ಹಿಂದುಳಿದ ರಾಷ್ಟ್ರಕ್ಕೆ ಫೇಸ್‌ಬುಕ್‌ ಚಾಚಿದೆ ನೆರವಿನ ಹಸ್ತ

By Suneel
|

ಫೇಸ್‌ಬುಕ್‌ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ Internet.org ಮೂಲಕ ಉಪಗ್ರಹದೊಂದಿಗೆ ಪ್ರಾಥಮಿಕ ಹಂತದ ಇಂಟರ್‌ನೆಟ್‌ ಒದಗಿಸುವ ಕ್ರಮ ಕೈಗೊಂಡಿದೆ. ಫೇಸ್‌ಬುಕ್‌ನ ಧ್ಯೇಯ ಪ್ರಪಂಚದಲ್ಲಿ ಉತ್ತಮ ಸಂಪರ್ಕ ಕಲ್ಪಿಸುವುದಾಗಿದದ್ದು, ಜನರಿಗೆ ಎಲ್ಲಾ ರೀತಿಯ ಹಾಗೂ ಹೋಗುಗಳ ಬಗ್ಗೆ ಸಂಪರ್ಕ ಕಲ್ಪಿಸುವುದಾಗಿದೆ. ಇದಕ್ಕಾಗಿ ಉಪಗ್ರಹಗಳು ಪ್ರಮುಖ ಪಾತ್ರ ವಹಿಸುತ್ತವೆ.

ಓದಿರಿ: ಮೊಬೈಲ್ ಬಳಕೆಯಲ್ಲಿ ಯುವತಿಯರದ್ದೇ ಮೇಲುಗೈ

ಫೇಸ್‌ಬುಕ್‌ ಈಗ ಆಫ್ರಿಕಾಗೆ ಉಚಿತ ಇಂಟರ್‌ನೆಟ್‌ ಸೌಲಭ್ಯ ಒದಗಿಸಲು ಕೆಲವು ಉಪಗ್ರಹ ಆಪರೇಟರ್‌ಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ. ಈ ಬಗ್ಗೆ ನಿಮಗೆ ಇನ್ನಷ್ಟು ವಿಶೇಷ ಮಾಹಿತಿಗಳು ಈ ಲೇಖನದಲ್ಲಿ ನೀಡಲಾಗಿದೆ.

 ಸಹಭಾಗಿತ್ವ ಒಪ್ಪಂದ

ಸಹಭಾಗಿತ್ವ ಒಪ್ಪಂದ

ಫೇಸ್‌ಬುಕ್‌ ಕಂಪನಿಯು ಫ್ರೆಂಚ್‌ನ ಉಪಗ್ರಹ ಆಪರೇಟರ್‌ ಕಂಪೆನಿಯಾದ ಯುಟೆಲ್ಸ್ಯಾಟ್ ನೊಂದಿಗೆ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿದ್ದು, AMOS-6 ಉಪಗ್ರಹದ ಬಳಸಿಕೊಂಡು ಅಭಿವೃದ್ಧಿಶೀಲ ರಾಷ್ಟ್ರವಾದ ಆಫ್ರಿಕಾಗೆ ಉಚಿತ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸುವುದಾಗಿ ಹೇಳಿದೆ.

ಸ್ಪೇಸ್‌ಕಾಮ್‌

ಸ್ಪೇಸ್‌ಕಾಮ್‌

ಫೇಸ್‌ಬುಕ್‌ ಮತ್ತು ಯುಟೆಲ್ಸ್ಯಾಟ್, ಇಸ್ರೇಲ್‌ನ ಉಪಗ್ರಹ ಆಪರೇಟರ್‌ ಸ್ಪೇಸ್‌ಕಾಮ್‌ನೊಂದಿಗೆ ಎರಡು ವರ್ಷಗಳ ಅವಧಿಯ ಸಹಭಾಗಿತ್ವಕ್ಕೆ ಸಹಿಹಾಕಿವೆ.

ಬ್ರಾಡ್ ಬ್ಯಾಂಡ್‌ ಪೇಲೋಡ್

ಬ್ರಾಡ್ ಬ್ಯಾಂಡ್‌ ಪೇಲೋಡ್

ಇವುಗಳು ಉಪಗ್ರಹದ ಎಲ್ಲಾ ಬ್ರಾಡ್ ಬ್ಯಾಂಡ್‌ ಪೇಲೋಡ್‌ ಅನ್ನು ಉಪಯೋಗಿಸಿಕೊಳ್ಳಲು ಯೋಜನೆ ರೂಪಿಸಿವೆ. AMOS-6 2016 ರ ಅರ್ಧಭಾಗದಲ್ಲಿ ಉಪಯೋಗಿಸಲು ನಿಯೋಜನೆ ಮಾಡಲಾಗಿದೆ.

AMOS-6

AMOS-6

AMOS-6 ಭೂಸ್ಥಾಯಿ ಉಪಗ್ರಹವಾಗಿದ್ದು, ಕಾ ಬ್ಯಾಂಡ್ ಸ್ಪಾಟ್ ಕಿರಣಗಳು ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಅನ್ನು ವೈಯಕ್ತಿಕ ಬಳಕೆದಾರರಿಗೆ ಒದಗಿಸಲಿದೆ.

ಯೋಜನೆ 2013 ರಲ್ಲಿ ಜಾರಿ

ಯೋಜನೆ 2013 ರಲ್ಲಿ ಜಾರಿ

ಈ ಯೋಜನೆಯನ್ನು 2013 ರಲ್ಲಿ ಜಾರಿಮಾಡಲಾಗಿದ್ದು, Internet.org ಆಫ್ರಿಕಾದ ಘಾನ, ಜಾಂಬಿಯಾ, ಸೆನೆಗಾಲ್‌, ದಕ್ಷಿಣ ಆಫ್ರಿಕಾ, ಮಲಿ, ಕೀನ್ಯಾ ಮತ್ತು ತಾಂಜೆನಿಯಾಗಳಿಗೆ ಮಾತ್ರ ಈ ಸೌಲಭ್ಯ ಒದಗಿಸಿದೆ. ಅದರೆ ಈಗ ಇದರ ಕ್ರಮವನ್ನು ವಿಸ್ತಾರಗೊಳಿಸಲಿದ್ದು, ಆಫ್ರಿಕಾದ ವಿಶಾಲ ಭಾಗಕ್ಕೆ ಇಂಟರ್‌ನೆಟ್‌ ಸೌಲಭ್ಯ ಒದಗಿಸಲಿರುವ ಬಗ್ಗೆ ಯುಟೆಲ್ಸ್ಯಾಟ್ ಸ್ಟೇಟ್ಸ್‌ ಹೇಳಿದೆ.

ಫೇಸ್‌ಬುಕ್‌ನ ಧ್ಯೇಯ

ಫೇಸ್‌ಬುಕ್‌ನ ಧ್ಯೇಯ

"ಫೇಸ್‌ಬುಕ್‌ನ ಧ್ಯೇಯ ಪ್ರಪಂಚಕ್ಕೆ ಉತ್ತಮ ಸಂಪರ್ಕ ಕಲ್ಪಿಸುವುದಾಗಿದದ್ದು, ಇದರಲ್ಲಿ ಉಪಗ್ರಹಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ ಜನರ ಸಂಪರ್ಕಕ್ಕೆ ಇರುವ ಅಡೆತಡೆಗಳನ್ನು ಫೇಸ್‌ಬುಕ್‌ ನಿವಾರಿಸಲಿದೆ" ಎಂದು Internet.org ಉಪಾಧ್ಯಕ್ಷ ಕ್ರಿಸ್ ಡೇನಿಯಲ್ಸ್, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 Internet.org

Internet.org

Internet.org ಇಂಟರ್‌ನೆಟ್‌ ತಟಸ್ಥ ನೀತಿಯನ್ನು ಉಲ್ಲಂಘಿಸಿತ್ತು ಎಂದು ಇತ್ತೀಚೆಗೆ ಟೀಕೆಗೆ ಒಳಗಾಗಿದ್ದು ಆ ಸಮಯದಲ್ಲಿ ಜುಕರ್‌ ಬರ್ಗ್‌ ಯೋಜನೆಯನ್ನು ರಕ್ಷಿಸುವಲ್ಲಿ ಮುಂದಾಗಿದ್ದರು.

ನೇರವಾಗಿ ಬಳಕೆದಾರರಿಗೆ

ನೇರವಾಗಿ ಬಳಕೆದಾರರಿಗೆ

ಇಂಟರ್‌ನೆಟ್‌ ಸೌಲಭ್ಯವನ್ನು ನೇರವಾಗಿ ಬಳಕೆದಾರರಿಗೆ ಒದಗಿಸುವ ಯೋಜನೆ ರೂಪಿಸಿದವರಲ್ಲಿ ಫೇಸುಬುಕ್‌ ಕಂಪನಿ ಮೊದಲನೆಯದಲ್ಲ.

2014 ರ ನವೆಂಬರ್‌

2014 ರ ನವೆಂಬರ್‌

2014 ರ ನವೆಂಬರ್‌ನಲ್ಲಿ ಟೆಸ್ಲಾ ಸಿಇಒ ಇಲಾನ್‌ ಮುಸ್ಕ್ ಜಗತ್ತಿನಾದ್ಯಂತ ಉಪಗ್ರಹ ಸಮೂಹದಿಂದ ಉಚಿತ ಇಂಟರ್‌ನೆಟ್‌ ಒದಗಿಸಲು ಯೋಜನೆ ಅನಾವರಣ ಮಾಡಲಾಗಿತ್ತು.

$ 1 ಬಿಲಿಯನ್‌

$ 1 ಬಿಲಿಯನ್‌

2014 ರ ಜೂನ್‌ನಲ್ಲಿ ಗೂಗಲ್‌ $ 1 ಬಿಲಿಯನ್‌ ಹಣದ ವೆಚ್ಚದಲ್ಲಿ ಇಂಟರ್‌ನೆಟ್‌ ಸೌಲಭ್ಯವನ್ನು ಉಪಗ್ರಹದೊಂದಿಗೆ ಒದಗಿಸುವ ಬಗ್ಗೆ ಯೋಜನೆ ರೂಪಿಸುತ್ತಿರುವ ಬಗ್ಗೆ ವರದಿಯಾಗಿತ್ತು.

Best Mobiles in India

English summary
Facebook just put some serious satellite oomph behind its Internet.org initiative, which aims to bring basic Internet access to developing countries.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X