ಫಿಟ್‌ಬಿಟ್‌ ಕಂಪೆನಿಯಿಂದ ಮೂರು ಹೊಸ ಸ್ಮಾರ್ಟ್‌ವಾಚ್‌ ಬಿಡುಗಡೆ! ವಿಶೇಷತೆ ಏನು?

|

ಫಿಟ್‌ಬಿಟ್‌ ಕಂಪೆನಿ ಜನಪ್ರಿಯ ಸ್ಮಾರ್ಟ್‌ವಾಚ್‌ಗಳಿಗೆ ಹೆಸರುವಾಸಿಯಾಗಿದೆ. ಹೆಲ್ತ್‌ ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳ ಮೂಲಕ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿರುವ ಫಿಟ್‌ಬಿಟ್‌ ಕಂಪೆನಿ ಇದೀಗ ಹೊಸದಾಗಿ ಮೂರು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದೆ. ಭಾರತದ ಮಾರುಕಟ್ಟೆಯಲ್ಲಿ ಫಿಟ್‌ಬಿಟ್‌ ಕಂಪೆನಿ ಹೊಸದಾಗಿ ಫಿಟ್‌ಬಿಟ್ ಸೆನ್ಸ್ 2, ಫಿಟ್‌ಬಿಟ್ ವರ್ಸಾ 4 ಮತ್ತು ಫಿಟ್‌ಬಿಟ್ ಇನ್‌ಸ್ಪೈರ್ 3 ಫಿಟ್‌ನೆಸ್ ಟ್ರ್ಯಾಕರ್ ಅನ್ನು ಲಾಂಚ್‌ ಮಾಡಿದೆ.

ಫಿಟ್‌ಬಿಟ್‌

ಹೌದು, ಫಿಟ್‌ಬಿಟ್‌ ಕಂಪೆನಿ ಭಾರತದಲ್ಲಿ ಮೂರು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಈ ಡಿವೈಸ್‌ಗಳು ವಿಶೇಷ ವಿನ್ಯಾಸವನ್ನು ಪಡೆದುಕೊಂಡಿದ್ದು, ಆಕರ್ಷಕ ಫೀಚರ್ಸ್‌ಗಳ ಮೂಲಕ ಗಮನಸೆಳೆದಿವೆ. ಹೃದಯ ಬಡಿತದ ಮಾನಿಟರಿಂಗ್‌, ಆಕ್ಟಿವಿಟಿ ಟ್ರ್ಯಾಕಿಂಗ್‌, ಹೆಲ್ತ್ ಮೆಟ್ರಿಕ್ಸ್ ಡ್ಯಾಶ್‌ಬೋರ್ಡ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿವೆ. ಇದಲ್ಲದೆ ಮೂಡ್‌ ಲಾಗಿಂಗ್‌ ಮಾರ್ಗದರ್ಶಿ ಉಸಿರಾಟದಂತಹ ವಿಶೇಷ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ವಾಚ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫಿಟ್‌ಬಿಟ್ ಸೆನ್ಸ್ 2

ಫಿಟ್‌ಬಿಟ್ ಸೆನ್ಸ್ 2

ಫಿಟ್‌ಬಿಟ್‌ ಸೆನ್ಸ್‌ 2 ಸ್ಮಾರ್ಟ್‌ವಾಚ್‌ 24/7 ಹೃದಯ ಬಡಿತದ ಮಾನಿಟರಿಂಗ್, ಆ್ಕಟಿವಿಟಿ ಟ್ರ್ಯಾಕಿಂಗ್, ವಾಕ್/ರನ್ ಪತ್ತೆ, ಸ್ಲಿಪ್‌ ಟ್ರ್ಯಾಕಿಂಗ್ ಮತ್ತು ಒತ್ತಡದ ಟ್ರ್ಯಾಕಿಂಗ್‌ ಫೀಚರ್ಸ್‌ಗಳನ್ನು ಹೊಂದಿದೆ. ಇದರಲ್ಲಿ ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಸ್ಕೋರ್‌ನೊಂದಿಗೆ ತಮ್ಮ ದೇಹವು ಎಷ್ಟು ಚೆನ್ನಾಗಿ ಒತ್ತಡವನ್ನು ನಿಭಾಯಿಸುತ್ತಿದೆ ಎಂಬುದನ್ನು ಬಳಕೆದಾರರು ನೋಡಬಹುದು. ಫಿಟ್‌ಬಿಟ್‌ ಸೆನ್ಸ್‌ ಮೂಲಕ ಶೀಘ್ರದಲ್ಲೇ ಬಳಕೆದಾರರು ಗೂಗಲ್ ಮ್ಯಾಪ್ಸ್ ಮತ್ತು ಗೂಗಲ್ ವಾಲೆಟ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಫಿಟ್‌ಬಿಟ್ ಹೇಳಿದೆ. ಇನ್ನು ಈ ಹೊಸ ಸ್ಮಾರ್ಟ್‌ವಾಚ್‌ Fitbit OS ಅನ್ನು ರನ್ ಮಾಡುತ್ತದೆ. ಇದು iOS ಮತ್ತು Android ಎರಡಕ್ಕೂ ಹೊಂದಿಕೊಳ್ಳುತ್ತದೆ. ಈ ವಾಚ್‌ನ ಬ್ಯಾಟರಿ ಆರು ದಿನಗಳಿಂತ ಹೆಚ್ಚಿನ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.

ಫಿಟ್‌ಬಿಟ್ ವರ್ಸಾ 4

ಫಿಟ್‌ಬಿಟ್ ವರ್ಸಾ 4

ಫಿಟ್‌ಬಿಟ್ ವರ್ಸಾ 4 ಸ್ಮಾರ್ಟ್‌ವಾಚ್ ವೇಟ್ ಲಿಫ್ಟಿಂಗ್, ಕ್ರಾಸ್‌ಫಿಟ್ ಮತ್ತು ಡ್ಯಾನ್ಸ್‌ನಂತಹ ಹೊಸ ಆಯ್ಕೆಗಳು ಸೇರಿದಂತೆ 40 ಕ್ಕೂ ಹೆಚ್ಚು ವ್ಯಾಯಾಮ ವಿಧಾನಗಳನ್ನು ನೀಡಲಿದೆ. ಅಲ್ಲದೆ ಪ್ರೀಮಿಯಂನೊಂದಿಗೆ 1,000 ಕ್ಕೂ ಹೆಚ್ಚು ವರ್ಕ್‌ಔಟ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಇಂಟರ್‌ಬಿಲ್ಟ್‌ ಜಿಪಿಎಸ್ ಅನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ತಾಲೀಮುಗಾಗಿ ಸಾಗಿಸುವ ಅಗತ್ಯವನ್ನು ನಿವಾರಿಸುತ್ತದೆ. ಫಿಟ್‌ಬಿಟ್‌ ವರ್ಸಾ 4 ಸ್ಮಾರ್ಟ್‌ವಾಚ್‌ ಹೊಸ Fitbit OSನಲ್ಲಿ ರನ್‌ ಆಗಲಿದ್ದು, iOS ಮತ್ತು Android ಎರಡು ಡಿವೈಸ್‌ಗಳಿಗೂ ಸೆಟ್‌ ಆಗಲಿದೆ.

ಫಿಟ್‌ಬಿಟ್‌ ಇನ್‌ಸ್ಪೈರ್‌ 3

ಫಿಟ್‌ಬಿಟ್‌ ಇನ್‌ಸ್ಪೈರ್‌ 3

ಫಿಟ್‌ಬಿಟ್‌ ಇನ್‌ಸ್ಪೈರ್‌ 3 ಸ್ಮಾರ್ಟ್‌ವಾಚ್‌ ಹೆಲ್ತ್ ಮೆಟ್ರಿಕ್ಸ್ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ. ಇದರಲ್ಲಿ ಬಳಕೆದಾರರು ತಮ್ಮ ಉಸಿರಾಟದ ದರ, ಹೃದಯ ಬಡಿತದ ವ್ಯತ್ಯಾಸ, ಚರ್ಮದ ಉಷ್ಣತೆ, ಆಮ್ಲಜನಕದ ಶುದ್ಧತ್ವ (SpO2) ಮತ್ತು ವಿಶ್ರಾಂತಿ ಹೃದಯ ಬಡಿತದ ರೇಟ್‌ ಅನ್ನು ತಿಳಿದುಕೊಳ್ಳಬಹುದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 50 ಮೀಟರ್ ವರೆಗೆ ನೀರು ನಿರೋಧಕವಾಗಿದೆ ಮತ್ತು ಮೂರು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಫಿಟ್‌ಬಿಟ್ ಸೆನ್ಸ್ 2 ಸ್ಮಾರ್ಟ್‌ವಾಚ್‌ ಭಾರತದಲ್ಲಿ 24,999 ರೂ. ಬೆಲೆಯನ್ನು ಹೊಂದಿದೆ. ಇದು ಶಾಡೋ ಗ್ರೇ / ಗ್ರ್ಯಾಫೈಟ್ ಅಲ್ಯೂಮಿನಿಯಂ, ಲೂನಾರ್ ವೈಟ್ / ಪ್ಲಾಟಿನಂ ಅಲ್ಯೂಮಿನಿಯಂ ಮತ್ತು ಬ್ಲೂ ಮಿಸ್ಟ್ / ಸಾಫ್ಟ್ ಗೋಲ್ಡ್ ಅಲ್ಯೂಮಿನಿಯಂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಫಿಟ್‌ಬಿಟ್ ವರ್ಸಾ 4 ಸ್ಮಾರ್ಟ್‌ವಾಚ್‌ 20,499 ರೂ. ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಬ್ಲಾಕ್‌ / ಗ್ರ್ಯಾಫೈಟ್ ಅಲ್ಯೂಮಿನಿಯಂ, ವಾಟರ್‌ಫಾಲ್‌ ಬ್ಲೂ / ಪ್ಲಾಟಿನಂ ಅಲ್ಯೂಮಿನಿಯಂ, ಪಿಂಕ್ ಸ್ಯಾಂಡ್ / ಕಾಪರ್ ರೋಸ್ ಅಲ್ಯೂಮಿನಿಯಂ ಮತ್ತು ಬೀಟ್ ಜ್ಯೂಸ್ / ಕಾಪರ್ ರೋಸ್ ಅಲ್ಯೂಮಿನಿಯಂ ಕಲರ್‌ ಆಯ್ಕೆಗಳಲ್ಲಿ ಬರಲಿದೆ.

ಫಿಟ್‌ಬಿಟ್ ಇನ್‌ಸ್ಪೈರ್ 3 ಸ್ಮಾರ್ಟ್‌ವಾಚ್‌ ಭಾರತದಲ್ಲಿ 8,999 ರೂ. ಬೆಲೆಯನ್ನು ಹೊಂದಿದೆ. ಇದು ಮಿಡ್‌ನೈಟ್ ಝೆನ್ / ಬ್ಲ್ಯಾಕ್, ಲಿಲಾಕ್ ಬ್ಲಿಸ್ / ಬ್ಲ್ಯಾಕ್ ಮತ್ತು ಮಾರ್ನಿಂಗ್ ಗ್ಲೋ / ಬ್ಲ್ಯಾಕ್ ಬಣ್ಣದ ರೂಪಾಂತರದ ಆಯ್ಕೆಗಳಲ್ಲಿ ಬರಲಿದೆ.

Best Mobiles in India

English summary
Fitbit has officially added three new smartwatches and fitness trackers to its portfolio.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X