ಫೇಸ್‌ಬುಕ್ ಅಕೌಂಟ್ ಇಲ್ಲದವರ ಮಾಹಿತಿ ಕೂಡ ಫೇಸ್‌ಬುಕ್‌ಗೆ ತಿಳಿಯುತ್ತಿದೆ!..ಹೇಗೆ ಗೊತ್ತಾ?

|

ಆಂಡ್ರಾಯ್ಡ್ ಫೋನ್ ಬಳಕೆದಾರನ ಎಲ್ಲಾ ನಡವಳಕೆಗಳು ಸಹ ಫೇಸ್‌ಬುಕ್ ಮತ್ತು ಗೂಗಲ್‌ನಂತಹ ಆನ್‌ಲೈನ್ ಜಾಹಿರಾತು ಮಾಧ್ಯಮಗಳಿಗೆ ಸುಲಭವಾಗಿ ತಿಳಿಯುತ್ತದೆ ಎಂಬ ಆತಂಕಕಾರಿ ಮಾಹಿತಿಯನ್ನು ಹೊರಹಾಕಲಾಗಿದೆ. ನೀವು ಫೇಸ್‌ಬುಕ್ ಮತ್ತು ಗೂಗಲ್ ಬಳಕೆ ಮಾಡಿಲ್ಲ ಎಂದರೂ ನಿಮ್ಮೆಲ್ಲಾ ಮಾಹಿತಿ ಅವುಗಳಿಗಳ ಕೈ ಸೇರುತ್ತಿದೆ ಎಂದು ಅಧ್ಯಯನ ಒಂದು ತಿಳಿಸಿದೆ.

ಹೌದು, ಆಂಡ್ರಾಯ್ಡ್ ಸೇವೆ ಬಳಸುವಾಗ ಅದರ ನಿರ್ಮಿತ ಸಂಸ್ಥೆ ನಿಮ್ಮ ಮಾಹಿತಿಗಳನ್ನು ಪಡೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಆದರೆ, ನೀವು ಫೇಸ್‌ಬುಕ್ ಬಳಕೆದಾರರಾಗಿದ್ದರೂ, ಅಲ್ಲದಿದ್ದರೂ ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಸಿದರೆಂದರೆ ಫೇಸ್‌ಬುಕ್ ನಿಮ್ಮ ಮಾಹಿತಿಯನ್ನು ಪಡೆದುಕೊಳ್ಳುತ್ತದೆ ಎಂಬುದು ಇತ್ತೀಚಿನ ಅಧ್ಯಯನದಿಂದ ಮತ್ತೊಮ್ಮೆ ಸಾಬೀತಾಗಿದೆ.

ಫೇಸ್‌ಬುಕ್ ಅಕೌಂಟ್ ಇಲ್ಲದವರ ಮಾಹಿತಿ ಕೂಡ ಫೇಸ್‌ಬುಕ್‌ಗೆ ತಿಳಿಯುತ್ತಿದೆ!..ಹೇಗೆ?

ಇದೇ ಭಾನುವಾರ ಬಿಡುಗಡೆಯಾದ ಒಂದು ಅಧ್ಯಯನದಿಂದ ಇಂತಹದೊಂದು ಆತಂಕಕಾರಿ ಮಾಹಿತಿ ಬಹಿರಂಗವಾಗಿದ್ದು, ಸ್ಮಾರ್ಟ್‌ಫೋನ್ ಬಳಕೆದಾರರ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ, ಆಂಡ್ರಾಯ್ಡ್ ಫೋನ್ ಬಳಕೆದಾರನ ಎಲ್ಲಾ ನಡವಳಕೆಗಳು ಹೇಗೆಲ್ಲಾ ಆನ್‌ಲೈನ್ ಜಾಹಿರಾತು ಕಂಪೆನಿಗಳ ಕೈಸೇರುತ್ತಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಫೇಸ್‌ಬುಕ್‌ಗೆ ಇತರ ಆಪ್‌ಗಳಿಂದ ಮಾಹಿತಿ ರವಾನೆ!

ಫೇಸ್‌ಬುಕ್‌ಗೆ ಇತರ ಆಪ್‌ಗಳಿಂದ ಮಾಹಿತಿ ರವಾನೆ!

ಸ್ಮಾರ್ಟ್‌ಫೋನ್ ಬಳಕೆದಾರರು ಬಳಸುತ್ತಿರುವ ಒಟ್ಟು ಅಪ್ಲಿಕೇಶನ್‌ಗಳ ಪೈಕಿ ಶೇ. 61ರಷ್ಟು ಅಪ್ಲಿಕೇಷನ್ ಗಳು ಫೇಸ್ಬುಕ್ ಸಾಫ್ಟ್ವೇರ್ ಡೆವಲಪ್ಮೆಂಟ್ ಕಿಟ್ ಮುಖಾಂತರ ಫೇಸ್‌ಬುಕ್‌ಗೆ ಮಾಹಿತಿ ರವಾನಿಸುತ್ತಿವೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಆಂಡ್ರಾಯ್ಡ್ ಶೇರ್ ಡೇಟಾದಲ್ಲಿನ ಅಪ್ಲಿಕೇಷನ್ ಮೂಲಕ ಇಂತಹದೊಂದು ಖಾಸಾಗಿ ಮಾಹಿತಿ ವಿನಿಮಯ ನಡೆಯುತ್ತಿದೆ.

ಫೇಸ್‌ಬುಕ್‌ಗೆ ಏನೆಲ್ಲಾ ಮಾಹಿತಿಗಳ ರವಾನೆಯಾಗುತ್ತಿದೆ?

ಫೇಸ್‌ಬುಕ್‌ಗೆ ಏನೆಲ್ಲಾ ಮಾಹಿತಿಗಳ ರವಾನೆಯಾಗುತ್ತಿದೆ?

ಸ್ಮಾರ್ಟ್‌ಪೋನ್ ಬಳಕೆದಾರನ ಬಹುತೇಕ ಅಪ್ಲಿಕೇಷನ್‌ಗಳು ಫೇಸ್‌ಬುಕ್‌ನೊಡನೆ ಹಂಚಿಕೊಂಡಿದ್ದ ಡೇಟಾಗಳ ವಿವರ ಕೆಲವೊಮ್ಮೆ ಅತ್ಯಂತ ಸೂಕ್ಷ್ಮವಾಗಿರುವ ಮಾಹಿತಿಯನ್ನೂ ಹೊಂದಿವೆ ಎಂದು ಹೇಳಲಾಗಿದೆ. ವಿವಿಧ ಅಪ್ಲಿಕೇಶನ್‌ಗ ದತ್ತಾಂಶವು ಜನರ ಚಟುವಟಿಕೆಗಳ ನಿಕಟ ವರದಿ, ಅವರ ಅಭಿರುಚಿ ಸೇರಿದಂತೆ ಇನ್ನಿತರ ಪ್ರಮುಖ ಖಾಸಾಗಿ ಮಾಹಿತಿಯನ್ನೂ ಒಳಗೊಂಡಿದೆ.

ಅಧ್ಯಯನದಲ್ಲಿ ತಿಳಿದುಬಂದ ಶಾಕಿಂಗ್ ಸತ್ಯ ಏನು ಗೊತ್ತಾ?

ಅಧ್ಯಯನದಲ್ಲಿ ತಿಳಿದುಬಂದ ಶಾಕಿಂಗ್ ಸತ್ಯ ಏನು ಗೊತ್ತಾ?

ಪಿರಿಯಡ್ ಟ್ರ್ಯಾಕರ್ ಕ್ಲೂ, ಇಂಡೀಡ್, ಮೈ ಟಾಕಿಂಗ್ ಟಾಮ್ ಅಪ್ಲಿಕೇಷನ್ ಮತ್ತು ಕಾಬಾ ಕನೆಕ್ಟ್ (ಮುಸ್ಲಿಂ ಪ್ರಾರ್ಥನಾ ಅಪ್ಲಿಕೇಶನ್) ಆಪ್‌ಗಳೆಲ್ಲವೂ ಫೇಸ್ ಬುಕ್ ನೊಡನೆ ಮಾಹಿತಿ ಹಂಚಿಕೊಳ್ಳುತ್ತವೆ ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ. ಜಾಹಿರಾತು ಸಂಸ್ಥೆ ಕೂಡ ಆಗಿರುವ ಫೇಸ್‌ಬುಕ್ ಮೂಲಕ ಮಾಹಿತಿ ಹಂಚಿಕೊಳ್ಳುವ ಮೂಲಕ ಅವು ಲಾಭ ಮಾಡಿಕೊಳ್ಳುತ್ತಿವೆ.

ಗೂಗಲ್ ಜೊತೆ ಕೂಡ ಮಾಹಿತಿ ಹಂಚಿಕೊಳ್ಳುತ್ತಿವೆ.!

ಗೂಗಲ್ ಜೊತೆ ಕೂಡ ಮಾಹಿತಿ ಹಂಚಿಕೊಳ್ಳುತ್ತಿವೆ.!

ಫೇಸ್‌ಬುಕ್ ಸೇರಿದಂತೆ ಇದೇ ಮಾಹಿತಿಯನ್ನು ಗೂಗಲ್ ಜಾಹೀರಾತು ಐಡಿಯೊಂದಿಗೂ ಖಾಸಾಗಿ ಮಾಹಿತಿ ಹಂಚಿಕೊಳ್ಳಲಿಕ್ಕೆ ಸಹ ಈ ಆಪ್‌ಗಳು ನೆರವಾಗಿದೆ. ಗೂಗಲ್ ಮುಖಾಂತರ ವಿವಿಧ ಆಪ್‌ಗಳ ಮತ್ತು ವೆಬ್ ಬಳಕೆದಾರರ ನಡವಳಿಕೆಯ ಬಗ್ಗೆ ಡೇಟಾವನ್ನು ಟೋಟಲ್ ಪ್ರೊಫೈಲ್‌ಗೆ ಲಿಂಕ್ ಮಾಡಲು ಜಾಹೀರಾತುದಾರರನ್ನು ಗೂಗಲ್‌ ಅನುಮತಿಸುತ್ತಿದೆ ಎಂದು ಹೇಳಲಾಗಿದೆ.

ಗೂಗಲ್ ಮತ್ತು ಫೇಸ್‌ಬುಕ್‌ಗೆ ಏನು ಲಾಭ?

ಗೂಗಲ್ ಮತ್ತು ಫೇಸ್‌ಬುಕ್‌ಗೆ ಏನು ಲಾಭ?

ಗೂಗಲ್ ಮತ್ತು ಫೇಸ್‌ಬುಕ್‌ ಜಾಹಿರಾತುಗಳನ್ನು ಭಿತ್ತರಿಸುವ ಮಾಧ್ಯಮಗಳಾಗಿರುವುದರಿಂದ ಜನರ ಖಾಸಾಗಿ ಮಾಹಿತಿಗಳು ಅವಕ್ಕೆ ಲಾಭ ತಂದುಕೊಡುತ್ತದೆ. ಆಪ್‌ಗಳು ನೀಡುವ ಮಾಹಿತಿಗಳಿಂದ ಬಳಸುತ್ತಿರುವವರು ಯಾರು?, ಅದು ಸ್ರೀ ಅಥವಾ ಪುರುಷನೆ?, ಆತನ ಧರ್ಮ ಯಾವುದು?, ಉದ್ಯೋಗ ಎಲ್ಲವನ್ನೂ ತಿಳಿದು ಜಾಹಿರಾತುಗಳನ್ನು ಆತನಿಗೆ ಭಿತ್ತರಿಸುತ್ತವೆ.

ಬಳಕೆದಾರರ ನಡವಳಕೆಗಳ ಮೇಲೆ ಜಾಹಿರಾತು ನಿರ್ಧಾರ!

ಬಳಕೆದಾರರ ನಡವಳಕೆಗಳ ಮೇಲೆ ಜಾಹಿರಾತು ನಿರ್ಧಾರ!

ಒಬ್ಬ ವ್ಯಕ್ತಿಯ ಖಾಸಾಗಿ ಮಾಹಿತಿಗಳಲ್ಲಿ ಆತನ ಎಲ್ಲಾ ಅಭಿರುಚಿಗಳನ್ನು ತಿಳಿಯಲು ಸಾಧ್ಯವಿದೆ. ಓರ್ವ ಗೂಗಲ್‌ನಲ್ಲಿ ಏನನ್ನಾದರೂ ಸರ್ಚ್ ಮಾಡಿದಾಗ ಆತನಿಗೆ ಕಾಣುವ ಆನ್‌ಲೈನ್ ಜಾರಿರಾತುವಿನಲ್ಲೂ ಅದೇ ವಸ್ತುವಾಗಿರುತ್ತದೆ. ಫೇಸ್‌ಬುಕ್‌ ಕೂಡ ಖಾಸಾಗಿ ಆಪ್‌ಗಳ ಮೂಲಕ ಡೇಟಾ ಸಂಗ್ರಹಿಸಿ ತನ್ನ ಬಳಕೆದಾರ ಅಭಿರುಚಿ ಮೇಲೆ ಜಾಹಿರಾತನ್ನು ಭಿತ್ತರಿಸುತ್ತದೆ.

Best Mobiles in India

English summary
The study 'How Apps on Android Share Data with Facebook' by Privacy International found that 61 per cent of the total apps that were studied, sent information to Facebook. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X