ಯೂಟ್ಯೂಬಿಗೆ ಸೆಡ್ಡು, ಶೀಘ್ರವೇ ಬರಲಿದೆ ಫೇಸ್‌ಬುಕ್‌ ಟಿವಿ:ಏನಿದರ ವಿಶೇಷತೆ?

Written By:

ಈಗಾಗಲೇ ವಿಶ್ವದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿರುವ ಫೇಸ್‌ಬುಕ್ ಸರಿ ಸುಮಾರು 200 ಕೋಟಿ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದಲ್ಲದೇ ವಾಟ್ಸ್ಆಪ್ ಸೇರಿದಂತೆ ಅನೇಕ ಆಪ್‌ಗಳ ಒಡೆತನವನ್ನು ಹೊಂದಿದೆ ಎನ್ನಲಾಗಿದೆ.

ಯೂಟ್ಯೂಬಿಗೆ ಸೆಡ್ಡು, ಶೀಘ್ರವೇ ಬರಲಿದೆ ಫೇಸ್‌ಬುಕ್‌ ಟಿವಿ:ಏನಿದರ ವಿಶೇಷತೆ?

ಓದಿರಿ: ನಿಮ್ಮ ಆಂಡ್ರಾಯ್ಡ್ ಫೋನಿನ ವೇಗ ಹೆಚ್ಚಿಸುವುದೇಗೆ..? ಇಲ್ಲಿದೇ ಸಿಂಪಲ್ ಟಿಪ್ಸ್

ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಫೇಸ್‌ಬುಕ್ ಮುಂದಾಗಿದ್ದು, ಫೇಸ್‌ಬುಕ್ ವಿಡಿಯೋ ನೋಡುಗರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ತನ್ನದೇ ಟಿವಿಯನ್ನು ಸ್ಥಾಪಿಸಿಲು ಮುಂದಾಗಿದೆ. ಯೂಟ್ಯೂಬಿಗೆ ಸೆಡ್ಡು ಹೊಡೆಯಲು ಮುಂದಾಗಿದ ಎನ್ನುವ ಮಾತು ಕೇಳಿ ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಟೋಡ್ಸ್ ಲೈವ್:

ಸ್ಟೋಡ್ಸ್ ಲೈವ್:

ಸಾಮಾನ್ಯ ಟಿವಿಗಳಲ್ಲಿ ಬರುವಂತಹ ಲೈವ್‌ ಅನ್ನು ಫೇಸ್‌ಬುಕ್‌ನಲ್ಲಿಯೂ ಪ್ರಸಾರ ಮಾಡುವ ಚಿಂತನೆಯನ್ನು ನಡೆಸಲಾಗಿದೆ. ಫೇಸ್‌ಬುಕ್‌, ಇದೀಗ ಟಿ.ವಿ ಮತ್ತು ಕ್ರೀಡೆಗಳನ್ನು ನೇರ ಪ್ರಸಾರ ಮಾಡುವ ಸಿದ್ಧತೆ ನಡೆಸಿದೆ. ಇದಕ್ಕಾಗಿ ಮಾತುಕತೆಯೂ ನಡೆಯುತ್ತಿದೆ.

ಫೇಸ್‌ಬುಕ್‌ನಲ್ಲೇ ಕ್ರಿಕೆಟ್ ಲೈವ್:

ಫೇಸ್‌ಬುಕ್‌ನಲ್ಲೇ ಕ್ರಿಕೆಟ್ ಲೈವ್:

ಇನ್ನು ಮುಂದೆ ಫೇಸ್‌ಬುಕ್‌ ಬಳಕೆದಾರರು ತಮ್ಮ ಖಾತೆಯಲ್ಲಿ ನೇರವಾಗಿ ಟಿವಿ ಮತ್ತು ಕ್ರಿಕೆಟ್ ಲೈವ್ ವೀಕ್ಷಿಸಬಹುದು ಎಂದು ಫೇಸ್‌ಬುಕ್‌ ಕಂಪೆನಿಯ ಹಿರಿಯ ಅಧಿಕಾರಿಗಳು ತಿಳಿದ್ದು, ಮೂಲಗಳ ಪ್ರಕಾರ ಶೀಘ್ರವೇ ಈ ಸೇವೆಯೂ ಆರಂಭವಾಗಲಿದೆ ಎನ್ನಲಾಗಿದೆ.

ಖಾಸಗಿ ಟಿವಿ ಚಾನಲ್‌ಗಳು ಲಭ್ಯ:

ಖಾಸಗಿ ಟಿವಿ ಚಾನಲ್‌ಗಳು ಲಭ್ಯ:

ಕೆಲವು ಖಾಸಗಿ ಚಾನೆಲ್ ಗಳ ಜೊತೆಯಲ್ಲಿ ಮಾತುಕತೆ ನಡೆಸಲಾಗಿದೆ. ಇನ್ನು ಮುಂದೆ ಫೇಸ್‌ಬುಕ್‌ ಗ್ರಾಹಕರು ತಮ್ಮ ಖಾತೆಯ ಮೂಲಕವೇ ತಮ್ಮ ಇಷ್ಟದ ಕ್ರೀಡೆ, ಸಿನಿಮಾ, ಧಾರಾವಾಹಿಗಳ ನೇರ ಪ್ರಸಾರ ವೀಕ್ಷಿಸಬಹುದು. ಟಿವಿ ನೋಡುವುದು ಈಗಾಗಲೇ ಕಡಿಮೆಯಾಗಿದೆ ಮುಂದೆ ಇಲ್ಲವಾಗಬಹುದು.

ಅಮೆಜಾನ್ ಟಿ.ವಿ ಚಾನೆಲ್‌ಗಳು ಲಭ್ಯ:

ಅಮೆಜಾನ್ ಟಿ.ವಿ ಚಾನೆಲ್‌ಗಳು ಲಭ್ಯ:

ಈಗಾಗಲೇ ಅಮೆಜಾನ್ ಟಿ.ವಿ ಚಾನೆಲ್‌ಗಳು, ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಫೇಸ್‌ಬುಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಶೀಘ್ರವೇ ಪ್ರಮುಖ ಕಂಪನಿಗಳೊಂದಿಗೆ ಮಾತುಕತೆ ಮುಗಿಸಿ ಫೇಸ್‌ಬುಕ್ ಟಿವಿ ಸೇವೆಯನ್ನು ಆರಂಭಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Facebook TV is reportedly coming in two weeks, according to Bloomberg. TV partners are already being asked to submit the first episodes of their "spotlight" shows. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot