Subscribe to Gizbot

ಫ್ಲಿಪ್ ಕಾರ್ಟ್ ನಲ್ಲಿ ಹಾನರ್ ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ರಿಯಾಯಿತಿ

Written By: Lekhaka

ಹೊಸ ವರ್ಷಕ್ಕೆ ಸ್ವಾಗತವನ್ನು ಕೋರುವ ಸಲುವಾಗಿ ಫ್ಲಿಪ್ ಕಾರ್ಟ್ ಇಯರ್ ಎಂಡ್ ನಲ್ಲಿ ಹಾನರ್ ಸಲೆಬ್ರೆಷನ್ ಸೇಲ್ ಅನ್ನು ಆರಂಭಿಸಿದ್ದು, ಹಾನರ್ ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ ಎನ್ನಲಾಗಿದೆ.

ಫ್ಲಿಪ್ ಕಾರ್ಟ್ ನಲ್ಲಿ ಹಾನರ್ ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ರಿಯಾಯಿತಿ

ಹಾನರ್ ಸ್ಮಾರ್ಟ್ ಫೋನ್ ಗಳ ಮೇಲೆ ರೂ. 4000ದ ವರೆಗೂ ಡಿಸ್ ಕೌಂಟ್ ಅನ್ನು ನೀಡಲು ಫ್ಲಿಪ್ ಕಾರ್ಟ್ ಮುಂದಾಗಿದ್ದು, ಇದರೊಂದಿಗೆ ನೋ ಕಾಷ್ಟ್ ಇಎಂಐ ಸೌಲಭ್ಯವನ್ನು ಸಹ ಕಲ್ಪಿಸಿಕೊಡಲು ಮುಂದಾಗಿದೆ. ಅಲ್ಲದೇ ಎಕ್ಸ್ ಚೇಂಜ್ ಸಹ ಲಭ್ಯವಿದೆ ಎನ್ನಲಾಗಿದೆ.

ಮೊದಲನೆಯದಾಗಿ ಹಾನರ್ ಕಂಪನಿಯ ಪ್ರಮುಖ ಸ್ಮಾರ್ಟ್ ಫೋನ್ ಹಾನರ್ 8 ಪ್ರೊ ಆಗಿದೆ. ಫ್ಲಿಪ್ ಕಾರ್ಟ್ನಲ್ಲಿ ರೂ.25,999ಕ್ಕೆ ದೊರೆಯುತ್ತಿದ್ದು, ಈ ಫೋನ್ ಮೂಲಕ ಬೆಲೆ ರೂ. 29,999 ಆಗಿದೆ. ಗ್ರಾಹಕರು ತಮ್ಮ ಹಳೇಯ ಸ್ಮಾರ್ಟ್ ಫೋನ್ ವಿನಿಮಯ ಮಾಡಿಕೊಳ್ಳುವ ಮೂಲಕ ರೂ. 18,000 ಕಡಿತ ಪಡೆಯಬಹುದಾಗಿದೆ.

ಫೇಸ್‌ಬುಕ್ ಖಾತೆಗೆ ಆಧಾರ್ ಲಿಂಕ್!!?..ಇದಕ್ಕೆ ಫೇಸ್‌ಬುಕ್ ಹೇಳಿದ್ದೇನು ಗೊತ್ತಾ?

ಹಾನರ್ 9i ಸ್ಮಾರ್ಟ್ ಫೋನ್ ಮೇಲೆಯೂ ರಿಯಾಯಿತಿ ಪಡೆಯಬಹುದಾಗಿದ್ದು, ರೂ.2,000 ಕಡಿತದ ನಂತರ ಸ್ಮಾರ್ಟ್ ಫೋನ್ ರೂ. 17,999ಕ್ಕೆ ದೊರೆಯುತ್ತಿದ್ದು, ಹಳೇ ಫೋನ್ ವಿನಿಮಯದ ಮೂಲಕ ಗ್ರಾಹಕರು ರೂ.8,000ದ ವರೆಗೂ ಕಡಿತ ಪಡೆಯಬಹುದಾಗಿದೆ.

ಹಾನರ್ 6X 3 GB ಆವೃತ್ತಿಯೂ ರೂ.9,999ಕ್ಕೆ ದೊರೆಯುತ್ತಿದ್ದು, ರೂ. 11,999 ಮೂಲ ಬೆಲೆಯಾಗಿದೆ. ಇದಲ್ಲದೇ ಹೆಚ್ಚುವರಿಯಾಗಿ ವಿನಿಮಯದ ಮೇಲೆ ರೂ.9000ದ ವರೆಗೂ ಕಡಿತ ಪಡೆಯಬಹುದಾಗಿದೆ. ಹಾನರ್ 6X (4 GB) ಈಗ ರೂ. 11,999ಕ್ಕೆ ದೊರೆಯುತ್ತಿದ್ದು, ಇದರ ಮೂಲ ಬೆಲೆ ರೂ. 13,999ಗಳಾಗಿದೆ.

English summary
Flipkart is offering a flat discount of up to Rs 4,000 on Honor smartphones, along with a bunch of other offers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot