ಫೇಸ್‌ಬುಕ್‌ ಘೋಷಿಸಿದ 'ಲಿಬ್ರಾ' ನಿರ್ಧಾರವೇ ಅತ್ಯಂತ ಕ್ರಾಂತಿಕಾರಿ ಏಕೆ?!

|

ಒಂದು ಕರೆನ್ಸಿಯನ್ನು ಕಾರ್ಪೊರೇಟ್ ಕಂಪನಿಗಳ ಒಂದು ಸಮೂಹ ನಿಯಂತ್ರಿಸಬಹುದೇ ಎಂಬ ಪ್ರಶ್ನೆಗೆ ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸ್ಪಷ್ಟ ಉತ್ತರವಿಲ್ಲ.! ಆದರೆ, ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಲಿಬ್ರಾ' ಎಂಬ ಕರೆನ್ಸಿಯನ್ನು ಘೋಷಿಸಿದೆ. ಈ ಮೂಲಕ ಕಳೆದ ಹಲವು ವರ್ಷಗಳಿಂದಲೂ ಫೇಸ್‌ಬುಕ್‌ ತಾನೇ ಒಂದು ಕ್ರಿಪ್ಟೋಕರೆನ್ಸಿಯನ್ನು ಅಂದರೆ ಬಿಟ್‌ಕಾಯನ್ ರೀತಿ ಕರೆನ್ಸಿಯನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ ಎಂಬ ಸುದ್ದಿ ನಿಜವಾಗಿದೆ. ಜೊತೆಗೆ ಈ ಕರೆನ್ಸಿ ಜೊತೆಗೆ ಹತ್ತಾರು ಪ್ರಶ್ನೆಗಳು ಸಹ ಹುಟ್ಟಿಕೊಂಡಿವೆ.

ಫೇಸ್‌ಬುಕ್‌ ಘೋಷಿಸಿದ 'ಲಿಬ್ರಾ' ನಿರ್ಧಾರವೇ ಅತ್ಯಂತ ಕ್ರಾಂತಿಕಾರಿ ಏಕೆ?!

ಹೌದು, ಕಳೆದ ಒಂದು ವಾರದಲ್ಲಿ ಜಾಗತಿಕ ಸುದ್ದಿಯಾಗಿ ಹರಿದಾಡುತ್ತಿರುವ ಫೇಸ್‌ಬುಕ್‌ 'ಲಿಬ್ರಾ' ಇಂದು ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣ ಜಾಗತೀಕರಣ ಎಂದು ಹೇಳಲಾಗುತ್ತಿದೆ. ವಿಶ್ವವೇ ಒಂದು ಚಿಕ್ಕ ಹಳ್ಳಿಯಂತಾದ ಮೇಲೆ ವಿಶ್ವಕ್ಕೆ ಒಂದು ಕರೆನ್ಸಿ ಬೇಡವೇ ಎಂಬುದು ಕೆಲ ದೈತ್ಯ ತಂತ್ರಜ್ಞಾನ ಕಂಪೆನಿಗಳ ಯೋಚನೆ. ಅದೇ ಯೋಚನೆಯಲ್ಲಿ ಮುಂದುವರೆದು ಅಂದಾಜು 220 ಕೋಟಿ ಜನ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಮೊದಲ ಹೆಜ್ಜೆ ಇಟ್ಟಿದೆ. ಜತೆಗೆ ಇದಕ್ಕೆ ನಾನೋಬ್ಬನೇ ಮಾಲಿಕನಲ್ಲ ಎಂಬುದನ್ನು ಸಹ ಸ್ಪಷ್ಟಪಡಿಸಿದೆ.

'ಲಿಬ್ರಾ' ಎಂಬ ಇಂತಹದೊಂದು ಕ್ರಿಪ್ಟೋಕರೆನ್ಸಿ ಮಾದರಿಯ ಕರೆನ್ಸಿಯನ್ನು ಫೇಸ್‌ಬುಕ್ ಘೋಷಿಸಿದ ನಂತರ ಎಲ್ಲರಿಗೂ ಪ್ರಶ್ನೆಗಳು ಮೂಡಿವೆ. ಏನಿದು ಫೇಸ್‌ಬುಕ್ 'ಲಿಬ್ರಾ' ಕರೆನ್ಸಿ?, ಈ 'ಲಿಬ್ರಾ' ಕರೆನ್ಸಿ ಹೇಗೆ ಕೆಲಸ ಮಾಡಲಿದೆ?, 'ಲಿಬ್ರಾ' ಕರೆನ್ಸಿಯಿಂದ ಏನು ಲಾಭ?, 'ಲಿಬ್ರಾ' ಕರೆನ್ಸಿಯಿಂದ ಆಗಬಹುದು ಪರಿಣಾಮಗಳು ಯಾವುವು?, ಫೇಸ್‌ಬುಕ್ 'ಲಿಬ್ರಾ' ಕರೆನ್ಸಿ ಯನ್ನು ತಂದಿದ್ದೇಕೆ?, 'ಲಿಬ್ರಾ' ಕರೆನ್ಸಿ ಬರುವುದು ನಿಜವಾಗಿಯೂ ಸಾಧ್ಯವಾ ಎಂಬ ಪ್ರಶ್ನೆಗಳು ಮೂಡಿವೆ. ಈ ಮೇಲಿನ ಎಲ್ಲಾ ಪ್ರಶ್ನೆಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಏನಿದು ಫೇಸ್‌ಬುಕ್ 'ಲಿಬ್ರಾ' ಕರೆನ್ಸಿ?

ಏನಿದು ಫೇಸ್‌ಬುಕ್ 'ಲಿಬ್ರಾ' ಕರೆನ್ಸಿ?

ನಮ್ಮ ರೂಪಾಯಿ ಮತ್ತು ಅಮೆರಿಕಾದ ಡಾಲರ್ ಹೇಗಿದೆಯೋ ಅದೇ ರೀತಿ 'ಲಿಬ್ರಾ' ಕೂಡ ಒಂದು ಹಣ. ಆದರೆ, ರೂಪಾಯಿ ಮತ್ತು ಡಾಲರ್ ನಗದಿನ ರೂಪದಲ್ಲಿ ಇರುತ್ತವೆ. ಆದರೆ, ಈ ಲಿಬ್ರಾ ಮಾತ್ರ ಕ್ರಿಪ್ಟೋಕರೆನ್ಸಿ. ಅಂದರೆ, ಇದು ಆನ್‌ಲೈನಿನಲ್ಲಿ ಮಾತ್ರ ಚಲಾವಣೆಯಾಗುವ ಮತ್ತು ಮುಟ್ಟಲು ಸಾಧ್ಯವಾಗದ ಡಿಜಿಟಲ್ ಹಣ. ನೀವು ಇತ್ತೀಚಿಗೆ ಬಿಟ್‌ಕಾಯಿನ್ ಹೆಸರು ಕೇಳಿದ್ದರೆ ಕ್ರಿಪ್ಟೋಕರೆನ್ಸಿ ಬಗ್ಗೆ ನಿಮಗೆ ಸ್ವಲ್ಪ ತಿಳಿದಿದೆ ಎನ್ನಬಹುದು. ಫೇಸ್‌ಬುಕ್‌ ಬಿಡುಗಡೆ ಮಾಡಲು ಹೊರಟಿರುವ ಲಿಬ್ರಾದ ಸ್ವರೂಪ ಮಾತ್ರ ಸ್ವಲ್ಪ ಬೇರೆಯಾಗಿದೆ.

ಲಿಬ್ರಾ ವಿನ್ಯಾಸ ಹೀಗಿರಲಿದೆ!

ಲಿಬ್ರಾ ವಿನ್ಯಾಸ ಹೀಗಿರಲಿದೆ!

ಬಿಟ್‌ಕಾಯನ್ ಅನ್ನು ಟ್ರೇಡ್‌ ಮಾಡಿ ಪಡೆಯಬಹುದಾಗಿದೆ. ಬ್ಲಾಕ್‌ಚೈನ್ ತಂತ್ರಜ್ಞಾನದ ಈ ಬಿಟ್‌ಕಾಯನ್ ಎಂಬುದು ಸೀಮಿತವಾಗಿರುವುದರಿಮದ ವಿಪರೀತ ಮೌಲ್ಯವರ್ಧನೆಯ ಭರವಸೆ ನೀಡುತ್ತದೆ. ಬಿಟ್‌ಕಾಯನ್ ಶಕ್ತಿಶಾಲಿ ತಂತ್ರಜ್ಞಾನವದಲ್ಲಿರುವುದರಿಂದ ಇದನ್ನು ಸುರಕ್ಷಿತ ಎನ್ನಲಾಗುತ್ತದೆ. ಹೀಗಾಗಿ ಲಿಬ್ರಾದಲ್ಲೂ ಸಹ ಬಿಟ್‌ಕಾಯನ್ನಿನ ಬ್ಲಾಕ್‌ಚೈನ್ ತಂತ್ರಜ್ಞಾನವನ್ನೇ ಫೇಸ್‌ಬುಕ್‌ ಕೂಡ ಬಳಸಿಕೊಂಡಿದೆ. ಆದರೆ, ಈ ಲಿಬ್ರಾದ ಹಣದಮೌಲ್ಯ ಮಾತ್ರ ಬಿಟ್‌ಕಾಯನ್ ರೀತಿ ದಿಢೀರ್ ಬದಲಾಗುವುದಿಲ್ಲ. ಮೌಲ್ಯವು ಬಹುತೇಕ ಸ್ಥಿರವಾಗಿರುತ್ತದೆ.

ಈ 'ಲಿಬ್ರಾ' ಕರೆನ್ಸಿ ಉದ್ದೇಶವೇನು?

ಈ 'ಲಿಬ್ರಾ' ಕರೆನ್ಸಿ ಉದ್ದೇಶವೇನು?

ಜಗತ್ತಿನಾದ್ಯಂತ ಸುಲಭವಾಗಿ ಆನ್‌ಲೈನ್ ಹಣ ವ್ಯವಹಾರ ನಡೆಸಲು ಸಹಾಯವಾಗುವ ನಿಟ್ಟಿನಲ್ಲಿ ಲಿಬ್ರಾ ಹುಟ್ಟುತ್ತಿದೆ. ಜಾಗತಿಕ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ ಇದನ್ನು ಉಪಯೋಗಿಸಿಕೊಳ್ಳಲು ಮುಂದಾಗಿದೆ.ಉದಾಹರಣೆಗೆ. ಒಂದು ರೂಪಾಯಿಗೆ ಅಥವಾ ಒಂದು ಡಾಲರಿಗೆ ಒಂದೋ ಅಥವಾ ಎರಡೂ ಲಿಬ್ರಾ ಕೊಡುತ್ತಾರೆ. ಒಂದು ವೇಳೆ ನಮಗೆ ಲಿಬ್ರಾ ಬೇಡ, ರೂಪಾಯಿಯೇ ಬೇಕು ಎಂದರೆ ಅದನ್ನು ನಮ್ಮ ರೂಪಾಯಿಗೆ ಕನ್ವರ್ಟ್ ಮಾಡಿಕೊಂಡು ಬ್ಯಾಂಕಿನ ಖಾತೆಗೆ ವರ್ಗಾಯಿಸಿಕೊಳ್ಳಬಹುದು.

'ಲಿಬ್ರಾ' ಹೇಗೆ ಕೆಲಸ ಮಾಡಲಿದೆ?

'ಲಿಬ್ರಾ' ಹೇಗೆ ಕೆಲಸ ಮಾಡಲಿದೆ?

ಜಾಗತಿಕ ಹಣಕಾಸು ವರ್ಗಾವಣೆ ವಹಿವಾಟು ನಡೆಸುತ್ತಿರುವ ವೆಸ್ಟ್‌ರ್ನ್ ಯೂನಿಯನ್‌ ಜಗತ್ತಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಒದಗಿಸುತ್ತಿದೆ. ಇದೇ ರೀತಿ ಲಿಬ್ರಾ ಮೂಲಕ ಅತೀ ಕಡಿಮೆ ಶುಲ್ಕದಲ್ಲಿ ಜಾಗತಿಕ ಹಣ ವ್ಯವಹಾರವನ್ನು ನಡೆಸುವುದು ಫೇಸ್‌ಬುಕ್‌ನ ಉದ್ದೇಶ . ಇಂಟರ್‌ನೆಟ್‌ ಮೊಬೈಲಿಗೆ ಬಂದಾಕ್ಷಣ ಫೇಸ್‌ಬುಕ್‌ ಅಕೌಂಟ್ ಹೊಂದಿರುತ್ತಾರೆ. ಹೀಗಾಗಿ ತಕ್ಷಣ ಹಣ ಕಳುಹಿಸುವುದಕ್ಕೋ ಅಥವಾ ಇತರರಿಗೆ ಹಣ ಕಳುಹಿಸುವುದಕ್ಕೋ ಇದು ಅತ್ಯಂತ ಅನುಕೂಲಕರ ವಿಧಾನ.

 ಲಿಬ್ರಾ ನಿರ್ವಹಿಸುವವರು ಯಾರು?

ಲಿಬ್ರಾ ನಿರ್ವಹಿಸುವವರು ಯಾರು?

ಫೇಸ್‌ಬುಕ್‌ನ ಈ ಲಿಬ್ರಾ ಕರೆನ್ಸಿಯನ್ನು ಸ್ವತಃ ಫೇಸ್‌ಬುಕ್‌ ನಿಯಂತ್ರಿಸುವುದಾಗಿ ಎಂದು ಹೇಳಿಕೊಂಡಿಲ್ಲ. ಲಿಬ್ರಾವನ್ನು ನಾನು ನಿರ್ವಹಿಸುವುದೇ ಇಲ್ಲ. ಈ ಲಿಬ್ರಾ ಅಸೋಸಿಯೇಶನ್‌ನಲ್ಲಿ ನನ್ನದು ಒಂದು ಸಾಮಾನ್ಯ ಸದಸ್ಯತ್ವ ಎಂದು ಹೇಳಿಕೊಂಡಿದೆ. ಇಲ್ಲಿ ಲಿಬ್ರಾ ಅಸೋಸಿಯೇಶನ್‌ ಎಂಬ ಲಾಭೋದ್ದೇಶ ರಹಿತ ಸಂಸ್ಥೆ ಇದೆ. ಈ ಸಂಸ್ಥೆಯಲ್ಲಿಪ್ರತಿಷ್ಠಿತ ಮಾಸ್ಟರ್‌ಕಾರ್ಡ್‌, ವೀಸಾ, ಪೇಪಾಲ್ ಹಾಗೂ ಇತರ ಸಂಸ್ಥೆಗಳಿವೆ. ಯಾರಾದರೂ ಕೂಡ 7 ಕೋಟಿ ರೂ. ಚಂದಾ ನೀಡಿ ಈ ಲಿಬ್ರಾ ಅಸೋಸಿಯೇಶನ್‌ನ ಸದಸ್ಯತ್ವವನ್ನು ಸಹ ಪಡೆಯಬಹುದಾಗಿದೆ.

ಫೇಸ್‌ಬುಕ್ ಜೊತೆ ದಿಗ್ಗಜರು

ಫೇಸ್‌ಬುಕ್ ಜೊತೆ ದಿಗ್ಗಜರು

'ಲಿಬ್ರಾ' ಡಿಜಿಟಲ್‌ ಕರೆನ್ಸಿಯನ್ನು ಸೃಷ್ಟಿಸುವಲ್ಲಿ ಫೇಸ್‌ಬುಕ್‌ ಜತೆಗೆ ದಿಗ್ಗಜ ಕಂಪೆನಿಗಳಾದ ಪೇ ಪಾಲ್‌, ಉಬರ್, ಸ್ಪಾಟಿಫೈ, ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ ಕಂಪೆನಿಗಳು ಕೈಜೋಡಿಸಿವೆ. ಊಬರ್ ಹಾಗೂ ಇತರ ಕೆಲವು ಸಂಸ್ಥೆಗಳೂ ಈ ಅಸೋಸಿಯೇಶನ್‌ನ ಸದಸ್ಯರಾಗಿದ್ದಾರೆ. ಈ ಕಾಯನ್ ಅನ್ನು ತಮ್ಮ ಸೇವೆಗಳಲ್ಲಿ ಬಳಸಿಕೊಳ್ಳುವ ಕಂಪನಿಗಳಿಗೂ ಫೇಸ್‌ಬುಕ್‌ ಸದಸ್ಯತ್ವ ನೀಡಿದೆ. ಫೇಸ್‌ಬುಕ್‌ನ ಹೊಸ ಲಿಬ್ರಾ ಡಿಜಿಟಲ್‌ ಕರೆನ್ಸಿ ಉತ್ತಮವಾಗಬಹುದು ಎಂದು ಈ ಕಂಪೆನಿಗಳು ಲಿಬ್ರಾಗೆ ಒತ್ತು ನೀಡಲು ಮುಂದಾಗಿವೆ ಎಂದು ಹೇಳಲಾಗಿದೆ.?

ಲಿಬ್ರಾದಿಂದ ಭವಿಷ್ಯದ ಕಥೆಯೇನು?

ಲಿಬ್ರಾದಿಂದ ಭವಿಷ್ಯದ ಕಥೆಯೇನು?

ಬ್ಯಾಂಕ್‌ ಅಕೌಂಟ್ ಹೊಂದಿಲ್ಲದವರು ಕೂಡ ಈಗ ಮೊಬೈಲಿಗೆ ಬಂದಾಕ್ಷಣ ಫೇಸ್‌ಬುಕ್‌ ಅಕೌಂಟ್ ಹೊಂದಿರುತ್ತಾರೆ. ಹೀಗಾಗಿ ಫ್ರೆಂಡಿÕಗೆ ತಕ್ಷಣ ಹಣ ಕಳುಹಿಸುವುದಕ್ಕೋ ಅಥವಾ ಇತರರಿಗೆ ಹಣ ಕಳುಹಿಸುವುದಕ್ಕೋ ಇದು ಅತ್ಯಂತ ಅನುಕೂಲಕರ ವಿಧಾನವಾಗಬಹುದು. ಇನ್ನು ವಿಶ್ವದಾದ್ಯಂತ ಹಣ ವರ್ಗಾವಣೆಗೆ ಯಾವುದೇ ನಿಯಮದ ತೊಡಕಿರುವುದಿಲ್ಲ. ನೀವು ಇಲ್ಲಿ ರೂಪಾಯಿ ಕೊಟ್ಟು ಲಿಬ್ರಾ ಖರೀದಿಸಿದರೆ, ಅಮೆರಿಕಾಕ್ಕೆ ಹೋಗಿ ಲಿಬ್ರಾ ಕೊಟ್ಟು ಡಾಲರ್ ಖರೀದಿಸಬಹುದಾದ ಕಾಲ ದೂರವಿಲ್ಲ ಎನ್ನುತ್ತವೆ ವರದಿಗಳು.

ಲಿಬ್ರಾಗೆ ಮನ್ನಣೆ ದೊರೆಯಲಿದೆಯೇ?

ಲಿಬ್ರಾಗೆ ಮನ್ನಣೆ ದೊರೆಯಲಿದೆಯೇ?

ಬಹುತೇಕ ತಂತ್ರಜ್ಞಾನ ದಿಗ್ಗಜ ಕಂಪೆನಿಗಳೆಲ್ಲವೂ ಫೇಸ್‌ಬುಕ್ ಜೊತೆ ಸೇರಿ ಲಿಬ್ರಾಗೆ ಬೆಂಬಲ ನೀಡಿರುವುದನ್ನು ನಾವು ನೋಡಬಹುದು. ಆದರೆ, ರಾಜಕೀಯ ವ್ಯವಸ್ಥೆ ಮಾತ್ರ ಲಿಬ್ರಾವನ್ನು ಕೆಂಗಣ್ಣಿನಿಂದ ನೋಡುತ್ತಿದೆ. ಹಲವು ದೇಶಗಳ ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್‌ಗಳು ಈ ಬಗ್ಗೆ ಆಕ್ಷೇಪ ಎತ್ತಲು ಆರಂಭಿಸಿವೆ. ಮುಂದಿನ ತಿಂಗಳಲ್ಲಿ ಏಳು ಕೇಂದ್ರೀಯ ಬ್ಯಾಂಕ್‌ಗಳ ಮುಖ್ಯಸ್ಥರು ಸಭೆ ಸೇರಿ ಚರ್ಚೆ ನಡೆಸಲಿದ್ದಾರೆ ಮತ್ತು ಇನ್ನೊಂದೆಡೆ ಅಮೆರಿಕದ ಸಂಸತ್ತು ಕೂಡ ಮುಂದಿನ ತಿಂಗಳು ಈ ಬಗ್ಗೆ ಚರ್ಚೆ ನಡೆಸಲಿದೆ ಎಂದು ತಿಳಿದುಬಂದಿದೆ.

ಇದು ಹೊಸ ಅಪಾಯದ ಸೂಚನೆಯೇ?

ಇದು ಹೊಸ ಅಪಾಯದ ಸೂಚನೆಯೇ?

ಲಿಬ್ರಾ ಕರೆನ್ಸಿಯಿಂದ ವಿಶ್ವ ಹಣ ವರ್ಗಾವಣೆಗೆ ಲಾಭವಿದೆ ಎಂದು ಹೇಳಲಾಗಿದೆ. ಆದರೆ, ಉಗ್ರರಿಗೆ ಹಣಕಾಸು ವಹಿವಾಟು ನಡೆಸಲು, ಕಪ್ಪುಹಣ ವರ್ಗಾವಣೆಗೆ ಇದು ಬಳಕೆಯಾದರೆ ಅದನ್ನು ನಿಯಂತ್ರಿಸುವುದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಖಾಸಾಗಿ ಕಂಪೆನಿ ಡಿಜಿಟಲ್‌ ಕರೆನ್ಸಿ ಹೊಂದುವುದು ಅಪಾಯದ ಸೂಚನೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಕೇಂಬ್ರಿಜ್‌ ಅನಾಲಿಟಿಕಾಗೆ ನಮ್ಮ ಪೋಸ್ಟು, ಲೈಕುಗಳನ್ನೆಲ್ಲ ಮಾರಿದ್ದ ಫೇಸ್‌ಬುಕ್‌ ಈ ಲಿಬ್ರಾ ಕರೆನ್ಸಿ ತಂದಿರುವುದು ಹಾಸ್ಯಾಸ್ಪದ ಎನ್ನುತ್ತಾರೆ ತಜ್ಞರು.

ಭಾರತದಲ್ಲಿ ಲಿಬ್ರಾ ಕಥೆ ಏನು?

ಭಾರತದಲ್ಲಿ ಲಿಬ್ರಾ ಕಥೆ ಏನು?

ಇದೇ ವೇಳೆ ಈ ರೀತಿಯ ಡಿಜಿಟಲ್‌ ಕರೆನ್ಸಿ ಹೊಂದುವುದು, ಮಾರುವುದು, ಖರೀದಿಸುವುದು, ವರ್ಗಾಯಿಸುವುದು ಮತ್ತು ಆದರ ಮೂಲಕ ವಹಿವಾಟು ನಡೆಸುವ ಎಲ್ಲ ರೀತಿಯ ಕೃತ್ಯಗಳನ್ನು ಭಾರತದಲ್ಲಿ ಕಾನೂನು ಬಾಹಿರವೆಂದು ಪರಿಗಣಿಸಲಾಗಿದೆ. ಹಾಗಾಗಿ, ಭಾರತದಲ್ಲಿ ಫೇಸ್‌ಬುಕ್‌ನ ಲಿಬ್ರಾ ಕರೆನ್ಸಿಗೆ ಮಾನ್ಯತೆ ಸಿಗುವುದು ಕಷ್ಟ. ಆದರೆ, ಭವಿಷ್ಯವನ್ನು ಬಲ್ಲವರು ಯಾರು ಹೇಳಿ.? ಏಕೆಂದರೆ, ತಂತ್ರಜ್ಞಾನ ಅಳವಡಿಕೆಯಲ್ಲಿ ಭಾರತವು ಅಮೆರಿಕಾ ಮತ್ತು ಯೂರೋಪ್‌ನಂತಹ ಪಾಶ್ಚಾತ್ಯ ದೇಶಗಳ ಹಿಂದೆ ಬಿದ್ದಿರುವುದನ್ನು ನಾವು ಅಲ್ಲಗಳೆಯುವಂತಿಲ್ಲ.

Best Mobiles in India

English summary
Everything you need to know about Libra, Facebook's ambitious cryptocurrency. Facebook is planning to launch a cryptocurrency it hopes will “transform the global economy. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X