ಬಿಟ್‌ಕಾಯಿನ್‌ಗೆ ಸೆಡ್ಡುಹೊಡೆಯಲು ಬರ್ತಿದೆ ಫೇಸ್‌ಬುಕ್‌ನ ಲಿಬ್ರಾ..!

By Gizbot Bureau
|

ನಿಮಗೆಲ್ಲಾ ಕ್ರಿಪ್ಟೋಕರೆನ್ಸಿ ಬಗ್ಗೆ ಸಾಮಾನ್ಯವಾಗಿ ಗೊತ್ತಿರುತ್ತೆ. ಕ್ರಿಪ್ಟೋಕರೆನ್ಸಿ ಅಂದ್ರೆ ನಿಮಗೆ ನೆನಪಾಗೋದು ತಡವಾಗಬಹುದು. ಆದ್ರೆ, ಬಿಟ್‌ಕಾಯಿನ್‌ ಅಂದ್ರೆ ತಟ್ಟನೇ ನಿಮ್ಮ ಕಣ್ಮುಂದೆ ಒಂದು ನಾಣ್ಯ ಬಂದೇ ಬರುತ್ತೆ. ಹೌದು, ಭಾರತದಲ್ಲಿ ಈ ಬಗ್ಗೆ ಬಹಳ ಅಂದ್ರೇ ಬಹಳಾನೇ ಚರ್ಚೆ ಆಗಿಬಿಟ್ಟಿದೆ. ಈಗ್ಯಾಕೇ ಕ್ರಿಪ್ಟೋಕರೇನ್ಸಿ ಬಗ್ಗೆ ಮಾತು ಅಂತೀರಾ. ಹೌದು, ಅವಶ್ಯಕವಾಗಿ ಒಂದು ವಿಷಯ ಹೇಳಲೇಬೇಕು.

ಬಿಟ್‌ಕಾಯಿನ್‌ಗೆ ಸೆಡ್ಡುಹೊಡೆಯಲು ಬರ್ತಿದೆ ಫೇಸ್‌ಬುಕ್‌ನ ಲಿಬ್ರಾ..!

ಅದೇನೆಂದ್ರೆ ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ ತನ್ನ ಕ್ರಿಪ್ಟೋಕರೆನ್ಸಿಯನ್ನು ಬಿಡುಗಡೆಗೊಳಿಸಲು ವೇದಿಕೆ ಸೃಷ್ಟಿಸಿಕೊಂಡಿದ್ದು, ಅಂತರಾಷ್ಟ್ರೀಯ ಮಾಧ್ಯಮಗಳ ಪ್ರಕಾರ ಇದೇ ತಿಂಗಳಲ್ಲಿ ತನ್ನ ಲಿಬ್ರಾ ಎಂಬ ಹೆಸರಿನ ಕ್ರಿಪ್ಟೋಕರೆನ್ಸಿ ಲಾಂಚ್ ಮಾಡುತ್ತೆ ಎನ್ನಲಾಗಿದೆ. ಹೀಗಾಗಿ ಫೇಸ್‌ಬುಕ್‌ನ ಕ್ರಿಪ್ಟೋಕರೆನ್ಸಿ ಯಾವಾಗ ಲಾಂಚ್..? ಕ್ರಿಪ್ಟೋಕರೆನ್ಸಿಗೆ ಸರ್ಕಾರದ ಅನುಮತಿ ಇದೆಯೇ..? ಭಾರತದಲ್ಲಿ ಇದನ್ನು ಬಳಸಬಹುದಾ..? ಕ್ರಿಪ್ಟೋಕರೆನ್ಸಿ ಅಂದ್ರೇ ಏನು..? ಎಂಬ ಪ್ರಶ್ನೆಗಳಿಗೆ ಮುಂದೆ ಉತ್ತರ ಸಿಗುತ್ತದೆ.

ಯಾವಾಗ ಬರುತ್ತೆ ಲಿಬ್ರಾ..?

ಯಾವಾಗ ಬರುತ್ತೆ ಲಿಬ್ರಾ..?

ಒಂದಿಷ್ಟು ವರದಿಗಳ ಪ್ರಕಾರ ಫೇಸ್‌ಬುಕ್‌ನ ಲಿಬ್ರಾ ಕ್ರಿಪ್ಟೋಕರೆನ್ಸಿ ಇದೇ ತಿಂಗಳು ಲಾಂಚ್ ಆಗಲಿದೆ. ಜೂನ್ 18ಕ್ಕೆ ಕಂಪನಿಯು ತನ್ನ ಕ್ರಿಪ್ಟೋಕರೆನ್ಸಿಯ ಬೇಸಿಕ್‌ಗಳ ಬಗ್ಗೆ ಶ್ವೇತಪತ್ರ ಮಂಡಿಸುವ ಸಾಧ್ಯತೆಯಿದ್ದು, ವಿವಿಧ ಹೂಡಿಕೆದಾರರಿಗೆ ಕ್ರಿಪ್ಟೋಕರೆನ್ಸಿಯ ಬಗ್ಗೆ ಮಾಹಿತಿಯನ್ನು ಫೇಸ್‌ಬುಕ್ ನೀಡುತ್ತೆ ಎನ್ನಲಾಗಿದೆ. ಫೇಸ್‌ಬುಕ್‌ನ ಉತ್ತರ ಯುರೋಪ್‌ನ ಹಣಕಾಸು ಸೇವೆ ಮತ್ತು ಪಾವತಿ ಪಾರ್ಟನರ್‌ಶಿಫ್‌ನ ಲಾರಾ ಮೆಕ್‌ಕ್ರಾಕೆನ್ ಕೂಡ ಈ ಬಗ್ಗೆ ಖಚಿತಪಡಿಸಿದ್ದು, ಜೂನ್ 18ಕ್ಕೆ ಕ್ರಿಪ್ಟೋಕರೆನ್ಸಿಯ ಬಗ್ಗೆ ಶ್ವೇತ ಪತ್ರ ಮಂಡಿಸೋ ಸಾಧ್ಯತೆಯನ್ನು ಪಕ್ಕಾ ಮಾಡಿದ್ದಾರೆ.

ಪ್ರತಿಕ್ರಿಯಿಸದ ಫೇಸ್‌ಬುಕ್..!

ಪ್ರತಿಕ್ರಿಯಿಸದ ಫೇಸ್‌ಬುಕ್..!

ಲಿಬ್ರಾ ಕ್ರಿಪ್ಟೋಕರೆನ್ಸಿ ಬಗ್ಗೆ ಪ್ರತಿಕ್ರಿಯಿಸಲು ಫೇಸ್‌ಬುಕ್‌ ನಿರಾಕರಿಸಿದ್ದು, ಸರ್ಕಾರದ ಮತ್ತು ಬ್ಯಾಂಕ್‌ಗಳ ಒಪ್ಪಿಗೆ ಸಿಕ್ಕ ತಕ್ಷಣ ಯಾವಾಗ ಬೇಕಾದರೂ ಕ್ರಿಪ್ಟೋಕರೆನ್ಸಿಯನ್ನು ಲಾಂಚ್ ಮಾಡಬಹುದಾಗಿದೆ. ಇನ್ನೊಂದಿಷ್ಟು ಮಾಹಿತಿ ಪ್ರಕಾರ ಅಧಿಕೃತವಾಗಿ ಕ್ರಿಪ್ಟೋಕರೆನ್ಸಿಯನ್ನು 2020ಕ್ಕೆ ಲಾಂಚ್ ಮಾಡಲು ಫೇಸ್‌ಬುಕ್‌ ನಿರ್ಧರಿಸಿದೆ. ಇನ್ನು, ಫೇಸ್‌ಬುಕ್‌ನ ಬ್ಲಾಕ್‌ಚೇನ್‌ ಪ್ರೊಜೆಕ್ಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಮಹತ್ತರ ಬದಲಾವಣೆಗಳಾಗುವುದಂತೂ ಖಂಡಿತ. ಹಣಕಾಸು ಮತ್ತು ಪೇಮೆಂಟ್ ವ್ಯವಹಾರಗಳಿಗೆ ಸಾಮಾಜಿಕ ಜಾಲತಾಣ ವೇದಿಕೆಯಾಗಿ ಹೊಸ ಯುಗವನ್ನೇ ಸೃಷ್ಟಿಸುವ ಸಾಧ್ಯತೆಯಿದೆ.

ಜನಪ್ರಿಯ ಮಾಡಲು ಸಾಕಷ್ಟು ಪ್ಲಾನ್..!

ಜನಪ್ರಿಯ ಮಾಡಲು ಸಾಕಷ್ಟು ಪ್ಲಾನ್..!

ತನ್ನ ಲಿಬ್ರಾ ಕ್ರಿಪ್ಟೋಕರೆನ್ಸಿಯನ್ನು ಜನಪ್ರಿಯಗೊಳಿಸಲು ಫೇಸ್‌ಬುಕ್‌ ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಿದೆ. ಕಡಿಮೆ ಬೆಲೆ ಅಥವಾ ಯಾವುದೇ ಶುಲ್ಕವಿಲ್ಲದೇ ಪಾವತಿಸುವುದು, ಸುಲಭದ ಹಣ ವರ್ಗಾವಣೆ ಮಾಡುವುದು ಸೇರಿ ವಿವಿಧ ಆಫರ್‌ಗಳನ್ನು ನೀಡಲು ಫೇಸ್‌ಬುಕ್‌ ಯೋಚಿಸುತ್ತಿದೆ, ಇನ್ನು, ವ್ಯಾಪಾರಿಗಳಿಗೂ ಸಹ ತನ್ನ ಲಿಬ್ರಾ ಕ್ರಿಪ್ಟೋಕರೆನ್ಸಿಯನ್ನು ಹೆಚ್ಚೆಚ್ಚು ಬಳಸುವಂತೆ ಬಹಳ ಕಡಿಮೆ ದರದಲ್ಲಿ ಸೇವೆಯನ್ನು ನೀಡಲು ಫೇಸ್‌ಬುಕ್‌ ಮುಂದಾಗುತ್ತಿದೆ ಎನ್ನಲಾಗಿದೆ.

ಲಿಬ್ರಾ ಅಂದ್ರೆ ಏನು..?

ಲಿಬ್ರಾ ಅಂದ್ರೆ ಏನು..?

ಫೇಸ್‌ಬುಕ್‌ ತನ್ನ ಕ್ರಿಪ್ಟೋಕರೆನ್ಸಿಗೆ ಸಾರ್ವಜನಿಕವಾಗಿ ಲಿಬ್ರಾ ಎಂದು ಕರೆಯಲು ಇಚ್ಚಿಸುತ್ತಿದ್ದು, ಯಾವುದೇ ಗ್ಲೋಬಲ್‌ ಕಾಯಿನ್ ಎಂಬ ಹೆಸರು ಫೇಸ್‌ಬುಕ್‌ ಮುಂದೆ ಇಲ್ಲ ಎಂಬುದು ಬಹಿರಂಗವಾಗಿದೆ. ಫೇಸ್‌ಬುಕ್‌ ಈಗಾಗಲೇ ಹಣಕಾಸು ಸೇವೆಗಳಿಗಾಗಿ ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಲಿಬ್ರಾ ನೆಟ್‌ವರ್ಕ್ಸ್ ಎಂಬ ಕಂಪನಿಯನ್ನು ನೊಂದಾಯಿಸಿಕೊಂಡಿದೆ. ಅದಲ್ಲದೇ LIBOR ಎಂಬುದರಿಂದ ಕೂಡ ಲಿಬ್ರಾ ಎಂಬ ಹೆಸರು ಬಂದಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು, LIBOR ಅಂದ್ರೆ London Inter-bank Offered Rate ಎನ್ನಲಾಗಿದ್ದು, ಜನರಿಗೆ ಆಕರ್ಷಕವಾಗಿ ಕಾಣಿಸಲು ಲಿಬ್ರಾ ಎಂದು ಫೇಸ್‌ಬುಕ್‌ ಹೆಸರಿಟ್ಟಿದೆ ಎನ್ನಲಾಗ್ತಿದೆ.

ಕ್ರಿಪ್ಟೋಟೋಕನ್..!

ಕ್ರಿಪ್ಟೋಟೋಕನ್..!

ಕ್ರಿಪ್ಟೋಕರೆನ್ಸಿ ಸ್ಟೇಬಲ್‌ಕಾಯಿನ್‌ ಆಗಿದೆ. ಕ್ರಿಪ್ಟೋಟೋಕನ್‌ ಅನ್ನು ಪೇಮೆಂಟ್‌ ಮತ್ತೀತರ ಹಣಕಾಸಿನ ಪ್ರಕ್ರಿಯೆಗಳಲ್ಲಿ ಉಂಟಾಗುವ ದರ ಏರಿಳಿತಗಳನ್ನು ತಡೆಯಲು ರೂಪಿಸಲಾಗಿದೆ. ಫೇಸ್‌ಬುಕ್‌ ಹಣಕಾಸು ಸಂಸ್ಥೆಗಳ ಜತೆ ಈಗಾಗಲೇ ಮಾತುಕತೆ ನಡೆಸಿದ್ದು, ವಿವಿಧ ರಾಷ್ಟ್ರಗಳ ಹಣ ಹೊಂದಿರುವ ಒಂದು ಬಿಲಿಯನ್ ಡಾಲರ್ ಮೌಲ್ಯದ ಬಾಸ್ಕೆಟ್ ಹೂಡಿಕೆ ಮಾಡಲು ಹಾಗೂ ನಾಣ್ಯದ ಮೌಲ್ಯ ಸುಸ್ಥಿರವಾಗಿರಿಸಲು ಭದ್ರತಾ ಕ್ರಮಗಳನ್ನು ಫೇಸ್‌ಬುಕ್ ಕ್ರಮಕೈಗೊಳ್ಳುತ್ತಿದೆ. ಲಿಬ್ರಾ ಬಿಡುಗಡೆಗೂ ಮುನ್ನವೇ ವಿವಿಧ ದೇಶಗಳ ಪೂರ್ವ ಅನುಮತಿಯನ್ನು ಪಡೆಯುವಲ್ಲಿ ಫೇಸ್‌ಬುಕ್‌ ನಿರತವಾಗಿದೆ.

ಬಳಕೆ ಹೇಗೆ..?

ಬಳಕೆ ಹೇಗೆ..?

ಲಿಬ್ರಾ ಕ್ರಿಪ್ಟೋಕರೆನ್ಸಿಯನ್ನು ಫೇಸ್‌ಬುಕ್‌ನ ಉತ್ಪನ್ನಗಳಾದ ವಾಟ್ಸ್‌ಆಪ್‌, ಮೆಸೆಂಜರ್, ಇನ್ಸ್ಟಾಗ್ರಾಂನಲ್ಲಿ ಯಾವುದೇ ಶುಲ್ಕವಿಲ್ಲದೇ ವರ್ಗಾವಣೆ ಮಾಡಬಹುದಾಗಿದೆ. ಟೋಕನ್‌ಗಳನ್ನು ಪೇಮೆಂಟ್‌ ಆಗಿ ವ್ಯಾಪಾರಿಗಳು ಸ್ವೀಕರಿಸುವಂತೆ ಮಾಡಲು ಫೇಸ್‌ಬುಕ್‌ ಕಾರ್ಯನಿರ್ವಹಿಸುತ್ತಿದ್ದು, ಸೈನ್‌ಅಪ್‌ ಬೋನಸ್‌ಗಳನ್ನು ವ್ಯಾಪಾರಿಗಳಿಗೆ ನೀಡಲು ಮುಂದಾಗಿದೆ, ಅದಲ್ಲದೇ, ಎಟಿಎಂಗಳನ್ನು ತರೆಯಲು ಫೇಸ್‌ಬುಕ್‌ ನಿರ್ಧರಿಸಿದ್ದು, ಬಳಕೆದಾರರು ಸಾಂಆಪ್ರದಾಯಿಕ ಹಣವನ್ನು ಇಲ್ಲಿ ಲಿಬ್ರಾ ಕ್ರಿಪ್ಟೋಕರೆನ್ಸಿ ಜತೆ ಬಳಸಬಹುದಾಗಿದೆ.

ಕ್ರಿಪ್ಟೋಕರೆನ್ಸಿ ಇತಿಹಾಸ..!

ಕ್ರಿಪ್ಟೋಕರೆನ್ಸಿ ಇತಿಹಾಸ..!

ಕ್ರಿಪ್ಟೋಕರೆನ್ಸಿ ಪರಿಕಲ್ಪನೆಗೆ ಕನಿಷ್ಠ ಎರಡು ದಶಕಗಳ ಇತಿಹಾಸವಿದೆ. 1998ರಲ್ಲಿ ವೀದಾಯ್ ಎಂಬ ಕಂಪ್ಯೂಟರ್ ಇಂಜಿನಿಯರ್ ಸೈಬರ್‌ಪಂಕ್ಸ್ ಎಂಬ ಇ-ಮೇಲ್ ಬಳಗದಲ್ಲಿ ಅನಾಮಿಕವಾಗಿ ನಿರ್ವಹಿಸಬಹುದಾದ, ಸಾಮುದಾಯಿಕ ಹೊಣೆಗಾರಿಕೆ ಇರುವ ಡಿಜಿಟಲ್ ದುಡ್ಡಿನ ಪರಿಕಲ್ಪನೆಯೊಂದನ್ನು ಮಂಡಿಸಿದ್ದರು. ಈ ಹಣವನ್ನು ಅಂದು ಅವರು ‘ಬಿ-ಮನಿ' ಎಂದು ಕರೆದಿದ್ದರು. ಇದು ವಾಸ್ತವಕ್ಕೆ ಬಂದಿದ್ದು 2009ರಲ್ಲಿ. ಜಪಾನಿನ ತಂತ್ರಜ್ಞ ಸತೋಷಿ ನಕಮೊಟೊ ಆ ಹೊತ್ತಿಗಾಗಲೇ ದೊಡ್ಡ ಗಾತ್ರದ ಡಿಜಿಟಲ್ ಕಡತಗಳನ್ನು ಹಂಚಿಕೊಳ್ಳುವುದಕ್ಕೆ ಇದ್ದ ಪಿಯರ್ ಟು ಪಿಯರ್ ತಂತ್ರಜ್ಞಾನವನ್ನು ಸುಧಾರಿಸಿ ಹೊಸ ಬಗೆಯ ಡಿಜಿಟಲ್ ದುಡ್ಡೊಂದನ್ನು ನಿಜವಾಗಿಸಿ ಇದಕ್ಕೆ ಬಿಟ್ ಕಾಯಿನ್ ಎಂಬ ಹೆಸರಿಟ್ಟರು. ಸಾಂಪ್ರದಾಯಿಕ ದುಡ್ಡಿನಷ್ಟೇ ಪರಿಣಾಮಕಾರಿಯಾಗಿ ಕಂಪ್ಯೂಟರ್ ಜಾಲದೊಳಗೆ ವ್ಯವಹರಿಸಬಹುದಾದ ಈ ಕ್ರಿಪ್ಟೋಕರೆನ್ಸಿಯ ಹಿಂದಿರುವ ತಂತ್ರಜ್ಞಾನ ‘ಬ್ಲಾಕ್ ಚೈನ್' ಆಗಿದೆ.

ಭಾರತದಲ್ಲಿ ಅನುಮತಿಯಿಲ್ಲ..!

ಭಾರತದಲ್ಲಿ ಅನುಮತಿಯಿಲ್ಲ..!

ಭಾರತದಲ್ಲಿ ಕ್ರಿಪ್ಟೋಕರೆನ್ಸಿಗೆ ಮಾನ್ಯತೆಯಿಲ್ಲ. ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕುಗಳಿಗೂ ಸುತ್ತೋಲೆ ಕಳುಹಿಸಿ ಯಾವುದೇ ಕಾರಣಕ್ಕೂ ಕ್ರಿಪ್ಟೋಕರೆನ್ಸಿಯಲ್ಲಿ ವ್ಯವಹರಿಸುವವರ ಜೊತೆಗೆ ಸಂಬಂಧ ಇಟ್ಟುಕೊಳ್ಳಬೇಡಿ ಎಂದು ಸ್ಪಷ್ಟವಾಗಿ ಹೇಳಿದೆ. ಇನ್ನು ಕಳೆದ ಕೇಂದ್ರ ಬಜೆಟ್‌ ಮಂಡಿಸಿದ ಪಿಯೂಷ್ ಗೋಯಲ್ ದೇಶದಲ್ಲಿ ಯಾವುದೇ ಕ್ರಿಪ್ಟೋಕರೆನ್ಸಿ ಅಧಿಕೃತವಾಗಿ ಚಲಾವಣೆಯಲ್ಲಿದೆ ಎಂದು ಸರ್ಕಾರ ಭಾವಿಸುವುದಿಲ್ಲ. ಆದ್ದರಿಂದ ಯಾವುದೇ ವ್ಯವಹಾರಕ್ಕೆ ಇವುಗಳನ್ನು ಬಳಸುವುದಕ್ಕೆ ನಿರ್ಬಂಧವಿದೆ ಎಂದು ಹೇಳಿ ಭಾರತದಲ್ಲಿ ಕ್ರಿಪ್ಟೋಕರೆನ್ಸಿಗೆ ಅನುಮತಿಯಿಲ್ಲ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದರು. ಆದರೆ, ನಮ್ಮಲ್ಲಿ ಯಾವುದೇ ಕ್ರಿಪ್ಟೋಕರೆನ್ಸಿಯ ಬಳಕೆ ಮತ್ತು ನಿಯಂತ್ರಣಕ್ಕಾಗಿ ಯಾವುದೇ ಕಾನೂನುಗಳಿಲ್ಲ. ಇವುಗಳ ಬಳಕೆಯನ್ನು ಸರ್ಕಾರ ಮಾನ್ಯ ಮಾಡದೇ ಇರುವುದರಿಂದ ಇದರಲ್ಲಿ ಮಾಡುವ ಹೂಡಿಕೆಗೆ ಕಾನೂನಿನ ಮಾನ್ಯತೆ ಇಲ್ಲ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜಪಾನ್ ಮತ್ತು ಯುರೋಪ್ ಒಕ್ಕೂಟಗಳು ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ಮಾನ್ಯ ಮಾಡಿವೆ.

Best Mobiles in India

English summary
Facebook To Debut Cryptocurrency Codenamed Libra On June 18

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X