ಕಾಲ್ಚಳಕದ ಆಟಕ್ಕೆ ಭರ್ಜರಿ ಆಫರ್ ನೀಡಿದ ಟೆಲಿಕಾಂ ಆಪರೇಟರ್ಸ್..!

By Avinash

  ಇಂದಿನಿಂದ ವಿಶ್ವದಾದ್ಯಂತ ಫುಟ್ಬಾಲ ಜ್ವರ ಶುರುವಾಗಲಿದ್ದು, ರಷ್ಯಾದಲ್ಲಿ ನಡೆಯುವ 32 ದೇಶಗಳ ಕಾಲ್ಚಳಕ ನೋಡಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಅದರಂತೆ ಟೆಲಿಕಾಂ ಆಪರೇಟರ್ ಗಳು ಸಹ ತಮ್ಮ ಬಳಕೆದಾರರಲ್ಲಿ ಫಿಫಾ ಸಂಭ್ರಮವನ್ನು ಇಮ್ಮಡಿಗೊಳಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿವೆ. ಫ್ರೀ ಲೈವ್ ಸ್ಟ್ರೀಮ್, ಡೇಟಾ ಆಫರ್, ವಿನ್ನಿಂಗ್ ಆಫರ್ ಗಳನ್ನು ನೀಡಿ ಅಂಗೈಯಲ್ಲಿ ಫುಟ್ಬಾಲ್ ವೈಭವವನ್ನು ತೆರೆದಿಡುವ ಪ್ರಯತ್ನ ಮಾಡುತ್ತಿವೆ.

  ಗೂಗಲ್ ನಲ್ಲೂ ಫುಟ್ಬಾಲ್ ಸಂಭ್ರಮ...ಡೂಡಲ್ ಮೂಲಕ ಫಿಫಾ ಲೈವ್ ಇಟ್ ಅಪ್..!

  ಬಿಎಸ್ಎನ್ಎಲ್, ಏರ್ ಟೆಲ್, ಜಿಯೋ, ವೋಡಾಪೋನ್ ಸೇರಿದಂತೆ ಹಲವು ಭಾರತೀಯ ಟೆಲಿಕಾಂ ಆಪರೇಟರ್ ಗಳು ಭರ್ಜರಿ ಆಫರ್ ನೀಡಿ ಗ್ರಾಹಕರನ್ನು ಸೆಳೆಯುತ್ತಿವೆ. ಭಾರತದಲ್ಲಿ ಕ್ರೀಡೆಗೆ ಯಾವತ್ತೂ ಕ್ರೇಜ್ ಕಡಿಮೆ ಆಗಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡಿರುವ ಟೆಲಿಕಾಂ ಆಪರೇಟರ್ ಗಳು ಸಿಕ್ಕ ಅವಕಾಶದಲ್ಲಿ ಗ್ರಾಹಕರ ಸೆಳೆಯುತ್ತಿವೆ. ಫುಟ್ಬಾಲ್ ವಿಶ್ವಕಪ್ ಗೆ ಯಾವ ಟೆಲಿಕಾಂ ಆಪರೇಟರ್ ಯಾವ ಆಫರ್ ನೀಡಿದ್ದಾರೆ, ಅದರಲ್ಲಿ ಯಾವುದು ಬೆಸ್ಟ್ ಎಂಬುದನ್ನು ತಿಳಿಸುತ್ತೇವೆ.. ಮುಂದೆ ನೋಡಿ.

  ಕಾಲ್ಚಳಕದ ಆಟಕ್ಕೆ ಭರ್ಜರಿ ಆಫರ್ ನೀಡಿದ ಟೆಲಿಕಾಂ ಆಪರೇಟರ್ಸ್..!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಏರ್ ಟೆಲ್ ನಿಂದ ಉಚಿತ ಸ್ಟ್ರೀಮಿಂಗ್

  ಭಾರತದ ಅತಿದೊಡ್ಡ ನೆಟ್ ವರ್ಕ್ ಭಾರ್ತಿ ಏರ್ ಟೆಲ್ ಫಿಫಾ ವಿಶ್ವಕಪ್ ಪ್ರಸಾರವನ್ನು ತನ್ನ ಏರ್ ಟೆಲ್ ಟಿವಿ ಆಪ್ ನಲ್ಲಿ ಉಚಿತವಾಗಿ ನೀಡುತ್ತೇವೆ ಎಂದು ಘೋಷಿಸಿಕೊಂಡಿದೆ. ಈ ಲೈವ್ ಸ್ಟ್ರೀಮಿಂಗ್ ಭಾರತದ ಪ್ರಾದೇಶಿಕ ಭಾಷೆಗಳ ಜೊತೆ ಹಿಂದಿ ಮತ್ತು ಇಂಗ್ಲೀಷ್ ಭಾಷೆಯ ವಿವರಣೆಯೊಂದಿಗೆ ವೈವಿಧ್ಯಮಯ ಭಾರತದಲ್ಲಿ ಫುಟ್ಬಾಲ್ ಪ್ರೇಮವನ್ನು ಪಸರಿಸಲಿದೆ.

  ಏರ್ ಟೆಲ್ ಟಿವಿ ಆಪ್ ಅಪ್ ಗ್ರೇಡ್ ಮಾಡ್ಕೊಳ್ಳಿ

  ಏರ್ ಟೆಲ್ ಘೋಷಿಸಿರುವ ಉಚಿತ ಲೈವ್ ಸ್ಟ್ರೀಮ್ ಪಡೆಯಲು ಏರ್ ಟೆಲ್ ಟಿವಿ ಆಪ್ ಅನ್ನು ಅಪ್ ಗ್ರೇಡ್ ಮಾಡಿಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು iOS ಎರಡು ಆವೃತ್ತಿಗಳಲ್ಲಿ ಆಪ್ ಲಭ್ಯವಿದ್ದು, ಇನ್ಸ್ಟಾಲ್ ಮಾಡಿಕೊಳ್ಳಬಹುದು.

  IPL ಸ್ಟ್ರೀಮಿಂಗ್ ಯಶಸ್ಸಿನ ಮುಂದುವರಿಕೆ

  ಭಾರ್ತಿ ಏರ್ ಟೆಲ್ 2018ರ ಐಪಿಎಲ್ ಪ್ರಸಾರವನ್ನು ಉಚಿತವಾಗಿ ನೀಡಿತ್ತು, ಅದರ ಯಶಸ್ಸಿನ ನಂತರ ಫುಟ್ಬಾಲ್ ವಿಶ್ವಕಪ್ ಗೆ ತನ್ನ ಉಚಿತ ಪ್ರಸಾರ ಸೇವೆಯನ್ನು ವಿಸ್ತರಿಸಿದೆ. ಇದರಿಂದ ಫುಟ್ಬಾಲ್ ಕ್ರೇಜ್ ಹೆಚ್ಚುವುದಲ್ಲದೇ ಗ್ರಾಹಕರ ಅದ್ಭುತ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ ಎಂದು ಭಾರ್ತಿ ಏರ್ ಟೆಲ್ ಕಂಟೆಂಟ್ ಮತ್ತು ಆಪ್ಸ್ ಸಿಇಒ ಸಮೀರ್ ಬಾತ್ರಾ ತಿಳಿಸಿದ್ದಾರೆ.

  ಫಿಫಾಗಾಗಿ ಬಹಳಷ್ಟು ಅಪ್ ಡೇಟ್ ಕಂಡ ಏರ್ ಟೆಲ್ ಟಿವಿ ಆಪ್

  ಏರ್ ಟೆಲ್ ಟಿವಿ ಆಪ್ ಅನ್ನು ಕ್ರೀಡಾ ಪ್ರೇಮಿಗಳತ್ತಿರ ತೆಗೆದುಕೊಂಡು ಹೋಗುವ ಉದ್ದೇಶದಿಂದ ಹಲವು ಬದಲಾವಣೆಗಳನ್ನು ಟಿವಿ ಆಪ್ ತಂದಿದೆ. ಲೈವ್ ಸ್ಟ್ರೀಮಿಂಗ್ ಜೊತೆಗೆ ಫಿಫಾ 2018 ಅಪ್ ಡೇಟ್ಸ್ ಮತ್ತು ಕ್ರೀಡಾಂಗಣದ ಹೊರಗಡೆ ಏನು ನಡೆಯುತ್ತಿದೆ, ಪಂದ್ಯಗಳ ಪ್ರಿವೀವ್ ಮತ್ತು ರಿವೀವ್ ಗಳು ಆಪ್ ನಲ್ಲಿ ಲಭ್ಯವಿವೆ.

  ಜಿಯೋದಿಂದಲೂ ಉಚಿತ ಸ್ಟ್ರೀಮಿಂಗ್ ಆಫರ್

  ಅನೇಕ ಅವಾರ್ಡ್ ಗಳನ್ನು ಪಡೆದಿರುವ ಲೈವ್ ಟಿವಿ ಆಪ್ ಜಿಯೋ ಟಿವಿ ಮೂಲಕ ಫಿಫಾ ವಿಶ್ವಕಪ್ ಅನ್ನು ಉಚಿತ ಲೈವ್ ಸ್ಟ್ರೀಮ್ ನೀಡಲು ರಿಲಾಯನ್ಸ್ ಜಿಯೋ ಮುಂದಾಗಿದೆ. ಭಾರತ ಮತ್ತು ಅಪ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯವನ್ನು ಜೂನ್ 14 ರಿಂದ 18ರವರೆಗೆ ಬೆಳಗ್ಗೆ 9.30ರಿಂದ ಲೈವ್ ಸ್ಟ್ರೀಮ್ ಮಾಡುತ್ತಿದೆ. ಅದರಂತೆ, ಜೂನ್ 14 ರಿಂದ ಜುಲೈ 15ರವರೆಗೆ ಫಿಫಾ ವಿಶ್ವಕಪ್ ಪ್ರಸಾರ ಮಾಡಲಿದೆ.

  ವೋಡಾಪೋನ್ ನಿಂದ ಐಪಾಡ್ ಮಿನಿ ಆಫರ್

  ಭಾರತದ ಎರಡನೇ ಅತಿದೊಡ್ಡ ನೆಟ್ ವರ್ಕ್ ವೋಡಾಪೋನ್ ತನ್ನ ಗ್ರಾಹಕರಿಗೆ ಫಿಫಾ ವಿಶ್ವಕಪ್ ಸಲುವಾಗಿ ಐಪಾಡ್ ಮಿನಿ ಗೆಲ್ಲುವ ಅವಕಾಶ ನೀಡಿದೆ. ಸರಳವಾದ ಆಟ ಆಡುವುದರೊಂದಿಗೆ ಗೋಲ್ ಪಾಯಿಂಟ್ಸ್ ಗೆಲ್ಲಬೇಕು ಅಥವಾ ಮೈ ವೋಡಾಪೋನ್ ಆಪ್ ಮೂಲಕ ಟ್ರಾನ್ಸಾಕ್ಷನ್ ಮಾಡಿದರೆ ಐಪಾಡ್ ಮಿನಿ ಗೆಲ್ಲಬಹುದು.

  ಐಪಾಡ್ ಮಿನಿ ಗೆಲ್ಲಲು ಹೀಗೆ ಮಾಡಿ

  ವೊಡಾಪೋನ್ ಐಪಾಡ್ ಮಿನಿ ಗೆಲ್ಲಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದೆ.

  1. ಮೊದಲು ಮೈವೊಡಾಪೋನ್ ಖಾತೆಗೆ ಲಾಗಿನ್ ಆಗಿ.
  2. ಹೋಮ್ ಸ್ಕ್ರೀನ್ ನಲ್ಲಿ ಕಾಣುವ ಕಂಟೆಸ್ಟ್ ಚಿತ್ರದ ಮೇಲೆ ಕ್ಲಿಕ್ ಮಾಡಿ.
  3. ಮೈ ವೊಡಾಪೋನ್ ಆಪ್ ನಲ್ಲಿ ಗೋಲ್ ಗಳನ್ನು ಗಳಿಸುವುದಕ್ಕೆ ಶುರುಮಾಡಿ ಮತ್ತು ಪಾಯಿಂಟ್ಸ್ ಅನ್ನು ಗಳಿಸಿ.
  4. ರಿಚಾರ್ಜ್ ಮತ್ತು ಬಿಲ್ ಪಾವತಿಸಿ ಮತ್ತೊಂದು ಗೋಲ್ ಗಳಿಸುವ ಅವಕಾಶ ಪಡೆದು, ಹೆಚ್ಚುವರಿ ಪಾಯಿಂಟ್ಸ್ ಪಡೆಯಿರಿ.
  5. ಅತಿಹೆಚ್ಚು ಪಾಯಿಂಟ್ಸ್ ಪಡೆದು ಡೈಲಿ ಬಹುಮಾನಗಳನ್ನು ಗೆಲ್ಲಿ.
  6. ಬಂಪರ್ ಬಹುಮಾನ ಗೆಲ್ಲುವುದಕ್ಕಾಗಿ ಸ್ಕೋರ್ ಬೋರ್ಡ್ ನಲ್ಲಿ ಅತಿ ಹೆಚ್ಚು ಪಾಯಿಂಟ್ಸ್ ಪಡೆಯಿರಿ.
  7. ಬಂಪರ್ ಬಹುಮಾನ ಗೆದ್ದವರಿಗೆ 1 ಲಕ್ಷ ರೂ. ಮೌಲ್ಯದ ಟ್ರಾವೆಲ್ ವೋಚರ್ ಸಿಗಲಿದೆ.

  ಬಿಎಸ್ಎನ್ಎಲ್ ನಿಂದ 4GB ಬಂಪರ್ ಆಫರ್

  ಎಲ್ಲಾ ಟೆಲಿಕಾಂ ಆಪರೇಟರ್ ಗಳು ಆಫರ್ ನೀಡುತ್ತಿರಬೇಕಾದರೆ, ಎಲ್ಲ ಆಪರೇಟರ್ ಗಳು ಹುಬ್ಬೇರಿಸುವಂತೆ ಬಿಎಸ್ಎನ್ಎಲ್ ಫಿಫಾ ವಿಶ್ವಕಪ್ ಗಾಗಿ 4GB ಡೇಟಾ ಆಫರ್ ನೀಡಿದೆ. 149 ರೂ. ಹೊಸ ಪ್ಲಾನ್ ಪರಿಚಯಿಸಿರುವ ಬಿಎಸ್ಎನ್ಎಲ್ 30 ದಿನಗಳ ವ್ಯಾಲಿಡಿಟಿಯೊಂದಿಗೆ ಆಫರ್ ನೀಡಿರುವುದು ಟೆಲಿಕಾಂ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  FIFA 2018 World Cup offers by Airtel, Jio, BSNL, Vodafone, and others. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more