ಡಿಸ್ಕೌಂಟ್‌ನಲ್ಲಿ ಐಫೋನ್‌ ಖರೀದಿಸಲು ಇದಕ್ಕಿಂತ ಉತ್ತಮ ಸಮಯ ಮತ್ತೆ ಸಿಗುವುದಿಲ್ಲ!

|

ಐಫೋನ್‌ ಖರೀದಿಸಬೇಕೆಂದು ಕೊಂಡವರಿಗೆ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಗುಡ್‌ನ್ಯೂಸ್‌ ನೀಡಿವೆ. ಇ-ಕಾಮರ್ಸ್‌ ದೈತ್ಯ ಗಳು ಎನಿಸಿಕೊಂಡಿರುವ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಪ್ಲಾಟ್‌ಫಾರ್ಮ್‌ ಐಫೋನ್ 12 ಸರಣಿಯ ಬೆಲೆಯನ್ನು ಇಳಿಸಿವೆ. ಆಪಲ್‌ ಕಂಪೆನಿ ತನ್ನ ಹೊಸ ಐಫೋನ್ 13 ಸರಣಿಯನ್ನು ಲಾಂಚ್‌ ಮಾಡಿದ ಬೆನ್ನಲ್ಲೇ ಐಫೋನ್‌ 12 ಸರಣಿಯ ಮೇಲೆ ಹೆಚ್ಚಿನ ರಿಯಾಯಿತಿಯನ್ನು ಘೋಷಣೆ ಮಾಡಿವೆ. ಈ ಎರಡು ಇ-ಕಾಮರ್ಸ್‌ ಸೈಟ್‌ಗಳಲ್ಲಿಯೂ ಸಹ ಐಫೋನ್‌ 12ರ ಮೇಲೆ ಬಿಗ್‌ ಡಿಸ್ಕೌಂಟ್‌ ದೊರೆಯಲಿದೆ.

ಫ್ಲಿಪ್‌ಕಾರ್ಟ್‌

ಹೌದು, ಭಾರತದಲ್ಲಿ ಇ-ಕಾಮರ್ಸ್‌ ದೈತ್ಯ ಎನಿಸಿಕೊಂಡಿರುವ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಸೈಟ್‌ಗಳೆರಡು ಐಫೋನ್‌ 12 ಸರಣಿಯ ಮೇಲೆ ರಿಯಾಯಿತಿ ನೀಡಲು ಮುಂದಾಗಿದೆ. ಐಫೋನ್ 12 ಸರಣಿಯನ್ನು ಖರೀದಿಸಬೇಕೆಂದುಕೊಂಡವರಿಗೆ ಇದಕ್ಕಿಂತ ಮತ್ತೊಂದು ಉತ್ತಮ ಸಮಯವಿಲ್ಲ. ಏಕೆಂದರೆ ಐಫೋನ್‌ 12 ಅನ್ನು ನೀವು ಕೇವಲ 63,999ರೂ ಗಳಿಗೆ ಖರೀದಿಸುವ ಅವಕಾಶವನ್ನು ನೀಡಲಾಗಿದೆ. ಹಾಗಾದ್ರೆ ಐಫೋನ್‌ 12 ಸರಣಿಯ ಮೇಲೆ ಯಾವೆಲ್ಲ ಡಿಸ್ಕೌಂಟ್‌ ನೀಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಪಲ್ ಐಫೋನ್ 12

ಪ್ರಸ್ತುತ, ಆಪಲ್ ಐಫೋನ್ 12 ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡರಲ್ಲೂ 63,999ರೂ ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ. ಇದು 64GB ಸ್ಟೋರೇಜ್ ರೂಪಾಂತರದ ಬೆಲೆ ಎಂದು ಹೇಳಲಾಗಿದೆ. ಮೂಲತಃ 79,900ರೂ ಬೆಲೆಗೆ ಬಿಡುಗಡೆ ಆಗಿದ್ದ ಈ ಐಫೋನ್‌ ಇದೀಗ 15,901 ರೂಪಾಯಿಗಳ ಭಾರೀ ರಿಯಾಯಿತಿಯೊಂದಿಗೆ ದೊರೆಯಲಿದೆ. ಜೊತೆಗೆ ಇದೇ ಡಿಸ್ಕೌಂಟ್ ಆಫರ್ ಐಫೋನ್ 12 ರ 128GB ಸ್ಟೋರೇಜ್ ವೇರಿಯಂಟ್ ನಲ್ಲೂ ಲಭ್ಯವಿದೆ. ಈ ಮಾದರಿಯನ್ನು ನೀವು ಇದೀಗ ಕೇವಲ 68,999ರೂ,ಗಳಿಗೆ ಖರೀದಿಸಬಹುದು. ಇದು ಮೂಲತಃ 84,900ರೂ ಬೆಲೆಯನ್ನು ಹೊಂದಿತ್ತು.

ಐಫೋನ್

ಇದಲ್ಲದೆ ನೀವು ಐಫೋನ್ 12 ರ 256GB ಮಾದರಿಯನ್ನು ಸಹ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ. ಇದನ್ನು ನೀವು ಇದೀಗ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಸೈಟ್‌ನಲ್ಲಿ ಕೇವಲ 78,999ರೂ, ಗಳಿಗೆ ಖರೀದಿಸಬಹುದಾಗಿದೆ. ಇದರೊಂದಿಗೆ ಫ್ಲಿಪ್‌ಕಾರ್ಟ್ ನಿಮ್ಮ ಹಳೆಯ ಡಿವೈಸ್‌ಗಳ ಎಕ್ಸ್‌ಚೇಂಜ್‌ ಆಫರ್‌ ನಲ್ಲಿ 15,000ರೂ,ಗಳ ವರೆಗೆ ಹೆಚ್ಚುವರಿ ರಿಯಾಯಿತಿ ನೀಡುತ್ತಿದ್ದರೆ, ಅಮೆಜಾನ್ ಎಕ್ಸ್‌ಚೇಂಜ್‌ ಆಫರ್‌ನಲ್ಲಿ 14,200ರೂ,ಗಳ ವರೆಗೆ ರಿಯಾಯಿತಿಯನ್ನು ಸಹ ನೀಡುತ್ತಿದೆ.

ಐಫೋನ್

ಇನ್ನು ಐಫೋನ್ 12 ಮಿನಿ ಖರೀದಿಸಲು ಬಯಸುವವರು ರಿಯಾಯಿತಿ ದರದಲ್ಲಿ ಕೇವಲ 56,999ರೂ ಗಳಿಗೆ ಪಡೆಯಬಹುದು. ಇದಲ್ಲದೆ 128GB ವೇರಿಯಂಟ್ ಆಯ್ಕೆಯ ಐಫೋನ್‌ 12 ಮಿನಿ ನಿಮಗೆ 61,999 ರೂ. ಗಳಿಗೆ ಲಭ್ಯವಾಗಲಿದೆ. ಐಫೋನ್ 12 ಪ್ರೊ 128GB ಆಯ್ಕೆಯನ್ನು ಫ್ಲಿಪ್‌ಕಾರ್ಟ್‌ನಲ್ಲಿ 1,09,900 ರೂ.ಗಳ ರಿಯಾಯಿತಿ ದರದಲ್ಲಿ ಪಟ್ಟಿ ಮಾಡಲಾಗಿದೆ. ಇದರ ಮೂಲ ಬೆಲೆ 1,19,900 ರೂ. ಆಗಿದ್ದು, 10,000 ರೂ.ಗಳ ರಿಯಾಯಿತಿ ನೀಡುತ್ತಿದೆ. ಆದರೆ ಅಮೆಜಾನ್ ಐಫೋನ್ 12 ಪ್ರೊ 128GB ಆಯ್ಕೆಗೆ 1,06,900 ರೂಗಳಿಗೆ ಮಾರಾಟ ಮಾಡುತ್ತಿದೆ. ಅಂದರೆ ಫ್ಲಿಪ್‌ಕಾರ್ಟ್‌ಗಿಂತ ಹೆಚ್ಚಿನ ಅಂದರೆ 13,000ರೂ ಗಳ ರಿಯಾಯಿತಿ ನಿಮಗೆ ಅಮೆಜಾನ್‌ನಲ್ಲಿ ಸಿಗಲಿದೆ.

ಐಫೋನ್

ಹಾಗೇ ನೋಡಿದ್ರೆ ಐಫೋನ್ 13 ಬಿಡುಗಡೆಗೂ ಮುನ್ನ, ಅಮೆಜಾನ್ ಐಫೋನ್ 12 ಮೇಲೆ 5,950ರೂ, ಗಳ ರಿಯಾಯಿತಿ ಮಾತ್ರ ನೀಡುತ್ತಿತ್ತು. ಇನ್ನು ಫ್ಲಿಪ್‌ಕಾರ್ಟ್ ಕೂಡ 12,901ರೂ,ಗಳ ವರೆಗೆ ರಿಯಾಯಿತಿ ನೀಡುತ್ತಿತ್ತು. ಆದರೆ ಐಫೋನ್ 13 ಎಂಟ್ರಿ ನೀಡ್ತಿದ್ದ ಹಾಗೇ ರಿಯಾಯಿತಿಗಳ ಮೇಲೆ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ.

Most Read Articles
Best Mobiles in India

Read more about:
English summary
Flipkart and Amazon are now offering a much bigger discount on the iPhone 12 series after the India launch of Apple's latest iPhone 13 series.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X