ಹ್ಯಾಕರ್‌ಗಳ ಬಾಯಿಗೆ ತುಪ್ಪ ಸುರಿಯುತ್ತಿವೆ ಸ್ಮಾರ್ಟ್‌ಫೋನ್‌ ಕಂಪನಿಗಳು..!

By Avinash
|

ದಿನದಿಂದ ದಿನಕ್ಕೆ ಸ್ಮಾರ್ಟ್‌ಫೋನ್‌ ಲೋಕ ಬೆಳೆಯುತ್ತಿದೆ. ಅದರಂತೆ ನಮ್ಮ ವ್ಯವಹಾರಗಳು ಎಲ್ಲವೂ ಆನ್‌ಲೈನ್‌ ಆಗುತ್ತಿದೆ. ನಮ್ಮ ವೈಯಕ್ತಿಕ ವಿಷಯಗಳು ಬೈನರಿ ಕೋಡ್‌ ಆಗಿ ಪರಿವರ್ತನೆಯಾಗಿ ಎಲ್ಲೋ ಒಂದು ಕಡೆ ಸಂಗ್ರಹವಾಗುತ್ತಿವೆ. ಎಲ್ಲಾ ಬ್ಯಾಂಕ್ ಅಕೌಂಟ್‌ಗಳಿಗೆ ಆಧಾರ್ ಲಿಂಕ್, ಹೀಗೆ ಆನ್‌ಲೈನ್‌ ವ್ಯವಹಾರ ಮುಂದುವರೆಯುತ್ತದೆ. ನಮ್ಮ ಮಾಹಿತಿಯೇ ಆನ್‌ಲೈನ್‌ನಲ್ಲಿ ವ್ಯಾಪಾರವಾಗಿದೆ. ಆದರೆ, ಈಗ ನಾವಿಲ್ಲಿ ಹೇಳುವ ಸುದ್ದಿ ಕೇಳಿದರೆ ಆತಂಕಕ್ಕೀಡಾಗುವುದು ಖಂಡಿತ..!

ಹ್ಯಾಕರ್‌ಗಳ ಬಾಯಿಗೆ ತುಪ್ಪ ಸುರಿಯುತ್ತಿವೆ ಸ್ಮಾರ್ಟ್‌ಫೋನ್‌ ಕಂಪನಿಗಳು..!

ಏನಪ್ಪ ಅದು ಎಂದು ಕೇಳಿದರೆ, ಹೌದು, ಅಂತಹ ಒಂದು ಸುದ್ದಿಯನ್ನು ಮೊಬೈಲ್‌ ಸೆಕ್ಯೂರಿಟಿ ಸಂಸ್ಥೆಯಾಗಿರುವ ಕ್ರಿಪ್ಟೋರೈಟ್ ಡೆಫ್‌ ಕಾನ್‌ ಭದ್ರತಾ ಸಮ್ಮೇಳನದಲ್ಲಿ ಶುಕ್ರವಾರ ಬಹಿರಂಗಪಡಿಸಿದೆ. ನಿಮ್ಮ ಎಲ್ಲಾ ವಿವರಗಳನ್ನು ನೀವು ಯಾವುದೇ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳದಿದ್ದರೂ, ಸ್ಮಾರ್ಟ್‌ಫೋನ್‌ನಲ್ಲಿ ಮೊದಲೇ ಇನ್‌ಸ್ಟಾಲ್‌ ಆಗಿರುವ ಆಪ್‌ಗಳಿಂದ ಹ್ಯಾಕರ್‌ಗಳು ಕದಿಯಬಹುದೆಂಬುದೆ ಸ್ಫೋಟಕ ಮಾಹಿತಿ.

ಬ್ಲಾಟ್‌ ವೇರ್‌ಗಳು

ಬ್ಲಾಟ್‌ ವೇರ್‌ಗಳು

ಹೊಸ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲೇ ಅನೇಕ ಬಳಕೆದಾರರಿಗೆ ಬೇಕಿಲ್ಲದ ಆಪ್‌ಗಳನ್ನು ಉತ್ಪಾದನೆ ಕಂಪನಿ ಅಥವಾ ಮಾರಾಟ ಮಾಡುವ ಕಂಪನಿ ಇನ್‌ಸ್ಟಾಲ್‌ ಮಾಡಿರುತ್ತವೆ. ಇವುಗಳನ್ನು ಸಾಮಾನ್ಯವಾಗಿ ಟೆಕ್ ಭಾಷೆಯಲ್ಲಿ ಬ್ಲಾಟ್‌ವೇರ್‌ ಎಂದು ಕರೆಯುತ್ತಾರೆ. ಅವುಗಳಲ್ಲಿ ಯಾವುದಾದರೂ ಆಪ್‌ಗಳು ಬ್ಯಾಕ್‌ಡೋರ್‌ನಿಂದ ಪ್ರವೇಶಿಸಿದರೆ ನೀವೇನು ಮಾಡುವುದಕ್ಕಾಗಲ್ಲ. ಆದ್ದರಿಂದ ಇಂತಹ ಆಪ್‌ಗಳ ಬಗ್ಗೆ ಎಚ್ಚರ ವಹಿಸಿ.

47  ವಿವಿಧ ಬಗೆಯ ದೋಷಗಳು

47 ವಿವಿಧ ಬಗೆಯ ದೋಷಗಳು

ಸಂಶೋಧಕರು ಸಮಾವೇಶದಲ್ಲಿ 47 ವಿವಿಧ ಬಗೆಯ ಸ್ಮಾರ್ಟ್‌ಫೋನ್ ದೋಷಗಳನ್ನು ಪತ್ತೆ ಹಚ್ಚಿದ್ದಾರೆ. ಇವುಗಳು ಫರ್ಮ್‌ವೇರ್ ಮತ್ತು ಡಿಫಾಲ್ಟ್‌ ಆಪ್‌ಗಳಲ್ಲಿ ಅಡಗಿರುತ್ತವೆ. ಡಿಫಾಲ್ಟ್‌ ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಲು ಸಹ ಬರುವುದಿಲ್ಲ. ಸಂಶೋಧಕರು ತಮ್ಮ ಈ ಸಂಶೋಧನೆಗೆ 25 ಹೊಸ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳನ್ನು ಬಳಸಿದ್ದರು, ಈ ಸಮಯದಲ್ಲಿ ಸಂಶೋಧಕರಿಗೆ ಕಂಡಿದ್ದೇನೆಂದರೆ ಈ ರೀತಿಯ ದೋಷಗಳಿಂದ ಲಕ್ಷಾಂತರ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕರ್‌ಗಳು ಸುಲಭವಾಗಿ ಹ್ಯಾಕ್ ಮಾಡಿ ಮಾಹಿತಿಯನ್ನು ಕದಿಯುವ ಅಪಾಯಕಾರಿ ಸನ್ನಿವೇಷ ಸೃಷ್ಟಿಯಾಗುತ್ತಿದೆ.

ಈ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚು ದೋಷಗಳು

ಈ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚು ದೋಷಗಳು

47 ದೋಷಗಳಲ್ಲಿ ಪ್ರಮುಖ 11 ದೋಷಗಳು ಈ ಕಂಪನಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಇವೆ ಎಂಬುದು ಅಧ್ಯಯನದಿಂದ ಕಂಡು ಬಂದಿದೆ. ಆಸಸ್, ZTE, ಎಲ್‌ಜಿ ಮತ್ತು ಎಸೆಂಟಿಯಲ್‌ ಫೋನ್‌ ಕಂಪನಿಗಳು ಉತ್ಪಾದಿಸಿದ ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್‌ ಆದ ಆಪ್‌ಗಳಲ್ಲಿ ಪ್ರಮುಖ ದೋಷಗಳು ಕಂಡಿವೆ. ಅದರಂತೆ ಅಮೇರಿಕಾದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ ವೆರಿಜೋನ್ ಮತ್ತು ಎಟಿ&ಟಿಯಂತಹ ಕಂಪನಿಗಳು ಸಹ ಇಂತಹ ದೋಷಗಳನ್ನು ಬಳಕೆದಾರರಿಗೆ ತಲುಪಿಸುತ್ತಿವೆ ಎಂಬುದು ಭದ್ರತಾ ತಜ್ಞರ ವಾದ.

ನಿಮ್ಮ ಸ್ಮಾರ್ಟ್‌ಫೋನ್‌ಗಳು ಪಟ್ಟಿಯಲ್ಲಿವೆ

ನಿಮ್ಮ ಸ್ಮಾರ್ಟ್‌ಫೋನ್‌ಗಳು ಪಟ್ಟಿಯಲ್ಲಿವೆ

ಮೇಲೆ ತಿಳಿಸಿರುವ ಸ್ಮಾರ್ಟ್‌ಫೋನ್‌ಗಳು ಅಷ್ಟೇ ಅಲ್ಲದೇ ನಿಮ್ಮ ಸ್ಮಾರ್ಟ್‌ಫೋನ್‌ಗಳು ಸಹ ಹ್ಯಾಕರ್‌ಗಳಿಂದ ದಾಳಿಗೊಳಗಾಗುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿವೆ. ವಿವೋ, ಸೋನಿ, ನೋಕಿಯಾ ಮತ್ತು ಒಪ್ಪೋದಂತಹ ಸ್ಮಾರ್ಟ್‌ಫೋನ್‌ಗಳು ಸೇರಿ, ಸಣ್ಣ ಸ್ಮಾರ್ಟ್‌ಫೋನ್ ಕಂಪನಿಗಳಾದ ಸ್ಕೈ, ಲೀಹಾಗೋ, ಪ್ಲಮ್, ಆರ್ಬಿಕ್, ಎಂಎಕ್ಸ್‌ಕ್ಯೂ, ಡೂಗಿ. ಕೂಲ್‌ಪ್ಯಾಡ್, ಅಲ್ಕಾಟೆಲ್‌ನಂತಹ ಕಂಪನಿಗಳು ಸಹ ಬ್ಲಾಟೋವೇರ್‌ಗಳನ್ನು ಇನ್‌ಸ್ಟಾಲ್‌ ಮಾಡಿ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿವೆ ಎಂದರೆ ನಂಬಲೇಬೇಕು.

ಬಳಕೆದಾರರ ತಪ್ಪು ಕಲ್ಪನೆಯೇ ಆಧಾರ

ಬಳಕೆದಾರರ ತಪ್ಪು ಕಲ್ಪನೆಯೇ ಆಧಾರ

ಈ ಎಲ್ಲಾ ದೋಷಗಳು ಮೊದಲೇ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಆಗಿರುತ್ತವೆ. ನಾವು ಸ್ಮಾರ್ಟ್‌ಫೋನ್ ಒಪನ್ ಮಾಡಿದಾಗಲಿಂದಲೂ ಹ್ಯಾಕ್ ಪ್ರವೃತ್ತಿ ಪ್ರಾರಂಭವಾಗುತ್ತದೆ ಎಂದು ಕ್ರಿಪ್ಟೋರೈಟ್ ಸಿಇಒ ಆಂಜೇಲೋಸ್ ಸ್ಟಾವರು ಹೇಳಿದ್ದಾರೆ. ಬಳಕೆದಾರರು ತಾವು ಬೇಡದಿರುವ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿದಾಗ ಮೊಬೈಲ್‌ನಲ್ಲಿ ದೋಷಗಳು ಬಂದು ಹ್ಯಾಕ್‌ ಆಗುತ್ತೇ ಎಂಬ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ಈ ತಪ್ಪು ಕಲ್ಪನೆಯನ್ನೇ ಸ್ಮಾರ್ಟ್‌ಫೋನ್‌ ಕಂಪನಿಗಳು ತಮ್ಮ ಬಂಡವಾಳ ಮಾಡಿಕೊಂಡಿವೆ.

ಹ್ಯಾಕಿಂಗ್‌ನಿಂದ ಏನೇನಾಗುತ್ತೇ..?

ಹ್ಯಾಕಿಂಗ್‌ನಿಂದ ಏನೇನಾಗುತ್ತೇ..?

ಈ ರೀತಿಯ ಮೊದಲೇ ಇನ್‌ಸ್ಟಾಲ್ ಆದ ಡಿಫಾಲ್ಟ್‌ ಆಪ್‌ಗಳ ಮೂಲಕ ಹ್ಯಾಕ್ ಮಾಡಿದರೆ ಏನೇನಾಗುತ್ತೇ ಎಂದರೆ, ನಿಮ್ಮ ಪೂರ್ಣ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯನ್ನು ಹ್ಯಾಕರ್‌ಗಳಿಗೆ ಬಿಟ್ಟುಕೊಡಬೇಕಾಗುತ್ತದೆ. ಆಗ, ಹ್ಯಾಕರ್‌ಗಳು, ನಿಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್‌ಶಾಟ್‌ಗಳನ್ನು ತೆಗೆಯಬಹುದು, ನಿಮ್ಮ ಸ್ಕ್ರೀನ್ ರೆಕಾರ್ಡ್‌ ಮಾಡಬಹುದು, ನಿಮ್ಮ ಮೊಬೈಲ್‌ನಿಂದ ಫೋನ್‌ ಕಾಲ್ ಮಾಡಬಹುದು, ಮೆಸೇಜ್‌ಗಳನ್ನು ಓದಬಹುದು, ಮತ್ತು ಇನ್ನು ಏನೇನೋ ಮಾಡಬಹುದು ಎಂದು ಭದ್ರತಾ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಆಂಡ್ರಾಯ್ಡ್‌ನಲ್ಲಿಯೇ ಇದೆ ಸಮಸ್ಯೆ..!

ಆಂಡ್ರಾಯ್ಡ್‌ನಲ್ಲಿಯೇ ಇದೆ ಸಮಸ್ಯೆ..!

ಯುಎಸ್‌ನ ಹೋಮ್‌ಲ್ಯಾಂಡ್‌ ಭದ್ರತಾ ವಿಭಾಗದಿಂದ ಅಧ್ಯಯನ ಮಾಡಿದ ಕ್ರಿಪ್ಟೋವೈರ್‌ ಆಂಡ್ರಾಯ್ಡ್‌ ಒಎಸ್‌ನ ಸಮಸ್ಯೆಯನ್ನು ಸ್ಪಷ್ಟವಾಗಿ ಎತ್ತಿ ಹಿಡಿದಿದೆ. ಆಂಡ್ರಾಯ್ಡ್‌ ಸಿಸ್ಟಮ್‌ನಲ್ಲಿನಲ್ಲಿ ಮುಕ್ತ ಸ್ವರೂಪದಿಂದ ಈ ಸಮಸ್ಯೆ ಉದ್ಭವಿಸಿದೆ. ಆಂಡ್ರಾಯ್ಡ್‌ ಆಪ್‌ಗಳನ್ನು ಬಹಳ ಸುಲಭವಾಗಿ ಮೊಬೈಲ್ ಉತ್ಪಾದಕರು ಬದಲಾಯಿಸಬಹುದಾದ ಆಯ್ಕೆಯನ್ನು ಹೊಂದಿರುವುದು ಈ ಸಮಸ್ಯೆಗೆ ಕಾರಣವಾಗಿದೆ.

ಚೀನಾಕ್ಕೆ ಮಾಹಿತಿ ರವಾನೆ..!

ಚೀನಾಕ್ಕೆ ಮಾಹಿತಿ ರವಾನೆ..!

ಕ್ರಿಪ್ಟೋವೈರ್ ತಿಳಿಸಿರುವಂತೆ 700 ಮಿಲಿಯನ್‌ಗೂ ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಲಾಟ್‌ವೇರ್‌ಗಳು ಇನ್‌ಸ್ಟಾಲ್ ಆಗಿವೆ. ಆಶ್ವರ್ಯಕರ ಅಂಶವೇನೆಂದರೆ ಪ್ರತಿ 72 ಗಂಟೆಗಳಿಗೊಮ್ಮೆ ಆ ಸ್ಮಾರ್ಟ್‌ಫೋನ್‌ಗಳ ಮೆಸೇಜ್, ಲೋಕೆಷನ್‌ ಹಿಸ್ಟರಿ, ಕಾಲ್‌ ಲಾಗ್‌, ಆಪ್‌ ಡಾಟಾವನ್ನು ಚೀನಾಕ್ಕೆ ಕಳಿಸಲಾಗುತ್ತಿತ್ತು ಎಂದರೆ ನಂಬಲೇಬೇಕು.

ಗೂಗಲ್‌ ತಪ್ಪಲ್ಲ

ಗೂಗಲ್‌ ತಪ್ಪಲ್ಲ

ಗೂಗಲ್ ಮೊಬೈಲ್‌ ಸ್ಮಾರ್ಟ್‌ಫೋನ್‌ಗಳಿಗೆ ಕೇವಲ ಆಂಡ್ರಾಯ್ಡ್ ಒಎಸ್‌ ನೀಡುತ್ತದೆ. ನಂತರ ಸ್ಮಾರ್ಟ್‌ಫೋನ್ ತಯಾರಕರು ತಮಗೆ ಬೇಕಾದ ರೀತಿಯ ಆಪ್‌ಗಳನ್ನು ಬದಲಾಯಿಸಿ ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ. ಇದರಲ್ಲಿ ಗೂಗಲ್‌ನ ತಪ್ಪಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಆದರೆ, ಗೂಗಲ್‌ ಇಂತಹ ಕಂಪನಿಗಳಿಗೆ ನಿರ್ಬಂಧ ಹೇರಬಹುದಾದ ಆಯ್ಕೆಯನ್ನು ಹೊಂದಿದೆ.

Best Mobiles in India

English summary
Flaws in Pre-Installed Apps Expose Millions of Android Devices to Hackers. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X