಳಾದ ವಾಷಿಂಗ್ಟನ್ ಡಿಸಿ ಮತ್ತು ಗುವಾಮ್ ನಡುವಿನ ಒಕ್ಕೂಟವು ಕೂಡ ಫೇಸ್‌ಬುಕ್‌ ವಿರುದ್ದ ಮೊಕದ್ದಮೆ ಹೂಡಿವೆ. ಅಲ್ಲದೆ ಕಂಪೆನಿಗಳ ಈ ಪರಭಕ್ಷಕ ಸ್ವಾಧೀನವನ್ನು ತಡೆಯಲು ಆಂಟಿಟ್ರಸ್ಟ್ ಮೊಕದ್ದಮೆ ವಿಮರ್ಶಾತ್ಮಕವಾಗಿ ಮಹತ್ವದ್ದಾಗಿದೆ" ಮತ್ತು ಮಾರುಕಟ್ಟೆಯಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸಬೇಕು ಎಂದು ಹೇಳಲಾಗಿದೆ. ಅಷ್ಟಕ್ಕೂ ಫೇಸ್‌ಬುಕ್‌ ವಿರುದ್ದ ದಾವೆ ಹೂಡಲು ಕಾರಣವೇನು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌ ವಿರುದ್ದ ಇರುವ ಆರೋಪ ಏನು?

ಫೇಸ್‌ಬುಕ್‌ ವಿರುದ್ದ ಇರುವ ಆರೋಪ ಏನು?

ಸೊಶೀಯಲ್‌ ಮೀಡಿಯಾ ದೈತ್ಯ ಮಾರುಕಟ್ಟೆ ಪ್ರಾಬಲ್ಯವನ್ನು ಸ್ಥಾಪಿಸಲು ಫೇಸ್‌ಬುಕ್ 'ಪರಭಕ್ಷಕ ತಂತ್ರ'ವನ್ನು ಬಳಸುತ್ತಿದೆ ಎಂದು ಯುಎಸ್ ಫೆಡರಲ್ ಟ್ರೇಡ್ ಕಮಿಷನ್ ಗಮನಿಸಿದೆ. ಫೇಸ್‌ಬುಕ್‌ ಇನ್‌ಸ್ಟಾಗ್ರಾಮ್‌ ಮತ್ತು ವಾಟ್ಸಾಪ್‌ ಅನ್ನು ಖರೀದಿಸುವಾಗ ಏಕಸ್ವಾಮ್ಯ ಕಾನೂನನ್ನು ಉಲ್ಲಂಘಿಸಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಸ್ಪರ್ಧೆಯೆ ಇಲ್ಲದಂತೆ ಮಾಡುವುದಕ್ಕೆ ಏಕಸ್ವಾಮ್ಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಇದು ಸಣ್ಣ ಸ್ಪರ್ಧಿಗಳು ಮತ್ತು ಪ್ರತಿಸ್ಪರ್ಧಿಗಳನ್ನು ಕಿತ್ತುಹಾಕಿದೆ. ಹೊಸ ಆಂಟಿಟ್ರಸ್ಟ್ ಮೊಕದ್ದಮೆಯು ಫೇಸ್‌ಬುಕ್‌ನ ಏಕಸ್ವಾಮ್ಯವನ್ನು ಕಸಿದುಕೊಳ್ಳುವ ಅಗತ್ಯವಿದೆ ಎಂದು ಹೇಳುತ್ತದೆ.

ಪೇಸ್‌ಬುಕ್‌

ಇನ್ನು ಪೇಸ್‌ಬುಕ್‌ ಏಕಸ್ವಾಮ್ಯವನ್ನು ಮುರಿಯುವ ಒಂದು ಮಾರ್ಗವೆಂದರೆ ಫೇಸ್‌ಬುಕ್ ಒಡೆತನದ ಪ್ಲಾಟ್‌ಫಾರ್ಮ್‌ಗಳಾದ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಮಾರಾಟ ಮಾಡುವುದು. ಸದ್ಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ ಮತ್ತು ಫೋಟೋ ಶೇರಿಂಗ್‌ ಆಪ್‌ ಇನ್ಸ್‌ಸ್ಟಾಗ್ರಾಮ್‌ ಫೇಸ್‌ಬುಕ್‌ನ ಅತ್ಯಂತ ಅಮೂಲ್ಯವಾದ ಸ್ವಾಧೀನಗಳಲ್ಲಿ ಒಂದಾಗಿದೆ ಮತ್ತು ಇದು ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ಇನ್ನು ಫೇಸ್‌ಬುಕ್ 2012 ರಲ್ಲಿ ಇನ್‌ಸ್ಟಾಗ್ರಾಮ್ ಅನ್ನು 1 ಬಿಲಿಯನ್ ಡಾಲರ್‌ಗೆ ಖರೀದಿಸಿತ್ತು, ಮತ್ತು 2014 ರಲ್ಲಿ 19 ಬಿಲಿಯನ್ ಡಾಲರ್‌ಗೆ ವಾಟ್ಸಾಪ್ ಅನ್ನು ಖರೀದಿಸಿತು. ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಎರಡೂ ಭಾರಿ ಬಳಕೆದಾರರ ನೆಲೆಯನ್ನು ಗೆಲ್ಲುವಲ್ಲಿ ಪ್ರವರ್ಧಮಾನಕ್ಕೆ ಬಂದಿವೆ. ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ 'ಫ್ರಮ್ ಫೇಸ್‌ಬುಕ್' ಬ್ರ್ಯಾಂಡಿಂಗ್ ಅನ್ನು ನೋಡಬಹುದಾಗಿದೆ.

ಫೇಸ್‌ಬುಕ್‌

ಆದರೆ ಇದೀಗ ಫೇಸ್‌ಬುಕ್‌ ವಿರುದ್ದ ಏಕಸ್ವಾಮ್ಯ ಉಲ್ಲಂಘನೆ ಆರೋಪ ಎದುರಾಗಿರುವುದರಿಂದ ಭವಿಷ್ಯದಲ್ಲಿ ಪೇಸ್‌ಬುಕ್‌ ವಾಟ್ಸಾಪ್‌ ಮತ್ತು ಇನ್‌ಸ್ಟಾಗ್ರಾಮ್‌ ಅನ್ನು ಮಾರಾಟಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಈ ಎರಡೂ ಪ್ಲಾಟ್‌ಫಾರ್ಮ್‌ಗಳು ಫೇಸ್‌ಬುಕ್‌ಗೆ ಭಾರಿ ಆದಾಯವನ್ನು ತಂದುಕೊಡುತ್ತಿರುವುದರಿಂದ ಫೇಸ್‌ಬುಕ್‌ ಕುಡ ಕಾನೂನು ಹೋರಾಟಕ್ಕೆ ಇಳಿಯಲಿದೆ. ಸದ್ಯ ಆಂಟಿಟ್ರಸ್ಟ್ ಮೊಕದ್ದಮೆಗೆ ಫೇಸ್‌ಬುಕ್ ಪ್ರತಿಕ್ರಿಯಿಸಿ, ಎಫ್‌ಟಿಸಿ ದೂರಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಎಫ್‌ಟಿಸಿ ಅನುಮೋದನೆ ನೀಡಿದ ಹಲವು ವರ್ಷಗಳ ನಂತರ ಸರ್ಕಾರ ಮರುಪರಿಶೀಲನೆಗೆ ಮುಂದಾಗಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

Best Mobiles in India

English summary
Facebook is in trouble once again and this time, it may need to sell Instagram and WhatsApp.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X