ಫೇಸ್‌ಬುಕ್‌ ನಿಯಮ ಪಾಲಿಸದ 33 ಮಿಲಿಯನ್‌ ಕಂಟೆಂಟ್‌ಗೆ ಗೇಟ್‌ ಪಾಸ್‌!

|

ಕೇಂದ್ರ ಸರ್ಕಾರ ಹೊಸ ಐಟಿ ನಿಯಮವನ್ನು ಜಾರಿಗೊಳಿಸಿದ ನಂತರ ಸೊಶೀಯಲ್‌ ಮೀಡಿಯಾ ಆಕ್ಟಿವಿಟಿಗಳು ಸಾಕಷ್ಟು ಬದಲಾಗಿವೆ. ಈ ಹೊಸ ನಿಯಮವನ್ನು ಸದ್ಯ ಎಲ್ಲಾ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಪಾಲಿಸುತ್ತಿವೆ. ಹೊಸ ಡಿಜಿಟಲ್‌ ಎಥಿಕ್ಸ್‌ ಕೋಡ್‌ ಅನ್ವಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಪಾರ್ಮ್‌ಗಳು ತಾವುಗಳು ಕೈಗೊಂಡ ಕ್ರಮಗಳ ಬಗ್ಗೆ ಮಾಸಿಕ ವರದಿಯನ್ನು ನೀಡಬೇಕಿದೆ. ಅದರಂತೆ ಫೇಸ್‌ಬುಕ್‌ ತನ್ನ ನಿಯಮವನ್ನು ಉಲ್ಲಂಘಿಸಿದ 33.3 ಮಿಲಿಯನ್ ಕಂಟೆಂಟ್ ಅನ್ನು ತೆಗೆದುಹಾಕಲು ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ತನ್ನ ನಿಯಮಗಳಿಗೆ ದಕ್ಕೆ ತಂದಿರುವಂತೆ 33.3 ಮಿಲಿಯನ್ ಕಂಟೆಂಟ್ ಅನ್ನು ತನ್ನ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಿದೆ. ಆದೆ ರೀತಿ ತನ್ನ ಒಡೆತನದ ಇನ್‌ಸ್ಟಾಗ್ರಾಮ್‌ ನಲ್ಲಿನ 8 ಪಾಲಿಸಿಗಳಲ್ಲಿ ಯಾವುದಾದರೂ ಒಂದನ್ನು ಉಲ್ಲಂಘಿಸಿದ 2.8 ಮಿಲಿಯನ್ ವಿಷಯಗಳ ಮೇಲೆ ಕ್ರಮ ಕೈಗೊಂಡಿದೆ. ಈ ಮೂಲಕ ಹೊಸ ಐಟಿ ನಿಯಮದ ಅನ್ವಯ ದುರದ್ದೇಶಪೂರಿತ ಕಂಟೆಂಟ್‌ಗೆ ಗೇಟ್‌ಪಾಸ್‌ ನೀಡಿರೋದಾಗಿ ಹೇಲಿದೆ. ಅಷ್ಟಕ್ಕೂ ಫೇಸ್‌ಬುಕ್‌ ನೀಡಿರುವ ಮಾಸಿಕ ವರದಿಯಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ ಪ್ರಕಟಿಸಿರುವ ಮಾಸಿಕ ವರದಿ ಜೂನ್ 16 ರಿಂದ ಜುಲೈ 31ರ ಅವಧಿಯನ್ನು ಹೊಂದಿದೆ. ಈ ವರದಿ ಪ್ರಕಾರ ಫೇಸ್‌ಬುಕ್‌ 25.6 ಮಿಲಿಯನ್‌ಗೂ ಅಧಿಕ ಸ್ಪ್ಯಾಮ್ ಕಂಟೆಂಟ್‌ಗಳ ಮೇಲೆ ಕ್ರಮ ಕೈಗೊಂಡಿದೆ. ಅಲ್ಲದೆ 3.5 ಮಿಲಿಯನ್ ಸಂಖ್ಯೆಯ ಹಿಂಸಾತ್ಮಕ ಅಥವಾ ಗ್ರಾಫಿಕ್ ಕಂಟೆಂಟ್‌ನ್ನು ತೆಗೆದುಹಾಕಲು ಕಾರ್ಯನಿರ್ವಹಿಸುತ್ತಿದೆ. ಹಾಗೆಯೇ ವಯಸ್ಕರ ನಗ್ನತೆ ಅಥವಾ ಲೈಂಗಿಕ ಚಟುವಟಿಕೆಗೆ ಸಂಬಂಧಿಸಿ ವಿಷಯ ಹೊಂದಿರುವ 2.6 ಮಿಲಿಯನ್ ಸಂಖ್ಯೆಯ ಕಂಟೆಂಟ್‌ ಅನ್ನು ತೆಗೆದುಹಾಕಲಾಗಿದೆ ಎಂದು ಫೇಸ್‌ಬುಕ್‌ ವರದಿಯಲ್ಲಿ ತಿಳಿಸಿದೆ.

ಪೇಸ್‌ಬುಕ್‌

ಇನ್ನು ಪೇಸ್‌ಬುಕ್‌ನಲ್ಲಿ ಈ ಭಾರಿ 1,23,400 ನಷ್ಟು ಕಂಟೆಂಟ್‌ ಬೆದರಿಕೆ ಹಾಗೂ ಕಿರುಕುಳ ನೀಡುವ ವಿಚಾರಗಳನ್ನು ಹೊಂದಿದೆ. ಇವುಗಳ ಮೇಲೆ ಕ್ರಮಕೈಗಮಡರೂ ಸಹ ಇವುಗಳ ಇಳಿಕೆ ಪ್ರಮಾಣದಲ್ಲಿ ಅಷ್ಟೇನೂ ಹೆಚ್ಚಳವಾಗಿಲ್ಲ. ಇವುಗಳ ಆಕ್ಟಿವಿಟಿ ರೇಟ್‌ 42.3% ನಷ್ಟು ಕಡಿಮೆಯಾಗಿದೆ. ಇದಲ್ಲದೆ ಫೇಸ್‌ಬುಕ್‌ ಒಡೆತನದಲ್ಲಿರುವ ಇನ್‌ಸ್ಟಾಗ್ರಾಮ್ ನಲ್ಲಿ ಕೂಡ ದುರುದ್ದೇಶಪೂರಿತ ಕಂಟೆಂಟ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 1.1 ಮಿಲಿಯನ್ ಸಂಖ್ಯೆಯ ಹಿಂಸಾತ್ಮಕ ಮತ್ತು ಗ್ರಾಫಿಕ್ ಕಂಟೆಂಟ್‌ ಅನ್ನು ತೆಗೆದುಹಾಕಲಾಗಿದೆ.

ಫೇಸ್‌ಬುಕ್‌

ಇದಲ್ಲದೆ ಜುಲೈನಲ್ಲಿ ಪ್ರಕಟವಾದ ಫೇಸ್‌ಬುಕ್‌ನ ಮೊದಲ ಮಾಸಿಕ ವರದಿಯಲ್ಲಿ, ವಯಸ್ಕರ ಬೆತ್ತಲೆ ಚಿತ್ರಗಳು ಮತ್ತು ಲೈಂಗಿಕ ಚಟುವಟಿಕೆ, ಹಿಂಸಾತ್ಮಕ ಮತ್ತು ಗ್ರಾಫಿಕ್ ವಿಷಯದ ಮೇಲೆ 2.5 ಮಿಲಿಯನ್ ಕಂಟೆಂಟ್‌ಗಳ ಮೇಲೆ ಕ್ರಮ ಕೈಗೊಂಡಿತ್ತು. ಅಲ್ಲದೆ ಸುಮಾರು 25 ಮಿಲಿಯನ್ ನಷ್ಟು ಕಂಟೆಂಟ್‌ಒಳಗೊಂಡಿರುವ 1.8 ಮಿಲಿಯನ್ ತುಣುಕುಗಳ ಮೇಲೆ ಕ್ರಮಕೈಗೊಳ್ಳಲಾಗಿದೆ ಅನ್ನೊ ಮಾತನ್ನು ಫೇಸ್‌ಬುಕ್‌ ಹೇಳಿಕೊಂಡಿತ್ತು.

ಫೇಸ್‌ಬುಕ್

ಇವುಗಳ ಹೊರತಾಗಿ, ಫೇಸ್‌ಬುಕ್ ತನ್ನ ಕುಂದುಕೊರತೆ ವಿಭಾಗದ ಮೂಲಕ ಜೂನ್ 16 ಮತ್ತು ಜುಲೈ 31 ರ ನಡುವೆ 1,504 ವರದಿಗಳನ್ನು ಸ್ವೀಕರಿಸಿದೆ. ಆದರೆ ಇನ್‌ಸ್ಟಾಗ್ರಾಮ್ ಇಂತಹ 265 ವರದಿಗಳನ್ನು ದೂರಿನ ಮೂಲಕ ಸ್ವೀಕರಿಸಿದೆ. ಕುಂದುಕೊರತೆ ವಿಭಾಗದ ಮೂಲಕ ಸ್ವೀಕರಿಸಿದ ಎಲ್ಲಾ ದೂರುಗಳ ಮೇಲೆ ಫೇಸ್‌ಬುಕ್‌ ಕ್ರಮ ಕೈಗೊಂಡಿದೆ. ಇನ್ನು ಈ ಮಾಸಿಕ ವರದಿಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹೊಸ ಐಟಿ ನಿಯಮದಡಿಯಲ್ಲಿ ಕಡ್ಡಾಯಗೊಳಿಸಿದೆ. ಭಾರತದಲ್ಲಿ 50 ಲಕ್ಷಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಸೊಶೀಯಲ್‌ ಮೀಡಿಯಾಗಳು ತಾವು ಸ್ವೀಕರಿಸಿದ ದೂರುಗಳ ವಿವರ, ಅವುಗಳ ವಿರುದ್ದ ತೆಗೆದುಕೊಂಡ ಕ್ರಮಗಳನ್ನು ಮಾಸಿಕ ವರದಿಯಲ್ಲಿ ಪ್ರಕಟಿಸಬೇಕಿದೆ.

Best Mobiles in India

English summary
Facebook said Tuesday it took proactive action to remove 33.3 million pieces of content which violated one of the 10 policies of the platform.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X