ಭಾರತದಲ್ಲಿ ಉದ್ಯೋಗಕ್ಕೆ ಆದ್ಯತೆಯ ಕಂಪೆನಿ 'ಫ್ಲಿಪ್‌ಕಾರ್ಟ್'!!

|

ಬೆಂಗಳೂರಿನಲ್ಲೇ ಹುಟ್ಟಿಬೆಳೆದು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ ಭಾರತದ ಅತಿದೊಡ್ಡ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಿದೆ. ಇತ್ತೀಚಿನ ಅಧ್ಯಯನ ಒಂದರಲ್ಲಿ ಭಾರತದಲ್ಲಿ 'ಉದ್ಯೋಗಕ್ಕೆ ಆದ್ಯತೆಯಲ್ಲಿರುವ ಕಂಪನಿಗಳು' ಪಟ್ಟಿಯಲ್ಲಿ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಮೊದಲ ಸ್ಥಾನ ಪಡೆದು ಕೀರ್ತಿ ಪತಾಕೆ ಹಾರಿಸಿದೆ.

ಹೌದು, ಬೆಂಗಳೂರು ಮೂಲಕ ಫ್ಲಿಪ್‌ಕಾರ್ಟ್ ಕಂಪೆನಿ ಭಾರತದಲ್ಲಿ ಉದ್ಯೋಗಕ್ಕೆ ಆದ್ಯತೆಯಲ್ಲಿರುವ ಕಂಪನಿಗಳಲ್ಲಿ ಮೊದಲ ಸ್ಥಾನ ಪಡೆದಿದ್ದು, ಅಮೆಜಾನ್ ಮತ್ತು ಓಯೊ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಗಳನ್ನು ಪಡೆದಿವೆ. ಪ್ರಖ್ಯಾತ ಸಾಮಾಜಿಕ ಉದ್ಯೋಗ ಜಾಲತಾಣ ಲಿಂಕ್ಡ್ಇನ್ ನಡೆಸಿರುವ '2019 ಟಾಪ್ ಕಂಪನಿಗಳು' ಸಮೀಕ್ಷೆಯಿಂದ ಈ ವಿಷಯ ತಿಳಿದುಬಂದಿದೆ.

ಭಾರತದಲ್ಲಿ ಉದ್ಯೋಗಕ್ಕೆ ಆದ್ಯತೆಯ ಕಂಪೆನಿ 'ಫ್ಲಿಪ್‌ಕಾರ್ಟ್'!!

ಉದ್ಯೋಗಿಗಳು ಉದ್ಯೋಗ ನಿರ್ವಹಿಸಲು ಕಂಪನಿ ಕುರಿತ ಆಸಕ್ತಿ, ಉದ್ಯೋಗಿಗಳ ಜತೆ ಕಂಪನಿ ನಡೆದುಕೊಳ್ಳುವ ರೀತಿ, ಉದ್ಯೋಗ ಬೇಡಿಕೆ ಮತ್ತು ಉದ್ಯೋಗಿಗಳನ್ನು ತಮ್ಮ ಸಂಸ್ಥೆಯಲ್ಲೇ ಉಳಿಸಿಕೊಳ್ಳುವ ಕಂಪನಿ ಸಾಮರ್ಥ್ಯಗಳ ನಾಲ್ಕು ಅಂಶಗಳನ್ನು ಪರಿಗಣಿಸಿ ರ್ಯಾಕಿಂಗ್ ಸಿದ್ಧಪಡಿಸಲಾಗಿದೆ ಎಂದು ಲಿಂಕ್ಡ್ಇನ್ ಹೇಳಿದ್ದು, ಇದರಲ್ಲಿ ಫ್ಲಿಪ್‌ಕಾರ್ಟ್ ಮೊದಲ ಸ್ಥಾನ ಪಡೆದಿದೆ.

ಉದ್ಯೋಗಕ್ಕೆ ಆದ್ಯತೆಯಲ್ಲಿರುವ ಕಂಪನಿಗಳ ಪಟ್ಟಿಯಲ್ಲಿರುವ ಬಹುತೇಕ ಕಂಪನಿಗಳು ಎಂಜಿನಿಯರಿಂಗ್, ಕಾರ್ಯನಿರ್ವಹಣೆ ಹಾಗೂ ಔದ್ಯಮಿಕ ಅಭಿವೃದ್ಧಿ ವಿಭಾಗಗಳಿಗೆ ಹೆಚ್ಚು ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ. ಇತ್ತಿಚಿನ ಕೃತಕಬುದ್ದಿಮತ್ತೆ, ಕ್ರಿಯೇಟಿವ್ ಕೋಡಿಂಗ್ ಮತ್ತು ವ್ಯವಹಾರ ನಿರ್ವಹಣೆ ನೀಡುವಂತಹ ಉದ್ಯೋಗಿಗಳಿಗೆ ಹೆಚ್ಚು ಬೇಡಿಕೆ ಬಂದಿದೆ.

ಭಾರತದಲ್ಲಿ ಉದ್ಯೋಗಕ್ಕೆ ಆದ್ಯತೆಯ ಕಂಪೆನಿ 'ಫ್ಲಿಪ್‌ಕಾರ್ಟ್'!!

ಪಟ್ಟಿಯಲ್ಲಿರುವ ಇತರೆ ಕಂಪನಿಗಳಲ್ಲಿ ಐಬಿಎಂ (15), ಓಲಾ (19), ಐಸಿಐಸಿಐ ಬ್ಯಾಂಕ್ (20), ಲಾರ್ಸೆನ್ ಆಂಡ್ ಟರ್ಬೊ (23), ಒರಾಕ್ಯಲ್ (24) ಸೇರಿವೆ ಎಂದು ವರದಿ ತಿಳಿಸಿದೆ. ಈ ಪಟ್ಟಿಯಲ್ಲಿ ಬಹುತೇಕ ಟೆಕ್ ಕಂಪೆನಿಗಳೇ ಇರುವುದನ್ನು ನಾವು ನೋಡಬಹುದಾಗಿದ್ದು, ಎಂಜಿನಿಯರ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂಬುದರಲ್ಲಿ ಅರ್ಥವಿಲ್ಲ ಎಂದು ಹೇಳಬಹುದು.

Best Mobiles in India

English summary
Flipkart, Amazon and Oyo top 3 companies to work for in India: LinkedIn report. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X