ಇ-ಕಾಮರ್ಸ್‌ ತಾಣಗಳಲ್ಲಿ ಪ್ರೊಡಕ್ಟ್ಸ್‌ಬಗ್ಗೆ ಫೇಕ್‌ ರಿವ್ಯೂ; ಕ್ರಮಕ್ಕೆ ಸಿದ್ಧಗೊಂಡ ಸರ್ಕಾರ

|

ಇಂದು ಬಹುಪಾಲು ಮಂದಿ ಏನೇ ಖರೀದಿ ಮಾಡಬೇಕೆಂದರೂ ಮೊದಲು ಇ-ಕಾಮರ್ಸ್ ತಾಣಗಳತ್ತ ಮುಖ ಮಾಡುತ್ತಾರೆ. ಅದರಲ್ಲೂ ಯಾವುದೇ ಪ್ರೊಡಕ್ಡ್‌ನ ಮಾಹಿತಿಯನ್ನು ಗ್ರಾಹಕರು ತಿಳಿದುಕೊಳ್ಳುವುದರ ಜೊತೆಗೆ ಈಗಾಗಲೇ ಖರೀದಿ ಮಾಡಿರುವ ಗ್ರಾಹರರು ನೀಡಿರುವ ವಿಮರ್ಶೆಯನ್ನು ಖಂಡಿತವಾಗಿಯೂ ಓದುತ್ತಾರೆ. ಇದಾದ ಮೇಲೆಯೇ ಪ್ರೊಡಕ್ಟ್‌ ಅನ್ನು ಖರೀದಿಸಲು ಮುಂದಾಗುವುದು.

 ಇ-ಕಾಮರ್ಸ್‌

ಹೌದು, ಇ-ಕಾಮರ್ಸ್‌ ತಾಣಗಳಲ್ಲಿ ಯಾವುದೇ ಪ್ರೊಡಕ್ಟ್‌ ಅನ್ನು ಖರೀದಿ ಮಾಡಲು ಮುಂದಾದಾಗ ಈಗಾಗಲೇ ಖರೀದಿ ಮಾಡಿರುವ ಬಳಕೆದಾರರು ಹೇಗೆಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ನೋಡಲು ಮುಂದಾಗುತ್ತೇವೆ. ಅಲ್ಲಿ ಏನಾದರೂ ಕೆಟ್ಟದಾಗಿ ಬರೆದಿದ್ದರೆ ಆ ಪ್ರೊಡಕ್ಟ್‌ಗಳನ್ನು ಖರೀದಿ ಮಾಡುವುದಿಲ್ಲ, ಅದೇ ಪರವಾಗಿ ಬರೆದಿದ್ದರೆ ಕಣ್ಣುಮುಚ್ಚಿಕೊಂಡು ಆ ವಸ್ತುವನ್ನು ಖರೀದಿ ಮಾಡಿಬಿಡುತ್ತೇವೆ. ಈ ರೀತಿ ನೀವು ನಿರಂತರವಾಗಿ ಮಾಡಿಕೊಂಡು ಬಂದಿದ್ದೀರಾ ಎಂದಾದರೆ ನೀವು ಈವರೆಗೂ ತಪ್ಪು ಮಾಡಿದ್ದೀರಿ ಎಂದರ್ಥ.

ಇ-ಕಾಮರ್ಸ್‌ ತಾಣ

ಇ-ಕಾಮರ್ಸ್‌ ತಾಣಗಳಲ್ಲಿ ಮಾರಾಟವಾಗುವ ಎಲ್ಲಾ ವಸ್ತುಗಳು ಒಳ್ಳೆಯ ಕ್ವಾಲಿಟಿ ಇವೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ತಮ್ಮ ಮಾರಾಟವನ್ನು ಹೆಚ್ಚಿಗೆ ಮಾಡಿಕೊಳ್ಳಲು ಹಾಗೂ ಸರಕನ್ನು ಖಾಲಿ ಮಾಡಲು ಕಂಪೆನಿಗಳು ಸುಳ್ಳು ವಿಮರ್ಶೆ ಬರೆಸುತ್ತಿವೆ ಎಂದು ತಿಳಿದುಬಂದಿದೆ. ಈ ಸುಳ್ಳು ವಿಮರ್ಶೆಗಳಿಂದ ಗ್ರಾಹಕರನ್ನು ದಾರಿತಪ್ಪಿಸುವ ಕೆಲಸವನ್ನು ಇವು ಮಾಡುತ್ತಿವೆ. ಹೀಗಾಗಿಯೇ ಇ-ಕಾಮರ್ಸ್‌ ತಾಣಗಳಿಗೆ ಸರ್ಕಾರ ಸರಿಯಾಗಿಯೇ ಚಾಟಿ ಬೀಸಲು ಮುಂದಾಗಿದೆ.

ನಕಲಿ ವಿಮರ್ಶೆ ಎಂದರೇನು?

ನಕಲಿ ವಿಮರ್ಶೆ ಎಂದರೇನು?

ಯಾವುದೇ ಇ-ಕಾಮರ್ಸ್‌ ತಾಣದಲ್ಲಿ ನೀವು ಪ್ರೊಡಕ್ಟ್‌ಮೇಲೆ ಕ್ಲಿಕ್‌ ಮಾಡಿದ ನಂತರ ಅದರ ಬಗ್ಗೆ ಎಲ್ಲಾ ರೀತಿಯ ಮಾಹಿತಿಯ ಜೊತೆಗೆ ಈಗಾಗಲೇ ಆ ಪ್ರೊಡಕ್ಟ್‌ ಅನ್ನು ಖರೀದಿ ಮಾಡಿದ ಸಾವಿರಾರು ಗ್ರಾಹಕರು ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಆದರೆ, ಕಂಪೆನಿಗಳು ಕೆಲವರಿಗೆ ಹಣ ನೀಡಿಯೋ ಅಥವಾ ಇನ್ಯಾವುದೇ ಆಸೆ ತೋರಿಸಿಯೋ ಸುಳ್ಳು ವಿಮರ್ಶೆ ಬರೆಸಿಕೊಂಡಿರುತ್ತವೆ. ಆದರೆ, ಗ್ರಾಹಕರು ಆ ವಿಮರ್ಶೆಗಳನ್ನು ನೋಡಿದ ಮೇಲೆಯೇ ಖರೀದಿ ಮಾಡಲು ಮುಂದಾಗುತ್ತಾರೆ ಎನ್ನುವುದು ಮಾತ್ರ ಸತ್ಯದ ಸಂಗತಿ.

ಕೆಲವೇ ದಿನಗಳಲ್ಲಿ ಇತಿಶ್ರೀ

ಕೆಲವೇ ದಿನಗಳಲ್ಲಿ ಇತಿಶ್ರೀ

ಇನ್ನು ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ ಜೊತೆಗೆ ಇನ್ನೂ ಹತ್ತಾರು ಇ-ಕಾಮರ್ಸ್ ಸೈಟ್‌ಗಳಲ್ಲಿ ಈ ನಕಲಿ ವಿಮರ್ಶೆ ಪ್ರಕ್ರಿಯೆಗಳು ಜರುಗುತ್ತಿವೆ ಎನ್ನಲಾಗಿದೆ. ಇದನ್ನು ಇನ್ನೇನು ಕೆಲವೇ ತಿಂಗಳುಗಳಲ್ಲಿ ಕೊನೆಗಾಣಿಸಲು ಭಾರತ ಸರ್ಕಾರ ಮುಂದಾಗಿದೆ.

ಭಾರತ ಸರ್ಕಾರ ಕೈಗೊಂಡ ಕ್ರಮವೇನು?

ಭಾರತ ಸರ್ಕಾರ ಕೈಗೊಂಡ ಕ್ರಮವೇನು?

ಈ ವಿಷಯವನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿದ್ದು, ಗ್ರಾಹಕರು ವಂಚನೆಗೊಳಗಾಗುವುದನ್ನು ತಡೆಯಲು ಹಾಗೂ ಇಂತಹ ಸಂಗತಿಗಳು ಇನ್ನು ಮುಂದೆ ಯಾವುದೇ ಕಾರಣಕ್ಕೂ ನಡೆಯಬಾರದಂತೆ ನೋಡಿಕೊಳ್ಳಲು ಹೊಸ ಉಪಕ್ರಮವನ್ನು ಕೈಗೊಂಡಿದೆ. ಅದರ ಅಡಿಯಲ್ಲಿ ನಕಲಿ ವಿಮರ್ಶೆಗಳು ಮತ್ತು ಪರಿಶೀಲಿಸದ ರೇಟಿಂಗ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಸಿದೆ.

ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿದ್ದವು

ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿದ್ದವು

ಇದರ ನಡುವೆ ಈ ಸಂಬಂಧ ಭಾರತ ಸರ್ಕಾರವು ಈ ಇ-ಕಾಮರ್ಸ್‌ ತಾಣಗಳಿಗೆ ಹೊಸ ಚೌಕಟ್ಟನ್ನು ರಚಿಸಿದ್ದು, ಗೂಗಲ್, ಮೆಟಾ, ಇನ್‌ಸ್ಟಾಗ್ರಾಮ್, ಅಮೆಜಾನ್, ಟ್ರಾವೆಲ್ ವೆಬ್‌ಸೈಟ್‌ಗಳು ಮತ್ತು ಇನ್ನಿತರೆ ಆಹಾರ ವಿತರಣಾ ಆಪ್‌ಗಳಿಗೆ ಇದರಿಂದ ಕಡಿವಾಣ ಹಾಕಿದಂತಾಗುತ್ತದೆ. ಯಾಕೆಂದರೆ ಈ ಸಂಬಂಧ ಹಲವಾರು ದೂರುಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದ ಪರಿಣಾಮ ಈ ಎಲ್ಲಾ ಬೆಳವಣಿಗೆಗಳು ಕಂಡುಬರುತ್ತಿವೆ.

ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಸಮಿತಿ

ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಸಮಿತಿ

ಈ ಮೋಸದ ವ್ಯಾಪಾರಕ್ಕೆ ಫುಲ್‌ಸ್ಟಾಪ್ ಇಡಲು ಗ್ರಾಹಕ ವ್ಯವಹಾರ ಮತ್ತು ಆಹಾರ ಮತ್ತು ಸಾರ್ವಜನಿಕ ಸರಬರಾಜು ಸಚಿವಾಲಯ ಇ-ಕಾಮರ್ಸ್‌ನಲ್ಲಿ ನಕಲಿ ಮತ್ತು ಮೋಸಗೊಳಿಸುವ ವಿಮರ್ಶೆಗಳನ್ನು ಪರಿಶೀಲಿಸಲು ಒಂದು ಹೊಸ ನಿಯಮವನ್ನು ರಚಿಸುವ ಉದ್ದೇಶದಿಂದ ಈ ವರ್ಷದ ಜೂನ್‌ನಲ್ಲಿ ಸಮಿತಿಯೊಂದನ್ನು ರಚನೆ ಮಾಡಿತ್ತು. ಆ ಸಮಿತಿಯು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಅನೇಕ ಸೈಟ್‌ಗಳಲ್ಲಿ ಹಲವಾರು ನಕಲಿ ವಿಮರ್ಶೆಗಳು ಬಂದಿವೆ ಎಂದು ಕಂಡುಕೊಂಡಿದೆ.

ಆನ್‌ಲೈನ್ ಕಂಪೆನಿಗಳು ಇದಕ್ಕೆಲ್ಲಾ ಅನುಮತಿಸುತ್ತವೆಯೇ?

ಆನ್‌ಲೈನ್ ಕಂಪೆನಿಗಳು ಇದಕ್ಕೆಲ್ಲಾ ಅನುಮತಿಸುತ್ತವೆಯೇ?

ಸಾಮಾನ್ಯವಾಗಿ ಕೆಲವು ಬಾರಿ ಉದ್ದೇಶಪೂರ್ವಕವಾಗಿ ನಕಲಿ ವಿಮರ್ಶೆಗಳನ್ನು ಆನ್‌ಲೈನ್‌ ಸೈಟ್‌ಗಳು ಸ್ವೀಕರಿಸುತ್ತದೆ ಎಂದು ಹೇಳಲಾಗುತ್ತಿದೆ. ಇದರಿಂದ ಗ್ರಾಹಕರು ಒಟ್ಟಾರೆ ಉತ್ಪನ್ನದ ಬಗ್ಗೆ ಸತ್ಯವನ್ನು ಪರಿಶೀಲಿಸಲು ಸಾಧ್ಯವಾಗುವುದೇ ಇಲ್ಲ. ಆದರೆ, ಸರ್ಕಾರದ ಈ ಉಪಕ್ರಮದ ನಂತರ ಆನ್‌ಲೈನ್ ವಿಮರ್ಶೆಗಳಿಗೆ ಹೊಸ ಮಾರ್ಗಸೂಚಿಗಳು ಬರಲಿವೆ.

ವಿಮರ್ಶೆ ಪೋಸ್ಟ್ ಮಾಡಿದ ನಂತರ ಕಡ್ಡಾಯ ತಪಾಸಣೆ!

ವಿಮರ್ಶೆ ಪೋಸ್ಟ್ ಮಾಡಿದ ನಂತರ ಕಡ್ಡಾಯ ತಪಾಸಣೆ!

ಹೌದು, ಸರ್ಕಾರದ ಹೊಸ ನಿಯಮ ಜಾರಿಯಾದ ನಂತರ ನೀವು ಯಾವುದೇ ಪ್ರೊಡಕ್ಟ್‌ಗೆ ವಿಮರ್ಶೆ ನೀಡಿದರೆ ಅದನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ಅದರಂತೆ ಮೆಟಾ ಮತ್ತು ಗೂಗಲ್‌ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಈ ನಿಯಮಗಳಿಗೆ ಬದ್ಧವಾಗಿರಲು ಈಗಾಗಲೇ ಸೂಚಿಸಲಾಗಿದ್ದು, ಇನ್ನು ಒಂದು ವಿಮರ್ಷೆಯನ್ನು ಹಲವಾರು ಬಾರಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ.

ನಕಲಿ ವಿಮರ್ಶೆ ಮಾಡಿದರೆ ವಿಚಾರಣೆ ಮಾಡಲು ಆದೇಶ

ನಕಲಿ ವಿಮರ್ಶೆ ಮಾಡಿದರೆ ವಿಚಾರಣೆ ಮಾಡಲು ಆದೇಶ

ನಕಲಿ ವಿಮರ್ಶೆಗಳ ಹಾವಳಿ ಹೆಚ್ಚಾದರೆ ಆ ನಕಲಿ ವಿಮರ್ಶೆಗಳನ್ನು ತಡೆಯಲು ಹೊಸ ಮಾರ್ಗಸೂಚಿಗಳೊಂದಿಗೆ ಕಂಪೆನಿಗಳ ಮೇಲೆಯೂ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸರ್ಕಾರ ಹೇಳಿದೆ. ಹಾಗೆಯೇ ಈ ವಿಮರ್ಶೆಗೆ ಯಾರನ್ನು ಬಳಕೆ ಮಾಡಲಾಗುತ್ತದೆಯೋ ಅವರನ್ನು ವಿಚಾರಣೆಗೆ ಒಳಪಡಿಸುವ ಬಗ್ಗೆಯೂ ನಿಯಮಗಳು ರೂಪುಗೊಳ್ಳುತ್ತವೆ.

Best Mobiles in India

Read more about:
English summary
Fake review of products on e-commerce sites, government ready for action.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X