ಐಫೋನ್ 11 ಪ್ರೊ ಅರ್ಡರ್‌ ಮಾಡಿದ್ದ ಬೆಂಗಳೂರು ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ?

|

ಇ-ಕಾಮರ್ಸ್‌ ತಾಣಗಳಲ್ಲಿ ಆರ್ಡರ್‌ ಮಾಡಿದ ವಸ್ತುವಿಗೆ ಬದಲು ಇನ್ಯಾವುದೋ ವಸ್ತು ಕೊಡುವುದು, ನಕಲಿ ವಸ್ತುಗಳನ್ನ ನೀಡಿ ಸಿಕ್ಕಿಬೀಳುವ ಪ್ರಕರಣಗಳು ಆಗಾಗ ಸುದ್ದಿಯಾಗುತ್ತಲೇ ಇದೆ. ಸಧ್ಯ ಇಂತಹದ್ದೆ ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು, ಆಪಲ್ ಐಫೋನ್ 11 ಪ್ರೊ ಆರ್ಡರ್‌ ಮಾಡಿದ್ದ ವ್ಯಕ್ತಿಗೆ ಫ್ಲಿಪ್‌ಕಾರ್ಟ್‌ನಲ್ಲಿ ನಕಲಿ ಫೋನ್‌ ಅನ್ನ ಪೂರೈಸಿರೋದು ಬೆಳಕಿಗೆ ಬಂದಿದೆ.

ಇ-ಕಾಮರ್ಸ್‌

ಹೌದು, ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಆಪಲ್ ಐಫೋನ್ 11 ಪ್ರೊ ಆರ್ಡರ್‌ ಮಾಡಿದ್ದ ವ್ಯಕ್ತಿಗೆ ಫ್ಲಿಪ್‌ಕಾರ್ಟ್‌ನಿಂದ ಸಿಕ್ಕಿರೋದು ಮಾತ್ರ ನಕಲಿ ಫೋನ್‌. ಅಸಲಿಗೆ ಬೆಂಗಳೂರು ಮೂಲದ ರಜನಿಕಾಂತ್ ಕುಶ್ವಾ ಅನ್ನುವವರು ಇ-ಕಾಮರ್ಸ್‌ ತಾಣದ ಮೂಲಕ ಬಹಳ ಬೇಗ ಆಪಲ್ ಐಫೋನ್ 11 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಖರೀದಿ ಮಾಡಬೇಕು ಅನ್ನೊ ಆಸೆಯಿಂದ ರಿಯಾಯಿತಿ ದರದಲ್ಲಿ 93,900 ರೂಗಳಿಗೆ ಫ್ಲಿಪ್‌ಕಾರ್ಟ್‌ನಿಂದ ಆರ್ಡರ್‌ ಮಾಡಿದ್ದರು.

ಸ್ಮಾರ್ಟ್‌ಫೋನ್‌

ಆರ್ಡರ್‌ ಮಾಡಿದಂತೆ ಅವರಿಗೆ ಸ್ಮಾರ್ಟ್‌ಫೋನ್‌ ಏನೊ ತಲುಪಿದೆ ಆದ್ರೆ ಅದು ಸಂಫೂರ್ಣ ನಕಲಿ ಅನ್ನೊದು ಈಗ ಸಾಬೀತಾಗಿದೆ. ರಜನಿಕಾಂತ್‌ ಕುಶ್ವಾ ಅರ್ಡರ್‌ ಮಾಡಿದ ನಂತರ ಫ್ಲಿಪ್‌ಕಾರ್ಟ್‌ನಿಂದ ಪಾರ್ಸಲ್‌ ಬರುತ್ತೆ. ಡೆಲಿವರ್‌ ಬಾಯ್‌ ತಂದುಕೊಟ್ಟ ಆ ಪೆಟ್ಟಿಗೆಯನ್ನು ತೆರೆದಾಗ, ಕುಶ್ವಾ ಅವರಿಗೆ ಶಾಕ್‌ ಆಗಿದೆ. ಪೆಟ್ಟಿಗೆಯಲ್ಲಿ ಐಫೋನ್‌ನಂತೆ ಕಾಣುವ ವಸ್ತುವಿತ್ತೆ ವಿನಃ ಅದು ಆಪಲ್ ಐಫೋನ್ 11 ಪ್ರೊ ಆಗಿರಲಿಲ್ಲ. ಅಲ್ಲದೆ ಪಾರ್ಸಲ್‌ನಲ್ಲಿ ಬಂದಿದ್ದ ವಸ್ತುವಿನ ಹಿಂಬಾಗದಲ್ಲಿ ಟ್ರಿಪಲ್ ಕ್ಯಾಮೆರಾ ಮಾದರಿಯಲ್ಲಿ ಸ್ಟಿಕ್ಕರ್ ಅಂಟಿಸಲಾಗಿದೆ.

ನಕಲಿ

ಸದ್ಯ ನಕಲಿ ಐಫೋನ್ ಅನ್ನು ಶೀಘ್ರದಲ್ಲೇ ಬದಲಾಯಿಸಲಾಗುವುದು ಎಂದು ಫ್ಲಿಪ್‌ಕಾರ್ಟ್‌ ತನ್ನ ಕಡೆಯಿಂದ ಕುಶ್ವಾ ಅವರಿಗೆ ಭರವಸೆ ನೀಡಿದೆ. ಹಾಗಂತ ಫ್ಲಿಪ್‌ಕಾರ್ಟ್‌ನಿಂದ ಇಂತಹ ಎಡವಟ್ಟು ಇದೇ ಮೊದಲೇನಲ್ಲ ಈ ಹಿಂದೆ ಕೇರಳದ ಕಣ್ಣೂರು ಮೂಲದ ವಿಷ್ಣು ಸುರೇಶ್ ಅನ್ನೊ ವ್ಯಕ್ತಿಗೂ ಇದೇ ತರಹ ಮೋಸ ಆಗಿದ್ದನನ್ನ ನಾವಿಲ್ಲಿ ನೆನಪಿಸಿಕೊಳ್ಳಬಹುದು. ಸುರೇಶ್ 27,500 ರೂ ಮೌಲ್ಯದ ಕ್ಯಾಮೆರಾವನ್ನು ಆರ್ಡರ್ ಮಾಡಿದ್ದರು ಆದ್ರೆ ಅದರ ಬದಲು ಅವರಿಗೆ ಪೂರೈಕೆಯಾಗಿದ್ದ ಪಾರ್ಸಲ್‌ನಲ್ಲಿ ಒಂದು ಬಾಕ್ಸ್ ಟೈಲ್ಸ್ ಬಂದಿತ್ತು.

ಮುಂಬೈ

ಅದೇ ರೀತಿ, ಕಳೆದ ವರ್ಷ, ಮುಂಬೈ ಮೂಲದ ಎಂಜಿನಿಯರ್ ಫ್ಲಿಪ್‌ಕಾರ್ಟ್‌ನಿಂದ ಆಪಲ್ ಐಫೋನ್ 8 ಅನ್ನು ಆರ್ಡರ್ ಮಾಡಿ, ಬದಲಿಗೆ ಒಂದು ಸೋಪ್ ಬಾರ್ ಪಡೆದಿದ್ದರು. ಅಷ್ಟೇ ಅಲ್ಲ ಕಳೆದ ವರ್ಷ, ಚಿತ್ರ ನಟ ನಖುಲ್ ಸಹ ಇದೇ ರೀತಿ ಫ್ಲಿಪ್‌ಕಾರ್ಟ್‌ನಿಂದ ಹೊಸ ಆಪಲ್ ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್‌ ಆರ್ಡರ್‌ ಮಾಡಿ ನಕಲಿ ಐಫೋನ್ ಸ್ವೀಕರಿಸಿದ್ದನ್ನ ನಾವಿಲ್ಲಿ ಸ್ಮರಿಸಬಹುದು.

ಸೈಟ್‌

ಹಾಗೇ ನೋಡಿದ್ರೆ ಇ-ಕಾಮರ್ಸ್‌ ಮೂಲಕ ನೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನ ಬಹುಬೇಗ ಖರೀದಿ ಮಾಡಬಹುದು ನಿಜ, ಆದ್ರೆ ಈ ತಾಣಗಳಲ್ಲಿ ಆಗಾಗ ನಕಲಿ ವಸ್ತುಗಳ ಹಾವಳಿ ನಡೆಯುತ್ತಿರೋದು ಇ-ಕಾಮರ್ಸ್‌ ಸೈಟ್‌ಗಳ ಮೇಲಿನ ವಿಶ್ವಾಸಾರ್ಹತೆಗೆ ದಕ್ಕೆ ತರೋದ್ರಲ್ಲಿ ಅನುಮಾನವೇ ಇಲ್ಲ.

Most Read Articles
Best Mobiles in India

Read more about:
English summary
Here’s another case of Flipkart delivering something other than what was ordered. A report has surfaced online about how Flipkart delivered a fake phone to a Bengaluru man.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more