ಗೂಗಲ್‌ನಲ್ಲಿ ಹೀಗೆ ಸರ್ಚ್ ಮಾಡಿ ನಿಮ್ಮ ಕಣ್ಣ ಮುಂದೆ ನಡೆಯುತ್ತದೆ ಮ್ಯಾಜಿಕ್!

|

ಪ್ರಸ್ತುತ ಏನೇ ಮಾಹಿತಿ ಬೇಕಿದ್ದರೂ ಬಹುತೇಕರಿಗೆ ಕಣ್ಣಮುಂದೆ ಕಾಣಿಸುವುದು ಗೂಗಲ್. ಗೂಗಲ್ ಸರ್ಚ್‌ನಲ್ಲಿ ಬಳಕೆದಾರರು ತಮಗೆ ಬೇಕಾದ ಪ್ರಶ್ನೆ ಕೇಳಿದರೇ ತಕ್ಷಣಕ್ಕೆ ಅನೇಕ ರಿಸಲ್ಟ್‌ ಲಿಸ್ಟ್‌ ಒದಗಿಸುತ್ತದೆ. ಗೂಗಲ್ ಸರ್ಚ್ ನಲ್ಲಿ ಈಗ ಗೂಗಲ್ ಅಸಿಸ್ಟಂಟ್ ವಾಯಿಸ್ ಸರ್ಚ್ ಸೌಲಭ್ಯವು ಸೇರಿದ್ದು ಬಳಕೆದಾರರಿಗೆ ಸರ್ಚ್ ಪ್ರಕ್ರಿಯೆ ಮತ್ತಷ್ಟು ಸುಲಭವಾಗಿದೆ. ಹಾಗೆಯೇ ಗೂಗಲ್‌ನಲ್ಲಿ ಕೆಲವು ಕ್ರೇಜಿ ಸರ್ಚ್ ವಿಧಾನಗಳು ಇದ್ದು, ಗೂಗಲ್‌ ಪ್ರಿಯರು ಅವುಗಳ ಬಗ್ಗೆ ಒಮ್ಮೆ ತಿಳಿಯಲೇಬೇಕು.

ದೈತ್ಯ ಗೂಗಲ್

ಹೌದು, ವಿಶ್ವ ಟೆಕ್ ದೈತ್ಯ ಗೂಗಲ್ ಹಲವು ಅಪ್‌ಡೇಟ್ ಆವೃತ್ತಿಗಳನ್ನು ಕಂಡಿದೆ. ಪ್ರತಿ ಅಪ್‌ಡೇಟ್‌ನಲ್ಲಿಯೂ ವಿಶೇಷ ಫೀಚರ್ಸ್‌ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಲೆ ಬಂದಿದೆ. ಆದ್ರೆ ಕೆಲವು ಕ್ರೇಜಿ ಮತ್ತು ಕುತೂಹಲಕಾರಿ ಸರ್ಚ್ ಲುಕ್‌ನಲ್ಲಿ ಗೂಗಲ್ ಡ್ಯೂಡಲ್ ಕಾಣಿಸುತ್ತದೆ. ಹಾಗೆಯೆ ಗೂಗಲ್ ಕೆಲವು ಮಾಹಿತಿಗಳ ಸರ್ಚ್ ಫಲಿತಾಂಶದಲ್ಲಿ ಬಳಕೆದಾರರಿಗೆ ವಂಡರ್ ಅನಿಸುವಂತಹ ಚಟುವಟಿಕೆಗಳನ್ನು ಪ್ರದರ್ಶಿಸುತ್ತದೆ. ಬಳಕೆದಾರರಿಗೆ ವಂಡರ್ ಅನಿಸುವಂತಹ ಗೂಗಲ್‌ ಸರ್ಚ್‌ನ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ನೀವು ಒಮ್ಮೆ ಪ್ರಯತ್ನಿಸಿ ನೋಡಿ.

ಮಿನುಗುವ HTML

ಮಿನುಗುವ HTML

ಗೂಗಲ್‌ ಸರ್ಚ್‌ನಲ್ಲಿ blink HTML ಕೀ ವರ್ಡ್‌ ಟೈಪ್‌ ಮಾಡಿ ಸರ್ಚ್ ಮಾಡಿದರೇ ಖಂಡಿತಾ ನಿಮ್ಮ ಕಣ್ಣುಗಳ ಮುಂದೆ ಮ್ಯಾಜಿಕ್ ನಡೆಯಲಿದೆ. ಏಕೆಂದರೇ ಈ ಕೀ ವರ್ಡ್‌ ಸರ್ಚ್ ಮಾಡಿದಾಗ ಕಾಣಿಸುವ ಫಲಿತಾಂಶದಲ್ಲಿ HTML ಮತ್ತು blink ಪದಗಳು ಮಿನುಗಲು ಶುರು ಮಾಡುತ್ತವೆ. ನೀವು ಪ್ರಯತ್ನಿಸಿ ನೋಡಿ ಅಚ್ಚರಿ ಪಡುತ್ತಿರಾ.

ಉಸಿರಾಟದ ವ್ಯಾಯಾಮ

ಉಸಿರಾಟದ ವ್ಯಾಯಾಮ

ತ್ವರಿತವಾಗಿ ಉಸಿರಾಟದ ವ್ಯಾಯಾಮ ಮಾಡುವ ಪ್ರಯತ್ನದಲ್ಲಿದ್ದರೇ, ಗೂಗಲ್‌ ಸರ್ಚ್‌ನಲ್ಲಿ Breathing Exercise ಎಂದು ಬರೆದು ಸರ್ಚ್ ಮಾಡಿದರೇ ನಿಮಗೆ ಉಸಿರಾಟ ವ್ಯಾಯಾಮ ಲಭ್ಯ. 1 ನಿಮಿಷದ ವಿಡಿಯೊ ನಿಮ್ಮನ್ನು ವ್ಯಾಯಾಮ ಮಾಡಲು ಗೈಡ್ ಮಾಡುತ್ತದೆ.

ಪ್ರಾಣಿಗಳ ಶಬ್ದ

ಪ್ರಾಣಿಗಳ ಶಬ್ದ

ಈಗಾಗಲೇ ಗೂಗಲ್‌ ಸರ್ಚ್‌ನಲ್ಲಿ ನೈಜ ಪ್ರಾಣಿಗಳು ಅನಿಸುವಂತಹ 3D ಚಿತ್ರ (3D AR Animals) ನೋಡಿರಬಹುದು. ಹಾಗೆಯೇ ಗೂಗಲ್ ಸರ್ಚ್‌ನಲ್ಲಿ ಪ್ರಾಣಿಗಳ ನೈಜ ಧ್ವನಿ ಕೇಳುವಂತಹ ಫಲಿತಾಂಶ ನೀಡಲಾಗಿದೆ. ಬಳಕೆದಾರರು ಗೂಗಲ್ ಸರ್ಚ್‌ ನಲ್ಲಿ Animal Sounds ಅಂತಾ ಟೈಪ್ ಮಾಡಿದರೇ ಪ್ರಾಣಿಗಳ ಲಿಸ್ಟ್‌ ಕಾಣಿಸುತ್ತದೆ. ಬೇಕಾದ ಪ್ರಾಣಿ ಚಿತ್ರ ಕ್ಲಿಕ್ ಮಾಡಿದರೇ ಸೌಂಡ್ ಕೇಳಬಹುದು.

Atari Breakout

Atari Breakout

ಬಳಕೆದಾರರು ತಮ್ಮ ಬಿಡುವಿನ ಸಮಯದಲ್ಲಿ ಬೇಸರ ಕಳೆಯಲು Google ನಲ್ಲಿರುವ ಹೈಡ್ ಗೇಮ್‌ ಅನ್ನು ನೀವು ಆಡಬಹುದು. ಬಳಕೆದಾರರು ಗೂಗಲ್ ಸರ್ಚ್‌ನಲ್ಲಿ Atari Breakout ಎಂದು ಸರ್ಚ್ ಮಾಡಿ. ಮೊಲದ ಫಲಿತಾಂಶದ ಲಿಂಕ್ ಕ್ಲಿಕ್ ಮಾಡಿದರೇ ಗೇಮ್ ಶುರುವಾಗುತ್ತದೆ. ಇದಕ್ಕಾಗಿ ಹೈ-ಎಂಡ್ ಸಿಸ್ಟಮ್ ಅಗತ್ಯವಿಲ್ಲ. ಉತ್ತಮ ಇಂಟರ್ನೆಟ್ ಸಂಪರ್ಕ ಸಾಕು.

Google Zero Gravity

Google Zero Gravity

ಗೂಗಲ್‌ನಲ್ಲಿ Google Zero Gravity ಎಂದು ಸರ್ಚ್ ಮಾಡಿದರೇ ಕಾಣಿಸುವ ಗೂಗಲ್ ಡ್ಯೂಡಲ್ ತಕ್ಷಣಕ್ಕೆ ಕೆಳಗ ಬಿದ್ದಂತೆ ಕಾಣುತ್ತದೆ. ಏಕೆಂದರೇ ನೀವು ಸರ್ಚ್ ಮಾಡಿರುವ ಕೀ ವರ್ಡ್ ಜೀರೊ ಗ್ರ್ಯಾವಿಟಿ ಅಲ್ಲವೇ.

Best Mobiles in India

English summary
new Google tricks that you should know in 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X