ಜಿಯೋ-ಏರ್‌ಟೆಲ್ ಚಿಂತೆ ಬಿಡಿ: 2019ಕ್ಕೆ ಉಚಿತ 5G ಇಂಟರ್ನೆಟ್ ನೀಡಲಿದೆ ಅಂಟೆನಾ...!

|

ಹಿಂದೊಮ್ಮೆ ಭಾರತ ಸೇರಿದಂತೆ ವಿಶ್ವದ ಎಲ್ಲಾ ಕಡೆಗಳಲ್ಲಿ ನೆಟ್ ನ್ಯೂಟ್ರಾಲಿಟಿಯನ್ನು ಜಾರಿಗೆ ತರಬೇಕು ಎಂದು ಕ್ರಾಂತಿಯನ್ನು ಮಾಡಲು ಹೊರಟಿದ್ದ ಫೇಸ್ ಬುಕ್, ಇಂಟರ್ನೆಟ್ ಸೌಲಭ್ಯವಂಚಿತರಿಗೆ ಉಚಿತವಾಗಿ ಸೇವೆ ದೊರೆಯುವಂತೆ ಆಗ ಬೇಕು ಎಂದು ಆಶಯವನ್ನು ಹೊಂದಿತ್ತು. ಆದರೆ ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲವು ದೊರೆಯದ ಕಾರಣ ಮತ್ತು ಫೇಸ್‌ಬುಕ್ ತನ್ನ ಲಾಭಕ್ಕೆ ಇದನ್ನು ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ವಾದದಿಂದಾಗಿ ನೆಟ್ ನ್ಯೂಟ್ರಾಲಿಟಿ ಹಳ್ಳ ಹಿಡಿದಿತ್ತು.

ಜಿಯೋ-ಏರ್‌ಟೆಲ್ ಚಿಂತೆ ಬಿಡಿ: 2019ಕ್ಕೆ ಉಚಿತ 5G ಇಂಟರ್ನೆಟ್ ನೀಡಲಿದೆ ಅಂಟೆನಾ...

ಆದರೆ ಇದಕ್ಕೆ ಮತ್ತೊಂದು ರೀತಿಯಲ್ಲಿ ಜೀವವನ್ನು ನೀಡಲು ಮುಂದಾಗಿರುವ ಫೇಸ್‌ಬುಕ್, ವಿಶ್ವದಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು 2020ಕ್ಕೆ 5G ಸೇವೆಯನ್ನು ನೀಡುವ ಪ್ಲಾನ್ ಮಾಡುತ್ತಿರುವ ಸಂದರ್ಭದಲ್ಲಿಯೇ, ಅವುಗಳಿಗಿಂತ ಮುಂಚಿತವಾಗಿ ಮುಂದಿನ ವರ್ಷವೇ ಅಂದರೆ 2019ಕ್ಕೆ 5G ಸೇವೆಯನ್ನು ವಿಶ್ವದ ಎಲ್ಲಾ ಮೂಲೆ ಮೂಲೆಗೆ ನೀಡಲು ಯೋಜನೆಯೊಂದನ್ನು ತಯಾರಿಸಿದೆ ಎನ್ನಲಾಗಿದೆ. ಇದಕ್ಕಾಗಿಯೇ ಸ್ಪೇಸ್ ‍x ನೊಂದಿಗೆ ಸೇರಿಕೊಂಡು ಸ್ಯಾಟಿಲೈಟ್ ಹಾರಿಸಲು ಯೋಜನೆಯನ್ನು ರೂಪಿಸಿದೆ. ಇದರಿಂದಾಗಿ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಉಚಿತವಾಗಿ 5G ಇಂಟರ್ನೆಟ್ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಭೂಮಿಯೆಲ್ಲೆಡೆ ಇಂಟರ್ನೆಟ್:

ಭೂಮಿಯೆಲ್ಲೆಡೆ ಇಂಟರ್ನೆಟ್:

ಸದ್ಯ ಕೇವಲ ನೆಟ್ವರ್ಕ್ ಇರುವ ಕಡೆಗಳಲ್ಲಿ ಮಾತ್ರವೇ ದೊರೆಯುತ್ತಿರುವ ಇಂಟರ್ನೆಟ್ ಸೇವೆಯನ್ನು ಭೂಮಿಯ ಮೂಲೆ ಮೂಲೆಗೆ ತಲುಪಿಸುವ ಪ್ರಯತ್ನ ಮಾಡಲು ಫೇಸ್‌ಬುಕ್ ಮುಂದಾಗಿದ್ದು, ನೇರವಾಗಿ ಸ್ಯಾಟಿಲೈಟ್ ನಿಂದಲೇ ಇಂಟರ್ನೆಟ್ ಸೇವೆಯನ್ನು ನೀಡುವ ಯೋಜನೆಗೆ ಕೈ ಹಾಕಿದೆ.

ಸ್ಯಾಟಿಲೈಟ್ ಗಳು:

ಸ್ಯಾಟಿಲೈಟ್ ಗಳು:

ಖಾಸಗಿ ಬಾಹ್ಯಾಕಾಶ ಸಂಸ್ಥೆಯಾಗಿರುವ ಇಯಾನ್ ಮಾಸ್ಕ್ ಮಾಲೀಕತ್ವದ ಸ್ಪೇಸ್ X ನೊಂದಿಗೆ ಕೈ ಜೋಡಿಸಿರುವ ಫೇಸ್‌ಬುಕ್, ಅನೇಕ ಸ್ಯಾಟಿಲೈಟ್ ಗಳನ್ನು ಹಾರಿಸಲಿದೆ. ಇದರಿಂದಲೇ ನೇರಾವಾಗಿ ಬಳಕೆದಾರರಿಗೆ ಇಂಟರ್ನೆಟ್ ಸೇವೆಯನ್ನು ನೀಡುವ ಪ್ಲಾನ್ ಮಾಡಿದೆ. ಇದರಿಂದಾಗಿ ಯಾವುದೇ ಪ್ರದೇಶದಲ್ಲಿ ಇದ್ದರು ನೆಟ್‌ವರ್ಕ್ ಸಮಸ್ಯೆ ಎದುರಾಗುವುದಿಲ್ಲ.

ಅಂಟೆನಾ:

ಅಂಟೆನಾ:

ಫೇಸ್‌ಬುಕ್ ಈ ಯೋಜನೆಗೆ ಅಂಟೆನಾ ಎಂದು ನಾಮಕರಣವನ್ನು ಮಾಡಿದೆ. ಭೂಮಿಯ ಪ್ರತಿ ಮೂಲೆಗೂ ತನ್ನ ಸೇವೆಯನ್ನು ವಿಸ್ತರಿಸುವ ಮಹತ್ವಕಾಂಕ್ಷಿ ಅಂಟೆನಾ ಯೋಜನೆಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹೂಡಿಕೆಯನ್ನು ಮಾಡಿದೆ ಎನ್ನಲಾಗಿದೆ. ಹೀಗೆ ಉಚಿತವಾಗಿ ಸೇವೆಯನ್ನು ನೀಡುವುದರಿಂದ ಫೇಸ್‌ಬುಕಿಗೂ ಲಾಭವಿದೆ ಎನ್ನಲಾಗಿದೆ.

ಫೇಸ್‌ಬುಕ್ ಆಪ್‌ಗಳು ಉಚಿತ:

ಫೇಸ್‌ಬುಕ್ ಆಪ್‌ಗಳು ಉಚಿತ:

ಹೀಗೇ ಸ್ಯಾಟಿಲೈಟ್ ಮೂಲಕ ಸೇವೆಯನ್ನು ನೀಡಲಿರುವ ಫೇಸ್‌ಬುಕ್ ತನ್ನ ಬಳಕೆದಾರರಿಗೆ ತನ್ನ ಮಾಲೀಕತ್ವದ ಆಪ್‌ಗಳನ್ನು ಬಳಕೆ ಮಾಡಿಕೊಳ್ಳಲು ಸಂಪೂರ್ಣವಾಗಿ ಉಚಿತ ಡೇಟಾವನ್ನು ನೀಡಲಿದೆ ಎನ್ನಲಾಗಿದೆ.

ಫೇಸ್‌ಬುಕ್-ವಾಟ್ಸ್‌ಆಪ್:

ಫೇಸ್‌ಬುಕ್-ವಾಟ್ಸ್‌ಆಪ್:

ಈಗಾಗಲೇ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್, ವಾಟ್ಸ್ಆಪ್, ಇನ್‌ಸ್ಟಾಗ್ರಾಮ್, ಮೆಸೆಂಜರ್ ಆಪ್ ಗಳನ್ನು ಬಳಕೆದಾರರಿಗೆ ಉಚಿತವಾಗಿ ಬಳಸಲು ನೀಡಲಿದ್ದು, ಇದರೊಂದಿಗೆ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ತನ್ನ ಆಪ್ ಜಾಲವಜನ್ನು ವಿಸ್ತರಿಸಿಕೊಳ್ಳಲು ಮುಂದಾಗಿದೆ.

ಜಿಯೋ-ಏರ್‌ಟೆಲ್ ಬೇಡ:

ಜಿಯೋ-ಏರ್‌ಟೆಲ್ ಬೇಡ:

ಈಗಾಗಲೇ ಡೇಟಾ ಸಮರವೂ ಜೋರಾಗಿ ನಡೆಯುತ್ತಿರುವುದರಿಂದ ಮತ್ತು ಡೇಟಾ ಹೆಚ್ಚು ಸಿಕ್ಕರೆ ಬಳಕೆದಾರರು ಹೆಚ್ಚಿನ ಇಂಟರ್ನೆಟ್ ಬಳಕೆ ಮಾಡುತ್ತಿರುವುದನ್ನು ಗಮನಿಸಿರುವ ಫೇಸ್‌ಬುಕ್, ಇದರಿಂದಾಗಿಯೇ ಉಚಿತ ಇಂಟರ್ನೆಟ್ ನೀಡಿ ಬಳಕೆದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುವ ಪ್ರಯತ್ನ ಮಾಡುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಜಿಯೋ-ಏರ್‌ಟೆಲ್ ಕೇಲವ ಕರೆ ಮಾಡಲು ಮಾತ್ರವೇ ಬಳಕೆಯಾಗಬಹುದು ಅಥವಾ ಕೇಳುವರೆ ಇರುವುದಿಲ್ಲ ಎನ್ನಲಾಗಿದೆ.

Best Mobiles in India

English summary
Facebook will launch 5G internet access down to remote areas. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X