ಬಳಕೆದಾರರ ಸುರಕ್ಷತೆ ವಿಷಯದಲ್ಲಿ ಮತ್ತೆ ಎಡವಿದ ಫೇಸ್‌ಬುಕ್!

|

ಬಳಕೆದಾರರ ಸುರಕ್ಷತೆ ವಿಷಯದಲ್ಲಿ ಯಾವಾಗಲೂ ಎಡವುತ್ತಿರುವ ಪ್ರಖ್ಯಾತ ಜಾಲತಾಣ ಫೇಸ್‌ಬುಕ್ ಮೇಲೆ ಮತ್ತೊಂದು ಗುರುತರ ಆರೋಪವೊಂದು ಕೇಳಿಬಂದಿದೆ. ನೂರಾರು ದಶಲಕ್ಷ ಬಳಕೆದಾರರ ಪಾಸ್‌ವರ್ಡ್ ಮತ್ತು ಯೂಸರ್ ನೇಮ್‌ಗಳನ್ನು ಫೇಸ್‌ಬುಕ್ ಕಂಪೆನಿ ಸರಳವಾದ ಪಠ್ಯದ ರೂಪದಲ್ಲಿ ಸಂಗ್ರಹಿಸಿದೆ ಎಂಬ ವಿಷಯ ಹೊರಬಿದ್ದಿದ್ದು, ಇದು ಟೀಕೆಗೆ ಕಾರಣವಾಗಿದೆ.

ಹೌದು, ಫೇಸ್‌ಬುಕ್‌ ಕಂಪನಿಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಸುಮಾರು 20,000ಕ್ಕೂ ಹೆಚ್ಚು ಉದ್ಯೋಗಿಗಳು 60 ಕೋಟಿಗೂ ಅಧಿಕ ಬಳಕೆದಾರರ ಯೂಸರ್‌ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಆಕ್ಸಿಸ್ ಮಾಡಬಹುದು ಎಂದು ದಿ ವರ್ಜ್ ವರದಿ ಮಾಡಿದೆ. ಅಂದರೆ, ಕಂಪನಿಯ ಎಲ್ಲಾ 20,000 ಉದ್ಯೋಗಿಗಳು ಯಾವುದೇ ಖಾತೆಗೆ ಸುಲಭವಾಗಿ ಪ್ರವೇಶಿಸಬಹುದಾಗಿದೆ.

ಬಳಕೆದಾರರ ಸುರಕ್ಷತೆ ವಿಷಯದಲ್ಲಿ ಮತ್ತೆ ಎಡವಿದ ಫೇಸ್‌ಬುಕ್!

ಯಾವುದೇ ಇಂಟರ್‌ನೆಟ್ ಕಂಪೆನಿಯಾದರೂ ಇಂದಿನ ತಂತ್ರಜ್ಞಾನ ಯುಗದಲ್ಲಿ ಪಾಸ್‌ವರ್ಡ್‌ಗಳನ್ನು ಎನ್‌ಕ್ರಿಪ್ಟೆಡ್ ಸ್ವರೂಪದಲ್ಲಿ ಇಡುವುದು ಪದ್ಧತಿ. ಹೀಗೆ ಎನ್‌ಕ್ರಿಪ್ಟೆಡ್ ಸ್ವರೂಪದಲ್ಲಿ ಇಡುವುದು ಸುರಕ್ಷಿತ ವಿಧಾನ. ಆದರೆ ಫೇಸ್‌ಬುಕ್‌ ಪಾಸ್‌ವರ್ಡ್‌ಗಳನ್ನು ಟೆಕ್ಸ್ಟ್‌ ರೂಪದಲ್ಲಿ ಇಟ್ಟಿದೆ. ಜೊತೆಗೆ 20,000ಕ್ಕೂ ಹೆಚ್ಚು ಉದ್ಯೋಗಿಗಳು ಅವುಗಳನ್ನು ಆಕ್ಸಸ್ ಮಾಡಬಹುದಾಗಿದೆ.

ಫೇಸ್‌ಬುಕ್‌ನ ಸಂಸ್ಥೆಗೆ ಮತ್ತು ಉದ್ಯೋಗಿಗಳಿಗೆ ಕೋಟ್ಯಂತರ ಬಳಕೆದಾರರ ಪಾಸ್‌ವರ್ಡ್‌ಗಳನ್ನು ಬಳಸುವ ಅವಕಾಶ ಇತ್ತು. ಆದರೆ, ಕೋಟ್ಯಂತರ ಪಾಸ್‌ ವರ್ಡ್‌ಗಳನ್ನು ಸುಲಭವಾಗಿ ಓದಲು ಸಾಧ್ಯವಾಗುವಂತೆ ಟೆಕ್ಸ್ಟ್‌ ಸ್ವರೂಪದಲ್ಲಿ ಸರ್ವರ್‌ನಲ್ಲಿ ಸಂಗ್ರಹಿಸಿಡಲಾಗಿತ್ತು ಎಂದು ಹೆಸರು ಹೇಳಲು ಬಯಸದ ಉದ್ಯೋಗಿಯೊಬ್ಬರು ಮಾಧ್ಯಮಗಳ ಬಳಿ ಬಹಿರಂಗಪಡಿಸಿದ್ದಾರೆ.

ಬಳಕೆದಾರರ ಸುರಕ್ಷತೆ ವಿಷಯದಲ್ಲಿ ಮತ್ತೆ ಎಡವಿದ ಫೇಸ್‌ಬುಕ್!

2019ರ ಜನವರಿಯಲ್ಲಿಯೇ ಈ ಸಂಬಂಧ ಪರಿಶೀಲಿಸಲಾಗಿದ್ದು, ಕಂಪೆನಿಯಿಂದ ಹೊರಗೆ ಯಾವುದೇ ಪಾಸ್‌ವರ್ಡ್‌ ಸೋರಿಕೆಯಾಗಿಲ್ಲ ಎಂದು ಫೇಸ್‌ಬುಕ್‌ ಹೇಳಿಕೊಂಡಿದೆ.ಇದರಿಂದ ಯಾವುದೇ ಬಳಕೆದಾರರಿಗೆ ತೊಂದರೆಯಾಗಿರುವ ಉದಾಹರಣೆಯೇ ಇಲ್ಲ ಎಂದು ಫೇಸ್‌ಬುಕ್‌ ಹೇಳಿದೆ. ಆದರೂ ಸಹ ಈ ಆತಂಕಕಾರಿ ಘಟನೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

Most Read Articles
Best Mobiles in India

English summary
Facebook again came under scrutiny and drew plethora of criticism after it was revealed that the company used to store passwords of hundreds of millions of users in plain text. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X