Subscribe to Gizbot

ಪ್ರಪ್ರಥಮ ಬಾರಿಗೆ ಟ್ಯಾಬ್ಲೆಟ್ ಲಾಂಚ್ ಮಾಡಲಿರುವ ಫ್ಲಿಪ್‌ಕಾರ್ಟ್

Written By:

ಮೋಟೋರೋಲಾದೊಂದಿಗಿನ ಯಶಸ್ವಿ ಪಾಲುದಾರಿಕೆಯ ನಂತರ, ಫ್ಲಿಪ್‌ಕಾರ್ಟ್ ಡಿವೈಸ್‌ಗಳನ್ನು ತಯಾರು ಮಾಡುತ್ತಿರುವ ವಿಧಾನದಲ್ಲಿ ಬಹಳಷ್ಟು ಮಾರ್ಪಾಡುಗಳನ್ನು ಮಾಡುತ್ತಿದೆ. ಹೊಸ ಪ್ರಯೋಗವೆಂಬಂತೆ ಈ ರೀಟೈಲ್ ವೆಬ್‌ಸೈಟ್ ಹೊಸದಾಗಿ ಟ್ಯಾಬ್ಲೆಟ್ ಲಾಂಚಿಂಗ್ ಕಾರ್ಯಕ್ರಮವನ್ನು ಇದೀಗ ಹಮ್ಮಿಕೊಂಡಿದೆ.

ತನ್ನದೇ ಕಿಂಡಲ್ ಟ್ಯಾಬ್ಲೆಟ್‌ಗಳಿಂದ ಯಶಸ್ಸನ್ನು ಪಡೆದಿರುವ ಅಮೆಝಾನ್ ಹೆಜ್ಜೆಗುರುತನ್ನು ಅನುಸರಿಸುತ್ತಿರುವ ಫ್ಲಿಪ್‌ಕಾರ್ಟ್ ಟ್ಯಾಬ್ಲೆಟ್ ಉತ್ಪನ್ನದ ಪ್ರಚಾರಕ್ಕಾಗಿ ಸಕಲ ಸಿದ್ಧತೆಗಳನ್ನು ಹಮ್ಮಿಕೊಂಡಿದೆ. ತನ್ನ ಈ ಸಾಧನೆಯ ಫಲವೆಂಬಂತೆ ಆಸಕ್ತಿಕರವಾಗಿ ಫ್ಲಿಪ್‌ಕಾರ್ಟ್ ತನ್ನದೇ ಫ್ಲ್ಯಾಗ್‌ಶಿಪ್ ಇರುವ ಬಾಟಲಿಗಳಲ್ಲಿ ಟ್ಯಾಬ್ಲೆಟ್ ಮಾರಾಟವನ್ನು ಹಮ್ಮಿಕೊಂಡಿದೆ.

ಫ್ಲಿಪ್‌ಕಾರ್ಟ್ ಟ್ಯಾಬ್ಲೆಟ್‌ನ ಮೋಡಿ ಏನು???

ತನ್ನ ಈ ಟ್ಯಾಬ್ಲೆಟ್ ಲಾಂಚಿಂಗ್ ಕಾರ್ಯಕ್ರಮವನ್ನು ಜೂನ್ 26 ಕ್ಕೆ ಹಮ್ಮಿಕೊಂಡಿರುವ ಕಂಪೆನಿ ಮಾರುಕಟ್ಟೆಯಲ್ಲಿ ಹೊಸ ಪ್ರಯೋಗಕ್ಕಾಗಿ ಸಜ್ಜುಗೊಂಡಿದೆ. ಇನ್ನು ಟ್ಯಾಬ್ಲೆಟ್ ಬಗ್ಗೆ ಮಾತನಾಡುವುದಾದರೆ, ಟ್ಯಾಬ್ಲೆಟ್‌ನ ಉತ್ಪನ್ನಕ್ಕಾಗಿ ಕಂಪೆನಿಯು ಡಿಜಿಫ್ಲಿಪ್ ಅನ್ನು ಬಳಸುತ್ತಿದೆ ಮತ್ತು ಡಿಜಿಫ್ಲಿಪ್ ಕಂಪೆನಿಯು ಕಂಪ್ಯೂಟರ್ ಮೈಸ್, ಲ್ಯಾಪ್‌ಟಾಪ್ ಆಕ್ಸಸಿರೀಸ್, ಹೆಡ್‌ಫೋನ್‌ಗಳು ಮತ್ತು ಸ್ಪೀಕರ್‌ಗಳನ್ನು ಮಾರಾಟ ಮಾಡುತ್ತಿದೆ.

ಈ ಟ್ಯಾಬ್ಲೆಟ್ ಬೆಲೆ 10,000 ಕ್ಕಿಂತ ಹೆಚ್ಚು ಇದ್ದು ಇದು ಆಕರ್ಷಕ ರೂಪದಲ್ಲಿ ಬರಲಿದೆ. ಇದು ಮಾರುಕಟ್ಟೆಗೆ ಲಾಭದಾಯಕ ಅಂಶವಾಗಿ ರೂಪುಗೊಂಡಿದೆ. ಐಡಿಸಿ ವರದಿಯ ಪ್ರಕಾರ, 4.14 ಮಿಲಿಯನ್ ಟ್ಯಾಬ್ಲೆಟ್‌ಗಳು ಭಾರತದಲ್ಲಿ ಕಳೆದ ವರ್ಷ ಮಾರಾಟವಾಗಿದೆ. ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಮೊದಲ ಸ್ಥಾನದಲ್ಲಿದೆ. ಭಾರತೀಯ ಟ್ಯಾಬ್ಲೆಟ್ ತಯಾರಕರಾದ ಮೈಕ್ರೋಮ್ಯಾಕ್ಸ್, ಸ್ವೈಪ್, ಬಿಎಸ್‌ಎನ್‌ಎಲ್ ಮತ್ತು ಇತರ ಕಂಪೆನಿಗಳು ಫ್ಲಿಪ್‌ಕಾರ್ಟ್ ಟ್ಯಾಬ್ಲೆಟ್‌ನ ಪೈಪೋಟಿಯನ್ನು ಎದುರಿಸಲಿವೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot