ಟ್ವಿಟ್ಟರ್‌ ನಡೆಯಿಂದ ಬೇಸರ; ಪ್ಲಾಟ್‌ಫಾರ್ಮ್‌ ತ್ಯಜಿಸಿದ ಜಗತ್ತಿನ ಖ್ಯಾತ ಸೆಲೆಬ್ರಿಟಿಗಳು

|

ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ ಅನ್ನು ತಮ್ಮ ಒಡೆತನಕ್ಕೆ ಪಡೆದ ಮೇಲೆ ಒಂದಾದ ಮೇಲೆ ಒಂದು ತೀಕ್ಷ್ಣಗತಿಯ ಬೆಳವಣಿಗೆಗಳು ಕಂಡುಬರುತ್ತಿದೆ. ಆರಂಭದಲ್ಲಿ ಉದ್ಯೋಗಗಳ ವಜಾ ಪ್ರಕ್ರಿಯೆಯ ಬಗ್ಗೆ ಸದ್ದು ಮಾಡಿತ್ತು, ನಂತರ ಬ್ಲೂಟಿಕ್‌ ಚಂದಾದಾರಿಕೆ ಇನ್ನಷ್ಟು ಅಪಖ್ಯಾತಿ ಉಂಟುಮಾಡಿತ್ತು. ಇದೀಗ ಜಗತ್ತಿನ ಖ್ಯಾತ ಸೆಲೆಬ್ರಿಟಿಗಳು ಟ್ವಿಟ್ಟರ್‌ ಸಹವಾಸ ಸಾಕಪ್ಪಾ ಎಂದು ಹೊರ ನಡೆದಿದ್ದಾರೆ.

ಎಲಾನ್ ಮಸ್ಕ್

ಹೌದು, ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಮೇಲೆ ಹಲವಾರು ಸೆಲೆಬ್ರಿಟಿಗಳು ಪ್ಲಾಟ್‌ಫಾರ್ಮ್‌ ಅನ್ನೇ ತೊರೆದಿದ್ದಾರೆ. ಟ್ವಿಟ್ಟರ್‌ ಅನ್ನು ಖರೀದಿ ಮಾಡಿದ ಮೇಲೆ ಅದರಲ್ಲಿ ಹೊಸ ಬೆಳವಣಿಗೆ ಕಂಡುಬರುತ್ತವೆ, ನೀತಿಗಳು ಸುಧಾರಣೆಯಾಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇದ್ಯಾವ ಬೆಳವಣಿಗೆಗಳು ಟ್ವಿಟ್ಟರ್‌ನಲ್ಲಿ ಕಂಡುಬರುತ್ತಿಲ್ಲ. ಇದೆಲ್ಲದರ ಪರಿಣಾಮ ಜಗತ್ತಿನ ಈ ಗಣ್ಯರು ಟ್ವಿಟ್ಟರ್‌ ತೊರೆದು ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ.

ಹೂಪಿ ಗೋಲ್ಡ್ ಬರ್ಗ್

ಹೂಪಿ ಗೋಲ್ಡ್ ಬರ್ಗ್

ಹೂಪಿ ಗೋಲ್ಡ್ ಬರ್ಗ್ ಅವರು ಅಮೇರಿಕನ್ ನಟಿ, ಹಾಸ್ಯ ಕಲಾವಿದೆ ಹಾಗೂ ಲೇಖಕಿ ಮತ್ತು ದೂರದರ್ಶನದಲ್ಲಿ ಹೆಚ್ಚು ಖ್ಯಾತಿ ಗಳಿಸಿರುವವರು. ಇವರು ನವೆಂಬರ್ 7 ರಂದು ಟ್ವಿಟರ್ ತೊರೆಯುವ ನಿರ್ಧಾರವನ್ನು ಪ್ರಕಟಿಸಿದ್ದು, ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ನಾನು ಇಂದು ಹೊರಡುತ್ತಿದ್ದೇನೆ, ಇದು ತುಂಬಾ ಗೊಂದಲಮಯವಾಗಿದೆ ಎಂದು ನನಗೆ ಅನಿಸುತ್ತದೆ ಮತ್ತು ಕೆಲವು ರೀತಿಯ ವಿಷಯಗಳನ್ನು ನಿರ್ಬಂಧಿಸಿರುವುದರಿಂದ ನಾನು ಈಗ ಬೇಸತ್ತಿದ್ದೇನೆ. ನನಗೆ ಹೆಚ್ಚು ಆರಾಮದಾಯಕ ವ್ಯವಸ್ಥೆ ಉಂಟಾದರೆ ಬಹುಶಃ ನಾನು ಹಿಂತಿರುಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಶೊಂಡಾ ರೈಮ್ಸ್

ಶೊಂಡಾ ರೈಮ್ಸ್

ಶೋಂಡಾ ಲಿನ್ ರೈಮ್ಸ್ ಅಮೇರಿಕನ್ ದೂರದರ್ಶನದ ಸ್ಕ್ರೀನ್‌ ರೈಟರ್, ನಿರ್ಮಾಪಕಿ ಹಾಗೂ ಲೇಖಕಿ. ಇವರೂ ಸಹ ಅಕ್ಟೋಬರ್ 29 ಟ್ವಿಟ್ಟರ್‌ಗೆ ಗುಡ್‌ ಬೈ ಹೇಳಿದ್ದಾರೆ. ಆದರೂ ಇವರ ಟ್ವಿಟ್ಟರ್‌ ಇನ್ನೂ ಅಸ್ತಿತ್ವದಲ್ಲಿರುವುದನ್ನು ಗಮನಿಸಬಹುದು.

ಗಿಗಿ ಹ್ಯಾಡಿದ್

ಗಿಗಿ ಹ್ಯಾಡಿದ್

ಜೆಲೆನಾ ನೌರಾ ಗಿಗಿ ಹ್ಯಾಡಿದ್ ಅವರು ಅಮೇರಿಕನ್ ಮಾಡೆಲ್, ದೂರದರ್ಶನದ ವ್ಯಕ್ತಿತ್ವ ಉಳ್ಳವರು ಹಾಗೂ ಗೆಸ್ಟ್ ಇನ್ ರೆಸಿಡೆನ್ಸ್ ಸಂಸ್ಥೆಯ ನಿರ್ದೇಶಕಿ. ಇವರು ನವೆಂಬರ್ 7 ರಂದು ಟ್ವಿಟ್ಟರ್‌ಗೆ ವಿದಾಯ ಹೇಳಿದ್ದಾರೆ. ನಾನು ಇಂದು ನನ್ನ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದೇನೆ. ಅದರ ಹೊಸ ನಾಯಕತ್ವದಿಂದ ದ್ವೇಷ ಮತ್ತು ಧರ್ಮಾಂಧತೆಯ ಕೊಳಚೆಯಾಗಿ ಮಾರ್ಪಟ್ಟಿದೆ. ಹೀಗಾಗಿ ನಾನು ಅದರ ಒಂದು ಭಾಗವಾಗಲು ಬಯಸುವುದಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಡೇವಿಡ್ ಜುದಾ ಸೈಮನ್

ಡೇವಿಡ್ ಜುದಾ ಸೈಮನ್

ಡೇವಿಡ್ ಜುದಾ ಸೈಮನ್ ಅಮೇರಿಕನ್ ಲೇಖಕ, ಪತ್ರಕರ್ತ, ಚಿತ್ರಕಥೆಗಾರ ಮತ್ತು ನಿರ್ಮಾಪಕ. ಇವರು ನವೆಂಬರ್ 9 ರಂದು ಟ್ವಿಟ್ಟರ್‌ ಪ್ಲಾಟ್‌ಫಾರ್ಮ್‌ ತೊರೆದಿದ್ದಾರೆ. ಸಂಘಟಿತ ತಪ್ಪು ಮಾಹಿತಿ ಮತ್ತು ಯಹೂದಿ ವಿರೋಧಿ/ಜನಾಂಗೀಯ ಪ್ರಚೋದನೆಗೆ ಅನುಗುಣವಾಗಿ ರೂಪಿಸಲಾದ ಪ್ಲಾಟ್‌ಫಾರ್ಮ್‌ ನಲ್ಲಿ ಇರುವುದು ಇನ್ನು ಮುಂದೆ ಉಚಿತವಲ್ಲ. ಇಲ್ಲೇ ಉಳಿಯುವುದು ಅನೈತಿಕವಾಗಿದೆ ಎಂದು ಟ್ವೀಟ್‌ ಮಾಡಿದ್ದರು.

ಟೋನಿ ಮಿಚೆಲ್ ಬ್ರಾಕ್ಸ್ಟನ್

ಟೋನಿ ಮಿಚೆಲ್ ಬ್ರಾಕ್ಸ್ಟನ್

ಟೋನಿ ಮಿಚೆಲ್ ಬ್ರಾಕ್ಸ್ಟನ್ ಅವರು ಅಮೇರಿಕನ್ ರಿದಮ್ ಮತ್ತು ಬ್ಲೂಸ್ ಗಾಯಕಿ. ಇವರು ಅಕ್ಟೋಬರ್ 28 ರಂದು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಹಾಗೆಯೇ ಈ ಬಗ್ಗೆ ವಿವರಣೆ ನಿಡಿದ್ದು, ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ದ್ವೇಷದ ಭಾಷಣ ಸ್ವೀಕಾರಾರ್ಹವಲ್ಲ; ಆದ್ದರಿಂದ ನಾನು ಟ್ವಿಟ್ಟರ್‌ನಿಂದ ಹೊರಗುಳಿಯಲು ಮುಂದಾಗಿದ್ದೇನೆ. ನನ್ನ ಮಗನೂ ಸೇರಿದಂತೆ ಇತರರಿಗೆ ಇದು ಸರಿಯಾದ ವೇದಿಕೆಯಲ್ಲ ಎಂದಿದ್ದಾರೆ.

ಎರಿಕ್ ಲಾರ್ಸೆನ್

ಎರಿಕ್ ಲಾರ್ಸೆನ್

ಎರಿಕ್ ಜೆ. ಲಾರ್ಸೆನ್ ಅವರು ಅಮೇರಿಕನ್ ಕಾಮಿಕ್ ಪುಸ್ತಕ ಕಲಾವಿದ, ಬರಹಗಾರ ಹಾಗೂ ಪ್ರಕಾಶಕ. ಇವರೂ ಸಹ ಎಲಾನ್‌ ಮಸ್ಕ್‌ ಅವರ ಆಡಳಿತ ನೀತಿಯಿಂದ ಬೇಸತ್ತು ಪ್ಲಾಟ್‌ಫಾರ್ಮ್‌ ತ್ಯಜಿಸಿದ್ದಾರೆ. ಹೌದು, ನಾನು ಹೊರಬಂದೆ. ಅವರು ಟ್ವಿಟರ್ ಖರೀದಿಸಿದರೆ ನಾನು ಪ್ಲಾಟ್‌ಫಾರ್ಮ್‌ನಿಂದ ಹೊರಬರುತ್ತೇನೆ ಎಂದು ಹೇಳಿದ್ದೆ, ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸಿದ್ದಾರೆ. ಹೀಗಾಗಿ ನನಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಜ್ಯಾಕ್ ವೈಟ್

ಜ್ಯಾಕ್ ವೈಟ್

ಜಾನ್ ಆಂಥೋನಿ ವೈಟ್ ಅವರು ಅಮೇರಿಕನ್ ಸಂಗೀತಗಾರ, ವೈಟ್ ಸ್ಟ್ರೈಪ್ಸ್ ಜೋಡಿಯ ಪ್ರಮುಖ ಗಾಯಕ ಹಾಗೂ ಗಿಟಾರ್ ವಾದಕ. ಇವರು ನವೆಂಬರ್ 20 ರಂದು ಟ್ವಿಟರ್ ತೊರೆಯುವ ಬಗ್ಗೆ ಘೋಷಣೆ ಮಾಡಿದರು. ಈ ಬಗ್ಗೆ ವಿಸ್ತಾರವಾದ ಅಭಿಪ್ರಾಯ ಹೊರಹಾಕಿದ್ದು, ನೀವು ಟ್ರಂಪ್ ಅವರನ್ನು ಟ್ವಿಟರ್ ಪ್ಲಾಟ್‌ಫಾರ್ಮ್‌ಗೆ ಹಿಂತಿರುಗಿಸಿದ್ದೀರಿ. ಸಂಪೂರ್ಣವಾಗಿ ಇದು ಅಸಹ್ಯಕರ ಎಂದೆಲ್ಲಾ ಹೇಳಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Best Mobiles in India

English summary
Famous celebrities of the world who left the twitter platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X