'ಲಿಬ್ರಾ' ಎಂಬ ತನ್ನದೇ ಹೊಸ ಕರೆನ್ಸಿ ಘೋಷಿಸಿದ 'ಫೇಸ್‌ಬುಕ್'!

|

ಸರ್ಕಾರಿ ಹಣ ವ್ಯವಸ್ಥೆಯನ್ನೇ ಧಿಕ್ಕರಿಸಿದ್ದ ವಿವಾದಾತ್ಮಕ ಬಿಟ್‌ ಕಾಯಿನ್ ಕ್ರಿಪ್ಟೋ ಕರೆನ್ಸಿಯ ರೀತಿಯಲ್ಲೇ ಇರುವ ಹೊಸ ಡಿಜಿಟಲ್‌ ಕರೆನ್ಸಿಯನ್ನು ಸೃಷ್ಟಿಸುವ ತನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಫೇಸ್‌ ಬುಕ್‌ ಅನಾವರಣಗೊಳಿಸಿದೆ. ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್ ಮುಂದಿನ ವರ್ಷದ ವೇಳೆಗೆ ಲಿಬ್ರಾ ಹೆಸರಿನ ತನ್ನದೇ ಕರೆನ್ಸಿಯನ್ನು ಪರಿಚಯಿಸಲಿದೆ.

ಹೌದು, ವಿಶ್ವದಾದ್ಯಂತ ಎರಡು ಬಿಲಿಯನ್‌ಗೂ ಹೆಚ್ಚು ಮಾಸಿಕ ಸಕ್ರೀಯ ಬಳಕೆದಾರರಿಗೆ ಸಂಪರ್ಕ ವೇದಿಕೆಯನ್ನು ಕಲ್ಪಿಸಿರುವ ಫೇಸ್‌ ಬುಕ್‌, ಇದೀಗ ತನ್ನ ಬಳಕೆದಾರರಿಗಾಗಿ 'ಲಿಬ್ರಾ' ಹೆಸರಿನ ಸ್ವಂತ ಕರೆನ್ಸಿಯನ್ನು ಆರಂಭಿಸಲಿದೆ. ಈ ಡಿಜಿಟಲ್‌ ಕರೆನ್ಸಿ ಸೃಷ್ಟಿಗೆ ಫೇಸ್‌ಬುಕ್ ಜೊತೆಗೆ ಪೇ ಪಾಲ್‌, ಉಬರ್, ಸ್ಪಾಟಿಫೈ, ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ ಕೈಜೋಡಿಸಿವೆ.

'ಲಿಬ್ರಾ' ಎಂಬ ತನ್ನದೇ ಹೊಸ ಕರೆನ್ಸಿ ಘೋಷಿಸಿದ 'ಫೇಸ್‌ಬುಕ್'!

ಭವಿಷ್ಯದಲ್ಲಿ ಟೆಕ್ ಸಂಸ್ಥೆಗಳು ಜಗತ್ತನ್ನು ಆಳಲಿವೆ ಎಂಬುದಕ್ಕೆ ಈ ಲಿಬ್ರಾ ಡಿಜಿಟಲ್‌ ಕರೆನ್ಸಿ ಉದಾರಹಣೆಯಾಗಲಿದ್ದು, ಫೇಸ್‌ಬುಕ್‌ನ ಈ ಯೋಜನೆಗೆ ವಿಶ್ವ ಜಗತ್ತು ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಾಗಾದರೆ, ಏನಿದು ಫೇಸ್‌ಬುಕ್‌ನ ಹೊಸ ಡಿಜಿಟಲ್‌ ಕರೆನ್ಸಿ? ಇದರಿಂದ ಆಗಬಹುದಾದ ಪರಿಣಾಮಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಫೇಸ್‌ಬುಕ್ ಲಿಬ್ರಾ ಕರೆನ್ಸಿ?

ಏನಿದು ಫೇಸ್‌ಬುಕ್ ಲಿಬ್ರಾ ಕರೆನ್ಸಿ?

ಮೊದಲೇ ಹೇಳಿದಂತೆ ಲಿಬ್ರಾ ಕರೆನ್ಸಿಯು ಬಿಟ್‌ಕಾಯಿನ್ ರೀತಿಯದ್ದೇ ಆದ ಒಂದು ಡಿಜಿಟಲ್ ಕರೆನ್ಸಿಯಾಗಿದೆ. ಇದನ್ನು ಫೇಸ್‌ಬುಕ್ ನಿರ್ವಹಣೆ ಮಾಡಲಿದ್ದು, ಜಗತ್ತಿನಾದ್ಯಂತ ಸುಲಭವಾಗಿ ಆನ್‌ಲೈನ್ ಹಣ ವ್ಯವಹಾರ ನಡೆಸಲು ಸಹಾಯವಾಗುವ ನಿಟ್ಟಿನಲ್ಲಿ ಲಿಬ್ರಾ ಹುಟ್ಟುತ್ತಿದೆ. ಜಾಗತಿಕ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ ಇದನ್ನು ಉಪಯೋಗಿಸಿಕೊಳ್ಳಲು ಮುಂದಾಗಿದೆ.

ಲಿಬ್ರಾ ಕರೆನ್ಸಿ ಉಪಯೋಗ ಏನು?

ಲಿಬ್ರಾ ಕರೆನ್ಸಿ ಉಪಯೋಗ ಏನು?

ಪ್ರಸ್ತುತ ಜಾಗತಿಕ ಹಣಕಾಸು ವರ್ಗಾವಣೆ ವಹಿವಾಟು ನಡೆಸುತ್ತಿರುವ ವೆಸ್ಟ್‌ರ್ನ್ ಯೂನಿಯನ್‌ ರೀತಿಯಲ್ಲಿ ಜಗತ್ತಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹಣ ವರ್ಗಾವಣೆ ಸೌಲಭ್ಯವನ್ನು ಒದಗಿಸುತ್ತಿದೆ. ಇದೇ ರೀತಿ ಲಿಬ್ರಾ ಮೂಲಕ ಅತೀ ಕಡಿಮೆ ಶುಲ್ಕದಲ್ಲಿ ಜಾಗತಿಕ ಹಣ ವ್ಯವಹಾರವನ್ನು ನಡೆಸುವುದು ಫೇಸ್‌ಬುಕ್‌ನ ಉದ್ದೇಶ ಎಂದು ಹೇಳಲಾಗಿದೆ.

12 ತಿಂಗಳ ಒಳಗೆ 'ಲಿಬ್ರಾ' ಆರಂಭ

12 ತಿಂಗಳ ಒಳಗೆ 'ಲಿಬ್ರಾ' ಆರಂಭ

ಫೇಸ್‌ಬುಕ್‌ನ ಹೊಸ ಲಿಬ್ರಾ ಡಿಜಿಟಲ್‌ ಕರೆನ್ಸಿ ಮುಂದಿನ ಆರರಿಂದ 12 ತಿಂಗಳ ಒಳಗೆ ಆರಂಭಗೊಳ್ಳಲಿದೆ. ಸುಮಾರು ಎರಡು ಡಜನ್‌ ಪಾಲುದಾರ ಸಂಸ್ಥೆಗಳು ಲಿಬ್ರಾಗೆ ಹಣಕಾಸು ಬೆಂಬಲ ಒದಗಿಸಲಿವೆ. ಇದಕ್ಕಾಗಿ ಫೇಸ್‌ಬುಕ್‌ ತನ್ನ ಹಾಲಿ ಮತ್ತು ಭವಿಷ್ಯತ್ತಿನ ಪಾಲುದಾರ ಸಂಸ್ಥೆಗಳಿಂದ 1 ಶತಕೋಟಿಗ ಡಾಲರ್‌ ಹಣವನ್ನು ಬೆಂಬಲ ನಿಧಿಯಾಗಿ ಎತ್ತುವ ವಿಶ್ವಾಸವನ್ನು ಹೊಂದಿದೆ.

ಫೇಸ್‌ಬುಕ್ ಜೊತೆ ದಿಗ್ಗಜರು

ಫೇಸ್‌ಬುಕ್ ಜೊತೆ ದಿಗ್ಗಜರು

'ಲಿಬ್ರಾ' ಡಿಜಿಟಲ್‌ ಕರೆನ್ಸಿಯನ್ನು ಸೃಷ್ಟಿಸುವಲ್ಲಿ ಫೇಸ್‌ಬುಕ್‌ ಜತೆಗೆ ದಿಗ್ಗಜ ಕಂಪೆನಿಗಳಾದ ಪೇ ಪಾಲ್‌, ಉಬರ್, ಸ್ಪಾಟಿಫೈ, ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ ಕಂಪೆನಿಗಳು ಕೈಜೋಡಿಸಿವೆ. ವಿಶ್ವದಾದ್ಯಂತ ಸುಲಭ ಹಣ ವರ್ಗಾವಣೆಗೆ ಫೇಸ್‌ಬುಕ್‌ನ ಹೊಸ ಲಿಬ್ರಾ ಡಿಜಿಟಲ್‌ ಕರೆನ್ಸಿ ಉತ್ತಮವಾಗಬಹುದು ಎಂದು ಈ ಕಂಪೆನಿಗಳು ಲಿಬ್ರಾಗೆ ಒತ್ತು ನೀಡಲು ಮುಂದಾಗಿವೆ ಎನ್ನಲಾಗಿದೆ.

ಹೊಸ ಅಪಾಯದ ಸೂಚನೆ?

ಹೊಸ ಅಪಾಯದ ಸೂಚನೆ?

ಲಿಬ್ರಾ ಕರೆನ್ಸಿಯಿಂದ ವಿಶ್ವ ಹಣ ವರ್ಗಾವಣೆಗೆ ಲಾಭವಿದೆ ಎಂದು ಹೇಳಲಾಗಿದೆ. ಆದರೆ, ಡಿಜಿಟಲ್‌ ಕರೆನ್ಸಿ ಬ್ಯಾಂಕಿಂಗ್‌ ವ್ಯವಸ್ಥೆಗೆ, ರಾಷ್ಟ್ರೀಯ ಕರೆನ್ಸಿಗಳಿಗೆ ಮತ್ತು ಬಳಕೆದಾರರ ಖಾಸಗಿತನಕ್ಕೆ ಭಾರೀ ದೊಡ್ಡ ಸವಾಲು ಮತ್ತು ಸಮಸ್ಯೆಯನ್ನು ಒಡ್ಡಲಿದೆ. ಅದರಲ್ಲೂ ಒಂದು ಖಾಸಾಗಿ ಕಂಪೆನಿ ಡಿಜಿಟಲ್‌ ಕರೆನ್ಸಿ ಹೊಂದುವುದು ಅಪಾಯದ ಸೂಚನೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಲಿಬ್ರಾ ಕಥೆ?

ಭಾರತದಲ್ಲಿ ಲಿಬ್ರಾ ಕಥೆ?

ಇದೇ ವೇಳೆ ಭಾರತದಲ್ಲಿ ಈ ರೀತಿಯ ಡಿಜಿಟಲ್‌ ಕರೆನ್ಸಿ ಹೊಂದುವುದು, ಮಾರುವುದು, ಖರೀದಿಸುವುದು, ವರ್ಗಾಯಿಸುವುದು ಮತ್ತು ಆದರ ಮೂಲಕ ವಹಿವಾಟು ನಡೆಸುವ ಎಲ್ಲ ರೀತಿಯ ಕೃತ್ಯಗಳನ್ನುಕಾನೂನು ಬಾಹಿರವೆಂದು ಪರಿಗಣಿಸಲಾಗಿದೆ. ಹಾಗಾಗಿ, ಭಾರತದಲ್ಲಿ ಫೇಸ್‌ಬುಕ್‌ನ ಲಿಬ್ರಾ ಕರೆನ್ಸಿಗೆ ಮಾನ್ಯತೆ ಸಿಗುವುದು ಕಷ್ಟ. ಆದರೆ, ಭವಿಷ್ಯವನ್ನು ಬಲ್ಲವರು ಯಾರು ಹೇಳಿ.?

Best Mobiles in India

English summary
Facebook plans its own currency for 2 billion-plus users. launching a new digital currency to make e-commerce accessible to more people around the world. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X