ಕೇವಲ 1,000 ರೂ. ಗಳ ಬೆಲೆಯಲ್ಲಿ ಪವರ್‌ ಬ್ಯಾಂಕ್‌; 'ಸಾಮರ್ಥ್ಯ' ಮಾತ್ರ ಅಸಾಧಾರಣ

|

ಬ್ಯಾಟರಿ ಚಾಲಿತ ಡಿವೈಸ್‌ಗಳಾದ ಸ್ಮಾರ್ಟ್‌ಫೋನ್ ಹಾಗೂ ಯುಎಸ್‌ಬಿ ಇಂಟರ್‌ಫೇಸ್ ಹೊಂದಿರುವ ಇತರ ರೀತಿಯ ವಸ್ತುಗಳನ್ನು ಚಾರ್ಜ್ ಮಾಡಲು ಪೋರ್ಟಬಲ್ ಪವರ್ ಒದಗಿಸಲು ಪವರ್ ಬ್ಯಾಂಕ್‌ ಅತ್ಯಗತ್ಯ. ಅದರಲ್ಲೂ ಈ ಸಮಯದಲ್ಲಂತೂ ಈ ಪವರ್‌ಬ್ಯಾಂಕ್‌ಗಳ ಬಳಕೆ ಹೆಚ್ಚಾಗಿಯೇ ಇದೆ. ಗ್ರಾಹಕರ ಅಗತ್ಯತೆಗಳನ್ನು ಪೂರೈಕೆ ಮಾಡಲು ಪ್ರಮುಖ ಕಂಪೆನಿಗಳು ಸಹ ಹೊಸ ರೀತಿಯ ಪವರ್‌ ಬ್ಯಾಂಕ್‌ಗಳನ್ನು ಪರಿಚಯಿಸಿಕೊಂಡು ಬರುತ್ತಿದೆ.

ಅಗತ್ಯ ಫೀಚರ್ಸ್‌

ಹೌದು, ಹಲವಾರು ಶೈಲಿಯ ಹಾಗೂ ಪ್ರಮುಖ ಅಗತ್ಯ ಫೀಚರ್ಸ್‌ ಇರುವ ಪವರ್‌ ಬ್ಯಾಂಕ್‌ಗಳಲ್ಲಿ ಅಮಜಾನ್‌ ಬೇಸಿಕ್ಸ್‌ ಪವರ್‌ ಬ್ಯಾಂಕ್‌ ವಿಶೇಷ ಸ್ಥಾನ ಪಡೆದುಕೊಳ್ಳುತ್ತದೆ. ಯಾಕೆಂದರೆ ಈ ಪವರ್‌ ಬ್ಯಾಂಕ್‌ ಇತರೆ ಕಂಪೆನಿಯ ಪವರ್‌ಬ್ಯಾಂಕ್‌ಗಳಿಗಿಂತ ಭಿನ್ನವಾಗಿ ರೂಪುಗೊಂಡಿದೆ. ಇದು 10000mAh ಸಾಮರ್ಥ್ಯದ ಪವರ್ ಬ್ಯಾಂಕ್ ಆಗಿದ್ದು, ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದೆ. ಹಾಗಿದ್ರೆ ಇದರ ರಚನೆ ಹೇಗಿದೆ, ಏನೆಲ್ಲಾ ಫೀಚರ್ಸ್‌ ಗಳನ್ನು ಹೊಂದಿದೆ ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ ಓದಿರಿ.

ಪವರ್‌ ಬ್ಯಾಂಕ್‌ನ ಅಗತ್ಯತೆ

ಪವರ್‌ ಬ್ಯಾಂಕ್‌ನ ಅಗತ್ಯತೆ

ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚಿನ ಗ್ಯಾಜೆಟ್‌ಗಳನ್ನು ಬಳಕೆ ಮಾಡುತ್ತೇವೆ. ಅವುಗಳ ಸಂಖ್ಯೆ ಹೆಚ್ಚಾದಂತೆ, ಅವುಗಳನ್ನು ಚಾರ್ಜ್ ಮಾಡಲು ವಿದ್ಯುತ್ ಮೂಲಗಳ ಅಗತ್ಯವೂ ಹೆಚ್ಚಿರುತ್ತದೆ. ಆದರೆ, ಇದು ಸಾಧ್ಯವಾಗದಿದ್ದಾಗ ಪವರ್‌ಬ್ಯಾಂಕ್‌ ನಮಗೆ ಬೇಕಾಗುತ್ತದೆ. ಒಂದು ಪವರ್ ಬ್ಯಾಂಕ್‌ ಅನೇಕ ಡಿವೈಸ್‌ಗಳನ್ನು ಚಾರ್ಜ್‌ ಮಾಡುವುದರಿಂದ ವಿದ್ಯುತ್‌ ಸಮಸ್ಯೆಯಿಂದ ಯಾವುದೇ ತೊಂದರೆ ಆಗುವುದಿಲ್ಲ.

ಈ ಪವರ್‌ ಬ್ಯಾಂಕ್‌ ಪ್ರಮುಖ ವಿಶೇಷತೆ ಏನು?

ಈ ಪವರ್‌ ಬ್ಯಾಂಕ್‌ ಪ್ರಮುಖ ವಿಶೇಷತೆ ಏನು?

ಈಗ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯ ಇರುವ ಪವರ್ ಬ್ಯಾಂಕ್‌ಗಳಲ್ಲಿ ಬಹುಪಾಲು ಎಲ್ಲಾ ರೀತಿಯ ಡಿವೈಸ್‌ಗಳನ್ನು ಒಂದೇ ಕೇಬಲ್‌ನಲ್ಲಿ ಚಾರ್ಜ್‌ ಮಾಡಲು ಆಗುವುದಿಲ್ಲ. ಉದಾಹರಣೆ ಸಹಿತ ಹೇಳುವುದಾದರೆ ಐಫೋನ್‌ನಲ್ಲಿ ಲೈಟ್ನಿಂಗ್ ಪೋರ್ಟ್ ಇದೆ. ಹಾಗೆಯೇ ಬಹುಪಾಲು ಆಂಡ್ರಾಯ್ಡ್ ಫೋನ್‌ಗಳು ಯುಎಸ್‌ಬಿ ಟೈಪ್ ಸಿ ಪೋರ್ಟ್‌ಗಳನ್ನು ಹೊಂದಿವೆ ಹಾಗೆಯೇ ಕ್ಯಾಮೆರಾಗಳು ಮತ್ತು ಹೆಡ್‌ಫೋನ್‌ಗಳು ಮೈಕ್ರೋ ಯುಎಸ್‌ಬಿ ಕನೆಕ್ಟರ್‌ ಆಯ್ಕೆಯನ್ನು ಪಡೆದಿರುತ್ತವೆ. ಹೀಗಾಗಿ ನೀವು ಎಲ್ಲದಕ್ಕೂ ಒಂದೊಂದು ಕೇಬಲ್‌ ಅನ್ನು ಜೊತೆಗೆ ಕೊಂಡೊಯ್ಯಲು ಸಾಧ್ಯವಿಲ್ಲ.ಆದರೆ, ಅಮೆಜಾನ್‌ ಬೇಸಿಕ್‌ನಲ್ಲಿ ಮಾತ್ರ ಬೇರೆ ಕೇಬಲ್‌ ಗಳ ಅಗತ್ಯತೆ ಇಲ್ಲದೆ ಎಲ್ಲಾ ರೀತಿಯ ಡಿವೈಸ್‌ಗಳನ್ನು ಚಾರ್ಜ್‌ ಮಾಡಿಕೊಳ್ಳಬಹುದು.

 ಲಗತ್ತುಗೊಂಡ ಚಾರ್ಜಿಂಗ್ ಕೇಬಲ್‌

ಲಗತ್ತುಗೊಂಡ ಚಾರ್ಜಿಂಗ್ ಕೇಬಲ್‌

ಈ ಪವರ್‌ ಬ್ಯಾಂಕ್‌ನ ಸಾಮರ್ಥ್ಯ ಅಸಾಧಾರಣವಾಗಿದೆ. ಯಾಕೆಂದರೆ ಇದರಲ್ಲಿ ಒಮ್ಮೆಲೆ ನಾಲ್ಕು ಡಿವೈಸ್‌ಗಳನ್ನು ಚಾರ್ಜ್ ಮಾಡಬಹುದಾಗಿದ್ದು, ಪ್ರತಿ ಸಂಪರ್ಕದ ಗರಿಷ್ಠ ಚಾರ್ಜಿಂಗ್ ವೇಗವು ಸುಮಾರು 10W ಆಗಿರಲಿದೆ. ಅದರಲ್ಲೂ ಪ್ರಮುಖವಾಗಿ ಈಗಾಗಲೇ ಮೂರು ಚಾರ್ಜಿಂಗ್ ಕೇಬಲ್‌ಗಳನ್ನು ಈ ಪವರ್‌ ಬ್ಯಾಂಕ್‌ಗೆ ಲಗತ್ತಿಸಲಾಗಿದೆ. ಲೈಟ್ನಿಂಗ್‌ ಕೇಬಲ್, ಯುಎಸ್‌ಬಿ ಟೈಪ್ ಸಿ ಕೇಬಲ್ ಮತ್ತು ಮೈಕ್ರೋ ಯುಎಸ್‌ಬಿ ಕೇಬಲ್ ಇದರಲ್ಲಿದ್ದು, ನೀವು ಬೇರೆ ಕೇಬಲ್‌ ಅನ್ನು ಜೊತೆಗೆ ಕೊಂಡೊಯ್ಯುವ ಅಗತ್ಯ ಇಲ್ಲ.

ಚಾರ್ಜ್‌‌ ಮಾಡಲು ಎರಡು ಆಯ್ಕೆ

ಚಾರ್ಜ್‌‌ ಮಾಡಲು ಎರಡು ಆಯ್ಕೆ

ಅದರಂತೆ ಪವರ್ ಬ್ಯಾಂಕ್ ಅನ್ನು ಚಾರ್ಜ್ ಮಾಡಲು ಯುಎಸ್‌ಬಿ ಟೈಪ್ ಸಿ, ಮೈಕ್ರೋ ಯುಎಸ್‌ಬಿ ಪೋರ್ಟ್ ಸಹ ನೀಡಲಾಗಿದ್ದು, ಈ ಎರಡೂ ಆಯ್ಕೆಗಳ ಮೂಲಕ ಪವರ್‌ ಬ್ಯಾಂಕ್‌ ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಇನ್‌ಬಿಲ್ಟ್ ಫೋನ್ ಸ್ಟ್ಯಾಂಡ್ ಕೂಡ ಇದ್ದು, ಇದರ ಮತ್ತೊಂದು ವಿಶೇಷ.

ರಚನೆ ಹೇಗಿದೆ?

ರಚನೆ ಹೇಗಿದೆ?

ಇದರಲ್ಲಿ ನಾಲ್ಕು ಸೂಚಕ ಲೈಟ್‌ಗಳು ಇದ್ದು, ಇವು ಪವರ್‌ ಬ್ಯಾಂಕ್‌ನ ಚಾರ್ಜ್‌ ಮಟ್ಟವನ್ನು ಸೂಚಿಸುತ್ತವೆ. ಹಾಗೆಯೇ ಎಡಭಾಗದ ಮೇಲ್ಭಾಗದಲ್ಲಿ ಚಾರ್ಜರ್ ಆನ್ ಮತ್ತು ಆಫ್ ಮಾಡಲು ಬಟನ್ ಆಯ್ಕೆ ನೀಡಲಾಗಿದೆ. ಇದರ ಬಲಭಾಗದ ಮೇಲ್ಭಾಗದಲ್ಲಿ ಮೈಕ್ರೋ ಯುಎಸ್‌ಬಿ ಪೋರ್ಟ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಆಯ್ಕೆ ನೀಡಲಾಗಿದೆ. ಇದರ ಜತೆಗೆ ಫೋನ್ ಹೋಲ್ಡರ್ ಅಯ್ಕೆಯನ್ನು ಇದರ ಹಿಂಬಾಗದಲ್ಲಿ ಇರಿಸಲಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಅಮೆಜಾನ್ ಬೇಸಿಕ್ಸ್ 10,000mAH ಲಿಥಿಯಂ ಪಾಲಿಮರ್ ಪವರ್ ಬ್ಯಾಂಕ್ ಅನ್ನು ನೀವು ಕೇವಲ 1,099 ರೂ. ಗಳಲ್ಲಿ ಅಮೆಜಾನ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಅದರಂತೆ ಇತರೆ ಪ್ರಮುಖ ರಿಟೇಲರ್‌ ಸ್ಟೋರ್‌ಗಳಲ್ಲಿಯೂ ಈ ಡಿವೈಸ್‌ ಲಭ್ಯವಿದೆ.

Best Mobiles in India

English summary
Features about Amazon Basics 10000mAh power bank.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X